Author: UllalaVani

Kannada News From Coastal Karnataka

ಕಣ್ಣೂರು: ಹೆಬ್ಬಾವು ಕೊಂದು ಪದಾರ್ಥ ಮಾಡಿ ತಿಂದ ಇಬ್ಬರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಮಾದಮಂಗಲ ಮುಂಡಕ್ಕೆ ನಿವಾಸಿಗಳಾದ ಯು.ಪ್ರಮೋದ್(40), ಬಿನೀಶ್ (37) ಬಂಧಿತರು. ರಹಸ್ಯ ಮಾಹಿತಿಯನ್ವಯ ಅರಣ್ಯ ಅಧಿಕಾರಿಗಳು ಪ್ರಮೋದ್‌ ಮನೆಗೆ ದಾಳಿ ನಡೆಸಿದ್ದರು. ಈ ವೇಳೆ ಹೆಬ್ಬಾವು ಪದಾರ್ಥ, ಅದರ ಮೂಳೆಗಳು, ಪಾತ್ರೆಗಳು ಲಭಿಸಿತ್ತು. ಪ್ರಮೋದ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಲಭಿಸಿದ ಮಾಹಿತಿಯಂತೆ ಬಿನೀಶ್ ಸೆರೆಯಾಗಿದ್ದಾನೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಿ ಪಡಿಸಲಾಗಿದ್ದು ರಿಮಾಂಡ್ ವಿಧಿಸಲಾಗಿದೆ.

Read More

ತೊಕ್ಕೊಟ್ಟು: ಕುಸ್ತಿ, ಪವರ್ ಲಿಫ್ಟಿಂಗ್, ದೇಹರ್ದಾರ್ಢ್ಯ, ಕಬಡ್ಡಿ ಮತ್ತು ಹಗ್ಗಜಗ್ಗಾಟ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವ ತೊಕ್ಕೊಟ್ಟು ಭಟ್ನಗರದ ಶ್ರೀ ಶಕ್ತಿಭಾರತ್ ವ್ಯಾಯಾಮ ಶಾಲೆಗೆ ಸುವರ್ಣ ಸಂಭ್ರಮ, ಆ ಪ್ರಯುಕ್ತದ.ಕ. ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಮಂಗಳೂರು ಮತ್ತು ದ.ಕ. ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಮಂಗಳೂರು ದ.ಕ. ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಪುರುಷರ ಮತ್ತು ಮಹಿಳೆಯರ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್-2025 (CLASSIC & EQUIPPED) (ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಮತ್ತು ಮಾಸ್ಟರ್ಸ್) ಅ.24, 25, 26 ರಂದು ತೊಕ್ಕೊಟ್ಟು ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ಜರಗಲಿದ್ದು, ಇದರ ವಿಜ್ಞಾಪನಾ ಪತ್ರವನ್ನು ಹಿರಿಯ ಮುಖಂಡ ಸೀತಾರಾಮ ಬಂಗೇರ ಬಿಡುಗಡೆಗೊಳಿಸಿದರು.ಈ ಸ್ಪರ್ಧಾಕೂಟಕ್ಕೆ ರಾಜ್ಯದಿಂದ ಸುಮಾರು 1600 ಕ್ರೀಡಾಪಟುಗಳು ಆಗಮಿಸಲಿದ್ದಾರೆ. ದ.ಕ ಜಿಲ್ಲೆಯ ಉಳ್ಳಾಲದ ರಾಣಿ ಅಬ್ಬಕ್ಕನ ಐತಿಹಾಸಿಕ ಪ್ರದೇಶದಲ್ಲಿ 1976ರಲ್ಲಿ ದಿ. ಶೇಖರ್ ಬಂಗೇರ ಭಟ್ನಗರ ತೊಕ್ಕೊಟ್ಟು ಇವರ ಮಾರ್ಗದರ್ಶನದಲ್ಲಿ ಪ್ರಾರಂಭಗೊಂಡ ಶ್ರೀ ಶಕ್ತಿಭಾರತ್ ವ್ಯಾಯಾಮ ಶಾಲೆ (ಭಟ್ನಗರ) ಉಳ್ಳಾಲಬೈಲ್, ತೊಕ್ಕೊಟ್ಟು ಭಾಗದಲ್ಲಿ…

