Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಮಂಗಳೂರು: ರಾಜ್ಯಾದ್ಯಂತ E-FIR ವ್ಯವಸ್ಥೆ ಜಾರಿಗೆ ‘ದಾರಿ’ ಸಂಘಟನೆ ಆಗ್ರಹ

UllalaVaniBy UllalaVaniNovember 23, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು: ಪೊಲೀಸ್ ಠಾಣೆಗೆ ಖುದ್ದಾಗಿ ತೆರಳದೆ ಎಲೆಕ್ಟ್ರಾನಿಕ್ ಮೂಲಕ ಅಪರಾಧದ ಮಾಹಿತಿ ಸಲ್ಲಿಸಿ E-FIR ದಾಖಲಿಸುವ ವ್ಯವಸ್ಥೆಯನ್ನು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ‘ದಾರಿ’ ಮಂಗಳೂರು ಸಾಮಾಜಿಕ ಸಂಘಟನೆ ರಾಜ್ಯ ಸರ್ಕಾರ, ಗೃಹ ಇಲಾಖೆ ಹಾಗೂ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರಿಗೆ (DG & IGP) ಮನವಿ ಸಲ್ಲಿಸಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಸೆಕ್ಷನ್ 173(1)ರ ಪ್ರಕಾರ ಸಂಜ್ಞೇಯ ಅಪರಾಧಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮೌಖಿಕವಾಗಿ ಅಥವಾ ಎಲೆಕ್ಟ್ರಾನಿಕ್ ಸಂವಹನದ ಮೂಲಕ ಪೊಲೀಸ್ ಠಾಣಾಧಿಕಾರಿಗೆ ಸಲ್ಲಿಸಲು ಅವಕಾಶವಿದೆ. ಎಲೆಕ್ಟ್ರಾನಿಕ್ ಮೂಲಕ ಮಾಹಿತಿ ಸಲ್ಲಿಸಿದವರು ಮೂರು ದಿನಗಳೊಳಗೆ ಸಹಿ ಮಾಡಬೇಕೆಂಬ ನಿಯಮವೂ ಇದೆ. ಈ ಕಾನೂನು ಸೌಲಭ್ಯವು ಸೈಬರ್ ಅಪರಾಧಗಳಿಗೆ ಮಾತ್ರ ಸೀಮಿತವಾಗಿರದೆ ಕೊಲೆ, ಅತ್ಯಾಚಾರ, ಅಪಹರಣ, ಹಲ್ಲೆ, ಕಳ್ಳತನ, ದರೋಡೆ ಹಾಗೂ ವಂಚನೆ ಸೇರಿದಂತೆ ವಿವಿಧ ಸಂಜ್ಞೇಯ ಅಪರಾಧಗಳಿಗೂ ಅನ್ವಯಿಸುತ್ತದೆ ಎಂದು ಸಂಘಟನೆ ತಿಳಿಸಿದೆ.

ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆಯ ಅಧಿಕೃತ ಇ-ಮೇಲ್ ವಿಳಾಸ, ಸುರಕ್ಷಿತ ಆನ್‌ಲೈನ್ ಪೋರ್ಟಲ್ ಹಾಗೂ ಮೊಬೈಲ್ ಆಧಾರಿತ ದೂರು ಸಲ್ಲಿಕೆ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಒದಗಿಸಬೇಕು. ಎಲೆಕ್ಟ್ರಾನಿಕ್ ಮೂಲಕ ಸಲ್ಲಿಸಿದ ದೂರಿಗೆ ತಕ್ಷಣ ಸ್ವೀಕೃತಿ ಸಂಖ್ಯೆ ನೀಡುವುದರ ಜೊತೆಗೆ, ದೂರಿನ ಪ್ರಸ್ತುತ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ವ್ಯವಸ್ಥೆಯಿಂದ ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರು, ವಿದ್ಯಾರ್ಥಿಗಳು ಹಾಗೂ ಪೊಲೀಸ್ ಠಾಣೆಗೆ ತೆರಳಲು ಸಾಧ್ಯವಾಗದ ಸಂತ್ರಸ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ BNSS ಸೆಕ್ಷನ್ 173ರ ಕುರಿತು ಕಾನೂನು ಅರಿವು ಮೂಡಿಸಬೇಕು. ಕಾನೂನು ವಿದ್ಯಾರ್ಥಿಗಳು, ವಕೀಲರು ಹಾಗೂ ತಜ್ಞರು ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ನೀಡುವಂತಾಗಬೇಕು ಎಂದು ಸಂಘಟನೆ ಆಶಿಸಿದೆ.

