ಮಂಗಳೂರು : ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮಿಲಾಗ್ರಿಸ್ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ನೆರವೇರಿತು. ಮಿಲಾಗ್ರಿಸ್ ವಿದ್ಯಾ ಸಂಸ್ಥೆಯ ಸಂಚಾಲಕರು ವಂದನೀಯ ಗುರು ಬೊನವೆಂಚರ್ ನಜರೆತ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವೃಧ್ದಿಸಿಕೊಳ್ಳುವುದು. ನಾಯಕನಾದವನು ಶಿಸ್ತುಬದ್ಧತೆ, ಸಮಯದ ಪಾಲನೆ ಉತ್ತಮ ನಡೆ ನುಡಿ ಹೊಂದಿ ಇತರರಿಗೆ ಮಾದರಿಯಾಗಬೇಕೆಂದು ಹೇಳಿದರು.ಮುಖ್ಯ ಅತಿಥಿಯಾದ ಮಿಲಾಗ್ರಿಸ್ ಪದವಿ ಕಾಲೇಜಿನ ಪ್ರ‍್ರಾಂಶುಪಾಲರಾದ ವಂದನೀಯ ಗುರು ಮೈಕಲ್ ಸಾಂತುಮಾಯರ್ ಹಾಗೂ ಸಿಲ್ವೆಸ್ಟರ್ ಮಸ್ಕರೇನಸ್, ಉಪಾಧ್ಯಕ್ಷರು, ಪ್ಯಾರಿಷ್ ಪಾಸ್ಟೋರಲ್ ಕೌನ್ಸಿಲ್ ಮಿಲಾಗ್ರಿಸ್ ಚರ್ಚ್ ನಲ್ಲಿ ಉಪಸ್ಥಿತರಿದ್ದರು.ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಮೇಲ್ವಿನ್ ವಾಸ್‌ವರು ನೂತನ ವಿದ್ಯಾರ್ಥಿ ಸಂಘದ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಶ್ರೀಮತಿ ಜ್ಯೋತಿ ರತ್ನ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಪುಲ್ ಶೆಟ್ಟಿ ವಂದಿಸಿದರು. ಶ್ರೀಮತಿ ಶೆರೆಲ್ ಡಿಸೋಜ ನಿರೂಪಿಸಿದರು. ಈ ಕಾರ್ಯಕ್ರಮ ಕಾಲೇಜು ಗೀತೆಯೊಂದಿಗೆ ಮುಕ್ತಾಯಗೊಂಡಿತು.
Author: UllalaVani
ಸಿಎಎಸ್’ಕೆ ಸೆಂಟಿನರಿ ಟ್ರಸ್ಟ್ ವತಿಯಿಂದ ರೂ. 30 ಲಕ್ಷಕ್ಕೂ ಮಿಕ್ಕ ಮೌಲ್ಯದ ವಿದ್ಯಾರ್ಥಿವೇತನವನ್ನು 307 ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಈ ಸಮಾರಂಭ ಜುಲೈ 19, ಶನಿವಾರ ದಂದು ಸೆಂಟ್ ಆಗ್ನೆಸ್ ಕಾಲೇಜಿನ ಸೆಂಟಿನರಿ ಕಟ್ಟಡದಲ್ಲಿ ನಡೆಯಲಿದೆ. ಈ ವಿದ್ಯಾರ್ಥಿವೇತನಗಳನ್ನು ಟ್ರಸ್ಟ್ 2014 ರಿಂದ ನಿರಂತರವಾಗಿ ನೀಡುತ್ತಿದ್ದು, ಧರ್ಮ, ಭಾಷೆ, ಅಂಕಗಳು ಅಥವಾ ಪ್ರತಿಭೆಗೆ ಯಾವುದೇ ಮಹತ್ವ ನೀಡದೆ, ಕೇವಲ ವಿದ್ಯಾರ್ಥಿಯ ಆರ್ಥಿಕ ಪರಿಸ್ಥಿತಿಯನ್ನು ಮಾತ್ರ ಪರಿಗಣಿಸಿ, ಆರ್ಥಿಕವಾಗಿ ಕಷ್ಟದಲ್ಲಿರುವ ಅಥವಾ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ಕಾರ್ಯಕ್ರಮಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ಪೀಟರ್ ಪೌಲ್ ಸಲ್ದಾನ್ಹಾ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಎನ್‌ಆರ್‌ಐ ದಾನಿ ಮೈಕೆಲ್ ಡಿಸೋಜಾ ಮತ್ತು ರೋಹನ್ ಕಾರ್ಪೊರೇಶನ್ ಅಧ್ಯಕ್ಷ ಡಾ. ರೋಹನ್ ಮೊಂತೇರೊ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅವರ ಪಾಲಕರು ಹಾಗೂ ಟ್ರಸ್ಟ್‌ನ ದಾನಿಗಳು ಮತ್ತು ಸಹಾಯಧಾರಕರು ಪಾಲ್ಗೊಳ್ಳಲಿದ್ದಾರೆ. 2014 ರಿಂದ ಸಿಎಎಸ್’ಕೆ ಸೆಂಟಿನರಿ ಟ್ರಸ್ಟ್ ಶಿಕ್ಷಣ, ಆರೋಗ್ಯ ಸೇವೆ, ವಾಸದ ಸಹಾಯ, ಮನೋಪಚಾರ…
ಕೊಲ್ಯ : 2025-26 ನೇ ಸಾಲಿನ ಯುವವಾಹಿನಿ (ರಿ.) ಕೊಲ್ಯ ಘಟಕದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಜುಲೈ 20, 2025ರ ಆದಿತ್ಯವಾರ ಬೆಳಿಗ್ಗೆ 10:00 ಗಂಟೆಗೆ ಕೊಲ್ಯದ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಅಕ್ಷಯ ಕಾಲೇಜು, ಪುತ್ತೂರು ಇದರ ಛೇರ್ಮನ್ ಜಯಂತ್ ನಡುಬೈಲು ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷೆ ಸುಧಾ ಸುರೇಶ್ ವಹಿಸಲಿದ್ದಾರೆ. ಪತಿಜ್ಞಾವಿಧಿ ಬೋಧನೆಯನ್ನು ಯುವವಾಹಿನಿ (ರಿ.) ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಿತ್ತರಂಜನ್ ಕೆ, ಮ್ಯಾನೇಜಿಂಗ್ ಡೈರೆಕ್ಟರ್, ಬಿ ಆರ್ ಬೇಕರಿ (ತೊಕ್ಕೊಟ್ಟು, ಬೀರಿ ), Rtn ಪ್ರಮೋದ ಬೋಳಾರ್, ನಿರ್ದೇಶಕರು, ನವನಿಧಿ ವಿವಿಧೋದ್ದೇಶ ಸಹಕಾರ ಸಂಘ (ನಿ.), ಪಂಪ್ವೆಲ್ ಇವರುಗಳು ಭಾಗವಹಿಸಲಿದ್ದಾರೆ. ರಾಜೇಶ್ ವಿಟ್ಲ , ಸಂಘಟನಾ ಕಾರ್ಯದರ್ಶಿ, ಯುವವಾಹಿನಿ (ರಿ.) ಮಂಗಳೂರು, ವೇಣುಗೋಪಾಲ್ ಕೊಲ್ಯ, ಅಧ್ಯಕ್ಷರು, ಬಿಲ್ಲವ…
ಉಳ್ಳಾಲ : ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ 2025-26ನೇ ಸಾಲಿನ ಪ್ರಥಮ ಸಾಮಾನ್ಯ ಸಭೆಯು ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರದಂದು ನಡೆಯಿತು. ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಕೂಲವಾಗುವಂತೆ ಹಾಗೂ ಹೆಚ್ಚಿನ ವಿದ್ಯಾ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ತಿದ್ದುಪಡಿಯ ಅಗ್ಗವಾಗಿದೆ. ಅದರಂತೆ ಮಂಗಳೂರು ವಿವಿಯ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ ಸಭೆಯಲ್ಲಿ ಅನುಮೋದನೆ ಪಡೆದಿರುವ ತಿದ್ದುಪಡಿಯನ್ನು ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದಿಸುವುದಾಗಿ ಕುಲಪತಿ ತಿಳಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ, ಕಲಾ ಮತ್ತು ವಾಣಿಜ್ಯ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶಾತಿಯನ್ನು ಉತ್ತೇಜಿಸುವ ಉದ್ದೇಶದಿಂದ ಪಠ್ಯಕ್ರಮಗಳ ಪರಿಷ್ಕರಣೆಗೆ ಅನುಮೋದನೆ ನೀಡಲಾಯಿತು. ಸ್ನಾತಕೋತ್ತರ ಕಾರ್ಯಕ್ರಮಗಳ ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸುವ ಹಾಗೂ ನಿರ್ವಹಿಸುವ ಸಂಬಂಧ ರಚಿಸಲಾಗಿರುವ ಅಧ್ಯಯನ ಮಂಡಳಿಯಲ್ಲಿ ಪಠ್ಯಕ್ರಮ ಪರಿಷ್ಕರಣೆಗೆ ಸಲ್ಲಿಕೆಯಾಗಿತ್ತು. ಈ ಬಗ್ಗೆ ಜುಲೈ 1ರಿಂದ 3ರವರೆಗೆ ನಡೆದ ವಿಜ್ಞಾನ ಮತ್ತು ತಂತ್ರಜ್ಞಾನ, ಕಲಾ ಮತ್ತು ವಾಣಿಜ್ಯ ನಿಕಾಯಗಳ ಸಭೆಯಲ್ಲಿ ಈ…
ಉಳ್ಳಾಲ : ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುವಾರ ರಾತ್ರಿ ತೊಕ್ಕೊಟ್ಟು ಒಳಪೇಟೆಯ ಗತಕಾಲ ವೈಭವದ ಶತಮಾನ ಕಂಡ ಹಳೆಯ ಖಾಸಗಿ ವಾಣಿಜ್ಯ ವಸತಿ ಸಂಕೀರ್ಣದ ಹಂಚಿನ ಮೇಲ್ಛಾವಣಿ ಧರೆಗುರುಳಿ ಬಿದ್ದಿದೆ. ಮಧ್ಯರಾತ್ರಿ ಘಟನೆ ನಡೆದ ಪರಿಣಾಮ ಸಂಭವನೀಯ ಭಾರೀ ಅನಾಹುತ ತಪ್ಪಿದೆ. ಮಧ್ಯರಾತ್ರಿ ಎರಡೂವರೆ ಗಂಟೆ ವೇಳೆಗೆ ಕಟ್ಟಡದ ಹಂಚಿನ ಛಾವಣಿ ಧರೆಗುರುಳಿ ಬಿದ್ದಿದೆ. ನೂರು ವರುಷದ ಹಿಂದಿನ ಹಳೆಯ ಶಿಥಿಲ ಕಟ್ಟಡದಲ್ಲಿ ಸ್ಥಳೀಯ ಸಂಘಟನೆಯೊಂದರ ಕಚೇರಿ ಸೇರಿದಂತೆ ಎರಡು ಬೀಡಿ ಬ್ರಾಂಚ್ ಗಳು ಕಾರ್ಯಾಚರಿಸುತ್ತಿತ್ತು. ಕಟ್ಟಡದ ಹಿಂಬದಿ ಭಾಗದಲ್ಲಿ ಎರಡು ಬಾಡಿಗೆ ಮನೆಗಳಿದ್ದು ಮನೆಮಂದಿಗೆ ಘಟನೆಯಿಂದ ಯಾವುದೇ ಹಾನಿಯಾಗಿಲ್ಲ. ಕಟ್ಟಡದ ಹಂಚಿನ ಮೇಲ್ಛಾವಣಿಯು ತೊಕ್ಕೊಟ್ಟು ಚರ್ಚ್ ಸಂಪರ್ಕದ ಮುಖ್ಯ ರಸ್ತೆಗೆ ಕುಸಿದು ದೊಪ್ಪನೆ ಬಿದ್ದಿರುವ ದೃಶ್ಯ ಸಿಸಿಟಿವಿ ಪೂಟೇಜಲ್ಲಿ ದಾಖಲಾಗಿದೆ. ಹಗಲಿನ ವೇಳೆ ಈ ಕಟ್ಟಡದ ಮುಂಭಾಗದ ರಸ್ತೆಯಿಂದ ಶಾಲಾ ಮಕ್ಕಳು, ಜನಸಾಮಾನ್ಯರು ಸೇರಿದಂತೆ ವಾಹನಗಳು ಹಾದು ಹೋಗುತ್ತಿರುತ್ತವೆ. ಈ ವೇಳೆ ಘಟನೆ ನಡೆದಿದ್ದರೆ ದೊಡ್ಡ…