Read More

ಮಂಗಳೂರು: ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ನಿಯಮಿತ, ಬಲ್ಮಠ, ಮಂಗಳೂರು ತನ್ನ 50ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುವರ್ಣ ಮಹೋತ್ಸವದ ಅಂಗವಾಗಿ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿದೆ.ಸಂಘದ ವಾರ್ಷಿಕ ಮಹಾಸಭೆಯ ಅಂಗವಾಗಿ ಸೆಪ್ಟೆಂಬರ್ 21, 2025ರಂದು ಬೆಳಿಗ್ಗೆ 8.00ರಿಂದ ಮಧ್ಯಾಹ್ನ 12.30ರವರೆಗೆ ಜಪ್ಪು ಸೈಂಟ್ ಜೋಸೇಫ್ ಸೆಂಟಿನರಿ ಮೆಮೋರಿಯಲ್ ಹಾಲ್‌ನಲ್ಲಿ ಈ ಶಿಬಿರ ನಡೆಯಲಿದೆ.ಡಾ. ಕವಿತ ಡಿ’ಸೋಜ, ತಜ್ಞರು, ಪ್ರಸೂತಿ ಮತ್ತು ಹೆರಿಗೆ ವಿಭಾಗ, ಎ.ಜೆ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಅವರ ನೇತೃತ್ವದಲ್ಲಿ, ಹಾಗೂ ಎ.ಜೆ. ಕಣ್ಣಿನ ವಿಭಾಗದ ಸಹಕಾರದೊಂದಿಗೆ ಉಚಿತ ಕಣ್ಣಿನ ಪರೀಕ್ಷೆ, ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ನಡೆಯಲಿದೆ.ಕಾರ್ಯಕ್ರಮವನ್ನು ಬೆಳಿಗ್ಗೆ 8.30ಕ್ಕೆ ಸಂಘದ ಅಧ್ಯಕ್ಷರಾದ ವಿಧಾನಪರಿಷತ್‌ ಸದಸ್ಯ ಐವನ್ ಡಿಸೋಜ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎ.ಜೆ. ಆಸ್ಪತ್ರೆಯ ಕಣ್ಣಿನ ವಿಭಾಗದ ಮುಖ್ಯಸ್ಥರು ಭಾಗವಹಿಸಲಿದ್ದಾರೆ.ಬೆಳಿಗ್ಗೆ 8.00ರಿಂದ ನೋಂದಣಿ ಪ್ರಾರಂಭವಾಗಲಿದ್ದು, ಆಗಮಿಸುವ ಪ್ರತಿಯೊಬ್ಬರಿಗೂ ನೋಂದಣಿ ಕಾರ್ಡ್ ನೀಡಲಾಗುವುದು. ನೋಂದಣಿಗೆ ಆಧಾರ್ ಕಾರ್ಡ್…

Read More

ಮುಡಿಪು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಭಾಗದ ಸಹಯೋಗದಲ್ಲಿ ರಾಣಿ ಅಬ್ಬಕ್ಕಳ 500ನೇ ಜಯಂತಿಯ ಪ್ರಯುಕ್ತ ‘ಅಬ್ಬಕ್ಕ 500 ವರ್ಷದ 51ನೇ ಎಸಳು’ ಕಾರ್ಯಕ್ರಮವು ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆರವೇರಿತು. ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಮನೋಹರ್ ಕುರ್ನಾಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ಡಾ.ಸತೀಶ್ ಗಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ.ಮೈತ್ರಿ ಭಟ್ ಅಬ್ಬಕ್ಕನ ಜೀವನ ಚರಿತ್ರೆಯನ್ನು, ಅವಳ ಸಾಧನೆಯನ್ನು ವಿಶ್ಲೇಷಿಸಿದರು. ಹಾಗೂ ಅಂತಹ ವ್ಯಕ್ತಿತ್ವ ನಮಗೆ ಮಾರ್ಗದರ್ಶನವನ್ನು ಆದರ್ಶವನ್ನು ನೀಡುತ್ತದೆ ನಾವು ಅವಳನ್ನು ಅನುಸರಿಸಬೇಕು ಹಾಗೂ ತುಳುನಾಡಿನ ವೀರರಾಣಿಯಾದ ಅಬ್ಬಕ್ಕಳ ಚರಿತ್ರೆಯನ್ನು ಅಜರಾಮರವಾಗಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಕವಿತಾ ಎಂ.ಎಲ್. ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಡಾ. ಶೇಷಪ್ಪ ಕೆ., ಕಾರ್ಯಕ್ರಮದ ಸಂಯೋಜಕರಾದ ಕಾಜಲ್ ಹಾಗೂ ತನುಜ ಎಂ. ಉಪಸ್ಥಿತರಿದ್ದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ಕಾಜಲ್ ಸ್ವಾಗತಿಸಿ,…

