ಸೋಮೇಶ್ವರ; ಶ್ರೀ ಅಯ್ಯಪ್ಪ ಮಂದಿರ ಸೋಮೇಶ್ವರ ಇದರ 51ನೇ ವಾರ್ಷಿಕೋತ್ಸವವು ನವೆಂಬರ್ 30ರಂದು ವಿಜೃಂಭಣೆಯಿ0ದ ನಡೆಯಲಿದೆ. ಶ್ರೀ ಅಯ್ಯಪ್ಪ ಮಂದಿರ ಟ್ರಸ್ಟ್ (ರಿ.) ಹಾಗೂ ಶ್ರೀ ಅಯ್ಯಪ್ಪ ಸೇವಾ ಸಮಿತಿ ಸೋಮೇಶ್ವರ ಸಹಯೋಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಿಗ್ಗೆ 6;30ಕ್ಕೆ ಗಣಹೋಮ, ಬಿಂಬಶುದ್ಧಿ, ಕಲಶಪೂಜೆ ನಡೆಯಲಿದೆ. ಬೆಳಿಗ್ಗೆ ಗಂಟೆ 8;30ರಿಂದ ಮಾತೆಯರಿಂದ `ಲಲಿತ ಸಹಸ್ರನಾಮ’ಪಠಣ, ಕಲಶಾಭಿಷೇಕ, ತುಪ್ಪಾಭಿಷೇಕ, ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ 12;30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.ಮಧ್ಯಾಹ್ನ2;30ರಿಂದ ಭಜನಾ ಸಂಕೀರ್ತನೆ ಮೊಳಗಲಿದ್ದು, ರಾತ್ರಿ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6;30ರಿಂದ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ “ನೃತ್ಯ ಕಾರ್ಯಕ್ರಮ’ ನಾಟ್ಯ ಶಿಕ್ಷಕಿಯಾದ ಸುಶ್ಮಿತಾ ಬ್ರಿಜೇಶ್ ಶೆಟ್ಟಿ ಇವರ ಶಿಷ್ಯರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಪ್ರಖ್ಯಾತ ಗಾಯಕಿ ಶ್ರೀಮತಿ…
Author: UllalaVani
ಸುಳ್ಯ, ನ. 19 : ಬೋರುಗುಡ್ಡೆ ಅಬ್ಬುಲ ಅಡ್ಕತ್ಬೈಲ್ ಅವರ ಮನೆಯಲ್ಲಿ ನ.19ರಂದು ಮುಂಜಾನೆ ಉಪಹಾರ ತಯಾರಿಸುವ ವೇಳೆ ಗ್ಯಾಸ್ ಸ್ಟೌವ್ ನಲ್ಲಿ ಇದ್ದ ಕುಕ್ಕರ್ ಸಿಡಿದು ಅಡುಗೆಮನೆಗೆ ಹಾನಿಯಾಗಿ ಮನೆಯವರು ಅಪಾಯದಿಂದ ಪಾರಾಗಿರುವ ಘಟನೆ ಸುಳ್ಯದಲ್ಲಿ ವರದಿಯಾಗಿದೆ. ಬೆಳಗಿನ ಉಪಹಾರ ತಯಾರಿಸುವ ವೇಳೆ ಗ್ಯಾಸ್ ಒಲೆಯ ಮೇಲೆ ಇಟ್ಟಿದ್ದ ಕುಕ್ಕರ್ ಹಠಾತ್ ಸಿಡಿದ ಪರಿಣಾಮ ಅಡುಗೆಮನೆಯ ಗೋಡೆ, ಟೈಲ್ಸ್, ಮೇಲ್ಚಾವಣಿ ಹಾಗೂ ಅಡುಗೆ ಸಾಮಾನುಗಳು ಹಾನಿಗೊಳಗೊಂಡಿವೆ.ಘಟನೆ ಸಂಭವಿಸಿದ ವೇಳೆ ಮನೆಮಂದಿ ಅಡುಗೆಮನೆ ಸಮೀಪದಲ್ಲೇ ಇದ್ದರೂ, ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯ ಅಥವಾ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ತುಂಬು ಗರ್ಭಿಣಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಮಹಿಳೆ ಸಮನ್ವಿತಾ ಧಾರೇಶ್ವರ್ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಮಗುವಿಗೆ ಜನ್ಮ ನೀಡಲು ಕೆಲವೇ ಕೆಲವು ವಾರಗಳು ಬಾಕಿ ಉಳಿದಿದ್ದವು. ಸಮನ್ವಿತಾ ಧಾರೇಶ್ವರ್ ತನ್ನ ಪತಿ ಮತ್ತು ಮೂರು ವರ್ಷದ ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಶುಕ್ರವಾರ ರಾತ್ರಿ 8 ಗಂಟೆಗೆ ಹಾರ್ನ್ಸ್‌ಬೈಯ ಜಾರ್ಜ್ ಸ್ಟ್ರೀಟ್‌ನಲ್ಲಿ ಧಾರೇಶ್ವರ್ ಮತ್ತು ಅವರ ಕುಟುಂಬವು ಪಾದಚಾರಿ ಮಾರ್ಗವನ್ನು ದಾಟಲು ಪ್ರಯತ್ನಿಸಿತ್ತು. ಆ ಸಮಯದಲ್ಲಿ ಕಿಯಾ ಕಾರ್ನಿವಲ್ ಕಾರು ಕಾರು ನಿಧಾನಗೊಳಿಸಿತ್ತು, ಆದರೆ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಆ ಡಿಕ್ಕಿ ಪರಿಣಾಮ ಕಿಯಾ ಕಾರು ಮುಂದಕ್ಕೆ ದೂಡಿದಂತಾಗಿ ಪಾರ್ಕ್ ಕಡೆಗೆ ದಾಟುತ್ತಿದ್ದ ಮೂವರಿಗೂ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಸಮನ್ವಿತಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಸಮನ್ವಿತಾ ಹಾಗೂ ಅವರ ಗರ್ಭದಲ್ಲಿರುವ ಮಗುವನ್ನು ಉಳಿಸಲು…
ಉಳ್ಳಾಲ ನಗರ ಸಭೆಯಲ್ಲಿ ಸತತವಾಗಿ ದಾಖಲೆ 6 ಬಾರಿ ಸದಸ್ಯರಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ಗಮನಾರ್ಹ ಸಾಧನೆಯನ್ನು ಗುರುತಿಸಿ 2025-26ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾಗಿದ್ದ ಹಾಲಿ ಸದಸ್ಯ ಮೊಹಮ್ಮದ್ ಮುಕ್ಕಚೇರಿ ಯವರು ಅನಾರೋಗ್ಯಕ್ಕಾಗಿ ಕಣಚೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವರಿಗೆ ಜಿಲ್ಲಾಡಳಿತದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯ ಆಗಿರಲಿಲ್ಲ .ಇದೀಗ ಜಿಲ್ಲಾಧಿಕಾರಿ ಗಳ ಪ್ರತಿನಿಧಿಯಾಗಿ ಸಹಾಯಕ ಜಿಲ್ಲಾಧಿಕಾರಿ ಯವರು ಇಂದು ಕಣಚೂರ್ ಆಸ್ಪತ್ರೆಗೆ ಭೇಟಿ ಮೊಹಮ್ಮದ್ ಮುಕ್ಕಚೇರಿ ಯವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರಿಗೆ ಉತ್ತಮ ಆರೋಗ್ಯದಲ್ಲಿ ಇರಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ ಮೊಹಮ್ಮದ್ ಮುಕ್ಕಚೇರಿ ರನ್ನು ಶಾಲು ಹೊದಿಸಿ ಆಕರ್ಷಕ _ನಗದು ಬಹುಮಾನದೊಂದಿಗೆ ಸನ್ಮಾನಿಸಿ ಶೀಘ್ರ ಆರೋಗ್ಯ ಚೇತರಿಸಿ ಕೊಳ್ಳಲು ಹಾರೈಸಿತು . ನಿಯೋಗದಲ್ಲಿ ಬ್ಲಾಕ್ ಅಧ್ಯಕ್ಷ ರಮೇಶ್ ಶೆಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್,ಸಿಟಿ ಕಾಂಗ್ರೆಸ್ ಅಧ್ಯಕ್ಷ ಮುಸ್ತಫ ಅಬ್ದುಲ್ಲಾ,ಬ್ಲಾಕ್…
