ಮಂಗಳೂರು : ಕೂಳೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಧವಿ ಎಂಬ ಮಹಿಳೆ ದುರ್ಮರಣಕ್ಕೀಡಾಗಿದ್ದಾರೆ. ಅವರು ಚಲಾಯಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ದೊಡ್ಡ ರಸ್ತೆಯ ಗುಂಡಿಗೆ ಬಿದ್ದಿದ್ದರು. ಅದೇ ವೇಳೆ ಹಿಂದಿನಿಂದ ಬಂದ ಮೀನು ತುಂಬಿದ ಟ್ರಕ್ ಅವರ ಮೇಲೆ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವಿಗೀಡಾದರು. ಈ ದಾರುಣ ಘಟನೆ ಸ್ಥಳೀಯರಲ್ಲಿ ಆಕ್ರೋಶವನ್ನುಂಟುಮಾಡಿದ್ದು, ಅವರು ಮೂಲ್ಕಿಯಿಂದ ಪಂಪ್‌ವೆಲ್‌ಗೆ ಸಾಗುವ ಹೆದ್ದಾರಿಯ ದುಸ್ಥಿತಿಯ ಬಗ್ಗೆ ಗಂಭೀರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಾರ್ಗದಲ್ಲಿ ಹಲವಾರು ದೊಡ್ಡ ಗುಂಡಿಗಳು ಇರುವುದರಿಂದ ದಿನಕ್ಕೊಂದು ಅಪಘಾತ ಸಂಭವಿಸುವಂತಹ ಪರಿಸ್ಥಿತಿಯಿದೆ ಎಂದು ಸ್ಥಳೀಯರು ದೂರಿದ್ದಾರೆ ನಿವಾಸಿಗಳ ಪ್ರಕಾರ, ರಸ್ತೆಯ ದುರಸ್ತಿಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಕೂಡ ನಿರ್ಲಕ್ಷ್ಯ ಮಾತ್ರ ಮುಂದುವರೆದಿದೆ. ಇಂತಹ ದುರ್ಘಟನೆಗಳು ನಡೆದ ಬಳಿಕ ಮಾತ್ರ ತುರ್ತು ಕ್ರಮ ಕೈಗೊಳ್ಳುವ ನಿಯಮವಾಗಿಬಿಟ್ಟಿದೆ ಎಂದು ಜನರು ಆಕ್ರೋಶಗೊಂಡಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಇನ್ನೂ ಅನೇಕ ಅಮೂಲ್ಯ ಜೀವಗಳು ಈ ಅಪಾಯಕಾರಿ…
Author: UllalaVani
ಉಳ್ಳಾಲ : ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ಬೆಳಿಗ್ಗೆ ಗಣಪತಿ ಹೋಮ, ಅಭಿಷೇಕ, ಮಹಾ ಪೂಜೆ ಸಾರ್ವಜನಿಕ ಗ್ರಹಣ ಶಾಂತಿ ಹೋಮ ಶಿವ ದೇವರಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸಿಯಾಳಾಭಿಷೇಕ ಮಧ್ಯಾಹ್ನ ಮಹಾಪೂಜೆ ಅನ್ನದಾನ ಸೇವೆ ನಡೆಯಿತು.
ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿಯಮಿತ .ಕಲ್ಲಡ್ಕ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾ ಭವನದಲ್ಲಿ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘವು 2024-25ನೇ ಆರ್ಥಿಕ ವರ್ಷದಲ್ಲಿ ಲೆಕ್ಕಪರಿಶೋಧನೆಯಂತೆ ರೂ. 486 ಕೋಟಿ ವ್ಯವಹಾರ ನಡೆಸಿ ಆಡಿಟ್ ವರ್ಗೀಕರಣದಲ್ಲಿ “ಎ” ಗ್ರೇಡ್ ಹೊಂದಿ ರೂ.1,55,11,828.70 ಲಾಭಗಳಿಸಿರುತ್ತದೆ ಎಂದು ಹೇಳಿದರು. ಸಂಘದ ಸದಸ್ಯರಿಗೆ 12% ಡಿವಿಡೆಂಡ್ ನೀಡುವುದೆಂದು ಸಂಘವು ಘೋಷಿಸಲಾಯಿತು. ಸಂಘವು 2024-2025ನೇ ಆರ್ಥಿಕ ವರ್ಷದಲ್ಲಿ 1495 ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ರೂ. 24.11 ಕೋಟಿ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡು ಸಾಲವನ್ನು ವಿತರಿಸಿದೆ. 164 ಸದಸ್ಯರಿಗೆ 3% ಬಡ್ಡಿಯಲ್ಲಿ ಕೃಷಿ ಅಭಿವೃದ್ಧಿಗಾಗಿ ರೂ 4.97 ಕೋಟಿ ಸಾಲ, ವಾಹನ ಖರೀದಿ ಸಾಲ, 8.2ಲಕ್ಷ.34 ಸದಸ್ಯರಿಗೆ, ಪಶುಗಳ ದೈನಂದಿನ ನಿರ್ವಹಣೆಗಾಗಿ ಶೂನ್ಯ ಬಡ್ಡಿದರದಲ್ಲಿ 25 ಲಕ್ಷ ಸಾಲ, 18 ಸದಸ್ಯರಿಗೆ ರೂ. 1.50 ಕೋಟಿ…
ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ 2024-25ನೇ ಸಾಲಿನ 14ನೇ ವಾರ್ಷಿಕ ಸಾಮಾನ್ಯ ಸಭೆಯು ಸೆ.21 ರವಿವಾರದಂದು ಪೂರ್ವಾಹ್ನ 10.30ಕ್ಕೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಸಂಘದ ಆಡಳಿತ ಕಛೇರಿ “ಆತ್ಮಶಕ್ತಿ ಸೌಧ” ಸಭಾಂಗಣ, ಬೈರಾಡಿಕೆರೆ ಹತ್ತಿರ, ಪಡೀಲ್, ಮಂಗಳೂರು ಇಲ್ಲಿ ಜರುಗಲಿರುವುದೆಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಇವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಪುತ್ತೂರು : ಪುತ್ತೂರಿನ ಪಿಲಿ ಪರಂಪರೆಗೆ ತನ್ನದೇ ಶೈಲಿಯ ಹೆಜ್ಜೆಯ ಹೆಗ್ಗುರುತಿನ ಬ್ರ‍್ಯಾಂಡ್ ತಂದುಕೊಟ್ಟ ಪಿಲಿ ರಾಧಣ್ಣ ಅವರು ಅನಾರೋಗ್ಯದ ಹಿನ್ನೆಲೆ ಶನಿವಾರ ನಸುಕಿನ ಜಾವ ಕೊನೆಯುಸಿರೆಳೆದಿದ್ದಾರೆ. ಕೆಮ್ಮಾಯಿ ನಿವಾಸಿ ರಾಧಾಕೃಷ್ಣ ಶೆಟ್ಟಿ (59) ಅವರನ್ನು ಅನಾರೋಗ್ಯದ ಹಿನ್ನಲೆ ಸೆ.5 ರಂದು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಪುತ್ತೂರಿನಲ್ಲಿ ಪಿಲಿ ರಾಧಣ್ಣ ಎಂದೇ ಹೆಸರಾದ ರಾಧಾಕೃಷ್ಣ ಶೆಟ್ಟಿಯವರು ಹುಲಿ ಆಚರಣೆಯ ಸಂಪ್ರದಾಯಕ್ಕೆ ಎಳ್ಳಷ್ಟು ಚ್ಯುತಿ ಬಾರದ ಹಾಗೆ ವೇಷ ಹಾಕುವುದು ಮತ್ತು ಕುಣಿಯುವುದು ಅವರ ವಿಶೇಷವಾಗಿತ್ತು. 