Read More

ಮಂಗಳೂರು : ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಸೆ. 20 ರಿಂದಲೇ ಮಧ್ಯಾವಧಿ (ದಸರಾ) ರಜೆ ಆರಂಭವಾಗಲಿದೆ. ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ವ್ಯಾಪ್ತಿಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ (ರಾಜ್ಯ ಪಠ್ಯಕ್ರಮ) ಶಾಲೆಗಳಿಗೆ ಸೆ. 20 ರಿಂದ ದಸರಾ ರಜೆ ಆರಂಭಗೊಂಡು ಅಕ್ಟೋಬರ್‌ 6ರ ವರೆಗೂ ಇರಲಿದೆ. ಅ. 7ರಿಂದ ಶಾಲೆಗಳು ಪುನರ್‌ ಆರಂಭವಾಗಲಿದೆ. ಅವಿಭಜಿತ ದ.ಕ. ಜಿಲ್ಲೆಯ ಸಿಬಿಎಸ್‌ಇ ಶಾಲೆಗಳಲ್ಲಿ ಸೆ. 20ರಿಂದ ಮಧ್ಯಾವಧಿ ರಜೆ ಆರಂಭವಾಗಿ ಅ. 2ರ ವರೆಗೂ ಇರಲಿದೆ. ಅ. 3ರಿಂದ ತರಗತಿಗಳು ಪುನಃ ಆರಂಭವಾಗಲಿದೆ. ಸಿಬಿಎಸ್‌ಇ ಕೆಲವು ಆಡಳಿತ ಮಂಡಳಿಗಳ ರಜಾವಧಿಯಲ್ಲಿ ಸ್ವಲ್ಪ ವ್ಯತ್ಯಾಸವೂ ಇರಬಹುದು. ದೀಪಾವಳಿ ಹಾಗೂ ಕ್ರಿಸ್ಮಸ್‌ ಸಂದರ್ಭದಲ್ಲಿ ಹೆಚ್ಚು ದಿನ ರಜಾ ಕೊಡುವ ಶಾಲೆಗಳು ಈ ರಜಾವಧಿಯ ಕಡಿಮೆ ಮಾಡಿಕೊಳ್ಳುವ ಪದ್ಧತಿಯೂ ಇದೆ. ರಾಜ್ಯ ಪಠ್ಯಕ್ರಮ ಸಹಿತ ವಿವಿಧ ಪಠ್ಯಕ್ರಮದ ಕೆಲ ಶಾಲೆಗಳಲ್ಲಿ ಎಸೆಸೆಲ್ಸಿ/ ಫ‌ಲಿತಾಂಶ ಸುಧಾರಣೆಯ ದೃಷ್ಟಿಯಿಂದ ಆಯಾ ತರಗತಿಯ…