ಉಳ್ಳಾಲ : ನಿರಂತರವಾಗಿ ಮಳೆಯಾಗುತ್ತಿರುವುದರಿಂದ, ಇಂದು ಶನಿವಾರ ಜು.19ರಂದು ಉಳ್ಳಾಲ ತಾಲೂಕಿನಾದ್ಯಂತ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಳ್ಳಾಲ ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೆ.ಸಿ. ರೋಡ್ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಸಂಘದ ಕೆ.ಸಿ. ರೋಡ್ ಶಾಖೆಯಲ್ಲಿ ಜರುಗಿತು.ಕಾರ್ಯಕ್ರಮವನ್ನು ಸಂಘದ ಗ್ರಾಹಕರಾದ ಸಿಸ್ಟರ್ ಐಲಿನ್ ಮಥಾಯೀಸ್, ಕೆ. ಶಿವಪ್ರಸಾದ್ ಆಚಾರ್ಯ ಹಾಗೂ ಅಬ್ಬಾಸ್ ಉಚ್ಚಿಲರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಘದ ಗ್ರಾಹಕರಾದ ಸಿಸ್ಟರ್ ಐಲಿನ್ ಮಥಾಯೀಸ್ ರವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತನ್ನ ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ. ಈ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಿದ್ದಲ್ಲಿ ಸ್ಥಳಾವಕಾಶವನ್ನು ಮಾಡಿಕೊಡುವುದಾಗಿ ತಿಳಿಸಿದರು. ಕೆ. ಶಿವಪ್ರಸಾದ್ ಆಚಾರ್ಯ ರವರು ಮಾತನಾಡಿ “ಕೆ.ಸಿ. ರೋಡ್ ಶಾಖೆಯಲ್ಲಿ ಸಿಬ್ಬಂದಿಗಳ ಗ್ರಾಹಕ ಸ್ನೇಹಿ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಬ್ಬಾಸ್ ಉಚ್ಚಿಲ…
ವಿದ್ಯಾಭಾರತಿ ಆಯೋಜಿಸಿದ 2025-26ರ ಫುಟ್ಬಾಲ್ ಟೂರ್ನಮೆಂಟ್ ನಲ್ಲಿ ಮಂಗಳೂರಿನ ರಾಷ್ಟೋತ್ಥಾನ ವಿದ್ಯಾಕೇಂದ್ರದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. 17 ವರ್ಷದೊಳಗಿನ ಪುಟ್‌ಬಾಲ್ ಪಂದ್ಯಾಟದಲ್ಲಿ ಆರಂಭದಿಂದಲೂ ರಾಷ್ಟೋತ್ಥಾನದ ವಿದ್ಯಾರ್ಥಿನಿಯರು ಉತ್ತಮ ಸಾಧನೆ ತೋರಿದ್ದರು. ಉತ್ತಮವಾಗಿ ಆಡುವ ಮೂಲಕ ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾ ಕೇಂದ್ರದ ಬಾಲಕಿಯರ ತಂಡದ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.
