Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಮೈಸೂರು ಬಾವ ಜನ್ಮದಿನಕ್ಕೆ ಹಿಂದೂ ಗೆಳೆಯರಿಂದ ಸೌಹಾರ್ದದ ಸಂಭ್ರಮ; ಆಶ್ರಮದಲ್ಲಿ ಅನ್ನದಾನ, ಸಾರ್ವಜನಿಕರಿಗೆ ಪಾನೀಯ ವಿತರಣೆ ನಾಟೆಕಲ್‌ನಿಂದ ದೇರಳಕಟ್ಟೆವರೆಗೆ ಬ್ಯಾನರ್‌ಗಳ ಮೂಲಕ ಶುಭಾಶಯ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

UllalaVaniBy UllalaVaniNovember 15, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅಂತರ ಸೃಷ್ಟಿಯಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯೇ ನಿಜವಾದ ಮಾನವೀಯತೆ ಎಂಬ ಸಂದೇಶ ಸಾರುವ ವಿಶಿಷ್ಟ ಹುಟ್ಟುಹಬ್ಬದ ಆಚರಣೆಯೊಂದು ಉಳ್ಳಾಲ ಪರಿಸರದಲ್ಲಿ ಗಮನ ಸೆಳೆಯಿತು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಅಬ್ದುಲ್ ಅಝೀಝ್ (ಮೈಸೂರು ಬಾವ) ಅವರ 53ನೇ ಜನ್ಮದಿನವನ್ನು ಅವರ ಹಿಂದೂ ಗೆಳೆಯರು ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅದ್ದೂರಿಯಾಗಿ ಆಚರಿಸಿದರು.
ಸಾಯಿ ಫ್ರೆಂಡ್ಸ್ ಅಸೈಗೋಳಿ ಅಧ್ಯಕ್ಷ ಅಶ್ರಫ್ ನಾಟೆಕಲ್ ಅವರ ಆಶಯದಂತೆ ಸಾಯಿ ಫ್ರೆಂಡ್ಸ್ ಮತ್ತು ಓಂ ಫ್ರೆಂಡ್ಸ್ ಅಸೈಗೋಳಿ ತಂಡದ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ನಾಟೆಕಲ್‌ನಿಂದ ದೇರಳಕಟ್ಟೆವರೆಗೆ ಶುಭಾಶಯದ ಬ್ಯಾನರ್‌ಗಳನ್ನು ಅಳವಡಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಸಾರ್ವಜನಿಕರಿಗೆ ಸಿಹಿ ಪಾನೀಯ ವಿತರಿಸುವುದರೊಂದಿಗೆ ಬಸ್ಸಿನೊಳಗೂ ಪ್ರಯಾಣಿಕರಿಗೆ ಪಾನೀಯ ಹಂಚಿ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು. ಹುಟ್ಟುಹಬ್ಬದ ಅಂಗವಾಗಿ ಮಧ್ಯಾಹ್ನ ಬೆಳ್ಮ ಸೇವಾಶ್ರಮದಲ್ಲಿ ಹಿರಿಯ ನಾಗರಿಕರು ಹಾಗೂ ಆಶ್ರಮವಾಸಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಹಸಿದವರಿಗೆ ಅನ್ನ ನೀಡುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉದಯ್ ಅಂಚನ್ ಕಲ್ಕಟ್ಟ, “ದೇರಳಕಟ್ಟೆಯಿಂದ ನಾಟೆಕಲ್‌ವರೆಗೆ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಅಬ್ದುಲ್ ಅಝೀಝ್ ಅವರ ಹುಟ್ಟುಹಬ್ಬ ಆಚರಿಸುತ್ತಿರುವುದು ಸಂತಸದ ಸಂಗತಿ. ನಮ್ಮ ನಡುವೆ ಸೌಹಾರ್ದತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಆಚರಣೆಯೇ ಸಾಕ್ಷಿ. ಮಂಗಳೂರು ಹಿಂದಿನಂತೆಯೇ ಸರ್ವಧರ್ಮಗಳ ಜನರು ಪ್ರೀತಿ, ವಿಶ್ವಾಸದಿಂದ ಬದುಕುವ ನೆಲೆಯಾಗಬೇಕು. ಎಲ್ಲ ಧರ್ಮದ ಹಬ್ಬಗಳಿಗೂ ಪರಸ್ಪರರ ಮನೆಗಳಿಗೆ ತೆರಳಿ ಸಂಭ್ರಮಿಸುವ ವಾತಾವರಣ ಮತ್ತೆ ನಿರ್ಮಾಣವಾಗಬೇಕು” ಎಂದರು.
