Author: UllalaVani

Kannada News From Coastal Karnataka

ಉಳ್ಳಾಲ: ಜೂ.28 ರಂದು ಇನ್ಸ್ಟಾಗ್ರಾಮ್‌ ನಲ್ಲಿ ಅಪ್ರಾಪ್ತೆಯ ಪರಿಚಯ ಮಾಡಿಕೊಂಡ ಯುವಕನೋರ್ವ ಆಕೆಯನ್ನು ಪುಸಲಾಯಿಸಿ ಕರೆದೊಯ್ದು ಸೋಮೇಶ್ವರ ಸಮುದ್ರ ತೀರದಲ್ಲಿ ಕಾರೊಳಗಡೆಯೇ ಅತ್ಯಾಚಾರವೆಸಗಿರುವ ಘಟನೆ ಶುಕ್ರವಾರ ಸಂಜೆ ಬೆಳಕಿಗೆ ಬಂದಿದೆ. ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದಂತೆ ಆರೋಪಿ ಅಡ್ಯಾರ್‌ ವಳಚ್ಚಿಲ್‌ ನಿವಾಸಿ ಕೆಲ್ವಿನ್‌ (೨೪) ಎಂಬಾತನನ್ನು ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.ತನ್ನ ಪಿಯುಸಿ ಮುಗಿಸಿ ನರ್ಸಿಂಗ್‌ ಶಿಕ್ಷಣಕ್ಕೆ ಕಾಯುತ್ತಿದ್ದ ಅಪ್ರಾಪ್ತೆಯನ್ನು ಕೆಲ್ವಿನ್‌ ಇನ್ಸ್ಟಾಗ್ರಾಮ್‌ ಮೂಲಕ ಪರಿಚಯಿಸಿಕೊಂಡಿದ್ದನು. ಪರಿಚಯ ಮಾಡಿದ ನಾಲ್ಕನೇ ದಿನದಲ್ಲಿ ಭೇಟಿಯಾಗುವ ಉದ್ದೇಶ ಮಾಡಿಕೊಂಡು ಆಕೆಯ ಉಳ್ಳಾಲದ ಸ್ಥಳೀಯ ಠಾಣಾ ಸರಹದ್ದು ವ್ಯಾಪ್ತಿಯ ಮನೆಗೆ ಕಾರಿನಲ್ಲಿ ಬಂದಿದ್ದನು. ಬಳಿಕ ಅಪ್ರಾಪ್ತೆಯನ್ನು ಕರೆದೊಯ್ದು ಕುತ್ತಾರು ಸಮೀಪ ಲಾಡ್ಜ್‌ ವೊಂದರಲ್ಲಿ ರೂಮ್‌ ಕೇಳಿದ್ದಾನೆ. ಆದರೆ ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಲಾಡ್ಜ್‌ ಸಿಬ್ಬಂದಿ ರೂಮ್‌ ಕೊಟ್ಟಿರಲಿಲ್ಲ. ಅದಕ್ಕಾಗಿ ಕಾರಿನಲ್ಲೇ ಕೊಂಡೊಯ್ದ ಆರೋಪಿ ಸೋಮೇಶ್ವರ ಸಮುದ್ರ ತೀರದಲ್ಲಿ ಕಾರೊಳಗಡೆಯೇ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದನು. ನಂತರ ಆಕೆಯ ಮನೆಯವರೆಗೂ ಕಾರಿನಲ್ಲಿ ಬಿಟ್ಟುಹೋಗಿದ್ದಾನೆ. ಬೆಳಿಗ್ಗೆ…

