ಮಾಡೂರು ; ಶಿರ್ಡಿ ಸಾಯಿ ಬಾಬಾ ಮಂದಿರದಲ್ಲಿ “ಹೇ ಸಾಯಿನಾಥ” ಎಂಬ ಕನ್ನಡ ಭಕ್ತಿಪ್ರಧಾನ ಗೀತೆ ಬಿಡುಗಡೆಗೊಂಡಿದೆ.

ತೃಪ್ತಿ ಉಚ್ಚಿಲ ಅವರ ಕಂಠಸಿರಿಯಲ್ಲಿ ಹಾಡು ಮೂಡಿ ಬಂದಿದ್ದು, ಸತ್ಯನಾರಾಯಣ್ ಐಲ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನವೀನ್ ಬೆಲ್ಚಡ ಅಡ್ಕ ಅವರ ಸಾಹಿತ್ಯವಿದ್ದು, ಬತು ಕುಳಾಲ್ ಅವರ ಕೈಚಳಕದಲ್ಲಿ ಸುಮಧುರ ಗೀತೆ ನಿರ್ಮಾಣಗೊಂಡಿದೆ. ಮಂದಿರದ ಅರ್ಚಕರಾದ ಎನ್ ವಿಶ್ವನಾಥ ಶಾಂತಿ ಭಟ್ ಅವರು ಭಕ್ತಿಗೀತೆ ರಚನೆಯ ಬಗ್ಗೆ ಮತನಾಡಿದ್ದಾರೆ.

ಇದೇ ವೇಳೆ ಕೆ ಟಿ ಸುವರ್ಣ ಅವರು ಮಾತನಾಡಿ, ಒಂದೊಳ್ಳೆಯ ಸಾಹಿತ್ಯ, ಸಂಗೀತದ ಜೊತೆ ಸಾಯಿನಾಥರ ಭಕ್ತಿಗೀತೆ ಚೆನ್ನಾಗಿ ಮೂಡಿಬಂದಿದೆ. ಇಂತಹ ಹಲವು ಹಾಡುಗಳನ್ನು ರಚಿಸುವಂತಾಗಲಿ ಎಂದು ಹಾರೈಸಿದ್ರು. ಇನ್ನು ಈ ಭಕ್ತಿಗೀತೆ ತೃಪ್ತಿ ಉಚ್ಚಿಲ್ ಯೂಟ್ಯುಬ್ ಚಾನಲ್‌ನಲ್ಲಿ ಲಭ್ಯವಿದೆ. ಇದೇ ಸಂದರ್ಭ ಗಾಯಕಿ ತೃಪ್ತಿ ಉಚ್ಚಿಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಮಂದಿರದ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ರು.



