Author: UllalaVani

Kannada News From Coastal Karnataka

ಉಳ್ಳಾಲ : ಇಲ್ಲಿನ ನಗರ ಸಭೆಯ ಸ್ಥಾಯಿ ಸಮಿತಿಯನ್ನು ಸರ್ಕಾರದ ನಿರ್ದೇಶನ ಮೇರೆಗೆ ವಿಸ್ತರಣೆ ಮಾಡಿ ನೂತನ ಸಮಿತಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ನಗರ ಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ವಿಸ್ತರಣೆ ಮಾಡಿ ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಫೀಲುಗಳ ಸ್ಥಾಯಿಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ,ಪಟ್ಟಣ ಯೋಜನೆ ಮತ್ತು ಪುರೋಭಿವೃದ್ಧಿ ಸ್ಥಾಯಿಸಮಿತಿ, ಲೆಕ್ಕಪತ್ರಗಳ ಸ್ಥಾಯಿ ಸಮಿತಿಗಳನ್ನು ರಚಿಸಲಾಯಿತು. ತೆರಿಗೆ ನಿರ್ದರಣೆ ಹಣಕಾಸು ಮತ್ತು ಅಫೀಲುಗಳ ಸ್ಥಾಯಿಸಮಿತಿಯ ಅಧ್ಯಕ್ಷರಾಗಿ ಮಹಮ್ಮದ್ ಅಶ್ರಫ್, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಖಲೀಲ್ ಇಬ್ರಾಹಿಂ, ಪಟ್ಟಣ ಯೋಜನೆ ಮತ್ತು ಪುರೋಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಭಾರತಿ, ಲೆಕ್ಕಪತ್ರಗಳ ಸ್ಥಾಯಿಸಮಿತಿಯ ಅಧ್ಯಕ್ಷ ರಾಗಿ ವೀಣಾ ಶಾಂತಿ ಡಿಸೋಜ ಅವರನ್ನು ನೇಮಕ ಮಾಡಲಾಗಿದೆ. ನಗರಸಭೆ ಪೌರಾಯುಕ್ತ ನವೀನ್ ಹೆಗ್ಡೆ, ಉಪಾಧ್ಯಕ್ಷ ಸಪ್ನಾ ಹರೀಶ್, ತೆರಿಗೆ ವಿಭಾಗದ ನಿರೀಕ್ಷಕ ಚಂದ್ರ ಹಾಸ್…

Read More

ದೇರಳಕಟ್ಟೆ ನ.18: ಫಾರ್ಮಸಿ ವಿಷಯದಲ್ಲಿ ನಡೆಸಿದ ಸಂಶೋಧನೆಗಾಗಿ ಫಾರ್ಮಸ್ಯೂಟಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರಜೀತಾ ಬಿಜು ಅವರಿಗೆ ಯೆನೆಪೊಯ ಡೀಮ್ಡ್ ಟು ಬಿ ಯುನಿವರ್ಸಿಟಿ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಿದೆ. ಇವರು ಯೆನೆಪೊಯ ಫಾರ್ಮಸಿ ಕಾಲೇಜು ಮತ್ತು ರಿಸರ್ಚ್ ಸೆಂಟರ್, ಮಂಗಳೂರು ಇವರ ಫಾರ್ಮಸ್ಯೂಟಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ‘ಚರ್ಮದ ಫಂಗಲ್ ಸೋಂಕುಗಳಿಗೆ ಚಿಕಿತ್ಸೆ ನೀಡುವ ವಿಧಾನವಾಗಿ ಕಾರ್ಬಮೈಡ್ ಮತ್ತು ಲುಲಿಕೋನಾಜೋಲ್ ನಿಯೋಸೋಮಲ್ ಜೆಲ್’ ವಿಷಯ ಕುರಿತು ಯಶಸ್ವಿ ಸಂಶೋಧನೆ ನಡೆಸಿದ ಹಿನ್ನೆಲೆ ಇವರಿಗೆ ದೇರಳಕಟ್ಟೆಯ ಯೆನೆಪೊಯ ಡೀಮ್ಡ್ ಟು ಬಿ ಯುನಿವರ್ಸಿಟಿಯು 15ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಜೀತಾ ಬಿಜು ಅವರು ಪಿಎಚ್.ಡಿ ಪದವಿಯನ್ನು ನೀಡಿದ್ದಾರೆ. ಈ ಸಂದರ್ಭ ಮಾತನಾಡಿದ ಪ್ರಜೀತಾ ಬಿಜು ಅವರು, ತಮ್ಮ ಸಂಶೋಧನೆಯನ್ನು ಯೆನೆಪೊಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೊಹಮ್ಮದ್ ಗುಲ್ಜಾರ್ ಅಹ್ಮದ್ ಮತ್ತು ಯೆನೆಪೊಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ಶೆಣೈ ಇವರ…