ರಾಜ್ಯದ ಶಾಸಕರು ಮತ್ತು ಸಂಸದರು ತಮ್ಮ ಕ್ಷೇತ್ರಗಳಲ್ಲಿ E-FIR ವ್ಯವಸ್ಥೆಯ ಅನುಷ್ಠಾನದ ಕುರಿತು ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಬೇಕು. ವಿಧಾನಸಭೆ ಮತ್ತು ಸಂಸತ್ತಿನಲ್ಲಿಯೂ ಈ ವಿಚಾರ ಪ್ರಸ್ತಾಪಿಸಿ, ಡಿಜಿಟಲ್ ದೂರು ಸ್ವೀಕಾರ ವ್ಯವಸ್ಥೆ ಜಾರಿಗೆ ಒತ್ತಾಯಿಸಬೇಕು ಎಂದು ಮನವಿ ಮಾಡಲಾಗಿದೆ.

ಇದೇ ವೇಳೆ, ಎಲೆಕ್ಟ್ರಾನಿಕ್ ಮೂಲಕ ಅಪರಾಧದ ಮಾಹಿತಿ ಸಲ್ಲಿಸುವುದು ಮತ್ತು E-FIR ದಾಖಲಿಸುವುದರ ನಡುವಿನ ಕಾನೂನು ವ್ಯತ್ಯಾಸವನ್ನು ಸ್ಪಷ್ಟಪಡಿಸುವ ರಾಜ್ಯಮಟ್ಟದ ಮಾರ್ಗಸೂಚಿ ಹೊರಡಿಸಬೇಕು. BNSS ಸೆಕ್ಷನ್ 173ರಡಿ ಸಲ್ಲಿಕೆಯಾಗುವ ಪ್ರತಿಯೊಂದು ಆನ್‌ಲೈನ್ ದೂರೂ ಸ್ವಯಂಚಾಲಿತವಾಗಿ FIR ಆಗುವುದಿಲ್ಲ. ಸಂಜ್ಞೇಯ ಅಪರಾಧದ ಮಾಹಿತಿ ಮತ್ತು ಕಾನೂನು ಪ್ರಕ್ರಿಯೆಯ ಆಧಾರದಲ್ಲಿ FIR ದಾಖಲಿಸುವ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಸ್ಪಷ್ಟಪಡಿಸಿದೆ.

ಗಂಭೀರ ಅಪರಾಧಗಳ ಮಾಹಿತಿಯನ್ನು ಎಲೆಕ್ಟ್ರಾನಿಕ್ ಮೂಲಕ ಸ್ವೀಕರಿಸಿದಾಗ ವಿಳಂಬವಿಲ್ಲದೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಜವಾಬ್ದಾರಿ ನಿಗದಿಪಡಿಸಬೇಕು. ಕಾನೂನಿನಲ್ಲಿ ನಾಗರಿಕರಿಗೆ ನೀಡಿರುವ ಹಕ್ಕುಗಳು ಕೇವಲ ದಾಖಲೆಗಳಿಗೆ ಸೀಮಿತವಾಗದೆ, ತಂತ್ರಜ್ಞಾನದ ಮೂಲಕ ಜನರಿಗೆ ಸುಲಭವಾಗಿ ನ್ಯಾಯ ದೊರೆಯುವಂತಾಗಬೇಕು. ಪೊಲೀಸ್ ಠಾಣೆಗೆ ತೆರಳಲು ಸಾಧ್ಯವಾಗದ ಕಾರಣಕ್ಕೆ ಯಾವುದೇ ಸಂತ್ರಸ್ತನ ದೂರು ನಿರ್ಲಕ್ಷ್ಯಕ್ಕೆ ಒಳಗಾಗಬಾರದು ಎಂದು ‘ದಾರಿ’ ಮಂಗಳೂರು ಸಾಮಾಜಿಕ ಸಂಘಟನೆ ಆಗ್ರಹಿಸಿದೆ.