Read More

ಮಂಗಳೂರು : ಪುಟ್ಟ ಮಕ್ಕಳಿಬ್ಬರ ಹುಟ್ಟುಹಬ್ಬವನ್ನು ಆರೋಗ್ಯ ಸ್ನೇಹಿ, ಪರಿಸರ ಸ್ನೇಹಿ ಮತ್ತು ಶೂನ್ಯ ತ್ಯಾಜ್ಯ ಪರಿಕಲ್ಪನೆಯಲ್ಲಿ ಆಚರಿಸುವ ಮೂಲಕ ಇತರರಿಗೂ ಮಾದರಿಯಾಗಲು ಉದ್ದೇಶಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ, ಪರಿಸರ ಪ್ರೇಮಿ ಜಯಪ್ರಕಾಶ್ ಶೆಟ್ಟಿ ಎಕ್ಕೂರು ಅವರು ತಿಳಿಸಿದ್ದಾರೆ. ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಂಜಲ್‌ಕಟ್ಟೆಯ ರೇಶ್ಮಾ ಮತ್ತು ಲಕ್ಷ್ಮಿಕಾಂತ್ ದಂಪತಿಯ ಪುತ್ರಿಯರಾದ ಕ್ಷೀರ್ಷಾಳ ಮೊದಲ ವರ್ಷದ ಹುಟ್ಟುಹಬ್ಬ ಮತ್ತು ಮೋಕ್ಷಾಳ 10ನೇ ಚರ್ಷದ ಜನ್ಮದಿನವನ್ನು ಜು.5ರಂದು ರಾತ್ರಿ 7 ಗಂಟೆಗೆ ಕದ್ರಿಪಾರ್ಕ್‌ ಬಳಿಯ ಲಯನ್ಸ್ ಅಶೋಕ ಸೇವಾಭವನದಲ್ಲಿ ಆಯೋಜಿಸಲಾಗಿದೆ ಎಂದರು. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕೇಕ್ ಇತ್ಯಾದಿಗಳ ಬದಲಾಗಿ ತರಕಾರಿ, ಹಣ್ಣು ಸೊಪ್ಪು, ಡ್ರೈಫೂಟ್ಸ್ ಇತ್ಯಾದಿಗಳನ್ನು ಬಳಕೆ ಮಾಡಲಾಗುತ್ತದೆ ಮರಗಳ ನಾಶಕ್ಕೆ ಕಾರಣವಾಗಿರುವ ಟಿಶ್ಯೂ ಪೇಪರ್, ಪರಿಸರಕ್ಕೆ ಮಾರಕವಾಗಿರುವ ನೀರಿನ ಬಾಟಲ್, ಪೇಪರ್, ಪ್ಲಾಸಿಕ್ ಕಪ್‌ಗಳು ಇಲ್ಲದೆ, ಶೂನ್ಯ ತ್ಯಾಜ್ಯದೊಂದಿಗೆ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗುತ್ತಿದೆ. ಈ ರೀತಿಯ ಆಚರಣೆ ಮೂಲಕ ಇತರರೂ ಪರಿಸರಕ್ಕೆ…

Read More

ಲೋ ಬಿಪಿಯಿಂದ ಸ್ವಂತ ಅಂಗಡಿಯಲ್ಲೇ ಕುಸಿದುಬಿದ್ದಿದ್ದ ಮೊಂಟೆಪದವು ನಿವಾಸಿ ನವವಿವಾಹಿತ ಚಿಕಿತ್ಸೆ ಫಲಕಾರಿಯಾಗದೆ  ಸಾವುಉಳ್ಳಾಲ : ಲೋ ಬಿಪಿಗೆ ಒಳಗಾಗಿ ಮಂಗಳೂರಿನ ಫಾರಮ್ ಮಾಲ್ ನಲ್ಲಿರುವ ಸ್ವಂತ ಮಳಿಗೆಯಲ್ಲಿ ಕುಸಿದುಬಿದ್ದಿದ್ದ ಮಂಜನಾಡಿ ನಿವಾಸಿ ನವವಿವಾಹಿತ ಇಂದು ಚಿಜಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಮಂಜನಾಡಿ ಮೊಂಟೆಪದವು ವೀರಮಾರುತಿ ಮಂದಿರ ಬಳಿಯ ಶಾಂತನಗರ ನಿವಾಸಿ ದಿ. ವೆಂಕಪ್ಪ ಟೈಲರ್ ಮತ್ತು ಪಾರ್ವತಿ ದಂಪತಿ ಪುತ್ರ ಭರತ್ (36) ಮೃತರು.  ಜು.1 ರಂದು ಫಾರಮ್ ಮಾಲ್ ನಲ್ಲಿರುವ ಅಂಗಡಿಯಲ್ಲಿ ಇರುವಾಗ ಲೋ ಬಿಪಿಯಾಗಿ ಎಕಾಏಕಿ ಕುಸಿದುಬಿದ್ದಿದ್ದರು.  ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಇಂದು 9 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಭರತ್ ಸಾವನ್ನಾಪ್ಪಿದ್ದಾರೆ. ಏಪ್ರಿಲ್ 21 ರಂದು ವಿವಾಹವಾಗಿದ್ದರು . ಪತ್ನಿಯೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ.ಮೃತರು ತಾಯಿ , ಮೂವರು ಸಹೋದರಿಯರನ್ನು ಅಗಲಿದ್ದಾರೆ.

