ಸುಳ್ಯ : ಕೇರಳದ ಕಾಞಂಗಾಡ್‌ನಿಂದ ಗಡಿ ಪ್ರದೇಶವಾದ ಬಂದಡ್ಕ ಮೂಲಕ ಸುಳ್ಯಕ್ಕೆ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಆ.14ರಿಂದ ಸಂಚಾರ ಆರಂಭಗೊಂಡಿದೆ. ಕಾಞಂಗಾಡ್ ಡಿಪೋದಿಂದ ಪೆರಿಯ, ಮೂನಾಂಕಡವ್ ಕುಂಡಕುಯಿ-ಬಂದಡ್ಕ-ಕನ್ನಡಿತೋಡ್-ಕೋಲ್ಕಾರ್ ಮೂಲಕ ಸುಳ್ಯಕ್ಕೆ ಬಸ್ ಸೇವೆಯನ್ನು ಪ್ರಾರಂಭಿಸಲು ಕೇರಳ ಸರಕಾರ ಅನುಮತಿ ನೀಡಿದೆ.
ಇಂದು ಬೆಳಿಗೆ ಕಾಞಂಗಾಡ್‌ನಿಂದ ಆರಂಭಗೊಂಡ ಬಸ್‌ಗೆ ಕುತ್ತಿ ಕೋಲಿನಲ್ಲಿ ಶಾಸಕ ಸಿ.ಎಚ್.ಕುಞಂಬು ಅವರ ನೇತೃತ್ವದಲ್ಲಿ ಸ್ವಾಗತ ನೀಡಲಾಯಿತು. ಬಳಿಕ ಶಾಸಕರು ಬಸ್ ಓಡಾಟಕ್ಕೆ ಚಾಲನೆ ನೀಡಿದರು. ಪಡ್ಪು, ಬಂದಡ್ಕಗಳಲ್ಲಿ ಗಡಿನಾಡ ಕನ್ನಡಿಗರ ಸಂಘ, ಬಂದಡ್ಕ ಗೌಡ ಗ್ರಾಮ ಸಮಿತಿ ವತಿಯಿಂದ ಗಡಿನಾಡ ಕನ್ನಡಿಗರ ಸಂಘದ ಅಧ್ಯಕ್ಷ ಪುರುಷೋತ್ತಮ ಬೊಡ್ಡನ ಕೊಚ್ಚಿ, ಹಾಗೂ ಮತ್ತಿತರ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು. ಗಡಿ ಪ್ರದೇಶವಾದ ಕೋಲ್ಕಾರ್‌ನಲ್ಲಿಯೂ ಬಸ್‌ಗೆ ಸ್ವಾಗತ ನೀಡಲಾಯಿತು.
ಕಾಞಂಗಾಡ್‌ನಿಂದ ಸುಳ್ಯಕ್ಕೆ ಬಸ್ ಬೆಳಿಗ್ಗೆ 7ಕ್ಕೆ ಹೊರಟು 9.10 ಕ್ಕೆ ಸುಳ್ಯ ತಲುಪುತ್ತದೆ, ಸುಳ್ಯದಿಂದ 9.20ಕ್ಕೆ ಹೊರಟು11.30ಕ್ಕೆ ಕಾಞಂಗಾಡ್ ತಲುಪುತ್ತದೆ, ಕಾಂಞಂಗಾಡ್ ಮಧ್ಯಾಹ್ನ 12.10 ಹೊರಟು, 2.25ಕ್ಕೆ ಸುಳ್ಯ ತಲುಪುತ್ತದೆ, ಸುಳ್ಯ ದಿಂದ 2.35 ಹೊರಟು 4.50ಕ್ಕೆ ಕಾಞಂಗಾಡ್ ತಲುಪಲಿದೆ. ಈ ರಸ್ತೆಯಲ್ಲಿ ಬಸ್ ಸೇವೆ ಆರಂಭಿಸಬೇಕು ಎಂಬುದು ದಶಕಗಳ ಬೇಡಿಕೆಯಾಗಿದೆ. ಬಸ್‌ಗೆ ವಿವಿಧ ಕಡೆಗಳಲ್ಲಿ ಸ್ವಾಗತ ನೀಡಲು ಸಿದ್ಧತೆ ನಡೆಸಲಾಗಿದೆ. ಸದ್ಯ ಸುಳ್ಯ ಕಾಞಂಗಾಡ್ ಮಧ್ಯೆ 3 ಟ್ರಿಪ್ ಬಸ್ ಓಡಾಟ ನಡೆಸಲಿದೆ.



