ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಯುವತಿ ಟೆಕ್ಕಿ ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣಕ್ಕೆ ಇದೀಗ ಸ್ಪೋಟಕ ತಿರುವು ಸಿಕ್ಕಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಆಕೆಯನ್ನು ಹತ್ಯೆ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಮೃತಳನ್ನು ಶರ್ಮಿಳಾ (34) ಎಂದು ಗುರುತಿಸಲಾಗಿದ್ದು, ಅವರು ಮೂಲತಃ ಮಂಗಳೂರಿನವರಾಗಿದ್ದಾರೆ. ಒಂದು ವರ್ಷ ಹಿಂದೆ ಬೆಂಗಳೂರಿಗೆ ಬಂದು ಅಕ್ಸೆಂಚರ್ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ಜನವರಿ 3ರ ರಾತ್ರಿ ನಡೆದಿದ್ದು, ಜನವರಿ 5ರಂದು ಬೆಳಕಿಗೆ ಬಂದಿದೆ. ಜನವರಿ 3ರಂದು ರಾತ್ರಿ ಸುಮಾರು 10.30ರ ವೇಳೆಗೆ ಶರ್ಮಿಳಾ ವಾಸಿಸುತ್ತಿದ್ದ ಫ್ಲಾಟ್‌ನ ಒಂದು ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಮನೆ ಮಾಲೀಕ ವಿಜಯೇಂದ್ರ ಅವರು ರಾಮಮೂರ್ತಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಬೆಂಕಿ ಹೊತ್ತಿಕೊಂಡ ಪರಿಣಾಮ ರೂಮ್‌ನಿಂದ ಹೊರಬರಲಾಗದೆ ಶರ್ಮಿಳಾ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂಬ ಶಂಕೆ…
Author: UllalaVani
ಉಳ್ಳಾಲ, ಜ. 12: ಕರಾವಳಿ ಅಭಿವೃದ್ದಿಗೆ ಸರ್ಕಾರದ ಜೊತೆಗೆ ನಾಗರಿಕರ ನೆರವು ಕೂಡ ಅಗತ್ಯವಾಗಿದೆ. ಕರಾವಳಿಯಲ್ಲಿ ಶಾಂತಿ ಪುನರ್ ಸ್ಥಾಪನೆಯಾಗಿದೆ. ಶಾಂತಿ ಪುನರ್ ಸ್ಠಾಪಿಸುವಲ್ಲಿ ಸಿಎಂ ಅವರ ವಿಶೇಷ ಮಾರ್ಗದರ್ಶನ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನ ಬಹುದೊಡ್ಡದಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ. ಕರಾವಳಿ ಪ್ರವಾಸೋದ್ಯಮ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಂಗಳೂರು, ಜ. 12 : ಸರಕು ಸಾಗಣೆ ಲಾರಿಯೊಂದು ಜೀಪಿಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 73ರ ಅಡ್ಯಾರ್ ಸೋಮನಾಥ ಕಟ್ಟೆ ಬಳಿ ಜನವರಿ 10ರಂದು ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಹೆದ್ದಾರಿಯ ತೆರೆದ ಡಿವೈಡರ್ ಬಳಿ ಈ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಜೀಪಿನ ಮುಂಭಾಗವು ಡಿವೈಡರ್ ಮೇಲೆ ಏರಿದ್ದು, ವಾಹನದ ಚಕ್ರಗಳು ಕಿತ್ತುಬಂದಿವೆ. ಅಲ್ಲದೆ ಜೀಪಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.