Read More

ಮಂಗಳೂರು : ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ ಸಮಿತಿ ವತಿಯಿಂದ ಆಗಸ್ಟ್ 6 ಮತ್ತು 7ರಂದು ವರ್ತಮಾನದ ತಲ್ಲಣಗಳು’ ಎಂಬ ವಿಷಯದಲ್ಲಿ ಅಂತರ್ ಕಾಲೇಜು ಕಿರು ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ ಸಮಿತಿಯ ಸಂಯೋಜಕ ಕದ್ರಿ ನವನೀತ ಶೆಟ್ಟಿ, ಒಡಿಯೂರು ಸಂಸ್ಥಾನದ ರಾಜಾಂಗಣದಲ್ಲಿ ಈ ಸ್ಪರ್ಧೆ ನಡೆಯಲಿದೆ ಎಂದರು. ದ.ಕ. ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಪದವಿ ಪೂರ್ವ, ಡಿಪ್ಲೊಮಾ, ವೃತ್ತಿಪರ ಕೋರ್ಸ್, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು 10 ನಿಮಿಷದ ಕನ್ನಡ ಅಥವಾ ತುಳು ಭಾಷೆಯ ಈ ಕಿರು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿದ್ಯಾಸಂಸ್ಥೆಯ ಮೂಲಕ ಹೆಸರು ನೋಂದಣಿ ಮಾಡಬೇಕಾಗಿದ್ದು ಸಂಸ್ಥೆಯ ಗರಿಷ್ಟ 2 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ಧ್ವನಿ ಮುದ್ರಿತ ಸಂಭಾಷಣೆ ಸಂಗೀತ ಬಳಸಲು ಅವಕಾಶ ಇರುವುದಿಲ್ಲ ಯಾವುದೇ ಜಾತಿ, ಪಂಗಡ, ಲಿಂಗ ನಿಂದನೆಗಳಿಗೆ ಅವಕಾಶ ಇರುವುದಿಲ್ಲ. ಸ್ಪರ್ಧೆಗೆ ನೋಂದಣಿ ಮಾಡಲು ಜುಲೈ 8…