65 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಇದ್ದದ್ದು ಎರಡು ಪಿಲಿ. ಒಂದು ಪಿಲಿ ಸಂಕಪ್ಪಣ್ಣ, ಇನ್ನೊಂದು ಪಿಲಿ ಗಂಗಣ್ಣ. ಪಿಲಿ ಸಂಕಪ್ಪ ಶೆಟ್ಟಿ ಅವರ ಪುತ್ರನೇ ಪಿಲಿ ರಾಧಣ್ಣ. ಸಂಕಪ್ಪ ಅವರು ಸುಮಾರು 30 ವರ್ಷಗಳ ಕಾಲ ಕುಣಿದವರು. ರಾಧಾಕೃಷ್ಣ ಶೆಟ್ಟಿ ಅವರಿಗೆ 9 ವರ್ಷ (4ನೇ ತರಗತಿ) ಇರುವಾಗ…
ಮಂಗಳೂರು : ಸ್ಪ್ರಿಂಗ್, ಕಾಯಿರ್ ಮತ್ತು ಫೋಮ್ ಹಾಸಿಗೆಗಳ ಉತ್ಕೃಷ್ಟ ಶ್ರೇಣಿಗೆ ಹೆಸರುವಾಸಿಯಾದ ಪ್ರಮುಖ ಹಾಸಿಗೆ ಬ್ರಾಂಡ್ ರೆಸ್ಟೊಲೆಕ್ಸ್, ಮಂಗಳೂರಿನ ಬಲ್ಲಾಳ್ ಬಾಗ್‌ನಲ್ಲಿ ತನ್ನ ಹೊಸ ವಿಶೇಷ ಫ್ರಾಂಚೈಸಿ ಮಳಿಗೆಗೆ ಶುಕ್ರವಾರ ಚಾಲನೆ ನೀಡಿದೆ. ನೋವಾ ಸೇಲ್ಸ್ ಸ್ಟೀಪ್ ಕಂಫರ್ಟ್ಸ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಳಿಗೆಯು ಈ ಪ್ರದೇಶದ ಗ್ರಾಹಕರಿಗೆ ಗುಣಮಟ್ಟದ ನಿದ್ರೆಗೆ ಅಗತ್ಯ ಪರಿಕರಗಳನ್ನು ಒದಗಿಸಲಿದೆ ಎಂದು ಸಂಸ್ಥೆಯ ಪಾಲುದಾರರಾದ ವಿಜಯ ಕಾಮತ್ ಹೇಳಿದರು. 850 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಮಳಿಗೆಯು ರೆಸ್ಟೊಲೆಕ್ಸ್ ನ ಸಂಪೂರ್ಣ ಶ್ರೇಣಿಯ ಕೊಡುಗೆಗಳನ್ನು ಒಳಗೊಂಡಿದೆ. ಇದರಲ್ಲಿ ಹಾಸಿಗೆಗಳು, ದಿಂಬುಗಳು, ಬೆಡ್‌ಶೀಟ್‌ಗಳು, ಕಂಫರ್ಟರ್ ಗಳು, ಹಾಸಿಗೆ ಕವರ್‌ಗಳು, ದಿಂಬು ಮತ್ತಿತರ ಉತ್ಪನ್ನಗಳು ಸೇರಿವೆ. ರೆಸ್ಟೊಲೆಕ್ಸ್ ಕಾಯಿರ್ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಡೇವಿಡ್ ಕುರುವಿಲ್ಲಾ ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ಮಾತಾಡಿದ ಅವರು, ʻರೆಸ್ಟೊಲೆಕ್ಸ್ ನಾಲ್ಕು ದಶಕಗಳಿಂದ ಗ್ರಾಹಕರ ಅನುಭವಗಳನ್ನು ಹೆಚ್ಚಿಸುವುದು ಮತ್ತು ಸೂಕ್ತ ಆಯ್ಕೆಗಳನ್ನು ಬೆಂಬಲಿಸುವತ್ತ ಗಮನಹರಿಸಿದೆ.…