ಮಂಗಳೂರು ವಿಧಾನ ಸಭಾ ಕ್ಷೇತ್ರದ ಪಂಚ ಗ್ಯಾರೆಂಟಿ ಉಳ್ಳಾಲ ಸಮಿತಿಯ ಅಧ್ಯಕ್ಷ ರಫೀಕ್ ಅಂಬ್ಲಮೊಗರು ನೇತೃತ್ವದಲ್ಲಿ ಶಕ್ತಿ ಯೋಜನೆಯಡಿಯಲ್ಲಿ 500ಕೋಟಿ ಉಚಿತ ಪ್ರಯಾಣ ನನಸಾದ ಹಿನ್ನೆಲೆಯಲ್ಲಿ ಪಜೀರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಜೀರ್ ಜಂಕ್ಷನ್ ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಮಹಿಳೆಯರು ಆರತಿ ಬೆಳಗಿಸಿ ಸಂತೋಷ ವ್ಯಕ್ತ ಪಡಿಸಿದರು. ಕರ್ನಾಟಕ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ಹಸನ್ ಮತ್ತು ನಿರ್ವಾಹಕ ಮೌಲಾನಾ ಸಾಬ್ ಅವರನ್ನು ಸನ್ಮಾನಿಸಿದರು.ಬಳಿಕ ಮಾತನಾಡಿದ ಅವರು ರಾಜ್ಯ ಸರಕಾರದ ಪಂಚ ಗ್ಯಾರೆಂಟಿ ಯೋಜನೆಯಲ್ಲಿ 500 ಕೋಟಿ ಮಹಿಳೆಯರು ಉಚಿತವಾಗಿ ರಾಜ್ಯ, ಜಿಲ್ಲೆ, ವಿವಿಧ ಪ್ರದೇಶಗಳಲ್ಲಿ ಸಂಚರಿಸಿದ್ದಾರೆ, ಇದರಿಂದಾಗಿ ಆರ್ಥಿಕ ಚಲನವಲನಗಳು ಹೆಚ್ಚಾಗಿದೆ, 500 ಕೋಟಿ ಮಹಿಳೆಯರಲ್ಲಿ 500 ಕೋಟಿ ಫಲಾನುಭವಿಗಳು ಬಡವರಾಗಿದ್ದು ಅವರಿಗೆ ಪರೋಕ್ಷವಾಗಿ ಶಕ್ತಿ ನೀಡುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿರುವು ನಮಗೆ ಗೌರವ ಮತ್ತು ಹೆಮ್ಮೆಯ ವಿಚಾರವಾಗಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಇದರ ಪ್ರಯೋಜನ ಸಿಗಲಿ ಎಂದು ಹೇಳಿದರು.ಪಂಚ…
ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಸಾನಿಧ್ಯದಲ್ಲಿ ಭಜನೆ ಸತ್ಸಂಗಗಳು ನಿರಂತರವಾಗಿ ನಡೆಯುವುದು ಒಳ್ಳೆಯ ವಿಷಯ ಇದರಿಂದ ಲೋಕಕ್ಕೆ ಕಲ್ಯಾಣವಾಗಲಿ. ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ನಡೆಯುವ ಇಂತಹ ಕಾರ್ಯಕ್ರಮಗಳು ಎಲ್ಲೆಡೆಯೂ ನಿರಂತರವಾಗಿ ನಡೆಯಲಿ ಎಂದು ತಲಪಾಡಿ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಗಣೇಶ್ ಭಟ್ ಆಶೀರ್ವಚನ ನೀಡಿದರು. ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಸೋಮೇಶ್ವರ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ), ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಹಾಗೂ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಭಜನೋತ್ಸವ ಕಾರ್ಯಕ್ರಮವನ್ನು ದೀಪಬೆಳಗಿಸಿ ಅವರು ಆಶೀರ್ವಚನ ನೀಡಿದರು.ಭಜನೆ, ಸತ್ಸಂಗ ಕಾರ್ಯಕ್ರಮಗಳು ದೇವಸ್ಥಾನ, ಮಠ ಮಂದಿರಗಳಲ್ಲಿ ಯಾವಾಗಲೂ ನಡೆಯುತ್ತಿರಬೇಕು. ಹಿಂದೂ ಸಂಸ್ಕೃತಿ- ಸಂಸ್ಕಾರವನ್ನು ತಿಳಿಸುವ ಬೆಳೆಸುವ ಕಾರ್ಯಕ್ರಮಗಳು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಡಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಾಡೂರು ಶಿವಗಿರಿ ಶ್ರೀ ಶಿವ ದುರ್ಗಾಂಭ ಮಠದ ಪರಮಪೂಜ್ಯ ಶ್ರೀ ಶ್ರೀ ಶಿವಯೋಗಿ…

