ಉಳ್ಳಾಲ.ನ.14: ಉಳ್ಳಾಲ ತಾಲೂಕಿನಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದೆ, ತುರ್ತು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಗಂಟೆಯಾಗಿ ಉಳ್ಳಾಲವಾಣಿ ಮಾಧ್ಯಮ 2025ರ ಅಕ್ಟೋಬರ್ 27ರಂದು ಸುದ್ದಿಯನ್ನು ಪ್ರಕಟಿಸಿತ್ತು. ಆದರೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಲೇ ಇಲ್ಲ. ಇದರ ಪರಿಣಾಮವಾಗಿ ಇಂದು ಒಂದು ಅಮಾಯಕ ಜೀವ ಬಲಿಯಾಗಿದೆ. ಉಳ್ಳಾಲ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ವಿದ್ಯಾರ್ಥಿಗಳು ಭಯಭೀತರಾಗಿ ಓಡಾಡುವ ಪರಿಸ್ಥಿತಿ ಉಂಟಾಗಿದೆ ಎಂದು ವರದಿ ಬಿತ್ತರಿಸಿದ ಸಂದರ್ಭವೇ ಜಿಲ್ಲಾಡಳಿತ ಎಚೆತ್ತುಕೊಂಡು ಬೀದಿ ನಾಯಿ ಹಾವಳಿಯನ್ನು ತಡೆಗಟ್ಟುವಲ್ಲಿ ಸರಿಯಾದ ಕ್ರಮವನ್ನು ಕೈಗೊಂಡಿದ್ದರೆ ಇಂದು ಅಮಾಯಕ ಜೀವ ಬಲಿಯಾಗುತ್ತಿರಲ್ಲಿಲ್ಲ. ಇಲ್ಲಿ ಅಧಿಕಾರಿಗಳ ತಾತ್ಸರ, ನಿರ್ಲಕ್ಷö್ಯತನ ಎದ್ದು ಕಾಣುತ್ತಿದೆ. ಇವರುಗಳ ಉದಾಸೀನತೆಗೆ ಇಂದುಬೀದಿ ನಾಯಿಯ ದಾಳಿಗೆ ಕುಂಪಲ ಮೂರುಕಟ್ಟೆ ನಿವಾಸಿ ದಿ| ರಾಮ ಗಟ್ಟಿ ಎಂಬವರ ಪುತ್ರ ದಯಾನಂದ (60) ಮೃತಪಟ್ಟಿದ್ದಾರೆ. ಇವರ ಸಾವಿನ ಜವಾಬ್ದಾರಿಯನ್ನು ನೇರವಾಗಿ ಸ್ಥಳೀಯ ಜಿಲ್ಲಾಡಳಿತ ಹೊರಬೇಕಾಗಿದೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು, ಮಂಗಳೂರು ಜಿಲ್ಲೆಯ ಭಾಗವಾಗಿದ್ದು, ಇದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿರುವ ಪ್ರದೇಶದಲ್ಲಿ ಬೀದಿ ನಾಯಿಯಿಂದ ಓರ್ವನ ಸಾವಾಗಿರುವುದು ಅತ್ಯಂತ ದುರದೃಷ್ಟಕರ ಸಂಗತಿ.