ಉಳ್ಳಾಲ : ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ (402) ಹಾಗೂ ಸಯ್ಯಿದ್ ಮದನಿ ದರ್ಗಾ ಸಮಿತಿ ಇದರ ಆಶ್ರಯದಲ್ಲಿ ಲೋಕಾನುಗ್ರಹಿ ಮುಹಮ್ಮದ್ ಮುಸ್ತಫಾ (ಸ) ರವರ ಜನ್ಮ ದಿನ ಪ್ರಯುಕ್ತ ಬೃಹತ್ ಮೀಲಾದು ನ್ನಬಿ ರ‍್ಯಾಲಿ ಶುಕ್ರವಾರ ನಡೆಯಿತುಕೋಡಿ ಜುಮಾ ಮಸೀದಿ ಖತೀಬ್ ಇರ್ಶಾದ್ ಸಖಾಫಿ ದುಆ ನೆರವೇರಿಸಿದರು. ರ‍್ಯಾಲಿ ಉದ್ಘಾಟಿಸಿ ಮಾತನಾಡಿದ ಸ್ಪೀಕರ್ ಯುಟಿ ಖಾದರ್ ಅವರು, ಶಾಂತಿ ಸೌಹಾರ್ದತೆಯನ್ನು ಸಾರಿದ ಪ್ರವಾದಿ ಮುಹಮ್ಮದ್ ( ಸ) ರವರ ಜೀವನ ನಮಗೆ ಮಾರ್ಗದರ್ಶನ ಆಗಿದೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು, ಸಮಾಜ ನಿರ್ಮಾಣ ಮಾಡಬೇಕು ಎಂದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋಟೆಪುರ ಮಸೀದಿಯಿಂದ ಉಳ್ಳಾಲ ದರ್ಗಾವರೆಗೆ ಕಾಲ್ನಡಿಗೆಯಲ್ಲಿ ಶಾಂತಿಯುತ ಮೀಲಾದ್ ರ‍್ಯಾಲಿ ನಡೆಯಿತು. ಐದು ಕರಿಯದ 28 ಮೊಹಲ್ಲಾ ಗಳ ವಿದ್ಯಾರ್ಥಿಗಳ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ,ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ…
ಮಂಗಳೂರು : ಉದ್ಯಮಿ, ಕೃಷಿಕರು ಮತ್ತು ವೃತ್ತಿಪರರಿಗೆ ಕ್ಯಾಥೋಲಿಕ್ ವೇದಿಕೆ ರಚನಾ ನೀಡುವ ರಚನಾ ಪುರಸ್ಕಾರ 2023–2025ರ ಘೋಷಿಸಿದ್ದು, ಈ ಬಾರಿ ಉದ್ಯಮ ಕ್ಷೇತ್ರದಲ್ಲಿ ಆಸ್ಟಿನ್ ರೋಚ್, ವೃತ್ತಿಪರ ಕ್ಷೇತ್ರದಲ್ಲಿ ಜಾನ್ ರಿಚರ್ಡ್ ಲೋಬೊ (ಕೆಎಎಸ್)ಬೆಂಗಳೂರು, ಕೃಷಿಕರ ಕ್ಷೇತ್ರದಲ್ಲಿ ಡಾ. ಗಾಡ್ವಿನ್ ರೋಡ್ರಿಗಸ್ ಬೆಳ್ವೈ, ಎನ್‌ಆರ್‌ಐ ಉದ್ಯಮ ಕ್ಷೇತ್ರಕ್ಕೆ ಪ್ರತಾಪ್ ಮೆಂಡೋನ್ಸಾ, ಹಾಗೂ ಶ್ರೇಷ್ಠ ಮಹಿಳೆ ಸಾಧಕಿ ಶೋಭಾ ಮೆಂಡೋನ್ಸಾ, ದುಬೈ ಇವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ರಚನಾ ಅಧ್ಯಕ್ಷ ಜಾನ್ ಬಿ. ಮೊಂಟೇರಿಯೋ ಹೇಳಿದರು. ಮಂಗಳೂರಿನ ಉರ್ವ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಪ್ರಶಸ್ತಿ ಪ್ರಧಾನ ಸಮಾರಂಭವು 2025ರ ಅಕ್ಟೋಬರ್ 5ರಂದು, ಭಾನುವಾರ ಸಂಜೆ 6 ಗಂಟೆಗೆ ಮಂಗಳೂರು ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಮಿ. ರೆ. ಡಾ. ಪೀಟರ್ ಪಾಲ್ ಸಲ್ದಾನ್ಹಾ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಇಂಧನ ಸಚಿವ ಕೆ. ಜೆ. ಜಾರ್ಜ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ…
