ದೇರಳಕಟ್ಟೆ; ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬ ಮಾತಿಗೆ 11ರ ಹರೆಯದ ಈ ಪೋರ ನಿದರ್ಶನವಾಗಿದ್ದಾನೆ. ಕಿರಿಯ ವಯಸ್ಸಿನಲ್ಲೇ ಕ್ರೀಡಾಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಚಿಂತ್ಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ನಡೆದ ಆಟೋ ಕ್ರಾಸ್ ಡರ್ಟ್ ಬೈಕ್ ರೇಸಿಂಗ್” ಸ್ಪರ್ಧೆಯಲ್ಲಿ ಕಿಡ್ಸ್ ಕ್ಲಾಸ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.


ತಲಪಾಡಿಯ ಶಾರದ ವಿದ್ಯಾ ನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಚಿಂತ್ಯ ತನ್ನ ಅವಿರತ ಶ್ರಮದಿಂದ ಎರಡನೇ ಸ್ಥಾನವನ್ನು ಪಡೆದುಕೊಂಡು ತಾನು ವಿದ್ಯಾರ್ಜನೆ ಪಡೆಯುತ್ತಿರುವ ಸಂಸ್ಥೆಗೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ.

ಈ ಅಸಾಧಾರಣ ಪ್ರತಿಭೆ ಅಚಿಂತ್ಯ ಅವರು ದೇರಳಕಟ್ಟೆ ಮಾಗಂತಡಿ ನಿವಾಸಿ ಕಿರಣ್ ಕುಮಾರ್ ಹಾಗೂ ಅಕ್ಷತಾ ದಂಪತಿಯ ಸುಪುತ್ರನಾಗಿದ್ದಾನೆ. ಸಣ್ಣವಯಸ್ಸಿನಿಂದಲೇ ಮಗನ ಪ್ರತಿಭೆಯನ್ನು ಗುರುತಿಸಿ ಅವನಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಪೋಷಕರಿಗೆ, ತನ್ನ ಅತೀ ಚಿಕ್ಕ ವಯಸ್ಸಿನಲ್ಲೇ ತನ್ನ ಕ್ರೀಡಾ ಪ್ರತಿಭೆಯಿಂದ ಹೆಮ್ಮೆ ಮೂಡಿಸುವಂತಹ ಕಾರ್ಯವನ್ನು ಅಚಿಂತ್ಯ ಮಾಡಿದ್ದಾನೆ. ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ತನ್ನ ವಯಸ್ಸಿಗಿಂತ ಹೆಚ್ಚಿನ ತಂತ್ರಜ್ಞಾನ, ಧೈರ್ಯ ಮತ್ತು ಕ್ರೀಡಾ ನಿಪುಣತೆಯಿಂದ ಅಚಿಂತ್ಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಈ ಪುಟ್ಟ ಬಾಲಕನ ಕ್ರೀಡಾ ಪ್ರತಿಭೆಗೆ ಶಾರದ ವಿದ್ಯಾ ನಿಕೇತನ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ರೇಸಿಂಗ್‌ನಲ್ಲಿ ಕೀರ್ತಿ ತರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದಾ ಲವಲವಿಕೆಯಿಂದ ಆಟವಾಡುತ್ತಾ, ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವ ಅಚಿಂತ್ಯ ಸಾಧನೆ ಇನ್ನು ಮುಂದೆಯೂ ಹೀಗೆ ಮುಂದುವರೆದು, ರಾಷ್ಟç-ಅಂತಾರಾಷ್ಟಿçÃಯ ಮಟ್ಟದಲ್ಲಿ ಹೆಸರುಗಳಿಸುವಂತಾಗಲಿ ಎಂಬುವುದು ಎಲ್ಲರ ಆಶಯ. ಉಳ್ಳಾಲವಾಣಿ ತೊಕ್ಕೊಟ್ಟು




