ಮಂಗಳೂರು : ಹೈಲ್ಯಾಂಡ್, ಫಳ್ನಿರ್ ರಸ್ತೆಯಲ್ಲಿರುವ ಯೂನಿಟಿ ಆಸ್ಪತ್ರೆ, ಹೃದಯ ಹಾಗೂ ನರವ್ಯವಸ್ಥಾ ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಫಿಲಿಪ್ಸ್ ಅಜುರಿಯನ್ ಕ್ಯಾಥ್ಲ್ಯಾಬ್ – ಆವೃತ್ತಿ 3.0 ಅನ್ನು ಲೋಕಾರ್ಪಣೆಗೊಳಿಸಿದೆ. ಈ ಅತ್ಯಾಧುನಿಕ ಸೀಲಿಂಗ್-ಮೌಂಟೆಡ್ ಕ್ಯಾಥ್ಲ್ಯಾಬ್ ಕರಾವಳಿ ಕರ್ನಾಟಕದಲ್ಲಿ ಪ್ರಪ್ರಥಮವಾಗಿದ್ದು ಹೃದಯ, ನರವ್ಯವಸ್ಥೆ ಹಾಗೂ ಇಂಟರ್ ವೆನ್ಶನಲ್ ರೇಡಿಯಾಲಜಿ ಚಿಕಿತ್ಸೆಗಳಿಗಾಗಿ ಜಾಗತಿಕ ಮಟ್ಟದ ನಿಖರತೆ ಹಾಗೂ ನವೀನತೆಯನ್ನು ಒದಗಿಸುತ್ತದೆ. ಇದು ರೋಗಿಗಳಿಗೆ ಉತ್ತಮ ಚಿಕಿತ್ಸಾ ಫಲಿತಾಂಶಗಳನ್ನು ನೀಡಲು, ಪ್ರಕ್ರಿಯೆಯ ಸಮಯವನ್ನು ಕಡಿಮೆ ಮಾಡಲು ಹಾಗೂ ಸುರಕ್ಷತೆ ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಫಿಲಿಪ್ಸ್ ಅಜುರಿಯನ್ ವ್ಯವಸ್ಥೆ ಕಡಿಮೆ ಆಕ್ರಮಣಕಾರಿಯಾದ ಚಿಕಿತ್ಸೆಗಳಲ್ಲಿ ಒಂದು ಮಹತ್ತರವಾದ ಮೆಟ್ಟಿಲಾಗಿದೆ. ಮುಖ್ಯ ಲಕ್ಷಣಗಳು ಮತ್ತು ಲಾಭಗಳು :• ಆಧುನಿಕ ಚಿತ್ರಣ ಶಕ್ತಿ ಮತ್ತು ನಿಖರತೆ: ಸಂಕುಲ ಹೃದಯ ಹಾಗೂ ನರವ್ಯವಸ್ಥಾ ಚಿಕಿತ್ಸೆಗಳ ಸಮಯದಲ್ಲಿ ಅತ್ಯುತ್ತಮ ಚಿತ್ರ ಗುಣಮಟ್ಟವನ್ನು ಒದಗಿಸಿ, ನಿಖರತೆ ಹೆಚ್ಚಿಸುತ್ತದೆ.• ರೇಡಿಯೇಶನ್ ಸುರಕ್ಷತೆ : ಪಾರಂಪರಿಕ ಕ್ಯಾಥ್ಲ್ಯಾಬ್ಗಳಿಗಿಂತ ಸುಮಾರು 30% ವಿಕಿರಣ ಹಾಗೂ ಕಾಂಟ್ರಾಸ್ಟ್ ಮಾಧ್ಯಮ ಬಳಕೆಯನ್ನು ಕಡಿಮೆ…
Author: UllalaVani
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ನೀರುಮಾರ್ಗ ಶಾಖೆಯ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ, ನೇತ್ರ ಮತ್ತು ದಂತ ತಪಾಸಣಾ ಶಿಬಿರವು ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ (ರಿ.) ನೀರುಮಾರ್ಗ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ (ರಿ.) ಸುಬ್ರಹ್ಮಣ್ಯ ನಗರ ನೀರುಮಾರ್ಗ. ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಸಭಾಭವನ ನೀರುಮಾರ್ಗದಲ್ಲಿ ಜರುಗಿತು. ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ರಾಜೇಶ್ ಕಾಮತ್ ರವರು ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಇಂತಹ ಜನಪರ ಸೇವಾ ಕಾರ್ಯಗಳು ಶ್ಲಾಘನೀಯ. ಈ ಸಹಕಾರಿ ಸಂಘದೊಂದಿಗೆ ಸತತವಾಗಿ ಗುಣಮಟ್ಟದ ಶಿಬಿರಗಳನ್ನು ಹೆಮ್ಮೆಯಿಂದ ಆಯೋಜಿಸುತ್ತಾ ಬರುತ್ತಿದ್ದೇವೆ ಎಂದರು. ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಕದ್ರಿ, ಮಂಗಳೂರು ಇದರ ಬಿ.ಡಿ.ಒ. ಆದ ಜಯಚಂದ್ರ ನಾಯಕ್ ಮಾತನಾಡಿ, “ಆರೋಗ್ಯ ತಪಾಸಣೆಯು ಇಂದಿನ ಆಹಾರ…