Read More

ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಮೂವರನ್ನು ಬಂಧಿಸಿರುವ ಘಟನೆ ನ .15ರಂದು ಸಂಜೆ 5 ಗಂಟೆಯ ವೇಳೆ ಮೂಡಬಿದ್ರೆ ತಾಲೂಕು ಹೊಸ್ಮರು-ನೆಲ್ಲಿಕಾರು ಪ್ರದೇಶದಲ್ಲಿ ನಡೆದಿದೆ. ಖಚಿತ ಮಾಹಿತಿಯ ಆಧಾರದ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ಟಾಟಾ ಏಸ್ ಕಂಟೇನರ್ ವಾಹನದಲ್ಲಿ ಮೂರು ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮನ್ಸೂರ್ ಅಧ್ಯಾಪಡಿ @ ಮೊಹಮ್ಮದ್ ಮನ್ಸೂರ್, ಮೊಹಮ್ಮದ್ ಅಶ್ವತ್ ಹಾಗೂ ಅಬ್ದುಲ್ ಮೊಹಮ್ಮದ್ ನಿಶಾಂ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಮನ್ಸೂರ್ ಅಧ್ಯಾಪಡಿ @ ಮೊಹಮ್ಮದ್ ಮನ್ಸೂರ್‌ ವಿರುದ್ಧವೇ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ 29 ಪ್ರಕರಣಗಳು ದಾಖಲಾಗಿದ್ದು, ಇದು 30ನೇ ಪ್ರಕರಣ ಎಂದು ತಿಳಿದುಬಂದಿದೆ.ಎರಡನೇ ಆರೋಪಿ ಮೊಹಮ್ಮದ್ ಅಶ್ವತ್ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಸಂಬಂಧಿತ ಒಂದು ಪ್ರಕರಣ ದಾಖಲಾಗಿದ್ದರೆ, ಮೂರನೇ ಆರೋಪಿ ನಿಶಾಂ ವಿರುದ್ಧ ಇದು ಮೊದಲ ಪ್ರಕರಣವಾಗಿದೆ.ಈ ಬಗ್ಗೆ ಮೂಡಬಿದ್ರೆ ಅಪರಾಧ ಕ್ರಮಾಂಕ 178/2025ರಂತೆಕಲಂ 111(BNS), 11(1)(D) – ಪ್ರಾಣಿ ಹಿಂಸೆ ಪ್ರತಿಬಂಧಕ…