ಗಣೇಶ್ ಅಸೈಗೋಳಿ ಮಾತನಾಡಿ, “ಅಬ್ದುಲ್ ಅಝೀಝ್ ಅವರು ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಾಯಿ ಫ್ರೆಂಡ್ಸ್ ಮತ್ತು ಓಂ ಫ್ರೆಂಡ್ಸ್ ತಂಡಗಳ ಮೂಲಕ ಕೊರೊನಾ ಸಂಕಷ್ಟದ ಸಂದರ್ಭದಲ್ಲೂ, ಹಬ್ಬಹರಿದಿನಗಳ ಸಂದರ್ಭದಲ್ಲೂ ಬಡ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ. ವರ್ಷದಲ್ಲಿ ಹಲವು ಬಾರಿ ಅಗತ್ಯ ವಸ್ತುಗಳನ್ನು ಮನೆಗಳಿಗೆ ತಲುಪಿಸುವ ಸೇವಾಕಾರ್ಯ ನಡೆಯುತ್ತಿದೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ಬೆಂಬಲ ನೀಡುವ ಅಬ್ದುಲ್ ಅಝೀಝ್ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ” ಎಂದು ಹೇಳಿದರು.
ನಿವೃತ್ತ ಮುಖ್ಯೋಪಾಧ್ಯಾಯ ಆನಂದ್ ಕೆ. ಅಸೈಗೋಳಿ ಮಾತನಾಡಿ, “ಅಬ್ದುಲ್ ಅಝೀಝ್ ಅವರು ಹುಟ್ಟುವಾಗಲೇ ಬಂಗಾರದ ಚಮಚ ಹಿಡಿದುಕೊಂಡು ಬಂದವರಲ್ಲ. ಕಷ್ಟದ ಬದುಕು ಏನೆಂಬುದನ್ನು ಅರಿತವರು. ಸಮಾಜದಲ್ಲಿ ನೊಂದವರು, ನಿರ್ಗತಿಕರು ಹಾಗೂ ವಿವಿಧ ಸಮಸ್ಯೆಗಳಿಂದ ಆಶ್ರಮ ಸೇರಿರುವ ಹಿರಿಯ ಜೀವಿಗಳಿಗೆ ಅನ್ನದಾನ ಮಾಡುವ ಮೂಲಕ ಅವರ ಹಸಿವು ನೀಗಿಸುವ ಕಾರ್ಯ ಶ್ಲಾಘನೀಯ. ಶ್ರೀಮಂತಿಕೆ ಎಂದರೆ ಆಡಂಬರ ಪ್ರದರ್ಶಿಸುವುದಲ್ಲ; ಕಷ್ಟದಲ್ಲಿರುವವರನ್ನು ಮೇಲೆತ್ತಿ, ಸಮಾಜದೊಂದಿಗೆ ಬೆರೆತು ಬದುಕುವುದಾಗಿದೆ. ಹಿರಿಯ ಜೀವಿಗಳನ್ನು ತಾಯಿಯ ಮಮತೆಯಿಂದ ಸಂತೈಸುವ ಹೃದಯವಂತಿಕೆ ಎಲ್ಲರಲ್ಲೂ ಇರುವುದಿಲ್ಲ. ಅಂತಹ ಮಾತೃ ಹೃದಯ ಅಬ್ದುಲ್ ಅಝೀಝ್ ಅವರಲ್ಲಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಉದ್ಯಮ ನಡೆಸುತ್ತಾ ಬೆಳೆದಿರುವ ಅಬ್ದುಲ್ ಅಝೀಝ್ ಅವರು ಎಲ್ಲರೊಂದಿಗೆ ಬೆರೆಯುವ ಸ್ವಭಾವದವರು. ‘ತನ್ನ ಧರ್ಮವನ್ನು ಪ್ರೀತಿಸು, ಇತರ ಧರ್ಮಗಳನ್ನು ಗೌರವಿಸು’ ಎಂಬ ಉದಾತ್ತ ಆಶಯದೊಂದಿಗೆ ಬದುಕುತ್ತಿರುವ ಅವರು, ಧರ್ಮಗಳ ನಡುವಿನ ಪರಸ್ಪರ ಗೌರವ ಮತ್ತು ಸೌಹಾರ್ದತೆಗೆ ಆದ್ಯತೆ ನೀಡುವವರು.
ಈ ಸಂದರ್ಭದಲ್ಲಿ ಪ್ರೀತಮ್ ಕುಂಪಲ, ರವಿಶಂಕರ್, ಉದಯ್ ಅಂಚನ್ ಕಲ್ಕಟ್ಟ, ಧೀರಜ್ ಪೂಜಾರಿ, ಸುಜಿತ್ ಅಸೈಗೋಳಿ, ಮಧುರಾಜ್ ಅಸೈಗೋಳಿ, ಚೇತನ್ ಕೊಂಚಾಡಿ, ಹರೀಶ್ ಅಸೈಗೋಳಿ, ಪ್ರದೀಪ್ ಕುಮಾರ್, ಸುನಿಲ್ ರಾವ್, ಪ್ರೇಮದಾಸ್ ಕರ್ಕೇರ, ಸುನಿಲ್ ಪೂಜಾರಿ, ಉದಯ ಮಂಜನಾಡಿ, ಮನೋಜ್ ಅಸೈಗೋಳಿ ಸೇರಿದಂತೆ ಸಾಯಿ ಫ್ರೆಂಡ್ಸ್ ಹಾಗೂ ಓಂ ಫ್ರೆಂಡ್ಸ್‌ನ ಸದಸ್ಯರು ಮತ್ತು ಬಂಧುಮಿತ್ರರು ಉಪಸ್ಥಿತರಿದ್ದರು. ಸೌಹಾರ್ದತೆ ಎಂಬುದು ಕೇವಲ ಭಾಷಣಕ್ಕೆ ಸೀಮಿತವಾಗದೆ, ಪರಸ್ಪರರ ಸಂತೋಷದಲ್ಲಿ ಪಾಲ್ಗೊಳ್ಳುವ ಮತ್ತು ಕಷ್ಟದಲ್ಲಿ ನೆರವಾಗುವ ಮನೋಭಾವದಲ್ಲಿ ಅಡಗಿದೆ ಎಂಬುದನ್ನು ಈ ಹುಟ್ಟುಹಬ್ಬದ ಆಚರಣೆ ಮತ್ತೊಮ್ಮೆ ಸಾರಿತು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಸೋಮೇಶ್ವರದಲ್ಲಿ ಜಿಲ್ಲಾ ಮಟ್ಟದ ಯೋಗ ಶಿಕ್ಷಣ ಪ್ರಶಿಕ್ಷಣ ಶಿಬಿರಕ್ಕೆ ಚಾಲನೆ