Read More

ಪಜೀರು ಸುಮಾರು 12 ವರ್ಷದ ಹಿಂದೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಕ್ಕಳ ಕಳ್ಳ ಸಾಗಾಟ ಪ್ರಕರಣದ ಮೂವರು ಆರೋಪಿಗಳಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಗುರುವಾರ ಶಿಕ್ಷೆ ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ. ಲೆನೆಟ್ ವೇಗಸ್, ಜೊಸ್ಸಿ ವೇಗಸ್, ಲಸ್ಸಿ ವೇಗಸ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ. ಘಟನೆಯ ವಿವರ : 2013ರಲ್ಲಿ ಅಂಗನವಾಡಿ ಕಾರ್ಯಕರ್ತೆ ಫಾತಿಮಾ ಎಂಬಾಕೆ ಮನೆ ಮನೆಗೆ ತೆರಳಿ ಮಕ್ಕಳ ಸಮೀಕ್ಷೆ ಮಾಡುವ ಸಂದರ್ಭ ಲೆನೆಟ್ ವೇಗಸ್‌ರ ಎಂಬವರ ಮನೆಯಲ್ಲಿ ಮಾರಾಟಕ್ಕೆ ಮಗು ವನ್ನು ಇಟ್ಟಿರುವ ಬಗ್ಗೆ ಮಾಹಿತಿ ಪಡೆದು ಪತ್ರಕರ್ತ ನವೀನ್ ಸೂರಿಂಜೆಯ ಗಮನಕ್ಕೆ ತಂದಿದ್ದರು. ನಂತರ ಚೈಲ್ಡ್‌ಲೈನ್ ಸಂಸ್ಥೆಯವರು ಲೆನೆಟ್ ಮನೆಗೆ ತೆರಳಿ ಮಗುವಿನ ಕುರಿತು ವಿಚಾರಿಸಿದಾಗ ಮಗು ತನ್ನದೇ ಎಂದು ಲೆನೆಟ್ ಪ್ರತಿಪಾದಿಸಿದ್ದರಲ್ಲದೆ, ಆ ಮಗುವನ್ನು ತಾನೇ ಹೆತ್ತಿದ್ದು ಎಂಬುದಕ್ಕೆ ಮಂಗಳೂರಿನ ನರ್ಸಿಂಗ್ ಹೋಂ ಒಂದರ ಡಿಸ್ಚಾರ್ಜ್ ದಾಖಲೆಗಳನ್ನೂ ತೋರಿಸಿದ್ದಳು.  ರಾತ್ರಿ-ಹಗಲು ಕಾರ್ಯಾಚರಣೆ ಮಾಡಿ ಮಗುವಿನ…

Read More

ಮಂಗಳೂರು: ಶಿಕ್ಷಕ, ಸಾಹಿತಿ, ಸಂಘಟಕ, ಕೃಷಿಕನಾಗಿಯೂ ತನ್ನನ್ನು ತಾನು ತೊಡಗಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರವೀಂದ್ರ ರೈ ಕಲ್ಲಿಮಾರ್‌ ಅವರು ಈ ಬಾರಿ ಸರ್ವಾನುಮತದಿಂದ ಪ್ರತಿಷ್ಠಿತ ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಲಿದ್ದಾರೆ.೩೪ ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಉಡುಪಿಯಿಂದ ಇತ್ತೀಚೆಗಷ್ಟೇ ವರ್ಗಾವಣೆ ಹೊಂದಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸೇರಿದಂತೆ ಅನೇಕ ಕಲಾವಿದರು ಹಾಗೂ ಶ್ರೇಷ್ಟ ಸಾಧಕರನ್ನು ಸಮಾಜಕ್ಕೆ ಒಪ್ಪಿಸಿದಂತಹ ಅಚ್ಚುಮೆಚ್ಚಿನ ಶಿಕ್ಷಕನಾಗಿರುವ ರವೀಂದ್ರ ರೈ ಅವರಿಗೆ ಸಮುದಾಯದ ಸಂಘದ ಗಾದಿ ಒಲಿದಿದೆ.ಕೇವಲ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸದೇ ಹರೇಕಳ ಶ್ರೀ ರಾಮಕೃಷ್ಣ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದವರು. ಶಾಲೆಗೆ ಬೇಕಾದ ಅಗತ್ಯತೆ ಪೂರೈಸುವ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸಿದವರು. ಹಾಗಾಗಿ ಖಾಸಗಿ ಶಾಲೆಯನ್ನು ಮೀರುವ ರೀತಿಯಲ್ಲಿ ಹರೇಕಳ ಶಾಲೆ ನಿರ್ಮಾಣಗೊಂಡಿದೆ.ಕೊಳ್ನಾಡು ಗ್ರಾಮದ ಸಾಲೆತ್ತೂರು ಕುಳಾಲು ಬಂಟ ಮನೆತನದವರಾಗಿರುವ ಕುಳಾಲು ದಿ. ವಿಠಲ್‌ ರೈ , ತಾಯಿ ದಿ.ಸುಂದರಿ ರೈ ದಂಪತಿಯ ಹಿರಿಯ ಪುತ್ರನಾಗಿರುವ ರವೀಂದ್ರ ರೈ ಇವರು…