Read More

ಬೆಳಗಾವಿ, ನವೆಂಬರ್​ 18: ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ಸಾಲು ಸಾಲು ಸಾವಿನ ಬೆನ್ನಲ್ಲೇ ಮೃಗಾಲಯದ ಸುತ್ತ ಮುತ್ತಲಿನ ಗ್ರಾಮಗಳಲ್ಲಿಯೂ ಸಾಂಕ್ರಾಮಿಕ ರೋಗದ ಭೀತಿ ಆರಂಭವಾಗಿದೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ. ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 38 ಕೃಷ್ಣಮೃಗಳ ಪೈಕಿ 31 ಮೃತಪಟ್ಟಿದ್ದು, ಗಳಲೆ ರೋಗದಿಂದ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸುತ್ತಲಿನ ಗ್ರಾಮದಲ್ಲೂ ಗಳಲೆ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಪಶುಪಾಲನೆ ಇಲಾಖೆ ಉಪ ನಿರ್ದೇಶಕರಿಗೆ ಅರಣ್ಯ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಸಸ್ಯಾಹಾರದ ಪ್ರಾಣಿಗಳಿಗೂ ಗಳಲೆ ರೋಗ ಹರಡುವ ಸಾಧ್ಯತೆ ಇರುವುದರಿಂದ, ಪ್ರಾಣಿಗಳನ್ನ ಸಾಕಿರುವವರು ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಗಳಲೆ ರೋಗ ಹರಡದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆಯೂ ಮನವಿ ಮಾಡಲಾಗಿದೆ. ಮೃತ ಕೃಷ್ಣ ಮೃಗಗಳ ಕಿಡ್ನಿ, ಹಾರ್ಟ್, ಲಿವರ್, ರಕ್ತ ಎಲ್ಲವನ್ನೂ ವೈದ್ಯರು ಈಗಾಗಲೇ ಸ್ಯಾಂಪಲ್ ಪಡೆದಿದ್ದು ಅವನ್ನು ಲ್ಯಾಬ್​​ಗೆ ಕಳುಹಿಸಿಕೊಡಲಾಗಿತ್ತು. ಮರಣೋತ್ತರ ಪರೀಕ್ಷೆಯ  ವರದಿ ಇಂದು ಹೊರಬರಲಿದ್ದು, ಮಧ್ಯಾಹ್ನದ ವೇಳೆಗೆ…

Read More

ಬೆಳ್ತಂಗಡಿ, ನ.18: ಸುಮಾರು 18 ಅಡಿ ಎತ್ತರದಿಂದ ಬಿದ್ದು ಗಂಭಿರ ಗಾಯಗೊಂಡಿದ್ದ ಪೈಂಟರ್ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಉಜಿರೆ ರೆಂಜಾಳ ನಿವಾಸಿ ಪ್ರಮೋದ್ ಗೌ (37) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಋಎ. ಪೈಂಟಿAಗ್ ಕೆಲಸ ಮಾಡುತ್ತಿದ್ದ ಪ್ರಮೋದ್ ಗೌಡ ಒಂದು ತಿಂಗಳ ಹಿಂದೆ ಎತ್ತರದಿಂದ ಬಿದ್ದು, ಬೆನ್ನು ಮೂಳೆ ಮುರಿತಕ್ಕೊಳಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ, ಪುತ್ರಿಯನ್ನು ಆಗಲಿದ್ದಾರೆ.

Read More

ಬೆಳ್ತಂಗಡಿ, ನ. 17: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊoದು ಪಲ್ಟಿಯಾಗಿ, 12 ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಲಾಯಿಲ ಗ್ರಾಮದ ಕುತ್ರೊಟ್ಟು-ಟಿ.ಬಿ. ಕ್ರಾಸ್ ರಸ್ತೆಯ ಹೊಕ್ಕಿಲ ಎಂಬಲ್ಲಿ ನವೆಂಬರ್ 16ರ ತಡರಾತ್ರಿ ಸಂಭವಿಸಿದೆ. ಮೃತನನ್ನು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಂಡಡ್ಕ ನಿವಾಸಿ ಗಣೇಶ್ ಅವರ ಪುತ್ರ ತನ್ವಿತ್ (12) ಎಂದು ಗುರುತಿಸಲಾಗಿದೆ. ನಾವೂರಿನ ಶಶಿ ಎಂಬುವವರ ಆಟೋರಿಕ್ಷಾದಲ್ಲಿ ಪ್ರಯಾಣಿಕರು ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕಾಗಿ ತೆರಳುತ್ತಿದ್ದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತನ್ವಿತ್‌ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ವಾಹನದಲ್ಲಿದ್ದ ಇತರ ಐವರು ಸಹ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರು ಬ್ಯಾಂಕ್ ನಿಯಮಿತ ಇದರ ವತಿಯಿಂದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025 ರ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯಿತು. ಸುವರ್ಣ ಮಹೋತ್ಸವವನ್ನು ಪೂರೈಸಿದ ಸಹಕಾರಿ ಸಂಘ ವಿಶೇಷ ಪ್ರಶಸ್ತಿ ಪುರಸ್ಕಾರವನ್ನು ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರ ಸಂಘ ನಿಯಮಿತ ಇದರ ಅಧ್ಯಕ್ಷರಾದ ಐವನ್ ಡಿ’ಸೋಜ (ಶಾಸಕರು, ಕರ್ನಾಟಕ ವಿಧಾನ ಪರಿಷತ್) ಇವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ. ದೇವೇಗೌಡ ಅವರಿಂದ ವಿಶೇಷ ಪ್ರಶಸ್ತಿಯನ್ನು ಸ್ವೀಕರಿಸಿದರು.