November 13, 2026

ಬಂಟ್ವಾಳ: ಹಣ ಸಂಗ್ರಹಿಸಿ ಗ್ರಾಮಸ್ಥರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ನೀಡಿದ ಬಂಟಿಕಲ್ಲು ಆಟೋ ಚಾಲಕರು

November 12, 2026

ಬಂಟ್ವಾಳ: ವಿಟ್ಲದ ಪಟಾಕಿ ಅಂಗಡಿ ಹಿಂಭಾಗ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

November 12, 2026

Comments are closed.

Advertise
ಸಂಪರ್ಕಿಸಿ

ಮೈಸೂರು ಬಾವ ಜನ್ಮದಿನಕ್ಕೆ ಹಿಂದೂ ಗೆಳೆಯರಿಂದ ಸೌಹಾರ್ದದ ಸಂಭ್ರಮ; ಆಶ್ರಮದಲ್ಲಿ ಅನ್ನದಾನ, ಸಾರ್ವಜನಿಕರಿಗೆ ಪಾನೀಯ ವಿತರಣೆ ನಾಟೆಕಲ್‌ನಿಂದ ದೇರಳಕಟ್ಟೆವರೆಗೆ ಬ್ಯಾನರ್‌ಗಳ ಮೂಲಕ ಶುಭಾಶಯ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

