ಮುಡಿಪು : ಉಡಿಷಾ ರಾಜ್ಯದ ಕಲಾಹಾಂಡಿ ಜಿಲ್ಲೆ ಉತ್ಕಲ್ ಗ್ರಾಮದ ನಿವಾಸಿಯಾಗಿರುವ ತ್ರಿಶಾ (21) ಎಂಬ ಯುವತಿ, ಜುಲೈ 30, 2025ರಂದು ರಾತ್ರಿ 8 ಗಂಟೆ ಸುಮಾರಿಗೆ, ಮಡಿಪುವಿನಲ್ಲಿ ಇರುವ ಪ್ರಜ್ಞಾ ಸ್ವಧಾರಾ ಕೇಂದ್ರ ಎಂಬ ಮಹಿಳಾ ಆಶ್ರಯ ಕೇಂದ್ರದಿಂದ ನಾಪತ್ತೆಯಾಗಿದ್ದಾರೆ. ಆಕಾಷ್ ಅವರ ಪುತ್ರಿ ತ್ರಿಶಾ, ಉದ್ಯೋಗದ ಹುಡುಕಾಟದಲ್ಲಿ ಮಂಗಳೂರಿಗೆ ಬಂದಿದ್ದು, ಇತ್ತೀಚೆಗೆ ಮಡಿಪುವಿನ ಆಶ್ರಯ ಮಂದಿರದಲ್ಲಿ ವಾಸವಾಗಿದ್ದರು. ಈಕೆಯು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪು ಪ್ರದೇಶದಿಂದ ಕಾಣೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕೊಣಾಜೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಘಟನೆ ಸಂಬಂಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ. ಆಶ್ರಯ ಕೇಂದ್ರದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಈಕೆಯ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಪೊಲೀಸ್ ಇಲಾಖೆ ಸಂಪರ್ಕಿಸಲು ಮನವಿ ಮಾಡಲಾಗಿದೆ. ತ್ರಿಶಾ ಬಗ್ಗೆ ಯಾವುದೇ ಮಾಹಿತಿ ಇದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಕೊಣಾಜೆ ಪೊಲೀಸ್ ಠಾಣೆ ಹಾಗೂ ಮಂಗಳೂರು ನಗರ ಪೊಲೀಸ್ ಇಲಾಖೆ ಕೋರಿವೆ.
Author: UllalaVani
ಕೋಟೆಕಾರು: ಕೋಟೆಕಾರಿನ ವಾರ್ಡ್ ನಂಬರ್ 11 ರಲ್ಲಿ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮಹಿಳಾ ವಿದ್ಯಾರ್ಥಿ ನಿಲಯ ವಿರುದ್ಧ ಕೌನ್ಸಿಲರ್ ಹರೀಶ್ ರಾವ್ ಅವರು ಮುಖ್ಯಾಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗೆ ದೂರು ನೀಡಿದ್ದಾರೆ. ಮಡ್ಯಾರ್ ನಲ್ಲಿರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮಹಿಳಾ ವಿದ್ಯಾರ್ಥಿ ನಿಲಯದ ಶೌಚಾಲಯದ ತ್ಯಾಜ್ಯ ನೀರನ್ನು ನೇರವಾಗಿ ಸಾರ್ವಜನಿಕ ಚರಂಡಿಗೆ ಬಿಡಲಾಗಿದೆ. ಇದರಿಂದ ಚರಂಡಿಗೆ ನೀರು ಹರಿಯುವ ಸುತ್ತಲಿನ ಕೃಷಿಕರಿಗೆ, ಸಮೀಪವೇ ಇರುವ ಕುಡಿಯುವ ನೀರಿನ ಬಾವಿಗಳಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.