ಅದೃಷ್ಟವಶಾತ್, ಈ ಅಪಘಾತದಲ್ಲಿ ಜೀಪಿನ ಚಾಲಕ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳೂರು, ಜ. 12 :ಲಾರಿ ಮೆಕ್ಯಾನಿಕ್ ಮತ್ತು ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದ ಕಂಕನಾಡಿಯ ಜಪ್ಪುಕುದ್ದಾಡಿ ನಿವಾಸಿ ಚಂದ್ರಹಾಸ (50) ಕಳೆದ ಸುಮಾರು ಐದು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಪ್ರಕಾರ, ಚಂದ್ರಹಾಸ ಆಗಸ್ಟ್ 13 ರಂದು ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋದರು, ಆದರೆ ನಂತರ ಹಿಂತಿರುಗಲಿಲ್ಲ. ಅವರ ಕೆಲಸದ ನಿಮಿತ್ತ ಅವರು ದೀರ್ಘಕಾಲದವರೆಗೆ ಮನೆಯಿಂದ ದೂರ ಉಳಿಯಬೇಕಾಗಿದ್ದರಿಂದ ಅವರು ಸಾಮಾನ್ಯವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಮನೆಗೆ ಹಿಂತಿರುಗುತ್ತಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.ಆದರೆ, ಐದು ತಿಂಗಳ ನಂತರವೂ ಅವನು ಹಿಂತಿರುಗದಿದ್ದಾಗ, ಕುಟುಂಬವು ಹಲವಾರು ಸ್ಥಳಗಳಲ್ಲಿ ಹುಡುಕಾಟ ನಡೆಸಿತು ಆದರೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ನಂತರ, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ಬಗ್ಗೆ ದೂರು ದಾಖಲಾಗಿದ್ದು, ಪ್ರಕರಣ ದಾಖಲಾಗಿದೆ.ಚಂದ್ರಹಾಸ ಸುಮಾರು 5.4 ಅಡಿ ಎತ್ತರ, ಗೋಧಿ ಮೈಬಣ್ಣ, ತೆಳ್ಳಗಿನ ಮುಖ ಮತ್ತು ಮಧ್ಯಮ ಮೈಕಟ್ಟು ಹೊಂದಿದ್ದಾರೆ. ಅವರು ತುಳು, ಕನ್ನಡ ಮತ್ತು ಹಿಂದಿ ಭಾಷೆಗಳನ್ನು…
ನರಿಂಗಾನ : ಈ ಕಂಬಳ ನಮ್ಮ ದೇಶದ ಆಸ್ತಿ, ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಕಂಬಳ ಸಂಸ್ಕೃತಿಯನ್ನ ಕಾಪಾಡಿ ಕೊಂಡು ಬಂದಿರುವವರಿಂದ ಕಂಬಳದ ಪೋಷಣೆ ಬಹಳ ಕಷ್ಟ ಸಾಧ್ಯ. ಇದರ ಪೋಷಣೆ ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಅವರು ಶನಿವಾರ ನರಿಂಗಾನದಲ್ಲಿ 4 ನೇ ವರ್ಷದ ಹೊನಲು ಬೆಳಕಿನ ಲವ- ಕುಶ ಕಂಬಳೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಜಾತಿ ಧರ್ಮ ಮತ ಎಲ್ಲವನ್ನೂ ಮರೆತು ಈ ನಾಡಿನ ಸಂಪತ್ತನ್ನು ಕಾಪಾಡಿಕೊಂಡು ಬರುತ್ತಾ ಇದ್ದೀರಿ. ಹಗಲು ರಾತ್ರಿ ನಡೆಯುವ ಕಂಬಳವನ್ನು ವೀಕ್ಷಿಸಿ, ಪ್ರೋತ್ಸಾಹಿಸುವ ಮೂಲಕ ಉಳಿಸಿ ಬೆಳೆಸಿಕೊಂಡು ಬಂದಿದ್ದೀರಿ ಇದಕ್ಕೆ ನಿಮಗೆಲ್ಲರಿಗೂ ಅಭಿನಂದನೆಗಳು ಸಲ್ಲಬೇಕು ಎಂದರು. ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕಂಬಳ ಓಟ ಕೇವಲ ಮನರಂಜನೆ ಮಾತ್ರವಲ್ಲ ನಮ್ಮ ಕರಾವಳಿಯ ಜಾನಪದೀಯ ಹಾಗೂ ಈ ಮಣ್ಣಿನ ಸೌಹಾರ್ದತೆಯ ಕ್ರೀಡೆಯಾಗಿದೆ.ಈ ಕಂಬಳ ಪರಂಪರೆಯನ್ನು ಉಳಿಸಿ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಸರಕಾರ ವತಿಯಿಂದಲೂ ಕೂಡಾ ಕಂಬಳಕ್ಕೆ ಅನುದಾನ…
ಏಡಿಯ ಕೈಗೆ ಕೊಂಬು ಬಂತೇ ?!ಏನಿದು ಕಲಿಗಾಲ ಅಂತೀರಾ? ಮಾಂಸಹಾರಿಗಳಲ್ಲಿ ಏಡಿ ಪ್ರಿಯರು ಈ ಮಾಹಿತಿ ಓದಿದ ಬಳಿಕ ಇನ್ನಾದರೂ ತಾವು ಪದಾರ್ಥ ಮಾಡಲು ತಂದ ಏಡಿ (ತುಳುವಿನಲ್ಲಿ ಡೆಂಜಿ ಅಥವಾ ಜೆಂಜಿ) ಯ ಕೈಕಾಲು ಮುರಿಯುವ ಮೊದಲು ಕೊಂಬು ಗಮನಿಸಲು ಪ್ರಾರಂಭಿಸಬಹುದು. ಕಥೆ ಏನಪ್ಪಾ ಅಂದ್ರೆ, ಕಳೆದ ವಾರ ತೊಕ್ಕೊಟ್ಟು ಬಳಿಯ ಕಲ್ಲಪುವಿನ ಗಂಡಿ ನಿವಾಸಿ ವನಿತಾ ಗಿರೀಶ್ ಪದಾರ್ಥಕ್ಕೆಂದು ಏಡಿ ಖರೀದಿಸಿದ್ದರು. ಮೀನು ತುಂಡರಿಸಿ ಶುಚಿಗೊಳಿಸುವುದು ಸುಲಭ. ಆದರೆ ಏಡಿಯನ್ನು ಪದಾರ್ಥಕ್ಕೆ ತಯಾರು ಮಾಡುವುದು ಸ್ವಲ್ಪ ಕಷ್ಟ. ತಿನ್ನುವುದು ಇನ್ನೂ ಕಷ್ಟ. ಆದರೆ ಅದರ ರುಚಿಯಾದ ಮಾಂಸವು ಈ ಎಲ್ಲಾ ಕಷ್ಟಗಳನ್ನು ಮರೆಸುತ್ತದೆ ಎನ್ನುವುದು ಏಡಿ ಪ್ರಿಯರ ಅಂಬೋಣ.ವನಿತಾ ಅವರು ಏಡಿಗಳನ್ನು ತುಂಡರಿಸುತ್ತಿದ್ದಂತೆ ಒಂದು ಏಡಿಯ ಕಾಲಿನ ಮೇಲೆ ಒಂದು ವಿಶೇಷ ಬೆಳವಣಿಗೆ ಕಂಡು ಆಶ್ಚರ್ಯ ಚಕಿತರಾದರು. ಸಾಮಾನ್ಯವಾಗಿ ಏಡಿಯ ಕೈಕಾಲುಗಳ ತುದಿಯ ಮೇಲೆ ಮತ್ತೊಂದು ಬೆಳವಣಿಗೆ ಇರುವುದಿಲ್ಲ. (ಚಿತ್ರ ನೋಡಿ) ಏಡಿಯನ್ನು ಸ್ವಚ್ಛ ಮಾಡುತ್ತಿದ್ದ ಅವರು ಈ…
ಕರಾವಳಿ ಭಾಗದ ಪ್ರವಾಸೋದ್ಯಮವನ್ನು ಕೇರಳ ಮತ್ತು ಗೋವಾ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಪ್ರದೇಶಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇವರು ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಮಂಗಳೂರಿಗೆ ಆಗಮಿಸಿದ್ದು, ಮಂಗಳೂರು ಅಂತರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ರು. “ಈ ಭಾಗದ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಾವು ಹೊಸ ಯೋಜನೆಗಳನ್ನು ರೂಪಿಸಲು ನಿರ್ಧರಿಸಿದ್ದೇವೆ. ರಾಜ್ಯದ ಕರಾವಳಿ ಭಾಗವನ್ನು ಹತ್ತಿರದ ಕೇರಳ ಮತ್ತು ಗೋವಾ ರಾಜ್ಯಗಳ ಮಾದರಿಯಲ್ಲಿ ಮುನ್ನಡೆಯಿಸಲು ಸರ್ಕಾರ ಕೆಲಸಮಾಡುತ್ತಿದೆ ಎಂದ್ರು. ಇದೇ ವೇಳೆ ಅವರು ಸ್ಥಳೀಯ ಉದ್ಯೋಗ ಸೃಷ್ಟಿ ಕುರಿತಂತೆ ಮಾತನಾಡಿದ್ರು.