Read More

ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆಯು ಹೊಸ ಕ್ರಮವೊಂದನ್ನು ಜಾರಿಗೆ ತಂದಿದೆ. ಇದರ ಪ್ರಕಾರ, 20,000 ರೂಪಾಯಿಗಿಂತ ($240) ಹೆಚ್ಚಿನ ನಗದು ಸಾಲವನ್ನು ವಿತರಿಸುವುದು ಕಾನೂನು ಬಾಹಿರವಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ದಂಡದ ರೂಪದಲ್ಲಿ ಕಠಿಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಈ ಕ್ರಮವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಹ ಬೆಂಬಲಿಸಿದ್ದು, ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಆದಾಯ ತೆರಿಗೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ. ನಿಯಮ ಏಕೆ ಜಾರಿಗೆ?ಈ ಕ್ರಮದ ಮುಖ್ಯ ಉದ್ದೇಶವು ಕಪ್ಪು ಹಣದ ವ್ಯವಹಾರವನ್ನು ತಡೆಗಟ್ಟುವುದು ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸುವುದು. 20,000 ರೂಪಾಯಿಗಿಂತ ಹೆಚ್ಚಿನ ನಗದು ಸಾಲವನ್ನು ನೀಡುವುದು ಅಥವಾ ತೆಗೆದುಕೊಳ್ಳುವುದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269SS ರ ಅಡಿಯಲ್ಲಿ ನಿಷೇಧಿಸಲಾಗಿದೆ. ಈ ನಿಯಮವು ವೈಯಕ್ತಿಕ ಸಾಲದಾತರು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (NBFCs) ಕಡ್ಡಾಯವಾಗಿ ಅನ್ವಯವಾಗುತ್ತದೆ. ನಿಯಮ ಉಲ್ಲಂಘನೆಯಾದರೆ ಏನು? 20,000 ರೂಪಾಯಿಗಿಂತ ಹೆಚ್ಚಿನ ನಗದು ಸಾಲವನ್ನು ನೀಡಿದರೆ ಅಥವಾ ತೆಗೆದುಕೊಂಡರೆ,…

Read More

ಮಂಗಳೂರು : ನಗರದ ಕಂಕನಾಡಿಯಿಂದ ಪಂಪವೆಲ್ ಸಂಪರ್ಕಿಸುವ ಮುಖ್ಯರಸ್ತೆ ಇದೀಗ ತೀರಾ ಹದಗೆಟ್ಟು ಸಂಚಾರಕ್ಕೆ ದೊಡ್ಡ ಅಡಚಣೆಯಾಗಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು, ನೌಕರರು ಹಾಗೂ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ರಸ್ತೆಯ ಹಾಳಾದ ಸ್ಥಿತಿಯಿಂದಾಗಿ ಅಪಘಾತದ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ಸಾರಿಗೆ ನೌಕರರ ದಿನನಿತ್ಯದ ಕೆಲಸವೇ ಜೀವದ ಹಂಗಿನಲ್ಲಿದೆ. ಪ್ರಯಾಣಿಕರ ಸುರಕ್ಷತೆ ನಮ್ಮ ಹೊಣೆಗಾರಿಕೆ ಆದರೂ, ರಸ್ತೆ ಪರಿಸ್ಥಿತಿ ನೌಕರರ ಕೈಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ, ಸಂಬಂಧಿತ ಅಧಿಕಾರಿಗಳು, ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರು ಎಲ್ಲರೂ ಒಟ್ಟಾಗಿ ಗಮನಹರಿಸಿ ಈ ರಸ್ತೆ ದುರಸ್ತಿ ತಕ್ಷಣ ಕೈಗೊಳ್ಳುವಂತೆ ಸಂಘ ಮನವಿ ಮಾಡಿದೆ. “ಮಂಗಳೂರಿನ ಸಾರಿಗೆ ವ್ಯವಸ್ಥೆಯ ದೈನಂದಿನ ನಾಡಿಯೇ ಈ ರಸ್ತೆ. ಇದನ್ನು ನಿರ್ಲಕ್ಷಿಸುವುದಾದರೆ, ಅದು ನೇರವಾಗಿ ಜನಜೀವನವನ್ನು ನಿರ್ಲಕ್ಷಿಸುವಂತಾಗಿದೆ. ತ್ವರಿತ ಕ್ರಮ ಕೈಗೊಳ್ಳುವುದು ಎಲ್ಲರ ಜವಾಬ್ದಾರಿ” ಎಂದು ಸಂಘದ ಪ್ರಕಟಣೆ ತಿಳಿಸಿದೆ.