ಮಂಗಳೂರು : ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು ಬೆಲೆಬಾಳುವ ಚಿನ್ನಾಭರಣ ಕಳವುಗೈದಿರುವ ಆರೋಪದಲ್ಲಿ ನಾಲ್ಕು ಮಂದಿಯನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡವರು ವಿಮಾನ ನಿಲ್ದಾಣದಲ್ಲಿ ಲೆಗೇಜ್ ಲೋಡ್ – ಅನ್ ಲೋಡ್ ಮಾಡುತ್ತಿದ್ದವರು ಎಂದು ತಿಳಿದು ಬಂದಿದೆ. ಸಿಆರ್‌ಪಿಎಫ್ ಜವಾನ ಹರಿಕೇಶ್ ಎಂಬವರ ಪತ್ನಿ ರಾಜೇಶ್ವರಿ ಪದ್ಮಶಾಲಿ ಅವರು ಸಂಬಂಧಿಕರ ಮದುವೆಗಾಗಿ ಶನಿವಾರ ಬೆಳಗ್ಗೆ 8:45ರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬೆಂಗಳೂರಿನಿಂದ ಹೊರಟು ಅದೇ ದಿನ ಬೆಳಗ್ಗೆ 9:30ಕ್ಕೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ವಿಮಾನ ನಿಲ್ದಾಣದ ಹೊರಗೆ ಬಂದು ತನ್ನ ಲಾಗೇಜ್ ಟ್ರಾಲಿ ಬ್ಯಾಗ್ ನ ಲಾಕ್ ತೆರದಿತ್ತು. ತಕ್ಷಣ ಬ್ಯಾಗ್ ಪರಿಶೀಲಿಸಿದಾಗ 56 ಗ್ರಾಂ ತೂಕದ ಸುಮಾರು 4.5 ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲೆಸ್ ಕಳವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಅವರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ…
ಮಂಗಳೂರು : ಕೊಂಕಣಿ ಸಂಗೀತ ದಿಗ್ಗಜ, ವಿಶ್ವ ಕೊಂಕಣಿ ಕಲಾ ರತ್ನ ಎರಿಕ್ ಒಝೇರಿಯೊ ಅವರ ಅಂತ್ಯಕ್ರಿಯೆಯು ಸರಕಾರಿ ಗೌರವ ಹಾಗೂ ಅಭಿಮಾನಿಗಳ ಭಾವುಕ ಕ್ಷಣಗಳ ಸಂಗೀತಾರ್ಚಣೆಯ ಮೂಲಕ ನಡೆಯಿತು. ಬೆಳಿಗ್ಗೆ ಸೈಂಟ್ ವಿನ್ಸೆಂಟ್ ಫೆರೆರ್ ಚರ್ಚ್ ವೆಲೆನ್ಶಿಯಾದಲ್ಲಿ ನಡೆದ ಅಂತ್ಯಸಂಸ್ಕಾರ ಬಲಿಪೂಜೆಯಲ್ಲಿ ಧಾರ್ಮಿಕ ಸಾಂಸ್ಕೃತಿಕ ಹಾಗೂ ಸಂಗೀತ ಲೋಕದ ನೂರಾರು ಗಣ್ಯರು ಪಾಲ್ಗೊಂಡರು. ಬಲಿಪೂಜೆಯ ನಂತರ ನಡೆದ ಸರಕಾರಿ ಗೌರವ ಅರ್ಪಣೆ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ತ್ ಶಾಸಕ ಐವನ್ ಡಿ ಸೋಜಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಮೊದಲಾದವರು ನೇತೃತ್ವ ನೀಡಿದರು. ನಂತರ ಶಕ್ತಿನಗರದಲ್ಲಿರುವ ಎರಿಕ್ ಒಝೇರಿಯೊ ಅವರ ಕರ್ಮಭೂಮಿ ಕಲಾಂಗಣ್ ನಲ್ಲಿ ಅಭಿಮಾನಿಗಳಿಗೆ ಎರಿಕ್ ಅವರಿಗೆ ಅಂತಿಮ ಗೌರವ ಸಲ್ಲಿಸುವ ಅವಕಾಶವನ್ನು ಮಾಡಿಕೊಡಲಾಗಿತ್ತು. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಶತ್ತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವನ್ ಡಿ ಸೋಜಾ, ಮಾಜಿ ಶಾಸಕ…