ನೀರು ವ್ಯತ್ಯಯದಿಂದಾಗಿ ಪಡೀಲ್, ಮರೋಳಿ, ಕಂಕನಾಡಿ, ಮಂಗಳಾದೇವಿ, ಜೆಪ್ಪು ಪನ್ನೀರ್, ಮುಳಿಹಿತ್ತು ಬೋಳಾರ, ಕಾರ್ ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್ ಬ್ಯಾಂಕ್, ಶಕ್ತಿನಗರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಅಳಪೆ, ಅತ್ತಾವರ, ಉಲ್ಲಾಸ್ ನಗರ, ಚಿಲಿಂಬಿ, ಕೋಡಿಕಲ್, ಉರ್ವಾ ಸ್ಟೋರ್, ಅಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್, ಕಾವೂರು, ಮರಕದ ಮುಂತಾದ ಭಾಗದಲ್ಲಿ ನೀರು ಸರಬರಾಜಿನಲ್ಲಿ ತೊಂದರೆಯಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ರೇಚಕ ಸ್ಥಾವರದಿಂದ ಸಂಪರ್ಕಿಸುವ 1100 ಮಿಮೀ ವ್ಯಾಸದ ಮುಖ್ಯ ಕೊಳವೆ ಅಡ್ಯಾರ್ ಕಣ್ಣೂರಿನಲ್ಲಿ ಒಡೆದು ಹೋಗಿದೆ. ಖಾಸಗಿ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಈ ವೇಳೆ ನೀರಿನ ಪೈಪ್ ಮೇಲೆ ಮಣ್ಣು ತುಂಬಿದ್ದರಿಂದ ಹಾನಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ಬಾರಿ ಎನ್ನಾರ್ಸಿ ವಿರುದ್ಧ ನಡೆದ ಪ್ರತಿಭಟನೆಗೆ ಬಳಕೆಯಾಗಿದ್ದ ಮೈದಾನದಲ್ಲಿ ಖಾಸಗಿಯವರು ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಭಾರೀ ಪ್ರಮಾಣದಲ್ಲಿ ಹೆದ್ದಾರಿಗೆ ಸಂಪರ್ಕಕ್ಕಾಗಿ ಮಣ್ಣು ಹಾಕಲಾಗಿದೆ. ತುಂಬೆಯಿಂದ ನೀರು ಪೂರೈಸುವ ಕೊಳವೆಯ…
ಪಜೀರು: ಬ್ಯಾನರ್ ಅಳವಡಿಕೆ ಕೆಲಸ ನಿರ್ವಹಿಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಸುರತ್ಕಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪಜೀರು ಗ್ರಾಮದ ಭಾಸ್ಕರ ಪೂಜಾರಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ನ.11 ರಂದು ಸುರತ್ಕಲ್‌ನಲ್ಲಿ ತನ್ನ ವೃತ್ತಿಯಾದ ಬ್ಯಾನರ್ ಅಳವಡಿಕೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಮಾರಣಾಂತಿಕವಾಗಿ ಗಾಯವಾಗಿತ್ತು. ಕೂಡಲೇ ಹತ್ತಿರದ ಮುಕ್ಕದಲ್ಲಿರುವ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿ ತಲೆಯ ಭಾಗಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ಭಾಸ್ಕರ್ ಪುಜಾರಿ ಕಡು ಬಡತನದ ಕುಟುಂಬದವರಾಗಿದ್ದು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಚಿಕ್ಕ ಪ್ರಾಯದಲ್ಲೇ ಕುಟುಂಬದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡವರು. ತನ್ನ ಸ್ವಂತ ಪರಿಶ್ರಮದಿಂದ ತನ್ನ ಮೂರು ಸಹೋದರಿಯರಿಗೆ ಮದುವೆ ಮಾಡಿ, ಕಳೆದ 5 ತಿಂಗಳ ಹಿಂದೆ ತೀರಾ ಬಡ ಕುಟುಂಬದ ಹುಡುಗಿಯನ್ನು ವಿವಾಹವಾಗಿರುತ್ತಾರೆ.ಕಳೆದ ಒಂದು ವಾರದಲ್ಲಿ ಚಿಕಿತ್ಸಾ ವೆಚ್ಚ ಸುಮಾರು 7 ಲಕ್ಷದಷ್ಟು ಆಗಿರುತ್ತದೆ. ತೀರಾ ಗಂಭೀರ ಪರಿಸ್ಥಿತಿಯ ಕಾರಣ…
ಮಂಗಳೂರು,ನ.19: ಮಂಗಳೂರು, ಕೋಟೆಕಾರ್ ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್‌ನಲ್ಲಿ ಪ್ರತಿವಾರ ನಡೆಯುವ ಸ್ವಲಾತ್ ಮಜ್ಲಿಸ್‌ನ 26ನೆ ವಾರ್ಷಿಕ ಹಾಗೂ 3ದಿವಸಗಳ ಧಾರ್ಮಿಕ ಪ್ರವಚನವು ನವಂಬರ್ .28ರಿಂದ 30ರವರೆಗೆ ರಾತ್ರಿ 8:00ಕ್ಕೆ ಮಸೀದಿಯ ಅಧ್ಯಕ್ಷ ಕೆ,ಪಿ,ಹುಸೈನ್ ಸಅದಿ ಕೆ ಸಿ ರೋಡ್ ಅಧ್ಯಕ್ಷತೆಯಲ್ಲಿ ಜರಗಲಿದೆ. ಅಸೈಯದ್ ಶರಫುದ್ದೀನ್ ತಂಙಳ್ ಅಲ್ ಹೈದ್ರೂಸಿ ನೇತೃತ್ವವಹಿಸುವ ಕಾರ್ಯಕ್ರಮದಲ್ಲಿ ಅಲ್ ಹಿದಾಯ ಜುಮಾ ಮಸ್ಜಿದ್ ಖತೀಬ್ ಬಹು ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಮುಖ್ಯಬಾಷಣ ಮಾಡಲಿದ್ದಾರೆ.ನವೆಂಬರ್ 29 ರಂದು ಬಹು ಅಬ್ದುರ್ರಶಿದ್ ಸಖಾಫಿ ಖಾಮಿಲ್ ತಲಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಹು ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮುಖ್ಯ ಬಾಷಣ ಮಾಡಲಿದ್ದು, ನ.30 ರಂದು ನಡೆಯುವ ಬೃಹತ್ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದ ಉದ್ಘಾಟನೆಯನ್ನು ಬಹು ಇಬ್ರಾಹಿಮ್ ಫೈಝಿ ಖತೀಬ್ 407 ಜುಮಾ ಮಸ್ಜಿದ್ ಉಚ್ಚಿಲ ನೆರವೇರಿಸಲಿದ್ದಾರೆ. ಸ್ವಲಾತ್ ನೇತೃತ್ವವನ್ನು ಹಾಗೂ ಇದೇ ವೇಳೆ ಭಾಷಣವನ್ನುಬಹು ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್…
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಪಾರ್ವತಿ ಸಿದ್ದರಾಮಯ್ಯ ಅವರಿಗೆ ಶ್ವಾಸಕೋಶ ಸಂಬಂಧಿತ ತೊಂದರೆ ಕಾಣಿಸಿಕೊಂಡಿದ್ದು, ಆಸ್ಪತ್ರೆಯ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