ಉಳ್ಳಾಲ : ತಡರಾತ್ರಿ ಕೋಟೆಕಾರು ಬೀರಿ ಎಟಿಎಂನಲ್ಲಿ ಹಣ ಕದಿಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ದೆಹಲಿಯ ಕಣ್ಗಾವಲು ವ್ಯವಸ್ಥೆಯ ಎಚ್ಚರಿಕೆಯ ಮೇರೆಗೆ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯ ನಿವಾಸಿ ನಾಗಪ್ಪ ಕೇರಳಟ್ಟಿ (41) ಎಂಬಾತನನ್ನು ಮುಂಜಾನೆ 3 ಗಂಟೆ ಸುಮಾರಿಗೆ ಎಸ್‌ಬಿಐ ಎಟಿಎಂನಲ್ಲಿದ್ದ ಕ್ಯಾಶ್ ಬಾಕ್ಸ್ ಒಡೆಯಲು ಯತ್ನಿಸುತ್ತಿದ್ದಾಗ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಪೊಲೀಸರ ಪ್ರಕಾರ, ನಾಗಪ್ಪ ಬೆಳಗಿನ ಜಾವ 2:30 ರ ಸುಮಾರಿಗೆ ಎಟಿಎಂ ಒಳಗೆ ಪ್ರವೇಶಿಸಿ, ತಾನು ತಂದಿದ್ದ ಉಪಕರಣಗಳನ್ನು ಬಳಸಿ ಕ್ಯಾಶ್ ಬಾಕ್ಸ್ ಅನ್ನು ಹಾನಿಗೊಳಿಸಿದ್ದಾನೆ. ದೆಹಲಿಯಿಂದ ಹಿಡಿದು ವಿವಿಧ ಜಿಲ್ಲೆಗಳ ಎಟಿಎಂಗಳ ಮೇಲೆ ನಿಗಾ ಇಡುವ ದೆಹಲಿಯ ಕಣ್ಗಾವಲು ವ್ಯವಸ್ಥೆಯು ಈ ಕೃತ್ಯದ ಬಗ್ಗೆ ಎಚ್ಚರಿಕೆ ನೀಡಿದೆ. ಬಳಿಕ ಕಣ್ಗಾವಲು ಸಿಬ್ಬಂದಿ ರಂಜಿತ್ ಅವರು ಬೀರಿ ಎಟಿಎಂ ನೋಡಿಕೊಳ್ಳುವ ದೀಪಕ್ ಅಮಿನ್ ಅವರಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣ 112 ಗೆ ಕರೆ ಮಾಡಿದ್ದಾರೆ. ಈ ಮಾಹಿತಿಯನ್ನು ಉಳ್ಳಾಲ ಪೊಲೀಸರಿಗೆ ರವಾನಿಸಿದ್ದು,…
ಮಂಗಳೂರು: ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ ಇದರ ಅಧ್ಯಕ್ಷರಾಗಿ ಅಝೀಝ್ ಪರ್ತಿಪಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಂಗಳೂರಿನ ಹಂಪನ್‌ಕಟ್ಟೆಯಲ್ಲಿರುವ “ಮಿಲಾಗ್ರಿಸ್ ಸೆನೆಟ್ ಹಾಲ್” ಸಭಾಂಗಣದಲ್ಲಿ ದ.ಕ. ಬಸ್ಸು ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ನಡೆಯಿತು. ಈ ಸಭೆಯಲ್ಲಿ ದ. ಕ. ಬಸ್ಸು ಮಾಲಕರ ಸಂಘದ ಅಧ್ಯಕ್ಷರಾಗಿ ಅಝೀಝ್ ಪರ್ತಿಪಾಡಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರು ಸತತ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ದ. ಕ. ಬಸ್ಸು ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ, ಅಧ್ಯಕ್ಷರಾಗಿಯೂ ಹಾಗೂ ಪೂರ್ವ ವಲಯ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