ಬಂಟ್ವಾಳ : ಅಮೃತ ಭಾರತ್ ಯೋಜನೆಯಡಿ ದ.ಕ. ಜಿಲ್ಲೆಯ ಬಂಟ್ವಾಳ ರೈಲು ನಿಲ್ದಾಣ ಅಭಿವೃದ್ಧಿ ಹೊಂದುತ್ತಿದ್ದು, ಕಳೆದ ಜನವರಿಯಿಂದೀಚೆಗೆ ಕಾಮಗಾರಿ ವೇಗ ಪಡೆದಿದೆ. 28.49 ಕೋಟಿ ರೂ. ವೆಚ್ಚದಲ್ಲಿ ನವವಿನ್ಯಾಸದೊಂದಿಗೆ ಕಾಮಗಾರಿ ನಡೆಯುತ್ತಿದ್ದು, ನಿಲ್ದಾಣಕ್ಕೆ ಹೊಸ ರೂಪ ನೀಡಲಾಗುತ್ತಿದೆ. 2024ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದು, ಆಗಿನ ಸಂಸದ ನಳಿನ್ ಕುಮಾರ್ ಕಟೀಲ್ , ಶಾಸಕ ರಾಜೇಶ್ ನಾಯ್ಕ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ಮೊದಲ ಹಂತದ ಕಾಮಗಾರಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಇನ್ನು ಮೂರು, ನಾಲ್ಕು ತಿಂಗಳೊಳಗೆ ಯೋಜನೆಯ ಎಲ್ಲ ಕೆಲಸಗಳೂ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸದ್ಯ 28.49 ಕೋಟಿ ರೂ. ವೆಚ್ಚದಲ್ಲಿ ಹತ್ತು ಹಲವು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದೆ. ಮುಂಗಡ ಬುಕ್ಕಿಂಗ್ ಸಹಿತ ಟಿಕೆಟ್ ಕೌಂಟರ್ ನಿರ್ಮಾಣವಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವೈಟಿಂಗ್ ರೂಮ್ ವ್ಯವಸ್ಥೆ, ಒಂದು ಕೆಫೆಟೀರಿಯಾ, ಪ್ರತಿಯೊಂದು ಪ್ಲಾಟ್ ಫಾರ್ಮ್ ಗಳಲ್ಲಿ ಸುಸಜ್ಜಿತ ಶೌಚಾಲಯ, ಸ್ಟೇಷನ್…
ಪುತ್ತೂರು: ಅಕ್ರಮ ಸಕ್ರಮ ಜಮೀನು ಪರಭಾರೆಗೆ ಎನ್‌ಓಸಿ ನೀಡಲು ಲಂಚ ಪಡೆದ ಆರೋಪದಲ್ಲಿ ತಾಲೂಕು ಕಚೇರಿ ಭೂಸುಧಾರಣೆ ಶಾಖೆ ಕೇಸ್ ವರ್ಕರ್ ಸುನಿಲ್ ಲೋಕಾಯುಕ್ತ ಪೊಲೀಸರಿಂದ ರೆಡ್ ಹ್ಯಾಂಡ್ ಆಗಿ ಬಂಧನಕ್ಕೊಳಗಾದ ಬಳಿಕ ಪುತ್ತೂರು ತಹಸೀಲ್ದಾರ್ ಎಸ್.ಬಿ.ಕೂಡಲಗಿ ನಾಪತ್ತೆಯಾಗಿದ್ದಾರೆ. ಈ ಪ್ರಕರಣದಲ್ಲಿ ತಹಸಿಲ್ದಾರ್ ವಿರುದ್ಧವೂ ದೂರು ದಾಖಲಾಗಿದ್ದು, ಅವರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಲೋಕಾಯಕ್ತ ಪೊಲೀಸರು ತಿಳಿಸಿದ್ದರು. ಕೇಸ್ ವರ್ಕರ್ ಸುನಿಲ್ ಬಂಧನದ ಬಳಿಕ ತಹಸೀಲ್ದಾರ್ ಎಸ್.ಬಿ.ಕೂಡಲಗಿ ನಾಪತ್ತೆಯಾಗಿದ್ದು ಆ.29,30ರಂದು ಅವರು ಕಚೇರಿಗೆ ಬಂದಿರಲಿಲ್ಲ. ಅವರ ಕಚೇರಿಗೆ ಬೀಗ ಹಾಕಲಾಗಿದೆ. ಈ ನಡುವೆ ಅವರು ಎರಡು ದಿನದ ರಜೆ ಪಡೆಯಲು ಪ್ರಯತ್ನ ನಡೆಸಿದ್ದರೆಂದು ಮೂಲಗಳಿಂದ ತಿಳಿದು ಬಂದಿದೆ.