ಮಾಡೂರು ; ಶಿರ್ಡಿ ಸಾಯಿ ಬಾಬಾ ಮಂದಿರದಲ್ಲಿ “ಹೇ ಸಾಯಿನಾಥ” ಎಂಬ ಕನ್ನಡ ಭಕ್ತಿಪ್ರಧಾನ ಗೀತೆ ಬಿಡುಗಡೆಗೊಂಡಿದೆ. ತೃಪ್ತಿ ಉಚ್ಚಿಲ ಅವರ ಕಂಠಸಿರಿಯಲ್ಲಿ ಹಾಡು ಮೂಡಿ ಬಂದಿದ್ದು, ಸತ್ಯನಾರಾಯಣ್ ಐಲ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನವೀನ್ ಬೆಲ್ಚಡ ಅಡ್ಕ ಅವರ ಸಾಹಿತ್ಯವಿದ್ದು, ಬತು ಕುಳಾಲ್ ಅವರ ಕೈಚಳಕದಲ್ಲಿ ಸುಮಧುರ ಗೀತೆ ನಿರ್ಮಾಣಗೊಂಡಿದೆ. ಮಂದಿರದ ಅರ್ಚಕರಾದ ಎನ್ ವಿಶ್ವನಾಥ ಶಾಂತಿ ಭಟ್ ಅವರು ಭಕ್ತಿಗೀತೆ ರಚನೆಯ ಬಗ್ಗೆ ಮತನಾಡಿದ್ದಾರೆ. ಇದೇ ವೇಳೆ ಕೆ ಟಿ ಸುವರ್ಣ ಅವರು ಮಾತನಾಡಿ, ಒಂದೊಳ್ಳೆಯ ಸಾಹಿತ್ಯ, ಸಂಗೀತದ ಜೊತೆ ಸಾಯಿನಾಥರ ಭಕ್ತಿಗೀತೆ ಚೆನ್ನಾಗಿ ಮೂಡಿಬಂದಿದೆ. ಇಂತಹ ಹಲವು ಹಾಡುಗಳನ್ನು ರಚಿಸುವಂತಾಗಲಿ ಎಂದು ಹಾರೈಸಿದ್ರು. ಇನ್ನು ಈ ಭಕ್ತಿಗೀತೆ ತೃಪ್ತಿ ಉಚ್ಚಿಲ್ ಯೂಟ್ಯುಬ್ ಚಾನಲ್‌ನಲ್ಲಿ ಲಭ್ಯವಿದೆ. ಇದೇ ಸಂದರ್ಭ ಗಾಯಕಿ ತೃಪ್ತಿ ಉಚ್ಚಿಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮಂದಿರದ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ರು.
