
ಉಳ್ಳಾಲ: ಆಧ್ಯಾತ್ಮಿಕ ಚಿಂತನೆ ಗಟ್ಟಿಗೊಳಿಸಿ ,ದುಶ್ಚಟಗಳಿಂದ ವಿಮುಖರಾಗಲು ಭಜನಾ ಮಂದಿರಗಳ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.ತೊಕ್ಕೊಟ್ಟು ಗಾಂಧಿನಗರದ ಶ್ರೀ ಸ್ವಾಮಿ ಈಶ್ವರಾನಂದ ಭಜನಾ ಮಂಡಳಿ ಹಾಗೂ ಶ್ರೀ ಸತ್ಯನಾರಾಯಣ ಮಂದಿರದ ಸುವರ್ಣ ಸಂಭ್ರಮ ಪ್ರಯುಕ್ತ ಶುಕ್ರವಾರದಂದು ನಡೆದ ಸಮಾರೋಪ ಸುವರ್ಣ ಧರ್ಮಸಭೆಯನ್ನುದ್ದೇಶಿ ಅವರು ಮಾತನಾಡಿದರು.ಪ್ರಸ್ತುತ ಕಾಲ ಘಟ್ಟದಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳು ಮೇಲೈಸುತ್ತಿದ್ದರೂ ನಮ್ಮ ದೇಶದ ಮೂಲ ಸಂಸ್ಕೃತಿಯನ್ನು ಯಾರೂ ಮೆಟ್ಟಲು ಸಾಧ್ಯವಿಲ್ಲ.ಇತಿಹಾಸ ತಿಳಿದವರೇ ಇತಿಹಾಸ ನಿರ್ಮಿಸಲು ಸಾಧ್ಯ.ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು,ಯುವಜನಾಂಗಕ್ಕೆ ಇತಿಹಾಸ ಮತ್ತು ನಮ್ಮ ಸಂಸ್ಕೃತಿಗಳನ್ನ ತಿಳಿಸೋ ಕಾರ್ಯಕ್ರಮಗಳನ್ನ ಹೆಚ್ಚು,ಹೆಚ್ಚಾಗಿ ಆಯೋಜಿಸಬೇಕೆಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ನಿಕೇತ್ ರಾಜ್ ಮೌರ್ಯ ಮಾತನಾಡಿ ಕುದ್ಮುಲ್ ರಂಗರಾವ್ ಅವರು ಸಾರಸ್ವತ ಸಮಾಜದಲ್ಲಿ ಹುಟ್ಟಿದರೂ ಹಿಂದುಳಿದ ,ದಲಿತ ವರ್ಗದ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ವ್ಯಕ್ತಿ.ಮೇಲ್ವರ್ಗದವರಿಗೆ ಇಂದಿಗೂ ಶೋಷಿತರ ಜತೆ ಗುರುತಿಸಿ ಕೊಳ್ಳೋಕೆ ಹಿಂಜರಿಕೆ ಮನೋಭಾವ ಮುಂದುವರಿದಿದೆ.ಶ್ರೇಣೀಕೃತ ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೇರೂರಿದೆ.ಸಮಾಜದಲ್ಲಿ ಬದಲಾವಣೆ,ಸುಧಾರಣೆ ಬರೋ ಮೊದಲು ಜಾತಿ ವ್ಯವಸ್ಥೆ,ಮೂಡ ನಂಬಿಕೆಗಳು ಹೇಗಿತ್ತೆಂಬುದನ್ನ ಯುವ ಜನಾಂಗ ಅರಿಯಬೇಕು.ಬಳ್ಳಾರಿ ಮ್ಯೂಸಿಯಮ್ಮಲ್ಲಿ ಮಾಸ್ತಿ ಕಲ್ಲುಗಳ ರಾಶಿ ನೋಡಿದಾಗ ಅವತ್ತಿನ ಕಾಲದಲ್ಲಿ ನಂಬಿಕೆಯ ಹೆಸರಲ್ಲಿ ಹೆಣ್ಮಕ್ಕಳನ್ನ ಯಾವ ರೀತಿ ಶೋಷಣೆ ಮಾಡಿದ್ದಾರೆಂದು ತಿಳಿಯುತ್ತದೆ.ಯುವಕರು ಹಿಂದಿನ ಇತಿಹಾಸ ತಿಳಿದು ಜಾಗೃತಗೊಳ್ಳದಿದ್ದರೆ ಮತ್ತೆ ಅದೇ ಸ್ಥಿತಿ ಮರುಕಳಿಸಬಹುದೆಂದು ಎಚ್ಚರಿಸಿದರು.ಮುಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ವಾಸುದೇವ ಬೆಳ್ಳೆ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಗಾಂಧಿನಗರದ ಶ್ರೀ ಸತ್ಯನಾರಾಯಣ ಮಂದಿರದ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಒದಗಿಸಿದ ಸ್ಪೀಕರ್ ಯು.ಟಿ.ಖಾದರ್ ಅವರನ್ನ ಸನ್ಮಾನಿಸಲಾಯಿತು.ವಿವಿಧ ರಂಗಗಳಲ್ಲಿ ಸಾಧನೆ, ಸೇವೆಗೈದವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷರಾದ ಸುರೇಶ್ ಭಟ್ನಗರ ಅಧ್ಯಕ್ಷತೆ ವಹಿಸಿದ್ದರು.ಕಾಪಿಕಾಡು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ರಾಜು ಗುರಿಕಾರ,ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ,ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್,ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರಾದ ಡಾ.ಶಿವಪ್ರಕಾಶ್ ಡಿ.ಎಸ್ ,ಮಥುರ ಕಂಪರ್ಟ್ಸ್ ವ್ಯವಸ್ಥಾಪಕರಾದ ಕೃಷ್ಣ ಮೂರ್ತಿ ಆಚಾರ್ಯ,ಉಳ್ಳಾಲ ನಗರ ಸಭೆಯ ಅಧ್ಯಕ್ಷರಾದ ಶಶಿಕಲಾ,ಉಪಾಧ್ಯಕ್ಷರಾದ ಸಪ್ನಾ ಹರೀಶ್,ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಧರ್ಮ ಕೇಂದ್ರದ ವಂ.ಫಾ.ಸಿಪ್ರಿಯನ್ ಪಿಂಟೋ,ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ರಮೇಶ್ ನಾಯಕ್ ,ಜೈ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ,ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷರಾದ ರವಿ ಕಾಪಿಕಾಡು,ದಲಿತ ಸಂಘರ್ಷ ಸಮಿತಿ ಯುವ ಘಟಕ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ದಯಾನಂದ ಕಪ್ಪೆಟ್ಟು,ನವೋದಯ ಫ್ರೆಂಡ್ಸ್ ನ ಅಧ್ಯಕ್ಷರಾದ ಪದ್ಮನಾಭ ಉಳ್ಳಾಲ ಬೈಲ್,ಸತ್ಯನಾರಾಯಣ ಮಂದಿರದ ಅಧ್ಯಕ್ಷರಾದ ಹರೀಶ್ಚಂದ್ರ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ರಘುರಾಜ್ ಕದ್ರಿ ಸ್ವಾಗತಿಸಿದರು.ರೋಹಿತ್ ಉಳ್ಳಾಲ್ ನಿರೂಪಿಸಿದರು.
ಕುದ್ಮುಲ್ ರಂಗರಾವ್ ಅವರು ಶಿಕ್ಷಕರಾಗಿ,ವಕೀಲರಾಗಿ,ಸಮಾಜ ಪರಿವರ್ತಕರಾಗಿದ್ದರು.ಮೇಲ್ವರ್ಗದವರು ಸ್ಪರ್ಶಿಸದೇ ಇದ್ದ ಜನರ ಹತ್ತಿರ ಹೋಗಿ ಅವರಿಗೆ ಶಿಕ್ಷಣ ,ವಾಸಿಸಲು ನಿವೇಶನ ಒದಗಿಸಿ ಕೊಟ್ಟ ಮಹಾನುಭಾವರು.ಅವರ ಬಂಡಾಯ ಜೀವನದ ಹಿಂದೆ ಆಧ್ಯಾತ್ಮಿಕ ಶಕ್ತಿಯೂ ಇತ್ತು.ಮೇಲ್ವರ್ಗ,ಸವರ್ಣೀಯರಿಂದ ತುಲಿಯಲ್ಪಟ್ಟವರಿಗೆ ಗೌರವ ತಂದ ಧೀಮಂತರವರು.
***ಡಾ.ವಾಸುದೇವ ಬೆಳ್ಳೆ.ಪ್ರಾಂಶುಪಾಲರು,ಸ.ಪ.ಪೂ.ಕಾ.ಮೂಲ್ಕಿ.

