ಮುಡಿಪು;ಕುರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗ್ರಸಾಲೆ ಕೊರಗಲೋಟ್ಟು ರಸ್ತೆ, ಸೀಗೆದಡಿ ಮಧ್ಯನಡ್ಕ ರಸ್ತೆ, ಮಾಲೆಮಾರ್ ಹೂವಿನಕೊಪ್ಪಲ ಕುರ್ನಾಡು ಮುಖ್ಯರಸ್ತೆಗೆ ಶಿಲನ್ಯಾಸವನ್ನು ಸ್ಪೀಕರ್ ಯು.ಟಿ.ಖಾದರ್ ನೆರವೇರಿಸಿದ್ರು.


ಕುರ್ನಾಡು ದತ್ತಾತ್ರೇಯ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಕುರ್ನಾಡು ಗ್ರಾಮಾಭಿವೃದ್ಧಿಗಾಗಿ 1.90 ಕೋಟಿ ಅನುದಾನ ಮಂಜೂರಾಗಿದೆ. ಶಾಸಕರಾಗಿ ಮಾತ್ರವಲ್ಲ, ಸಭಾಧ್ಯಕ್ಷನಾಗಿ ನನ್ನ ಶಕ್ತಿಮೀರಿದ ಪ್ರಯತ್ನದ ಫಲವಾಗಿ ಈ ಎಲ್ಲ ಕೆಲಸಗಳು ಶಾಶ್ವತವಾಗಿ ನಡೆಯುತ್ತಿವೆ. ಎಲ್ಲ ವರ್ಗದವರನ್ನೂ ಒಳಗೊಂಡ ಅಭಿವೃದ್ದಿಯೇ ನಮ್ಮ ಉದ್ದೇಶ. ಪ್ರತಿಯೊಂದು ಪ್ರದೇಶವನ್ನೂ ಗುರುತಿಸಿ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ಮಿತ್ತಕೋಡಿಯಿಂದ ಬೋಳಿಯಾರ್‌ವರೆಗೆ ಸಂಪರ್ಕ ರಸ್ತೆಯು ಮೊದಲು ಕಷ್ಟಕರವಾಗಿತ್ತು, ಕ್ರಶರ್ ಜಲ್ಲಿ ಇರುವುದರಿಂದ ಸಂಚಾರ ಅಸಾಧ್ಯವಾಗಿತ್ತು. ಆದರೆ ಈಗ ಆರ್ಕಾನ-ಮಿತ್ತಕೋಡಿಬೋಳಿಯಾರ್ ಮಾರ್ಗಕ್ಕೆ 6 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಟೆಂಡರ್ ಹಂತದಲ್ಲಿದೆ.ಕೆದುಂಬಾಡಿ–ಮೂರುಗೋಳಿ–ತೌಡುಗೋಳಿ ರಸ್ತೆ ನಿರ್ಮಾಣಕ್ಕೂ ₹30 ಲಕ್ಷ ಬಿಡುಗಡೆಗೊಂಡಿದೆ. ಅತ್ಯುತ್ತಮ ಮಾದರಿ ಗ್ರಾಮದ ರೂಪದಲ್ಲಿ ಕುರ್ನಾಡು ಅಭಿವೃದ್ಧಿಯಾಗುತ್ತಿದೆ. ಕುಡಿಯುವ ನೀರಿಗಾಗಿ ಜೆಜೆಎಂ (Jal Jeevan Mission) ಅಡಿ ಟ್ಯಾಂಕ್‌ಗಳು ನಿರ್ಮಾಣಗೊಂಡಿವೆ. ಮುಂದಿನ ಫೆಬ್ರವರಿಯೊಳಗೆ ಉಚಿತವಾಗಿ ಪೈಪ್, ಟ್ಯಾಪ್, ಮೀಟರ್‌ಗಳನ್ನು ಅಳವಡಿಸಲಾಗುತ್ತದೆ. ಯಾರು ಎಷ್ಟು ನೀರು ಬಳಸುತ್ತಾರೋ ಅಷ್ಟೇ ವ್ಯಯವಾಗುವ ವ್ಯವಸ್ಥೆ ಜಾರಿಯಾಗಲಿದೆ. ಇದು ದೊಡ್ಡ ಮಟ್ಟದ ಅಭಿವೃದ್ಧಿಯ ಹಾದಿಯಾಗಿದೆ. ಮುಡಿಪು ಜಂಕ್ಷನ್‌ನಿಂದ ಹೊರಟರೆ ಮಂಗಳೂರಿಗೆ ಕೇವಲ 20 ನಿಮಿಷದಲ್ಲಿ ತಲುಪುವಂತಾಗಲಿದೆ . ಇದು ಅಭಿವೃದ್ಧಿಯ ನವ ಯುಗ.
ಮಂಗಳೂರಿನಲ್ಲಿ ಮನೆ ಮಾರಾಟ ಮಾಡಿ ಈ ಭಾಗದಲ್ಲಿ ನೆಲೆಸುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇರಾಜೆಯಿಂದ ಹಿಡಿದು ಕಾಯರಗೋಳಿ ವರೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಮಂಜೂರಾತಿ ಶೀಘ್ರದಲ್ಲೇ ನಿರೀಕ್ಷೆಯಲ್ಲಿದೆ. ದೇರಾಜೆವರೆಗೆ, ಮುಡಿಪು ಜಂಕ್ಷನ್‌ನಿಂದ ಮುದುಂಗಾರುಕಟ್ಟೆ ಸೇತುವೆ ವರೆಗೆ ₹3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮುಂದಿನ ವಾರದಿಂದ ಕೆಲಸಗಳು ಆರಂಭವಾಗಲಿವೆ. ಟೆಕ್ನಿಕಲ್ ಅಪ್ರೂವಲ್‌ಗೂ ಹೋಗಿದೆ. ಸಜೀಪದಿಂದ ತುಂಬೆಯವರೆಗೆ ನೇರ ಸಂಪರ್ಕ ರಸ್ತೆ ಕೂಡಾ ಪ್ರಸ್ತಾವನೆಯಲ್ಲಿದೆ. ಮೂಲಭೂತ ಸೌಕರ್ಯಗಳು ಬಂದಾಗ ಹೊರಗಿನ ಹೂಡಿಕೆದಾರರು ಇಲ್ಲಿ ಬಂಡವಾಳ ಹೂಡುತ್ತಾರೆ. ಇದು ಸೌಹಾರ್ದತೆ ಮತ್ತು ಪ್ರೀತಿಯ ದೊಡ್ಡಮಟ್ಟದ ಪ್ರದೇಶ. ಯುವಕರು ಒಗ್ಗಟ್ಟಿನಿಂದ ಮುಂದಿನ ಪೀಳಿಗೆಯ ಅಭಿವೃದ್ಧಿಗೆ ಕೈಜೋಡಿಸಬೇಕು. ಮುಡಿಪು ಪ್ರದೇಶದಲ್ಲಿ ಸುಮಾರು 20 ಎಕರೆ ಜಾಗವನ್ನು ಶಿಕ್ಷಣ ಸಂಸ್ಥೆಗಳು ಕೈಗೊಳ್ಳಲು ಮುಂದಾಗಿವೆ. ಎಲ್ಲರೂ ಒಗ್ಗಟ್ಟಿನಲ್ಲಿ ಇದ್ದರೆ ಪಕ್ಕದವರ ಜಾಗದ ಮೌಲ್ಯ ಮೂರರಷ್ಟು ಏರಲಿದೆ. ಎಂದು ರಸ್ತೆಗಳ ಕಾಮಗಾರಿ ಬಗ್ಗೆ ವಿವರಿಸಿದ್ರು.

ಕಾರ್ಯಕ್ರಮದಲ್ಲಿ ಸ್ಪೀಕರ್ ದೇವದಾಸ್ ಭಂಡಾರಿ ಮಾತನಾಡಿ, ಕುರ್ನಾಡು ಸೀಗೆದಾಡಿ ಮಧ್ಯನಡ್ಕ ಪ್ರದೇಶದಲ್ಲಿ ₹15 ಲಕ್ಷ, ₹10 ಲಕ್ಷ, ಗಣೇಶಮಂದಿರಕ್ಕೆ ₹5 ಲಕ್ಷ, ಮಲೆಮಾರ್ ಹೂವಿನಕೊಪ್ಪಲ ರಸ್ತೆಗೆ ಹಾಗೂ ತಡೆಗೋಡೆ ನಿರ್ಮಾಣಕ್ಕೆ ₹10 ಲಕ್ಷ ಮಂಜೂರಾಗಿದೆ. ರಸ್ತೆ ಬದಿ ಚಾರಂಡಿಯನ್ನು ಒಳಗೊಂಡಿದೆ. ಹಾಗೂ ದೊಡ್ಡದಾದ ₹1 ಕೋಟಿ ಮೊತ್ತದ ಪ್ರಾಜೆಕ್ಟ್ ಮುಡಿಪು ಪಂಚಾಯತ್ ಕಟ್ಟಡ ನಿರ್ಮಾಣದ ಮೂಲಕ ಹೊಸ ಅಧ್ಯಾಯ ಆರಂಭವಾಗಿದೆ. ಸುಬ್ಬಗುಳಿ ರಸ್ತೆ, ಮಿತ್ತಕೋಡಿ ಅಂಗನವಾಡಿ, ಕುರ್ನಾಡು–ಬೋಳಿಯಾರ್ ರಸ್ತೆ ಅಭಿವೃದ್ಧಿ, ಪ್ರದೇಶದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ನೀರಿನ ಅಭಾವ ನಿವಾರಣೆಗೆ ಅತೀವ ಪರಿಶ್ರಮ ಮತ್ತು ಸಮರ್ಪಣಾಭಾವದ ಸೇವೆಯನ್ನು ಶಾಸಕರಾದ ಯು.ಟಿ.ಖಾದರ್ ಅವರು ತಮ್ಮ ಅಧಿಕಾರಾವಧಿಯಲ್ಲಿ ನೀಡಿದ್ದಾರೆ. ಮೌಲ್ಯಾಧಾರಿತ ಸೇವೆಯೇ ಇವರ ಕಾರ್ಯದ ಮೂಲಮಂತ್ರವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಾರ್ಯಾಚರಣೆಯಲ್ಲಿ ಅವರ ವ್ಯಕ್ತಿತ್ವದ ಮೂಲಕ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ.

ಇದೇ ಸಂದರ್ಭದ ಪ್ರಶಾಂತ್ ಕಾಜವ ಮಾತನಾಡಿ, “ತಾಳ್ಮೆಗೆ ಹುಟ್ಟಿದವನಿಲ್ಲ, ಕಷ್ಟಸುಖ ಎಲ್ಲವನ್ನೂ ನಿಭಾಯಿಸುವವರು ಯಥಾರ್ಥ ನಾಯಕರು.ಯು.ಟಿ. ಖಾದರ್ ಅವರಲ್ಲಿ ತಾಳ್ಮೆ, ಗೌರವ ಮತ್ತು ಸೌಜನ್ಯದ ಗುಣಗಳು ತುಂಬಿಕೊAಡಿವೆ. ಸ್ಪೀಕರ್ ಆಗಿ ಅವರು ತಂದಿರುವ ಬದಲಾವಣೆ ವಿಶಿಷ್ಟವಾದ ವ್ಯವಸ್ಥೆಯಾಗಿದೆ. ಬೆಳಗಾವಿ ಅಧಿವೇಶನವೂ ಊರಿಗೆ ಜಾತ್ರೆಯಂತಾಗಿದೆ ಊರಿಗೆ ಒಂದು ಬೆಳಕು ಹಚ್ಚಿದಂತಾಗಿದೆ. ಕುರ್ನಾಡು ಗ್ರಾಮದ ರಸ್ತೆಗಳ ಅಭಿವೃದ್ಧಿಗೆ 80 ಲಕ್ಷ ಅನುದಾನ ದೊರೆತಿದ್ದು, ಕುರ್ನಾಡು ಪಂಚಾಯತಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಅಭಿವೃದ್ಧಿ ಮಾಡಿದವರ ಕುರಿತು ಮಾತನಾಡುವುದು ಧರ್ಮ. ಕಂಬಳಪದವು ಕುರ್ನಾಡು ರಸ್ತೆ ಅಭಿವೃದ್ಧಿಗೆ ಡಿಪಿಆರ್ ತಯಾರಾಗಿದ್ದು, ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆ ಇದೆ. ಮಾಗಣೆಯ ದೈವಸ್ಥಾನಕ್ಕೆ ಕೋರುವಿಕೆಯ ಅನುದಾನವನ್ನು ಒದಗಿಸಿಕೊಟ್ಟವರು ಯು.ಟಿ.ಖಾದರ್. ಸೋಮಾರಿತನದ ಶಾಸಕರಿಗೆ ಬುದ್ಧಿ ಕಲಿಸಬೇಕು, ಪ್ರಾಮಾಣಿಕ ಶಾಸಕರಿಗೆ ನೀಡುವ ಮತವೇ ಗೌರವ ಹಾಗೂ ಕೃತಜ್ಞತೆಯಾಗಿದೆ ಅಂತ ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ ಗಟ್ಟಿ, ಮಾಜಿ ಅಧ್ಯಕ್ಷ ದೇವದಾಸ್ ಭಂಡಾರಿ, ಸದಸ್ಯರುಗಳಾದ ಖಾಸಿಂ, ಗಣೇಶ್ ನಾಯಕ್, ಗುತ್ತಿಗೆದಾರರಾದ ಜಲೀಲ್ ಮೋಂಟುಗೋಳಿ, ಅರುಣ್ ಡಿ’ಸೋಜ, ಸ್ಥಳೀಯರಾದ ಲೋಲಾಕ್ಷ ಶೆಟ್ಟಿ, ಹಿರಿಯ ರಾಧಾಕೃಷ್ಣ ಭಟ್, ತ್ವಾಹ ಜುಮಾ ಮಸೀದಿ ಅಧ್ಯಕ್ಷ ಅಬೂಬಕರ್ ಹಾಜಿ, ಸೂಫಿ ಕುಂಞ, ದೇವ್‌ದಾಸದ ಭಂಡಾರಿ, ಉಪಾಧ್ಯಕ್ಷರಾದ ಅಶ್ರಫ್ ಸೇರಿದಂತೆ ಹಲವರು ಉಪಸ್ಥಿತರಿದ್ರು.