ಮಂಗಳೂರು : ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡೆನಿಸ್ ಡಿ’ಸಿಲ್ವಾ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಅವರು ಈ ನೇಮಕಾತಿಯನ್ನು ಮಾಡಿದ್ದಾರೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಇದನ್ನು ಅನುಮೋದಿಸಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಜವಾಬ್ದಾರಿಯನ್ನು ನಿರ್ವಹಿಸಲು ಡೆನಿಸ್ ಅವರಿಗೆ ಸೂಚಿಸಲಾಗಿದೆ. ಜಿಲ್ಲಾ ಮಟ್ಟ, ಕ್ಷೇತ್ರ ಮಟ್ಟ, ಬ್ಲಾಕ್ ಮಟ್ಟ ಮತ್ತು ಪಂಚಾಯತ್ ಮಟ್ಟದಲ್ಲಿ ಪ್ರಚಾರ ಸಮಿತಿಯ ಪದಾಧಿಕಾರಿಗಳ ನೇಮಕ ಕಾರ್ಯವನ್ನು ಪ್ರಾರಂಭಿಸಲು ಅವರಿಗೆ ತಿಳಿಸಲಾಗಿದೆ. ಬೂತ್ ಅಧ್ಯಕ್ಷರು, ವಾರ್ಡ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕರಾಗಿ ವಿವಿಧ ಹಂತಗಳಲ್ಲಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಬೂತ್ ಮಟ್ಟದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ ಜಿಲ್ಲಾ…
ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಯ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಪಾವತಿ ರಶೀದಿಯ ನಕಲಿ ಸೃಷ್ಟಿ ಮತ್ತು ವಂಚನೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೃಥ್ವಿರಾಜ್ ಶೆಟ್ಟಿ ಅಲಿಯಾಸ್ ಮುನ್ನ ಬಂಧಿತ ಆರೋಪಿ. ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಶ್ರೀ ರಾಜ ದುರ್ಗಾ ಫರ್ನಿಚರ್ ವರ್ಕ್ಸ್’ ಎಂಬ ಉದ್ದಿಮೆ ಹೊಂದಿರುವ ಬಾಲಕೃಷ್ಣ ಸುವರ್ಣ ಎಂಬವರು ನ್ಯಾಯಾಲಯದ ಪ್ರಕರಣದಲ್ಲಿ ವ್ಯವಹರಿಸಲು ದಾಖಲಾತಿಗಳನ್ನು ಪಡೆದುಕೊಳ್ಳಲು ಮಂಗಳೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿದ್ದು, ಆ ಸಂದರ್ಭ ಅವರ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಅನೂರ್ಜಿತಗೊಂಡಿರುವುದು ತಿಳಿದು ಬಂದಿರುತ್ತದೆ. ಆದರೆ ಬಾಲಕೃಷ್ಣ ಸುವರ್ಣರವರಲ್ಲಿ ಊರ್ಜಿತವಾಗಿರುವ ಉದ್ದಿಮೆ ಪರವಾನಗಿ ಹಾಗೂ ಆಸ್ತಿ ತೆರಿಗೆ ಇದ್ದು, ಇದನ್ನು ಪರಿಶೀಲಿಸಿದಾಗ ಬಾಲಕೃಷ್ಣ ಸುವರ್ಣರವರಿಂದ ಪೃಥ್ವಿರಾಜ್ ಶೆಟ್ಟಿ ಅಲಿಯಾಸ್ ಮುನ್ನಾ ಎಂಬಾತನು 27,990 ರೂ. ಹಣವನ್ನು ಪಡೆದುಕೊಂಡು ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಗಳನ್ನು ನಕಲಿಯಾಗಿ ಸೃಷ್ಟಿಸಿ ನೀಡಿರುವುದು ತಿಳಿದು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ…
ಉಳ್ಳಾಲ : ತಾಲೂಕಿನ ಪಜೀರು ಗ್ರಾಮದ ಅರ್ಕಾನ ಸಮೀಪ ಮರವೊಂದು ಮನೆ ಮೇಲೆ ಬಿದ್ದು 2ರ ಹರೆಯದ ಮಗು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದು, ಮನೆಗೆ ಹಾನಿಯುಂಟಾಗಿದೆ. ಮರಿಯಮ್ಮ ಎಂಬವರ ಮನೆಗೆ ಮರ ಬಿದ್ದಿದ್ದು, ಮೊಮ್ಮಗ ಅಮಾನ್ (2) ಗಾಯಗೊಂಡಿದ್ದಾನೆ. ಘಟನೆಯಲ್ಲಿ ಮನೆ ಸಂಪೂರ್ಣ ಹಾನಿಗೀಡಾಗಿದೆ. ಗಾಯಾಳು ಮಗುವನ್ನು ತಕ್ಷಣ ನಾಟೆಕಲ್ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಅಮೆರಿಕಾ ಪ್ರವಾಸದಲ್ಲಿರುವ ಸ್ಪೀಕರ್ ಯು.ಟಿ.ಖಾದರ್ ತಕ್ಷಣ ಸ್ಪಂಧಿಸಿ ತಾಲೂಕು ಆಡಳಿತಕ್ಕೆ ನಿರ್ದೇಶಿಸಿದ್ದಾರೆ. ಅದರಂತೆ ಉಳ್ಳಾಲ ತಾಲೂಕು ತಹಶೀಲ್ದಾರ್, ಕಂದಾಯ ಅಧಿಕಾರಿಗಳು ಹಾಗೂ ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷರು ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸ್ಥಳೀಯ ಯುವಕರು ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಸಹಕರಿಸಿದ್ದಾರೆ.
