ಪಿಲಾರು:ಪಿಲಾರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಅಂಗವಾಗಿ ಅಂಬೇಡ್ಕರ್‌ರವರ ಭಾವಚಿತ್ರ ಬಿಡಿಸುವ ಮತ್ತು ಭಾವಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆಯನ್ನು ಅಂಬೇಡ್ಕರ್ ವಿದ್ಯಾನಿಧಿ ಟ್ರಸ್ಟ್ ಉಳ್ಳಾಲ ತಾಲೂಕು ವತಿಯಿಂದ ಆಯೋಜಿಸಲಾಯಿತು.

ಕಾರ್ಯಕ್ರಮದ ವೇದಿಕೆಯನ್ನು ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಉದ್ಘಾಟಿಸಿ ,ಚಿತ್ರಕಲಾ ಸ್ಪರ್ಧೆ ವಿಷಯದ ಕುರಿತು ಮಾತನಾಡಿದರು.
ಪ್ರಾಸ್ತಾವಿಕವಾಗಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಟ್ರಸ್ಟ್ ನ ಸ್ಥಾಪಕಧ್ಯಕ್ಷರಾದ ಯಾದವ ಮಾತನಾಡಿದರು.
ಈ ಸಂದರ್ಭದಲ್ಲಿ ಗೀತಾ ಡಿ.ಗಟ್ಟಿ, ಶಾಲಾ ಅಭಿವೃದ್ಧಿಯ ಉಪಾಧ್ಯಕ್ಷರಾದ ನಂದಾದೀಪ, ಗ್ರೇಟ್ಟ ಡಿಸೋಜಾ, ಶಾಲಾ ಶಿಕ್ಷಕಿರಾಗಿರುವ ರೇಸಿ ಡಿ’ಸೋಜಾ, ರೇಣುಕಾ, ರಮ್ಯ, ಅಡುಗೆ ಸಹಾಯಕರಾಗಿರುವ ಅರುಣ ಕುಮಾರಿ, ಲಲಿತ ಉಪಸ್ಥಿತರಿದ್ದರು.