Read More

ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾ ಸಮ್ಮೇಳನವು ಜುಲೈ 27ರಂದು ಮಂಗಳೂರಿನಲ್ಲಿ ಜರುಗಲಿದ್ದು , ಇದರ ಯಶಸ್ವಿಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಖ್ಯಾತ ಚಿತ್ರನಟಿ, ರಂಗನಟಿ, ಸ್ತ್ರೀವಾದಿ ಚಿಂತಕಿ ಗೀತಾ ಸುರತ್ಕಲ್ ರವರನ್ನು ಆಯ್ಕೆ ಮಾಡಲಾಗಿದೆ. ಗೀತಾ ಸುರತ್ಕಲ್ ಅವರು ಸ್ತ್ರೀವಾದಿ ಚಿಂತನೆಯ ಪ್ರಗತಿಪರ ಸಾಹಿತಿಗಳಾಗಿದ್ದು, ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ – 2018 ಇದರ ಉದ್ಘಾಟಕರಾಗಿದ್ದರು. ನಾಟಕ ರಂಗ ಗೀತಾ ಸುರತ್ಕಲ್ ಅವರಾಸಕ್ತಿಯ ಕ್ಷೇತ್ರ. ಸಮಾಜ ಬದಲಾವಣೆಯಲ್ಲಿ ನಾಟಕಗಳ ಪಾತ್ರ ಅಪಾರವಾಗಿರುವುದರಿಂದ ರಂಗ ಕ್ಷೇತ್ರವನ್ನು ನೆಚ್ಚಿಕೊಂಡಿದ್ದರು. ನಾಟಕದಲ್ಲಿ ಇವರ ಪಾತ್ರಗಳು ರಾಜ್ಯಾಧ್ಯಂತ ಮೆಚ್ಚುಗೆ ಗಳಿಸಿದ್ದವು. ಸಿನೇಮಾದಲ್ಲೂ ಗುರುತರ ಪಾತ್ರಗಳನ್ನು ನಿರ್ವಹಿಸಿರುವ ಗೀತಾ ಸುರತ್ಕಲ್ ಅವರು ಆ ಮೂಲಕ ಸಮಾಜಕ್ಕೆ ವಿಶಿಷ್ಠ ಸಂದೇಶ ನೀಡಿದ್ದಾರೆ. ಬೋಳುವಾರು ಮಹಮ್ಮದ್‌ ಕುಂಞಿ ಅವರ ಪ್ರಸಿದ್ಧ ಕತೆಯನ್ನು ಅನನ್ಯ ಕಾಸರವಳ್ಳಿ ಅವರು ‘ಕಪ್ಪು…

Read More

ಮಂಗಳೂರು: ದುಲ್ ಹಜ್ಜ್ 30 ಪೂರ್ತಿಗೊಳಿಸಿ (ಜೂ.28) ಶನಿವಾರದಿಂದ ಮುಹರಮ್ ಪ್ರಾರಂಭ ಎಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಮಾಣಿ ಉಸ್ತಾದ್ ಘೋಷಿಸಿದ್ದಾರೆ. ಜುಲೈ 6 ಮತ್ತು 7 ರಂದು ಮುಹರಮ್ 9 ಮತ್ತು 10 ನೇ ದಿನವಾಗಿರುತ್ತದೆ. ಅಂದು ವೃತಾಚರಿಸುವುದು ಪ್ರತ್ಯೇಕ ಸುನ್ನತ್ ಇದೆ ಎಂದು ತಿಳಿಸಿರುವುದಾಗಿ ಬಿ.ಕೆ.ಅಬ್ದುರ್ರಹ್ಮಾನ್ ಮದನಿ ಮೂಳೂರು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಜೂನ್ 26ರ ರಾತ್ರಿ ಚಂದ್ರದರ್ಶನವಾದ ಬಗ್ಗೆ ಮಾಹಿತಿ ಇಲ್ಲದ ಕಾರಣ ಮುಹರಮ್ ಒಂದು ಶನಿವಾರ ಆಗಿರುತ್ತದೆ ಎಂದು ಉಳ್ಳಾಲ ಖಾಝಿ ಇಂಡಿಯನ್ ಗ್ಯಾಂಡ್ ಮುಫ್ಟಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ತಿಳಿಸಿದ್ದಾರೆ ಎಂದು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರು ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ.