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕೆಂಪು ಕಲ್ಲು ಮತ್ತು ಮರಳಿನ ತೀವ್ರ ಅಭಾವವನ್ನು ತ್ವರಿತವಾಗಿ ಬಗೆಹರಿಸಿ, ಜನಪರ ನೀತಿಗಳನ್ನು ಜಾರಿಗೆ ತರಬೇಕು ಎಂಬ ಮನವಿಯೊಂದಿಗೆ, ಜಿಲ್ಲೆಯ ಬಿಜೆಪಿ ಪ್ರತಿನಿಧಿ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಹತ್ವಪೂರ್ಣ ಮಾತುಕತೆ ನಡೆಸಿತು.ಈ ವೇಳೆ, ಕೆಂಪುಕಲ್ಲು ಮತ್ತು ಮರಳಿನ ಕೊರತೆಯಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಹಾಗೂ ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಮುಖ್ಯಮಂತ್ರಿಯವರಿಗೆ ವಿವರಿಸಲಾಯಿತು. ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಿ ಸಮರ್ಥ ಹಾಗೂ ಜನಪರ ನೀತಿ ರೂಪಿಸುವಂತೆ ನಿಯೋಗವು ಆಗ್ರಹಿಸಿತು.ಈ ನಿಯೋಗದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಆಗಿರುವ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಅಧ್ಯಕ್ಷ ಅಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಕಿಶೋರ್ ಕುಮಾರ್ ಪುತ್ತೂರು, ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಜಿಲ್ಲಾ…
ಮಂಗಳೂರು : 113 ವರ್ಷಗಳ ಸೇವಾ ಪರಂಪರೆಯುಳ್ಳ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ (MCC Bank Ltd) ತನ್ನ 20ನೇ ಶಾಖೆಯನ್ನು ಆಗಸ್ಟ್ 3ರಂದು ಬೈಂದೂರಿನಲ್ಲಿ ಉದ್ಘಾಟಿಸಲು ಸಜ್ಜಾಗಿದೆ. ಈ ಕುರಿತು ಮಂಗಳೂರು ಹಂಪನಕಟ್ಟೆಯಲ್ಲಿನ ಬ್ಯಾಂಕ್ ಹೆಡ್ ಆಫೀಸ್‌ನ ಬೋರ್ಡ್ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಹಕಾರ ರತ್ನ ಅನಿಲ್ ಲೋಬೊ ಮಾಹಿತಿ ನೀಡಿದರು. 