ಜನಹಿತ, ಪಾರದರ್ಶಕ ಆಡಳಿತ ಹಾಗೂ ಡಿಜಿಟಲ್ ನ್ಯಾಯ ವ್ಯವಸ್ಥೆಗೆ ಒತ್ತು ನೀಡುತ್ತಿರುವ ‘ದಾರಿ’ ಮಂಗಳೂರು ಸಂಘಟನೆಯು ಈ ಸಂಬಂಧ ಕರ್ನಾಟಕ ಸರ್ಕಾರ, ರಾಜ್ಯ ಗೃಹ ಇಲಾಖೆ ಹಾಗೂ DG & IGP ಅವರಿಗೆ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿ, ರಾಜ್ಯಾದ್ಯಂತ E-FIR ಮತ್ತು ಎಲೆಕ್ಟ್ರಾನಿಕ್ ದೂರು ಸ್ವೀಕಾರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಡುಪಿ : ಪರಶುರಾಮ ಥೀಮ್ ಪಾರ್ಕ್ ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹ – ವಾಹನಗಳ ಬೃಹತ್ ರ‍್ಯಾಲಿ

November 23, 2026

ಬಂಟರ ಸಂಘದ ವಿನೂತನ ಕಲ್ಪನೆ ಸರ್ವರಿಗೂ ಮಾದರಿ: ಕ್ಯಾ. ಬ್ರಿಜೇಶ್ ಚೌಟ

November 23, 2026

ಸಂತ ಅಲೋಶಿಯಸ್ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ ಸಂಭ್ರಮ

November 21, 2026

Comments are closed.

Advertise
ಸಂಪರ್ಕಿಸಿ

ಮೈಸೂರು ಬಾವ ಜನ್ಮದಿನಕ್ಕೆ ಹಿಂದೂ ಗೆಳೆಯರಿಂದ ಸೌಹಾರ್ದದ ಸಂಭ್ರಮ; ಆಶ್ರಮದಲ್ಲಿ ಅನ್ನದಾನ, ಸಾರ್ವಜನಿಕರಿಗೆ ಪಾನೀಯ ವಿತರಣೆ ನಾಟೆಕಲ್‌ನಿಂದ ದೇರಳಕಟ್ಟೆವರೆಗೆ ಬ್ಯಾನರ್‌ಗಳ ಮೂಲಕ ಶುಭಾಶಯ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

November 15, 2026

ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಕೊಳೆತ ತರಕಾರಿ, ಕಲಬೆರಕೆ ಟೀ ಪುಡಿ ಪತ್ತೆ

October 28, 2026

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026
suddi

ಮಂಗಳೂರು: ರಾಜ್ಯಾದ್ಯಂತ E-FIR ವ್ಯವಸ್ಥೆ ಜಾರಿಗೆ ‘ದಾರಿ’ ಸಂಘಟನೆ ಆಗ್ರಹ

By UllalaVaniNovember 23, 20260

ಮಂಗಳೂರು: ಪೊಲೀಸ್ ಠಾಣೆಗೆ ಖುದ್ದಾಗಿ ತೆರಳದೆ ಎಲೆಕ್ಟ್ರಾನಿಕ್ ಮೂಲಕ ಅಪರಾಧದ ಮಾಹಿತಿ ಸಲ್ಲಿಸಿ E-FIR ದಾಖಲಿಸುವ ವ್ಯವಸ್ಥೆಯನ್ನು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ…

ಉಡುಪಿ : ಪರಶುರಾಮ ಥೀಮ್ ಪಾರ್ಕ್ ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹ – ವಾಹನಗಳ ಬೃಹತ್ ರ‍್ಯಾಲಿ

November 23, 2026

ಪಂಪಾ ನದಿಗೆ ಬಟ್ಟೆ ಎಸೆದರೆ ಗರಿಷ್ಠ 5,000 ದಂಡ; ಶಬರಿಮಲೆ ಯಾತ್ರಾರ್ಥಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ

November 23, 2026

ಬಂಟರ ಸಂಘದ ವಿನೂತನ ಕಲ್ಪನೆ ಸರ್ವರಿಗೂ ಮಾದರಿ: ಕ್ಯಾ. ಬ್ರಿಜೇಶ್ ಚೌಟ

November 23, 2026
1 2 3 … 2,175 Next
Automatic YouTube Gallery

ಕೊಣಾಜೆ ಪದವಿನಲ್ಲಿ ಉಚಿತ ಹಿಜಾಮ, ಆಕ್ಯುಪ್ರೆಷರ್ ಚಿಕಿತ್ಸಾ ಶಿಬಿರ

ಯೂತ್ ಫ್ರೆಂಡ್ಸ್ ಕ್ಲಬ್ (ರಿ.) ಕೊಣಾಜೆ ವತಿಯಿಂದ; ಸಾರ್ವಜನಿಕ ಉಚಿತ ಹಿಜಾಮ ಚಿಕಿತ್ಸಾ ಶಿಬಿರ ಮತ್ತು ಉಚಿತ ಆಕ್ಯುಪ್ರೆಷರ್ ಚಿಕಿತ್ಸಾ ಶಿಬಿರ

ಕೊಣಾಜೆ ಪದವಿನ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಶಿಬಿರ

📍 Ullal | Dakshina Kannada | Coastal Karnataka ...
News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೊಣಾಜೆ ಪದವಿನಲ್ಲಿ ಉಚಿತ ಹಿಜಾಮ, ಆಕ್ಯುಪ್ರೆಷರ್ ಚಿಕಿತ್ಸಾ ಶಿಬಿರ
Now Playing
ಕೊಣಾಜೆ ಪದವಿನಲ್ಲಿ ಉಚಿತ ಹಿಜಾಮ, ಆಕ್ಯುಪ್ರೆಷರ್ ಚಿಕಿತ್ಸಾ ಶಿಬಿರ
ಯೂತ್ ಫ್ರೆಂಡ್ಸ್ ಕ್ಲಬ್ (ರಿ.) ಕೊಣಾಜೆ ವತಿಯಿಂದ; ಸಾರ್ವಜನಿಕ ಉಚಿತ ಹಿಜಾಮ ...
ಯೂತ್ ಫ್ರೆಂಡ್ಸ್ ಕ್ಲಬ್ (ರಿ.) ಕೊಣಾಜೆ ವತಿಯಿಂದ; ಸಾರ್ವಜನಿಕ ಉಚಿತ ಹಿಜಾಮ ಚಿಕಿತ್ಸಾ ಶಿಬಿರ ಮತ್ತು ಉಚಿತ ಆಕ್ಯುಪ್ರೆಷರ್ ಚಿಕಿತ್ಸಾ ಶಿಬಿರ

ಕೊಣಾಜೆ ಪದವಿನ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಶಿಬಿರ

📍 Ullal | Dakshina Kannada | Coastal Karnataka ...
News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಂಗಳೂರು: ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ &ಬಂಟರ ಗ್ರಾಮ ಪ್ರತಿನಿಧಿ ಸಮ್ಮೇಳನ
Now Playing
ಮಂಗಳೂರು: ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ &ಬಂಟರ ಗ್ರಾಮ ಪ್ರತಿನಿಧಿ ಸಮ್ಮೇಳನ
ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾ. ಸಮಿತಿ ಆಶ್ರಯದಲ್ಲಿ ; ಪುರಭವನದಲ್ಲಿ ...
ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾ. ಸಮಿತಿ ಆಶ್ರಯದಲ್ಲಿ ; ಪುರಭವನದಲ್ಲಿ ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ &ಬಂಟರ ಗ್ರಾಮ ಪ್ರತಿನಿಧಿ ಸಮ್ಮೇಳನ

ಬಂಟರ ಸಂಘದ ವಿನೂತನ ಕಲ್ಪನೆ ಸರ್ವರಿಗೂ ಮಾದರಿ : ಕ್ಯಾ.ಬ್ರಿಜೇಶ್ ಚೌಟ

📍 Ullal | Dakshina ...
Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version