ರಜೆ ಪಡೆಯುವ ಪ್ರಕ್ರಿಯೆಯನ್ನು ತಹಸೀಲ್ದಾರ್ ಆರಂಭಿಸಿದ್ದರು ಎಂದು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ತಿಳಿಸಿದ್ದಾರೆ.ಆದರೆ, ಪುತ್ತೂರು ತಹಸೀಲ್ದಾರ್‌ಗೆ ರಜೆ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ವಿಚಾರಣೆಗೆ ಹಾಜರಾಗಲು ಸೂಚನೆ:ತಹಸೀಲ್ದಾರ್ ಕಚೇರಿಯ ಭೂಸುಧಾರಣೆ ಶಾಖೆಯ ಕೇಸ್ ವರ್ಕರ್ ಸುನಿಲ್ ಅವರನ್ನು ಬಂಧಿಸಿರುವ ಲೋಕಾಯುಕ್ತ…
ಸುರತ್ಕಲ್ : ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದು ದ್ವಿಚಕ್ರ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಾಯಗೊಂಡಿರುವ ಘಟನೆ ಮುಕ್ಕ ಜಂಕ್ಷನ್ ನಲ್ಲಿ ನಡೆದಿದೆ. ಮೃತರನ್ನು ಚೇಳಾಯರು ನಿವಾಸಿ ಕರುಣಾಕರ ಶೆಟ್ಟಿ (61) ಮೂಲತಃ ಉತ್ತರ ಕರ್ನಾಟದ ಸದ್ಯ ಚೇಳಾಯರಿನಲ್ಲಿ ವಾಸ ವಿರುವ ಹನುಮಂತ ಎಂಬವರ ಮಗ ವಿಶ್ವನಾಥ (16) ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ನಡೆಸಿದ್ದ ಕಾರು ಚಾಲಕ ಹಳೆಯಂಗಡಿ ನಿವಾಸಿ ಮುಹಮ್ಮದ್ ತೌಫೀಕ್ ಎಂಬಾತನನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕರುಣಾಕರ ಶೆಟ್ಟಿ ಅವರು ಮುಕ್ಕದಲ್ಲಿನ ಅಂಗಡಿ ಮುಚ್ಚಿ ಹಾಲಿಗೆ ಬಂದಿದ್ದ ನೆರೆ ಮನೆಯ ವಿಶ್ವಾನಾಥ ಅವರನ್ನು ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 66ನ್ನು ತನ್ನ ದ್ವಿಚಕ್ರ ವಾಹನದಲ್ಲಿ ದಾಟುತ್ತಿದ್ದ ವೇಳೆ ಹಳೆಯಂಗಡಿ ಕಡೆಯಿಂದ ಸುರತ್ಕಲ್ ಕಡೆ ತೆರಳುತ್ತಿದ್ದ ಕಾರು ಡಿಕ್ಕಿಹೊಡೆಯಿತೆನ್ನಲಾಗಿದೆ. ಅಪಘಾತದ ರಭಸಕ್ಕೆ ಕರುಣಾಕರ ಶೆಟ್ಟಿ ಅವರು ಸುಮಾರು 50ಮೀಟರ್ ದೂರಕ್ಕೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು, ತಲೆಗೆ ಬಲವಾದ ಹೊಡೆತ ಬಿದ್ದು,…
ಮಂಗಳೂರು : ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ ಎಂಬ ಆರೋಪದಲ್ಲಿ ಅಪರಿಚಿತನಿಂದ ರಿಕ್ಷಾ ಚಾಲಕನಿಗೆ ಇರಿದು ಗಾಯಗೊಳಿಸಿರುವ ಘಟನೆ ಮಂಗಳೂರಿನ ಫಳ್ನೀರ್ ಬಳಿ ರವಿವಾರ ರಾತ್ರಿ 9:15ರ ಸುಮಾರಿಗೆ ನಡೆದಿದೆ. ಹಲ್ಲೆಗೊಳಗಾದ ರಿಕ್ಷಾ ಚಾಲಕನನ್ನು ಬಶೀರ್ ಎಂದು ಗುರುತಿಸಲಾಗಿದೆ. ಚಾಲಕನ ಹೊಟ್ಟೆಗೆ ಇರಿದು ಗಾಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಘಟನೆಯ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್ ಪ್ರತಿಕ್ರಿಯೆ ನೀಡಿದ್ದು, ಘಟನೆ ಬಗ್ಗೆ ಗಾಯಾಳು ಆಟೋ ಚಾಲಕನಿಂದ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 2024-25ನೇ ಸಾಲಿನ ವ್ಯವಹಾರದಲ್ಲಿ ಸಾಧಿಸಿದ ಸರ್ವತೋಮುಖ ಪ್ರಗತಿಯನ್ನು ಗುರುತಿಸಿ “ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿ 2024-25 ಪ್ರಶಸ್ತಿಯನ್ನು ಇತ್ತೀಚೆಗೆ ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2024-25ನೇ ಸಾಲಿನ ವಾರ್ಷಿಕ ಸಭೆಯಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್ ರವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 2012 ರಲ್ಲಿ ಪ್ರಾರಂಭವಾಗಿ ದಶಮಾನೋತ್ಸವಕ್ಕೆ ನಗರದ ಪಡೀಲ್‌ನಲ್ಲಿ ಸ್ವಂತ ಪ್ರಧಾನ ಕಛೇರಿಯನ್ನು ಹೊಂದಿರುತ್ತದೆ. ಪ್ರಸ್ತುತ ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ 33 ಶಾಖೆಗಳನ್ನು ಹೊಂದಿರುವ ಸಂಘವು, 2024-25ನೇ ಸಾಲಿನಲ್ಲಿ ದುಡಿಯುವ ಬಂಡವಾಳ ರೂ. 25,749.48ಲಕ್ಷ ಹೊಂದಿದ್ದು, ರೂ. 3.06 ಕೋಟಿಗೂ ಮಿಕ್ಕಿ ಲಾಭ ಗಳಿಸಿರುತ್ತದೆ.ಈ ಕಾರ್ಯಕ್ರಮದಲ್ಲಿ…
ದೇರಳಕಟ್ಟೆ : ಅಕ್ರಮ ಮದ್ಯ ತಯಾರಿ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ರವಿವಾರ ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ನಿವಾಸಿ ಪ್ರಣವ್ ವಿ ಶೆಣೈ (24) ಮತ್ತು ತಾಳಿಪಡ್ಪು ನಿವಾಸಿ ಅನೂಷ್ ಆರ್ .(24) ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾ ಕಾಳಿ ದೇವಸ್ಥಾನದ ರಸ್ತೆಯಲ್ಲಿರುವ ಮನೆಯಲ್ಲಿ ತೋಮಸ್ ಮತ್ತು ಮಣಿಕುಟ್ಟನ್ ಜೊತೆ ಸೇರಿಕೊಂಡು ಅಕ್ರಮವಾಗಿ ಮದ್ಯ ತಯಾರಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ದಾಳಿ ಸಂದರ್ಭ ತೋಮಸ್ ಮತ್ತು ಮಣಿಕುಟ್ಟನ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ಮನೆಗೆ ಕರೆದುಕೊಂಡು ಹೋಗಿ ಮಹಜರು ನಡೆಸಿದ್ದು, ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಸುಮಾರು 1,15,110-00 ಮೌಲ್ಯ ದ ಅಕ್ರಮ ಮದ್ಯ ತಯಾರಿಕೆಯ ಮೂರು ಮೆಷಿನ್ ಗಳು, ಮಿಕ್ಸರ್ ಮೆಷಿನ್, ಅಕ್ರಮ ಮದ್ಯದ ಬಾಟ್ಲಿಗಳು, ಗೋವದಲ್ಲಿ ಮಾತ್ರ ಮಾರಾಟ ಮಾಡುವ ಪರವಾನಿಗೆ ಇರುವ 8 ಮನ್ಶನ್ ಹೌಝ್…