2024-25ನೇ ಹಣಕಾಸು ವರ್ಷದ ಅಂತ್ಯದಲ್ಲಿ ಬ್ಯಾಂಕ್ ₹1300 ಕೋಟಿ ವ್ಯಾಪಾರ ಮೊತ್ತವನ್ನು ಮುಟ್ಟಿದ್ದು, 20% ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕ್‌ನ ನಿವ್ವಳ ಬಂಡವಾಳ ₹76 ಕೋಟಿಯಿಂದ ₹83.76 ಕೋಟಿಗೆ ಏರಿಕೆಯಾಗಿದೆ. ಎನ್‌ಆರ್‌ಐ ಖಾತೆದಾರರಿಂದ ನಿರಂತರ ಬೆಂಬಲ ದೊರೆತಿದೆ. 2018ರಿಂದ ಅನಿಲ್ ಲೋಬೊ ನೇತೃತ್ವದ ಆಡಳಿತ ಮಂಡಳಿಯು ಅಧಿಕಾರ ವಹಿಸಿಕೊಂಡ ಬಳಿಕ ಬ್ಯಾಂಕಿನಲ್ಲಿ ಸಮಗ್ರ ಬೆಳವಣಿಗೆ ಕಂಡುಬಂದಿದೆ. ಠೇವಣಿಗಳು ₹304 ಕೋಟಿಯಿಂದ ₹728 ಕೋಟಿ (139%) ಏರಿಕೆಯಾಗಿದ್ದರೆ, ಸಾಲ ಮತ್ತು ಮುಂಗಡ ₹191 ಕೋಟಿಯಿಂದ ₹572 ಕೋಟಿಗೆ (199%) ಹೆಚ್ಚಾಗಿದೆ. ಶೇರು ಬಂಡವಾಳ, ಮೀಸಲು ನಿಧಿ, ಬಿಸಿನೆಸ್ ಟರ್ನ್ ಓವರ್…
ಕಿನ್ಯ ಬೆಳರಿಂಗೆಯ ಶ್ರೀ ಮಹಾಮ್ಮಾಯಿ ಮಾತೃ ಮಂಡಳಿ ವತಿಯಿಂದ ಆಟಿದ ಕೂಟ ಗೌಜಿಗ ಗಮ್ಮತ್ತ್ ವಿಶೇಷ ಕಾರ್ಯಕ್ರಮ ಕಿನ್ಯಾ ಭಂಡಾರ ಮನೆಯಲ್ಲಿ ನಡೆಯಿತು. ಕಲ್ಲರ ಕೋಡಿ ಸರಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾವು ತುಳುನಾಡಿನ ಜನರು, ಪ್ರಕೃತಿಯ ಆರಾಧಕರು, ಪ್ರಕೃತಿಗೂ ತುಳುವರಿಗೂ ಅವಿನಾವಭಾವ ಸಂಬಂಧ ಇದೆ, ಬೆನ್ನಿ, ಬೇಸಾಯ ನಟ್ಟಿಯನ್ನು ನಂಬಿದವರು ತುಳುವರು ಎಂದು ಶ್ರೀಮತಿ ಜಯಲಕ್ಷ್ಮಿ, ಮಹಮ್ಮಾಯಿ ಮಾತೃ ಮಂಡಳಿಯ ಆಟಿದ ಕೂಟ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ನಾವು ತುಳುನಾಡಿನಲ್ಲಿ ಹುಟ್ಟಿದ್ದೇವೆ ಎಂಬುದೇ ತುಳುವರಿಗೆ ನಮಗೆ ಹೆಮ್ಮೆಯ ವಿಷಯ. ತುಳುನಾಡಿನ ಭೂತಾರಾಧನೆ ನಾಗಮಂಡಲ ಆಚರಣೆಗಳು ಇದೆಲ್ಲವೂ ತುಳುನಾಡಿನ ವಿಶೇಷತೆಗಳು. ತುಳು ಭಾಷೆ ನಮ್ಮನ್ನು ಒಟ್ಟುಗೂಡಿಸಿದೆ. ನಮ್ಮ ಹಿರಿಯರು ಚಂದ್ರನ ನಡಿಗೆ ಸೂರ್ಯನ ನಡಿಗೆ ಇದನ್ನು ಲೆಕ್ಕ ಹಾಕಿ ಚಾಂದ್ರಮಾನ ಸೌರಮಾನದ ದಿನಗಳ ತಿಂಗಳನ್ನು ರಚಿಸಿದರು. ನಾವು ತುಳುವರು ಸೌರಮಾನ ಲೆಕ್ಕದಲ್ಲಿ ತುಳುವ ತಿಂಗಳುಗಳನ್ನು ಆಚರಿಸುತ್ತೇವೆ. ತುಳು ನಾಡಿನಲ್ಲಿ ಇರುವಷ್ಟು ವಿಶೇಷತೆಗಳು ಸಂಪ್ರದಾಯಗಳು…