November 15, 2026

ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಕೊಳೆತ ತರಕಾರಿ, ಕಲಬೆರಕೆ ಟೀ ಪುಡಿ ಪತ್ತೆ

October 28, 2026

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026
All News

ಮೈಸೂರು ಬಾವ ಜನ್ಮದಿನಕ್ಕೆ ಹಿಂದೂ ಗೆಳೆಯರಿಂದ ಸೌಹಾರ್ದದ ಸಂಭ್ರಮ; ಆಶ್ರಮದಲ್ಲಿ ಅನ್ನದಾನ, ಸಾರ್ವಜನಿಕರಿಗೆ ಪಾನೀಯ ವಿತರಣೆ ನಾಟೆಕಲ್‌ನಿಂದ ದೇರಳಕಟ್ಟೆವರೆಗೆ ಬ್ಯಾನರ್‌ಗಳ ಮೂಲಕ ಶುಭಾಶಯ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

By UllalaVaniNovember 15, 20260

ಉಳ್ಳಾಲ: ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅಂತರ ಸೃಷ್ಟಿಯಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯೇ ನಿಜವಾದ ಮಾನವೀಯತೆ…

ತುಳುನಾಡಿನ ಜಾನಪದ ಕ್ಷೇತ್ರದ ಸಂಶೋಧನೆಗೆ ಬಿ.ಎ. ಲೋಕಯ್ಯ ಶಿಶಿಲ ಅವರಿಗೆ ಗೌರವ ಡಾಕ್ಟರೇಟ್

November 14, 2026

ಮಂಗಳೂರು : ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶಿಗರ ಪತ್ತೆ ; ಗಡಿಪಾರಿಗೆ ಕ್ರಮ

November 14, 2026

ಮಕ್ಕಳ ದಿನಾಚರಣೆ ಅಂಗವಾಗಿ ಲಿಟಲ್ ಏಂಜಲ್ಸ್ ಮಕ್ಕಳ ಕ್ಲಿನಿಕ್‌ನಲ್ಲಿ ಚಿತ್ರಕಲಾ ಸ್ಪರ್ಧೆ

November 13, 2026
1 2 3 … 2,169 Next
Automatic YouTube Gallery

ಮಾಡೂರು ಸರಕಾರಿ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಸಂಭ್ರಮ:ಶಾಲೆಗೆ ಪೀಠೋಪಕರಣ ಹಸ್ತಾಂತರ

ಮಾಡೂರು ಸರಕಾರಿ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಸಂಭ್ರಮ:ಶಾಲೆಗೆ ಪೀಠೋಪಕರಣ ಹಸ್ತಾಂತರ

ಮಕ್ಕಳ ಮೇಲೆ ಅತಿಯಾದ ಶಿಸ್ತು ಹೇರದೆ ಒತ್ತಡ ಹಾಕದಿರಿ: ಡಾ.ವಸಂತ್ ಶೆಟ್ಟಿ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಾಡೂರು ಸರಕಾರಿ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಸಂಭ್ರಮ:ಶಾಲೆಗೆ ಪೀಠೋಪಕರಣ ಹಸ್ತಾಂತರ
Now Playing
ಮಾಡೂರು ಸರಕಾರಿ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಸಂಭ್ರಮ:ಶಾಲೆಗೆ ಪೀಠೋಪಕರಣ ಹಸ್ತಾಂತರ
ಮಾಡೂರು ಸರಕಾರಿ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಸಂಭ್ರಮ:ಶಾಲೆಗೆ ಪೀಠೋಪಕರಣ ...

ಮುಡಿಪು ಕುರ್ನಾಡು: ದೊಂಬಡೆಗುತ್ತು ತರವಾಡು ಮನೆಯ ನಿರ್ಮಾಣಕ್ಕೆ ಶಿಲಾನ್ಯಾಸ
Now Playing
ಮುಡಿಪು ಕುರ್ನಾಡು: ದೊಂಬಡೆಗುತ್ತು ತರವಾಡು ಮನೆಯ ನಿರ್ಮಾಣಕ್ಕೆ ಶಿಲಾನ್ಯಾಸ
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version