Read More

ಮಂಗಳೂರು: ನಗರ ಹೊರವಲಯದ ಕುಡುಪುವಿನಲ್ಲಿ ಎ.27ರಂದು ನಡೆದ ಕೇರಳ ವಯನಾಡಿನ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಕಾರ್ಪೊರೇಟರ್‌ ಪತಿ ರವೀಂದ್ರ ನಾಯಕ್‌ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಟಿಲ ಪ್ರಕರಣದಲ್ಲಿ ವಕೀಲರಾದ ವೈ ವಿಕ್ರಮ್‌ ಹೆಗ್ಡೆ ನಡೆಸಿದ ವಾದದಿಂದಾಗಿ ಜಾಮೀನು ಮಂಜೂರಾಗಿದೆ. ಪ್ರಕರಣ ಸಂಬಂಧ ಬಂಧಿತ ೨೦ ಆರೋಪಿಗಳಿಗೂ ಈವರೆಗೆ ಜಾಮೀನು ದೊರೆತಿಲ್ಲ.ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಸೆಕ್ಷನ್ 482ರಡಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ಬಳಿಕ, ನ್ಯಾಯಾಲಯವು ಮಂಗಳೂರಿನ ಗ್ರಾಮೀಣ ಪೊಲೀಸ್ ಠಾಣೆಯ ಕ್ರೈಂ ನಂ.37/2025ಕ್ಕೆ ಸಂಬಂಧಿಸಿದಂತೆ ಜೆಎಂಎಫ್‌ಸಿ ತೃತೀಯ ನ್ಯಾಯಾಲಯದಲ್ಲಿ ಪ್ರಚಲಿತದಲ್ಲಿರುವ ಸಿ.ಸಿ. ನಂ.4015/2025ರಲ್ಲಿ ಆರೋಪಿಗೆ ಬಂಧನವಾಗುವ ಸಂದರ್ಭ ಜಾಮೀನು ನೀಡಲು ಆದೇಶಿಸಿದೆ. ನ್ಯಾಯಾಲಯವು 1,00,000 ರೂಪಾಯಿಗಳ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಇಬ್ಬರು ಜಾಮೀನುದಾರರನ್ನು ಒದಗಿಸುವಂತೆ ಪ್ರತಿವಾದಿಗೆ ಸೂಚಿಸಿದೆ. ಜೊತೆಗೆ, ಸೆಪ್ಟೆಂಬರ್ 22, 2025ರೊಳಗೆ ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ಆದೇಶಿಸಿದೆ. ಅದೇ ರೀತಿ, ಸಾಕ್ಷಿದಾರರ ಮೇಲೆ ಪ್ರಭಾವ…