ಇಂದು ಬೆಳ್ಳಂಬೆಳಗ್ಗೆ ಉಳ್ಳಾಲ ಪರಿಸರದಲ್ಲಿ ಒಂದು ಸಾವಿನ ಸುದ್ದಿ ಎಲ್ಲೆಡೆ ಕೇಳಿಸುತ್ತಿತ್ತು. ಆದರ ಜೊತೆ ರಕ್ತಸಿಕ್ತವಾಗಿ ನಾಯಿಯೊಂದು ಓಡಾಡುವುದು ಕೂಡ ಸಾರ್ವಜನಿಕರ ಕಣ್ಣಿಗೆ ಕಾಣಿಸುತ್ತಿದೆ ಎಂಬ ಮಾತು ಕೇಳಿಸಿದವು. ಈ ಸಂದರ್ಭದಲ್ಲಿಯೇ ನಿಜ ಸಂಗತಿಯೊAದು ಹೊರಬಿತ್ತು. ಅದುವೇ ಇಂದು ಬೆಳಗಿನ ಜಾವ ಕುಂಪಲ ಬೈಪಾಸ್ ಪ್ರದೇಶದ ಮನೆಯೊಂದರ ಅಂಗಳದಲ್ಲಿ ರಕ್ತದ ಮಡುವಿನಲ್ಲಿ ದಯಾನಂದ ಮೃತದೇಹಪತ್ತೆಯಾಗಿತ್ತು. ಸ್ಥಳದಲ್ಲಿ ರಕ್ತದ ಗುರುತುಗಳು ಕಂಡುಬAದಿದ್ದು, ಸುಮಾರು ಬೆಳಿಗ್ಗೆ 3 ಗಂಟೆಯ ವೇಳೆ ಅವರು ಅಲ್ಲಿ ನಡೆದು ಹೋಗುತ್ತಿರುವುದನ್ನು ಸ್ಥಳೀಯರು ನೋಡಿದ್ದಾಗಿ ತಿಳಿಸಿದ್ದಾರೆ. ಫಾರೆನ್ಸಿಕ್ ತಂಡ ಹತ್ತಿರ ಕಂಡುಬAದ ಗಾಯಗಳಿಂದ ಪ್ರಾಥಮಿಕವಾಗಿ ಪ್ರಾಣಿ ದಾಳಿ ಶಂಕೆ ವ್ಯಕ್ತವಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಫಾರೆನ್ಸಿಕ್ ವೈದ್ಯರು ಇದು ಪ್ರಾಣಿ ದಾಳಿಯಿಂದಾದ ಸಾವೇ ಎಂಬುದನ್ನು ದೃಢಪಡಿಸಿದ್ದಾರೆ. ಇದೇ ವೇಳೆ, ರಕ್ತ ಬಾಯಿಗೆ ತಗುಲಿರುವಂತೆ ಕಾಣುತ್ತಿದ್ದ ನಾಯಿಯೊಂದು ಅಲೆದಾಡಿರುವುದನ್ನು ಕೆಲವರು ಗಮನಿಸಿದ್ದಾಗಿ ತಿಳಿದುಬಂದಿದೆ. ನಾಯಿಯನ್ನು ಪ್ರಾಣಿ ದಯಾ ಸಂಘದ ಮೂಲಕ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಳಿಕ ಸ್ವಾö್ಯಬಾ ಟೆಸ್ಟ್ ಗಾಗಿ ಕಳುಹಿಸಿಕೊಡಲಾಗಿತ್ತು.
ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರತಿಕ್ರಿಯೆ
ಈ ಬಗ್ಗೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಮತನಾಡಿ, ದಯಾನಂದ ಅವರನ್ನು ಕೊಂದಿದ್ದ ನಾಯಿ ಪತ್ತೆಯಾಗಿದೆ ಮತ್ತು ಅದರ ದೇಹದ ಮೇಲೆ ಸ್ಪಷ್ಟವಾದ ರಕ್ತದ ಕಲೆಗಳು ಕಂಡುಬAದಿವೆ. ಕೆಲವರು ಇಲ್ಲಿ ಕೊಲೆ ನಡೆದಿದೆ ಎಂದು ವದಂತಿ ಹಬ್ಬಿಸುವ ಕೆಲಸದಲ್ಲಿದ್ದಾರೆ. ಅವರು ಪತ್ತೆಯಾಗುತ್ತಿದ್ದಂತೆಯೇ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಯಾರಿಗಾದರೂ ಯಾವುದೇ ಅನುಮಾನಗಳಿದ್ದರೆ, ಅವರು ಪೋಸ್ಟ್ಮಾರ್ಟಂ ಸಂದರ್ಭದಲ್ಲಿ ಹಾಜರಾಗಿ, ಪೊಲೀಸರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆಂದು ನೇರವಾಗಿ ನೋಡಬಹುದು. ಯಾವುದೇ ಮಾಹಿತಿ, ಸುಳಿವು ಅಥವಾ ಹೊಸ ಬೆಳವಣಿಗೆಗಳು ಯಾವಾಗಾದರೂ, ಎಲ್ಲಿ ್ಲಯಾದರೂ ದೊರಕಿದರೆ, ನಾವು ಸದಾ ಸ್ವಾಗತಿಸುತ್ತೇವೆ. ಇನ್ನೂ ಯಾರಿಗಾದರೂ ಯಾವುದೇ ಅನುಮಾನಗಳಿದ್ದರೆ, ಅವರು ನನಗೆ ಅಥವಾ ಯಾವುದೇ ಹಿರಿಯ ಅಧಿಕಾರಿಗೆ ನೇರವಾಗಿ ಮಾತನಾಡಬಹುದು ಸುಳ್ಳು ಮಾಹಿತಿ ಹಬ್ಬಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂಬAಧ ಯು.