Read More

ಮಂಗಳೂರು: ಕರಾವಳಿ ಪ್ರದೇಶದ ವಿದ್ಯಾರ್ಥಿಗಳಲ್ಲಿ ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿಯಂತಹ  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪದವಿ ಪೂರ್ಣಗೊಳಿಸಿದ ನಂತರವೇ ಪರೀಕ್ಷಾ ಸಿದ್ಧತೆ ಆರಂಭಿಸುವ ಪ್ರವೃತ್ತಿ ಜಾಗೃತಿಯ ಕೊರತೆಯ ಪ್ರಮುಖ ಕಾರಣವಾಗಿದೆ. ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳು ಹಾಗೂ ಸಮಕಾಲೀನ ವಿಚಾರಗಳತ್ತ ನಿರಂತರ ಗಮನಹರಿಸಿದಾಗ ಯಶಸ್ಸು ಸಾಧ್ಯ ಎಂದು ಬಲ್ಮಠ ದಯಾನಂದ ಪೈ ಸತೀಶ್‌  ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಮಹಿಳಾ ಪ್ರಾಧ್ಯಾಪಕಿ ಡಾ. ಸುಮನ ಸುಧಾಕರ್ ಬೋಳಾರ್ ಹೇಳಿದರು. ಅವರು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ನಿಯಮಿತ , ಸೌತ್‌ವಾರ್ಫ್‌, ಬಂದರು, ಮಂಗಳೂರು ಇವರ ಆಶ್ರಯದಲ್ಲಿ ನವೀಕೃತ ಮಂಜುಗಡ್ಡೆ ಸ್ಥಾವರ ಉದ್ಘಾಟನಾ ಸಮಾರಂಭ ಹಾಗೂ ರೂ.17 ಲಕ್ಷ ವೆಚ್ಛದಲ್ಲಿ 210  ವಿದ್ಯಾರ್ಥಿಗಳಿಗಾಗಿ ಜರಗಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು   ಉದ್ಘಾಟಿಸಿ ಮಾತನಾಡಿದರು.ಸುದ್ದಿಪತ್ರ ಓದುವುದನ್ನು ವಿದ್ಯಾರ್ಥಿಗಳು ಎರಡು ರೀತಿಯಲ್ಲಿ ಅಭ್ಯಾಸ ಮಾಡಬೇಕಿದೆ. ಕನಿಷ್ಠ ಅರ್ಧಗಂಟೆಯಾದರೂ ಪ್ರತಿನಿತ್ಯ ವಿಷಯಾಧ್ಯಯನಕ್ಕೆ ಮೀಸಲಿಡುವುದರಿಂದ ಜ್ಞಾನವೃದ್ಧಿಗೆ ನೆರವಾಗುತ್ತದೆ. ಡಿಜಿಟಲ್ ಮೀಡಿಯಾ…