Read More

ಮಂಗಳೂರು: ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯ ಮಹತ್ವದ ಸಾಧನೆ ಮಂಗಳೂರಿನ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದಿದೆ. ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಆರ್ಥೋ ಪೆಡಿಕ್ ರೊಬೊಟಿಕ್ ವ್ಯವಸ್ಥೆ ‘ಸ್ಕೈವಾಕರ್’ ಸರ್ಜರಿಯನ್ನು ಆರಂಭಿಸಿದೆ. ಅಮೆರಿಕದ ಮೈಕ್ರೋಪೋರ್ಟ್ ಆರ್ಥೋಪೆಡಿಕ್ಸ್ ಸಹಭಾಗಿತ್ವ ದಲ್ಲಿ ಈ ಸರ್ಜರಿ ವ್ಯವಸ್ಥೆಯನ್ನು ಯೆನೆಪೊಯದಲ್ಲಿ ಆರಂಭಿಸಲಾಗಿದೆ ಎಂದು ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮುಹಮ್ಮದ್ ತಾಹಿರ್ ತಿಳಿಸಿದ್ದಾರೆ. ಅವರು ಮಂಗಳವಾರ ಮಂಗಳೂರಿನ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ಹೊಸ ರೊಬೊಟಿಕ್ ಸರ್ಜರಿ ವ್ಯವಸ್ಥೆಯನ್ನು ಅನಾವರಣಗೊಳಿಸಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎವೊಲ್ಯೂಷನ್ ಮೀಡಿಯಲ್-ಪೈವೊಟ್ ನೀ ಸಿಸ್ಟಮ್ ಜೊತೆಗೆ ಕೆಲಸ ಮಾಡುವಂತೆ ವಿನ್ಯಾಸಗೊಂಡ ಜಗತ್ತಿನ ಏಕೈಕ ರೊಬೊಟಿಕ್ ಸರ್ಜರಿ ತಂತ್ರಜ್ಞಾನ ಸ್ಕೈವಾಕರ್ ಆರ್ಥೋಪೆಡಿಕ್ ರೊಬೊಟಿಕ್ ಸಿಸ್ಟಮ್ ಮೂಲಕ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯಲ್ಲಿ ಸಬ್-ಮಿಲಿಮೀಟರ್ ಮಟ್ಟದ ನಿಖರತೆಯನ್ನು ನೀಡುತ್ತವೆ.ಅದರಿಂದಾಗಿ ಮಂಡಿ ಬದಲಾವಣೆಯ ಬಳಿಕ ರೋಗಿಗಳು ಬಹಳ ಬೇಗ ಚೇತರಿಸಿಕೊಂಡು, ಸುದೀರ್ಘ ಅವಧಿ ಯವರೆಗೆ ಯಾವುದೇ ನೋವಿಲ್ಲದೆ ಮೊದಲಿನಂತೆ ಕೆಲಸ…

Read More

ಉಡುಪಿ : ಬಾವಿಗೆ ಬಿದ್ದ ಚಿರತೆ ಮರಿಯನ್ನು ರಕ್ಷಿಸಿರುವ ಘಟನೆ ಉಡುಪಿಯ ಮಣಿಪುರ ಗ್ರಾಮದ ಸಿ.ಎಸ್.ಐ.ಚರ್ಚ್ ಬಳಿ ಮಂಗಳವಾರ ನಡೆದಿದೆ. ಮಣಿಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜೋನ್ ಸಿಕ್ವೆರಾ ಅವರ ಸಹೋದರ ಜೇಕಬ್ ಸಿಕ್ಕೇರಾ ಅವರ ಮನೆಯ ತೋಟದ ಬಾವಿಯಲ್ಲಿ ಚಿರತೆ ಮರಿಯೊಂದು ಬಾವಿಗೆ ಬಿದ್ದಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಾವಿಯಿಂದ ರಕ್ಷಿಸಿ ಸೋಮೇಶ್ವರ ಅಭಯಾರಣ್ಯಕ್ಕೆ ಬಿಡಲಾಗಿದೆ. ಜೇಕಬ್ ಸಿಕ್ಕೇರ ಅವರ ತೋಟದ ಬಾವಿಯ ನೀರಿನ ಪಂಪ್ ಚಾಲೂ ಆಗದೆ ಇದ್ದ ಪರಿಣಾಮ ಮಧ್ಯಾಹ್ನದ ವೇಳೆ ತೆರಳಿ ಪರಿಶೀಲಿಸಿದಾಗ ಚಿರತೆ ಬಾವಿಯಲ್ಲಿ ಇರುವುದು ಕಂಡು ಬಂದಿದೆ. ಸುಮಾರು 2-3 ವರ್ಷ ಪ್ರಾಯದ ಹೆಣ್ಣು ಚಿರತೆ ಮರಿ ಇದಾಗಿದ್ದು, ಅರಣ್ಯ ಇಲಾಖೆಯವರು ಮತ್ತು ಎನ್ ಜಿ ಒ ಉಡುಪಿಯ ಅಕ್ಷಯ್ ಶೇಟ್ ಹಾಗೂ ಸ್ಥಳೀಯರ ಸಹಕಾರದಿಂದ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು.

Read More