ಮಂಗಳೂರು, ನ. 18 : ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ವಾಟ್ಸಾಪ್ ಸಂಖ್ಯೆಯನ್ನು ನವೆಂಬರ್ 17ರ ಮಧ್ಯಾಹ್ನ ಹ್ಯಾಕ್ ಮಾಡಲಾಗಿದೆ. ವಂಚಕರು ಅವರ ಪ್ರೊಫೈಲ್ ಬಳಸಿಕೊಂಡು ಹಲವಾರು ಮಂದಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಾವಾ ಅವರಿಗೆ ಪರಿಚಯವಿರುವ ಪತ್ರಕರ್ತರು, ಪೊಲೀಸ್ ಅಧಿಕಾರಿಗಳು ಮತ್ತು ಇತರರಿಗೆ ಅವರ ಸಂಖ್ಯೆಯಿಂದ ತುರ್ತು ಆರ್ಥಿಕ ಸಹಾಯಕ್ಕಾಗಿ ಸಂದೇಶಗಳನ್ನು ಕಳುಸಲಾಗಿದೆ. ಹ್ಯಾಕರ್‌ಗಳು “ನನಗೆ ನಿಮ್ಮ ಸಹಾಯ ಬೇಕು” ಎಂಬ ಸಂದೇಶವನ್ನು ಕಳುಹಿಸಿದ್ದಾರೆ.”ಏನಾಯಿತು, ಬಾವಾ?” ಎಂದು ಕೆಲವರು ಪ್ರತಿಕ್ರಿಯಿಸಿದಾಗ, ಹ್ಯಾಕರ್‌ಗಳು ಇಂಗ್ಲಿಷ್‌ನಲ್ಲಿ ವಿಸ್ತೃತ ಕಥೆಗಳನ್ನು ಕಳುಹಿಸಿ, ನಂತರ ಬೇರೊಂದು ಯುಪಿಐ ಐಡಿಗೆ ಹಣವನ್ನು ವರ್ಗಾಯಿಸುವಂತೆ ವಿನಂತಿಸಿದ್ದಾರೆ. ಹಣ ಪಾವತಿಸಿದ ನಂತರ ಅದರ ಸ್ಕ್ರೀನ್‌ಶಾಟ್ ಕಳುಹಿಸುವಂತೆ ಸಹ ಅವರು ಬೇಡಿಕೆ ಇಟ್ಟಿದ್ದಾರೆ.ಬಾವಾ ಅವರ ನಂಬರ್ ನಿಂದ ಸಂದೇಶಗಳನ್ನು ಸ್ವೀಕರಿಸಿದ ಕೆಲವರು ನೇರವಾಗಿ ಬಾವಾ ಅವರಿಗೆ ಕರೆ ಮಾಡಿ ಸತ್ಯವನ್ನು ಪರಿಶೀಲಿಸಿದ್ದಾರೆ. ಈ ವಿಚಾರ ತಿಳಿದು ದಿಗ್ಭ್ರಮೆಗೊಂಡ ಮಾಜಿ ಶಾಸಕರು, ತಮ್ಮ ವಾಟ್ಸಾಪ್ ಸಂಖ್ಯೆ ನಿಜವಾಗಿಯೂ ಹ್ಯಾಕ್ ಆಗಿರುವುದು…
ಕಾಂಗೋ, ನ. 18 : ಸೇತುವೆ ಕುಸಿದು 32 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಕಾಂಗೋದಲ್ಲಿ ತಾಮ್ರದ ಗಣಿ ಬಳಿ ನಡೆದಿದೆ. ಗಣಿ ಬಳಿ ಗುಂಡಿನ ಸದ್ದು ಕೇಳಿಬಂದಿತ್ತು, ಜನರು ಭಯದಿಂದ ಸೇತುವೆ ಮೇಲೆ ಓಡಿ ಹೋದ ಪರಿಣಾಮ ಸೇತುವೆ ಕುಸಿದು 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿದಿನ ನೂರಾರು ಗಣಿಗಾರರು ಕೆಲಸ ಮಾಡುವ ಲುವಾಲಾಬಾ ಪ್ರಾಂತ್ಯದ ಕಲಾಂಡೋ ಗಣಿಗಾರಿಕೆ ಸ್ಥಳದಲ್ಲಿ ಈ ಅವಘಡ ಸಂಭವಿಸಿದೆ. ಆ ಪ್ರದೇಶವನ್ನು ಕಾವಲು ಕಾಯುತ್ತಿದ್ದ ಮಿಲಿಟರಿ ಸಿಬ್ಬಂದಿ ಗುಂಡು ಹಾರಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಹಿಂಸಾಚಾರಕ್ಕೆ ಹೆದರಿ, ಜನರು ಸ್ಥಳದಿಂದ ಹೊರಬರಲು ಸಾಮಾನ್ಯವಾಗಿ ಬಳಸಲಾಗುವ ಕಿರಿದಾದ ಸೇತುವೆಯತ್ತ ಧಾವಿಸಿದರು. ಓಡಿಹೋಗುತ್ತಿದ್ದ ಜನಸಮೂಹದ ಹಠಾತ್ ಒತ್ತಡದಿಂದ ಸೇತುವೆ ಕುಸಿದುಬಿದ್ದಿತ್ತು. 20 ಕ್ಕೂ ಹೆಚ್ಚು ಗಣಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ

