ಬಂಟ್ವಾಳ,ನ.13: ಸುರಿಬೈಲು ದಾರುಲ್ ಅಶ್‌ಅರಿಯ್ಯ ಎಜ್ಯುಕೇಶನಲ್ ಸಂಸ್ಥೆಯಲ್ಲಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮುಅಲ್ಲಿಮ್ ಮೆಹರ್ಜಾನ್ ಸ್ಪರ್ಧಾಕೂಟವು ನಡೆಯಿತು.

ಶೈಖುನಾ ಸುರಿಬೈಲು ಉಸ್ತಾದರ ಮಖಾಂ ಝಿಯಾರತ್‌ನೊಂದಿಗೆ ಆರಂಭಗೊAಡ ಕಾರ್ಯಕ್ರಮವನ್ನು ಬೊಳ್ಮಾರ್ ಉಸ್ತಾದ್ ಉದ್ಘಾಟಿಸಿದರು.
ಮುಅಲ್ಲಿಮ್ ಮೆಹರ್ಜಾನ್ ಸಮಿತಿಯ ಅಧ್ಯಕ್ಷ ಮುಹಮ್ಮದ್ ಹನೀಫ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಎಸ್ಜೆಎಂ ರಾಜ್ಯ ಉಪಾಧ್ಯಕ್ಷ ಮುಹಿಯುದ್ದೀನ್ ಸಅದಿ ತೋಟಾಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಯಾಕೂಬ್ ಲತೀಫಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ, ಸುಲೈಮಾನ್ ಹಾಜಿ ನಾರ್ಶಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂಎAಎ ಸಿದ್ದೀಕ್ ಸಅದಿ ಅಲ್ ಫುರ್ಖಾನಿ, ಹೈದರ್ ಅಶ್ರಫಿ ಮತ್ತಿತರರು ಭಾಗವಹಿಸಿದ್ದರು.