Read More

ಉಳ್ಳಾಲ:ನ-17; ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕುಣಿತ ಭಜನೆಯಲ್ಲಿ ಭಾಗವಹಿಸಬೇಕಿದೆ. ಕುಣಿತ ಭಜನೆಯನ್ನು ಕೇವಲ ಸ್ಪರ್ಧೆಗೆ ಮಾತ್ರ ಸೀಮಿತ ಮಾಡದೆ ನಮ್ಮ ಸುತ್ತಮುತ್ತಲಲ್ಲಿ ನಡೆಯುವ ಶುಭ ಕಾರ್ಯಗಳಿಗೂ ಅದನ್ನ ಪಸರಿಸಬೇಕಿದೆ. ಜೀವನದಲ್ಲಿ ಭಜನೆಯನ್ನ ನಿರಂತರ ಅಳವಡಿಸುವ ಮೂಲಕ ಧರ್ಮ ಜಾಗೃತಿಗೊಳಿಸಬೇಕಿದೆಯೆಂದು ರಾಜ್ಯ ಮಟ್ಟದ ಭಜನಾ ತರಬೇತುದಾರರಾದ ಸಂದೇಶ್ ಮದ್ದಡ್ಕ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೊಗವೀರಪಟ್ಣದ ಮಾರುತಿ ಜನಸೇವಾ ಸಂಘ,ಮಾರುತಿ ಯುವಕ ಮಂಡಲದ ನಲ್ವತ್ತನೇ ವರ್ಷಾಚರಣೆ ಪ್ರಯುಕ್ತ “ಮಾರುತಿ ಮಾಣಿಕ್ಯ ಮಹೋತ್ಸವ-2025” ರ ನಲ್ವತ್ತು ವಿಶೇಷ ಸಮಾಜಮುಖಿ ಕಾರ್ಯಕ್ರಮಗಳ ಪ್ರಯುಕ್ತ ಉಳ್ಳಾಲ ಮೊಗವೀರ ಪಟ್ಣದ ವ್ಯಾಘ್ರ ಚಾಮುಂಡೇಶ್ವರಿ ಕ್ಷೇತ್ರದ ಆವರಣದ ಮಾಧವ ಮಂಗಳ ಸಭಾ ಭವನದಲ್ಲಿ ಭಾನುವಾರದಂದು ನಡೆದ ಆಯ್ದ ಪರಿಣಿತ ತಂಡಗಳ “ಭಜೊರೇ ಮಾರುತಿ 2025” ಕುಣಿತ ಭಜನಾ ಸ್ಫರ್ಧೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಮಾರುತಿ ಜನಸೇವಾ ಸಂಘದ ಅಧ್ಯಕ್ಷರಾದ ಸಂದೀಪ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು.ರಂಗಭೂಮಿ ಕಲಾವಿದರು ,ನೀನಾಸಂ ಪದವೀಧರರಾದ ಶೀನ ನಾಡೋಳಿ,ಉಳ್ಳಾಲ…

Read More

ಮೂಡುಬಿದಿರೆ: ಅಕ್ರಮವಾಗಿ ದನಗಳನ್ನು ಸಾಗಾಟ ಮಡುತ್ತಿದ್ದ ಆರೋಪದಲ್ಲಿ ಮೂವರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮನ್ಸೂರ್ ಅದ್ಯಪಾಡಿ ಯಾನೆ ಮುಹಮ್ಮದ್ ಮನ್ಸೂರ್, ಮುಹಮ್ಮದ್ ಅಶ್ವಾದ್, ಅಬ್ದುಲ್ ಮುಹಮ್ಮದ್ ನಿಶಾಮ್ ಬಂಧಿತ ಆರೋಪಿಗಳಾಗಿದ್ದಾರೆ. ಅ.15ರಂದು ಆರೋಪಿಗಳು ತಾಲೂಕಿನ ಹೊಸ್ಮಾರು ನೆಲ್ಲಿಕಾರು ಕಡೆಯಿಂದ ಗೂಡ್ಸ್ ವಾಹನದಲ್ಲಿ ದನಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ. ದನಗಳು, ವಾಹನ ಸಹಿತ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಮನ್ಸೂರ್ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 29 ಪ್ರಕರಣಗಳಿದ್ದು, ಇದು 30ನೇ ಪ್ರಕರಣವಾಗಿದೆ ಮತ್ತೋರ್ವ ಆರೋಪಿ ಮುಹನ್ನದ್ ಅಶ್ವಾದ್‌ನ ಮೇಲೆ ಉಳ್ಳಾಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಪ್ರಕರನ ದಾಖಲಾಗಿದ್ದು, ಇದು 2ನೇ ಪ್ರಕರಣವಾಗಿದೆ. ಹಾಗೂ 3ನೇ ಆರೋಪಿ ಅಬ್ದುಲ್ ಮುಹಮ್ಮದ್ ನಿಶಾಮ್‌ನ ವಿರುದ್ಧ ಇದು ಮೊದಲನೇ ಪ್ರಕರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.

Read More