Read More

ಮಂಗಳೂರು : ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಫರೀದ್ ಉಳ್ಳಾಲ ಕಡಲ್ಗೊರೆತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಬಟ್ಟಂಪಾಡಿಯಲ್ಲಿ ಕಡಲ್ಗೊರತಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಈ ಪ್ರದೇಶದಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಕಡಲಕೊರೆತ ಪ್ರದೇಶಗಳಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಸೂಚಿಸಲಾಗಿದೆ ಎಂದರಲ್ಲದೆ ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

Read More

ಬಂಟ್ವಾಳ : ಬಿ.ಸಿ.ರೋಡಿನಿಂದ ಪಾಣೆಮಂಗಳೂರು ಪೇಟೆಗೆ ಸಂಪರ್ಕ ಕಲ್ಪಿಸುವ ಹಳೆ ನೇತ್ರಾವತಿ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಸುರತ್ಕಲ್ ನ ರಾಷ್ಟ್ರೀಯ ತಾಂತ್ರಿಕ ಮಹಾ ವಿದ್ಯಾಲಯದ (ಎನ್.ಐ.ಟಿ.ಕೆ) ಅಧಿಕಾರಿಗಳು ಗುರುವಾರ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ರೊ ಅವರ ಉಪಸ್ಥಿತಿಯಲ್ಲಿ ಸೇತುವೆಯ ಧಾರಣಾ ಸಾಮರ್ಥ್ಯವನ್ನು ಪರಿಶೀಲನೆ ನಡೆಸಿದರು. ಎನ್.ಐ.ಟಿ.ಕೆ ಪ್ರೊಫೆಸರ್ ಡಾ. ಪಲಿನಿ ಸ್ವಾಮಿ, ವಿಜಯನ್ ಅವರು ಸೇತುವೆಯ ಮೇಲೆ ಪರಿಶೀಲನೆ ನಡೆಸಿದ್ದು ಮುಂಗಾರು ಚುರುಕಾಗಿರುವ ಹಿನ್ನಲೆಯಲ್ಲಿ ನೇತ್ರಾವತಿ ತುಂಬಿ ಹರಿಯುತ್ತಿದ್ದ ಕಾರಣ ಸೇತುವೆಯ ಪಿಲ್ಲರ್ ಸಹಿತ ಪೂರ್ಣ ಪ್ರಮಾಣದ ಪರಿಶೀಲನೆ ನಡೆಸಲು ಅಧಿಕಾರಿಗಳ ತಂಡಕ್ಕೆ ಸಾಧ್ಯವಾಗದೆ ಮತ್ತೊಮ್ಮೆ ಪರಿಶೀಲನೆ ನಡೆಸಲು ಬರುವುದಾಗಿ ತಿಳಿಸಿ ವಾಪಾಸ್ಸಾಗಿದ್ದಾರೆ. ಶಿಥಿಲಾವಸ್ಥೆಗೆ ತಲುಪಿರುವ ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಈ ಹಿಂದೆಯೇ ಘನ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಈ ಆದೇಶದ ಹಿನ್ನಲೆಯಲ್ಲಿ ಇತ್ತೀಚೆಗೆ ಪುರಸಭೆ ವತಿಯಿಂದ ಸೇತುವೆ ಮೇಲೆ ಘನ ವಾಹನ ಸಂಚಾರ ನಡೆಸದಂತೆ ಕಬ್ಬಿಣದ ಕಮಾನು ಅಳವಡಿಸಲಾಗಿತ್ತು. ಘನ ವಾಹನವೊಂದು ಈ ಕಮಾನಿಗೆ…

Read More