ಉಳ್ಳಾಲ: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ತಲಪಾಡಿ, ಮಸ್ಜುದುಲ್ ಅಬ್ರಾರ್ ಇದರ ಆಶ್ರಯದಲ್ಲಿ ಏಕದಿನ ಸಲಫಿ ಸಮ್ಮೇಳನ ಮತ್ತು ಎರಡನೇ ಸನದು ದಾನ ಕಾರ್ಯಕ್ರಮ ಜ.11 ರಂದು ಅಬ್ರಾರ್ ನಗರ ತಲಪಾಡಿ ಯಲ್ಲಿ ನಡೆಯಲಿದ್ದು ,ಭಾನುವಾರ ಬೆಳಿಗ್ಗೆ 9:30 ರಿಂದ ರಾತ್ರಿ 10:00 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಎಸ್.ಕೆ.ಎಸ್.ಎಂ.ಯೂತ್.ಕಾರ್ಯದರ್ಶಿಶಿಹಾಬ್ ತಲಪಾಡಿ ಹೇಳಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮ ಪ್ರಯುಕ್ತ ಭಾನುವಾರ ಬೆಳಿಗ್ಗೆ 9.30 ಕ್ಕೆ ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ತಲಪಾಡಿ ಘಟಕದ ಅಧೀನದ ದಾರುಲ್ ಉಲೂಮ್ ಮಹಿಳಾ ಕಾಲೇಜು ವಿದ್ಯಾರ್ಥಿಗಳ ಮಹಿಳಾ ಸಮಾವೇಶ,ಎರಡನೇ ಸನದುದಾನ, ಅಸರ್ ನಮಾಝ್ ಬಳಿಕ ದ ಅವಾ ಸಮಾವೇಶ, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.ಶೇಖ್ ಸುಲ್ತಾನ್ ಸಯೀದ್ ಬಿಲಾಲ್,ಮೌಲವಿ ಅನ್ಸಾರ್ ನನ್ಮಂಡ , ಮೌಲವಿ ಮುನೀರ್ ಮದನಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸುದ್ದಿ ಗೋಷ್ಠಿಯಲ್ಲಿ ಅಬ್ರಾರ್ ಮಸೀದಿ ಉಪಾಧ್ಯಕ್ಷ ಹಮ್ಮದ್ ಕೆ.ಸಿ ರೋಡ್, ಕಾರ್ಯದರ್ಶಿ…
ಮಂಗಳೂರು: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ನಿಟ್ಟೆ ವಿನಯ ಹೆಗ್ಡೆ ಅವರ ಜೀವನ ಶೈಲಿ ಎಲ್ಲರಿಗೂ ಆದರ್ಶ, ಅವರ ಕೊಡುಗೆ ಸಮಾಜಕ್ಕೆ ದೊಡ್ಡದು. ಅವರ ನೆನಪು ಶಾಶ್ವತ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ವಿನಯ ಹೆಗ್ಡೆ ಅವರು ನಮ್ಮೆಲ್ಲರ ಮನಸ್ಸಿನಲ್ಲಿ ಚಿರಕಾಲ ಉಳಿಯುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ಶ್ರೀರಾಮಕೃಷ್ಣ ಕಾಲೇಜ್ ಬಳಿ ಇರುವ ಶ್ರೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಂಗಣದಲ್ಲಿ ಇತ್ತೀಚೆಗೆ ಅಗಲಿದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆಯವರಿಗೆ ಸಲ್ಲಿಸಿದ ಶ್ರದ್ದಾಂಜಲಿ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿನಯ ಹೆಗ್ಡೆಯವರ ಜೀವನ ಶೈಲಿ ನಮಗೆಲ್ಲರಿಗೂ ಮಾದರಿ. ಅವರಂತೆ ಇನ್ನೋರ್ವ ಬಂಟ ಇಲ್ಲ. ವಿನಯ ಹೆಗ್ಡೆಯವರ ನೆನಪು ನಮ್ಮ ಮನಸ್ಸಿನಲ್ಲಿ ಚಿರಕಾಲ ಉಳಿಯುತ್ತದೆ. ಅವರು ನಡೆದ ಹಾದಿಯಲ್ಲಿ ನಾವು ಮುನ್ನಡೆಯೋಣ ಎಂದರು. ಕರ್ನಲ್ ಶರಶ್ಚಂದ್ರ ಭಂಡಾರಿ ಮಾತನಾಡಿ…