ಡಿ.ಆರ್. ಕೇಸ್ ದಾಖಲಿಸಲಾಗುವುದು ಹಾಗೂ ಮುಂದಿನ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಎಫ್ಎಸ್ಎಲ್ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಅಗತ್ಯವಾದ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ಘಟನೆ ಕುರಿತು ರವಿಶಂಕರ್ ಸೋಮೇಶ್ವರ ಮಾತನಾಡಿ, ಸೋಮೇಶ್ವರ ವ್ಯಾಪ್ತಿಯಲ್ಲಿ ಈಗಾಗಲೇ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಹಲವಾರು ದೂರುಗಳು ನಮಗೆ ಬಂದಿದೆ. ದೂರುಗಳನ್ನು ಪರಿಗಣಿಸಿ ಕೆಲ ಪ್ರದೇಶಕ್ಕೆ ತೆರಳಿ ಬೀದಿನಾಯಿಗಳ ಸಂತಾನಹರಣ ಮಾಡುವ ಮೂಲಕ ಅವುಗಳ ಸಂತಾನವನ್ನು ಕಡಿಮೆ ಮಾಡುವಂತಹ ಕೆಲಸ ಮಾಡಿದ್ದೇವೆ. ಆದರೂ ಇಂತಹ ಒಂದು ಸಾವು ಆಗಿರುವುದು ವಿಷಾದನೀಯ ಸಂಗತಿ ಎಂದರು.
ಬೀದಿ-ನಾಯಿಗಳ ಹಾವಳಿಯಿಂದ ವಿದ್ಯಾರ್ಥಿಗಳಿಗೆ ಉಪಟಳ
ಉಳ್ಳಾಲದ ದೇರಳಕಟ್ಟೆ ಪ್ರದೇಶದಲ್ಲಿ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜು, ಯೆನೆಪೋಯ ಮತ್ತು ಕಣಚೂರು ಮೆಡಿಕಲ್ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಈ ಪ್ರದೇಶಗಳಲ್ಲಿ ನಾಯಿಗಳ ದಾಳಿಗಳು ಹೆಚ್ಚಾಗಿರುವುದರಿಂದ, ವಿದ್ಯಾರ್ಥಿಗಳ ಭದ್ರತೆಗೆ ಧಕ್ಕೆ ಉಂಟಾಗಿದೆ.
ಸಮಸ್ಯೆಯ ತೀವ್ರತೆ: ಉಳ್ಳಾಲ ತಾಲೂಕಿನಾದ್ಯಂತ ಹಾವಳಿ
ಉಳ್ಳಾಲ ತಾಲೂಕು ಸೇರಿದಂತೆ ಡೆಪ್ಯುಟಿ ಕಮಿಷನರ್ ಸ್ವರೂಪಾ ಟಿ.ಕೆ. ಅವರು 2025ರ ಸೆಪ್ಟೆಂಬರ್ನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಆಹಾರ ನಿಯಂತ್ರಣ, ಸ್ಟೆರಿಲೈಜೇಶನ್ (ಂಃಅ) ಮತ್ತು ರೇಬೀಸ್ ಲಸಿಕೆ ಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಆದರೆ, ಸ್ಥಳೀಯ ಪಂಚಾಯತ್ಗಳಲ್ಲಿ ಇದರ ಜಾರಿ ದುರ್ಬಲವಾಗಿದೆ.
ಉಳ್ಳಾಲ ತಾಲೂಕಿನಲ್ಲಿ ನಾಯಿ ಕಚ್ಚುವ ಪ್ರಕರಣಗಳು ಹೆಚ್ಚು ಕಡಿಮೆ ನೋಂದಾಯಿತವಾಗಿದೆ ಎಂದು ಕೆಲವು ವರದಿಗಳು ಸೂಚಿಸುತ್ತವೆ. ಆದರೆ ಸಾರ್ವಜನಿಕ ಆತಂಕ ಹೆಚ್ಚು. ಇದರಿಂದ ಭಯದಲ್ಲಿ ಜನರು ಬದುಕುತ್ತಿದ್ದಾರೆ. ಕರ್ನಾಟಕದಲ್ಲಿ ಈ ವರ್ಷ 32 ರೇಬೀಸ್ ಮರಣಗಳು ನೋಂದಾಗಿವೆ ಎಂದು ರಾಜ್ಯ ಆರೋಗ್ಯ ಸಚಿವಾಲಯ ವರದಿ ಮಾಡಿದೆ.
ಸುಪ್ರೀಂ ಕೋರ್ಟಿನ ಹಸ್ತಕ್ಷೇಪ:
ರಾಜ್ಯ ಮತ್ತು ಜಿಲ್ಲಾಡಳಿತ ನಿಷ್ಕ್ರಿಯತೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ಹಾವಳಿಯ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿಷ್ಕ್ರಿಯತೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅದರೂ ಜಿಲ್ಲಾಡಳಿತ ಮತ್ತು ಉಳ್ಳಾಲ ತಾಲೂಕು ಅಡಳಿತ ಎಚ್ಚತ್ತುಕೊಂಡಿಲ್ಲ.
ಅಧಿಕಾರಿಗಳ ನಿಷ್ಕಿçಯತೆ: ತಾಲೂಕು ಅಧಿಕಾರಿಗಳ ಹೊಣೆಗಾರಿಕೆ
ಉಳ್ಳಾಲ ತಾಲೂಕು ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿಲ್ಲ. ಸ್ಥಳೀಯ ಪಂಚಾಯತ್ಗಳು ಂಃಅ ಕಾರ್ಯಕ್ರಮಕ್ಕೆ ಅನುದಾನವನ್ನು ವ್ಯಯಿಸದೆ ಇದ್ದಾರೆ. ಉಡುಪಿ ಜಿಲ್ಲಾ ಕಾರ್ಯಕ್ರಮಗಳು ಉಳ್ಳಾಲಕ್ಕೂ ವಿಸ್ತರಿಸಬೇಕು, ಆದರೆ ಜಾರಿ ಲೋಪವಿದೆ. ರಾಜ್ಯ ಸರ್ಕಾರವು 2022ರಲ್ಲಿ ಸುಪ್ರೀಂ ಕೋರ್ಟ್ಗೆ ಸಮೀಪಿಸುವ ಆಯ್ಕೆಯನ್ನು ಪರಿಗಣಿಸಿತ್ತು, ಆದರೆ ಇದು ಇನ್ನೂ ಸಾಧ್ಯವಾಗಿಲ್ಲ. ಇದರಿಂದ ತಾಲೂಕು ನಿವಾಸಿಗಳು ತತ್ತರಿಸಿ ಹೋಗಿದ್ದಾರೆ.
ಮಾರ್ಗಸೂಚಿಗಳು: ಏನು ಮಾಡಬೇಕು?
ಸ್ಥಳೀಯ ಕ್ರಮಗಳು ಪಂಚಾಯತ್ಗಳು ಂಃಅ ಕಾರ್ಯಕ್ರಮವನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಿ, ನಾಯಿ ಸ್ಟೆರಿಲೈಜೇಶನ್ ಕೇಂದ್ರಗಳನ್ನು ಸ್ಥಾಪಿಸಲಿ. ಆಹಾರ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಿ.
ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳಿ, ಈ ಘಟನೆಯನ್ನು ಎಚ್ಚರಿಕೆಯ ಗಂಟೆಯಾಗಿ ತಿಳಿದುಕೊಂಡು ಬೀದಿ ನಾಯಿಗಳ ಹಾವಳಿಗೆ ಕಠಿವಾಣಕ್ಕೆ ಸೂಕ್ತ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಿ. ಇದರ ಜೊತೆಗೆ ಯಾವುದೇ ತಪ್ಪಿಲ್ಲದೇ ತನ್ನ ಜೀವವನ್ನು ಕಳೆದುಕೊಂಡಿರುವ ಮೃತರ ಕುಟುಂಬಕ್ಕೆ ಸರಕಾರ ಪರಿಹಾರವನ್ನು ಒದಗಿಸುವಂತೆ ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗಿದೆ.
ಇಂತಹ ಘಟನೆ ಯಾವತ್ತೂ ಮರುಕಳಿಸದಂತೆ ನೋಡಿಕೊಳ್ಳುವ ಹೊಣೆ ಜಿಲ್ಲಾಡಳಿತದ್ದಾಗಿದೆ.