ಉಪ್ಪಿನಂಗಡಿ : ಇಲ್ಲಿನ ವೈದ್ಯ. ಕೆಲ ದಿನಗಳ ಹಿಂದೆ 100ನೇ ವರ್ಷಕ್ಕೆ ಕಾಲಿರಿಸಿದ್ದ ಡಾ.ಮುದ್ರಜೆ ರಾಮಚಂದ್ರ ಭಟ್ ಹೃದಯಾಘಾತದಿಂದ ಸೋಮವಾರ ರಾತ್ರಿ ನೆಕ್ಕಿಲಾಡಿಯ ಅವರ ಮನೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು, ಪುತ್ರಿ ಇದ್ದಾರೆ. 1952ರಿಂದ ವೈದ್ಯಕೀಯ ಸೇವೆ ನೀಡುತ್ತಿದ್ದರು. ಉಪ್ಪಿನಂಗಡಿ ಹಳೇ ಬಸ್ ನಿಲ್ದಾಣ ಕಟ್ಟಡದ ಮೊದಲ ಮಹಡಿಯಲ್ಲಿ ಕ್ಲಿನಿಕ್ ತೆರೆದು ಸೇವೆ ನೀಡುತ್ತಿದ್ದು. ಇದೇ ಕಾರಣಕ್ಕೆ ‘ಮಾಳಿಗೆ ಡಾಕ್ಟರ್’ ಎಂದೇ ಹೆಸರಾಗಿದ್ದರು. ಬಡವರಿಗೆ ಉಚಿತ ಔಷಧೋಪಚಾರ ನೀಡುತ್ತಿದ್ದರು. ಕಾಂಚನ ಲಕ್ಷ್ಮೀನಾರಾಯಣ ಸಂಗೀತ ಶಾಲೆ, ಲಯನ್ಸ್ ಕ್ಲಬ್, ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಶ್ರಮಿಸಿದರು.
ಬೆಳ್ತಂಗಡಿ: ವಿವಾಹಿತೆ ಮಹಿಳೆ ಆತ್ಮಹತ್ಯೆ ನಡೆಸಿರುವ ಘಟನೆ ವೇಣೂರು ಗ್ರಾಮದ ಮೂಕಾಂಬಿಕಾ ನಿಲಯ ಪಚ್ಚಡಿ ಮನೆಯಲ್ಲಿ ಸಂಭವಿಸಿದೆ.ವಾಣಿಶ್ರೀ(26ವ) ಆತ್ಮಹತ್ಯೆ ಮಾಡಿಕೊಂಡವರು. ಮದುವೆಯಾಗಿ ಒಂದು ವರ್ಷ ಮೂರು ತಿಂಗಳು ಆಗಿರುವ ವಿವಾಹಿತ ಮಹಿಳೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷವನ್ನು ಸೇವಿಸಿರುತ್ತಾರೆ. ಹೊಟ್ಟೆನೋವು ಎಂದು ಹೇಳಿದಾಗ ಪಕ್ಕದ ಮನೆಗೆ ತೆರಳಿದ್ದ ದೊಡ್ಡಮ್ಮರವರಿಗೆ ಅನುಮಾನ ಬಂದು ತಕ್ಷಣ ಗಂಡ ಯಾವುದೋ ಕಾರ್ಯಕ್ರಮಕ್ಕೆ ತೆರಳಿದ್ದ ಕಾರಣ ವಾಣಿ ತಂದೆಗೆ ಕರೆ ಮಾಡಿರುತ್ತಾರೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತಿ ಪ್ರಶಾಂತ್, ತಂದೆ ರಾಜು, ತಾಯಿ ಪ್ರೇಮ ಅವರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

