Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಅಕ್ಟೋಬರ್‌ನಲ್ಲೇ ಬೀದಿನಾಯಿಗಳ ಹಾವಳಿ ಕುರಿತು ಸುದ್ದಿ ಪ್ರಕಟಿಸಿದ್ದ ಉಳ್ಳಾಲವಾಣಿ; ಎಚ್ಚೆತ್ತುಕೊಳ್ಳದ ಅಧಿಕಾರಿಗಳು..?!

UllalaVaniBy UllalaVaniNovember 15, 2025No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ.ನ.14: ಉಳ್ಳಾಲ ತಾಲೂಕಿನಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದೆ, ತುರ್ತು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಗಂಟೆಯಾಗಿ ಉಳ್ಳಾಲವಾಣಿ ಮಾಧ್ಯಮ 2025ರ ಅಕ್ಟೋಬರ್ 27ರಂದು ಸುದ್ದಿಯನ್ನು ಪ್ರಕಟಿಸಿತ್ತು. ಆದರೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಲೇ ಇಲ್ಲ. ಇದರ ಪರಿಣಾಮವಾಗಿ ಇಂದು ಒಂದು ಅಮಾಯಕ ಜೀವ ಬಲಿಯಾಗಿದೆ. ಉಳ್ಳಾಲ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ವಿದ್ಯಾರ್ಥಿಗಳು ಭಯಭೀತರಾಗಿ ಓಡಾಡುವ ಪರಿಸ್ಥಿತಿ ಉಂಟಾಗಿದೆ ಎಂದು ವರದಿ ಬಿತ್ತರಿಸಿದ ಸಂದರ್ಭವೇ ಜಿಲ್ಲಾಡಳಿತ ಎಚೆತ್ತುಕೊಂಡು ಬೀದಿ ನಾಯಿ ಹಾವಳಿಯನ್ನು ತಡೆಗಟ್ಟುವಲ್ಲಿ ಸರಿಯಾದ ಕ್ರಮವನ್ನು ಕೈಗೊಂಡಿದ್ದರೆ ಇಂದು ಅಮಾಯಕ ಜೀವ ಬಲಿಯಾಗುತ್ತಿರಲ್ಲಿಲ್ಲ. ಇಲ್ಲಿ ಅಧಿಕಾರಿಗಳ ತಾತ್ಸರ, ನಿರ್ಲಕ್ಷö್ಯತನ ಎದ್ದು ಕಾಣುತ್ತಿದೆ. ಇವರುಗಳ ಉದಾಸೀನತೆಗೆ ಇಂದುಬೀದಿ ನಾಯಿಯ ದಾಳಿಗೆ ಕುಂಪಲ ಮೂರುಕಟ್ಟೆ ನಿವಾಸಿ ದಿ| ರಾಮ ಗಟ್ಟಿ ಎಂಬವರ ಪುತ್ರ ದಯಾನಂದ (60) ಮೃತಪಟ್ಟಿದ್ದಾರೆ. ಇವರ ಸಾವಿನ ಜವಾಬ್ದಾರಿಯನ್ನು ನೇರವಾಗಿ ಸ್ಥಳೀಯ ಜಿಲ್ಲಾಡಳಿತ ಹೊರಬೇಕಾಗಿದೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು, ಮಂಗಳೂರು ಜಿಲ್ಲೆಯ ಭಾಗವಾಗಿದ್ದು, ಇದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿರುವ ಪ್ರದೇಶದಲ್ಲಿ ಬೀದಿ ನಾಯಿಯಿಂದ ಓರ್ವನ ಸಾವಾಗಿರುವುದು ಅತ್ಯಂತ ದುರದೃಷ್ಟಕರ ಸಂಗತಿ.

ಇಂದು ಬೆಳ್ಳಂಬೆಳಗ್ಗೆ ಉಳ್ಳಾಲ ಪರಿಸರದಲ್ಲಿ ಒಂದು ಸಾವಿನ ಸುದ್ದಿ ಎಲ್ಲೆಡೆ ಕೇಳಿಸುತ್ತಿತ್ತು. ಆದರ ಜೊತೆ ರಕ್ತಸಿಕ್ತವಾಗಿ ನಾಯಿಯೊಂದು ಓಡಾಡುವುದು ಕೂಡ ಸಾರ್ವಜನಿಕರ ಕಣ್ಣಿಗೆ ಕಾಣಿಸುತ್ತಿದೆ ಎಂಬ ಮಾತು ಕೇಳಿಸಿದವು. ಈ ಸಂದರ್ಭದಲ್ಲಿಯೇ ನಿಜ ಸಂಗತಿಯೊAದು ಹೊರಬಿತ್ತು. ಅದುವೇ ಇಂದು ಬೆಳಗಿನ ಜಾವ ಕುಂಪಲ ಬೈಪಾಸ್ ಪ್ರದೇಶದ ಮನೆಯೊಂದರ ಅಂಗಳದಲ್ಲಿ ರಕ್ತದ ಮಡುವಿನಲ್ಲಿ ದಯಾನಂದ ಮೃತದೇಹಪತ್ತೆಯಾಗಿತ್ತು. ಸ್ಥಳದಲ್ಲಿ ರಕ್ತದ ಗುರುತುಗಳು ಕಂಡುಬAದಿದ್ದು, ಸುಮಾರು ಬೆಳಿಗ್ಗೆ 3 ಗಂಟೆಯ ವೇಳೆ ಅವರು ಅಲ್ಲಿ ನಡೆದು ಹೋಗುತ್ತಿರುವುದನ್ನು ಸ್ಥಳೀಯರು ನೋಡಿದ್ದಾಗಿ ತಿಳಿಸಿದ್ದಾರೆ. ಫಾರೆನ್ಸಿಕ್ ತಂಡ ಹತ್ತಿರ ಕಂಡುಬAದ ಗಾಯಗಳಿಂದ ಪ್ರಾಥಮಿಕವಾಗಿ ಪ್ರಾಣಿ ದಾಳಿ ಶಂಕೆ ವ್ಯಕ್ತವಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಫಾರೆನ್ಸಿಕ್ ವೈದ್ಯರು ಇದು ಪ್ರಾಣಿ ದಾಳಿಯಿಂದಾದ ಸಾವೇ ಎಂಬುದನ್ನು ದೃಢಪಡಿಸಿದ್ದಾರೆ. ಇದೇ ವೇಳೆ, ರಕ್ತ ಬಾಯಿಗೆ ತಗುಲಿರುವಂತೆ ಕಾಣುತ್ತಿದ್ದ ನಾಯಿಯೊಂದು ಅಲೆದಾಡಿರುವುದನ್ನು ಕೆಲವರು ಗಮನಿಸಿದ್ದಾಗಿ ತಿಳಿದುಬಂದಿದೆ. ನಾಯಿಯನ್ನು ಪ್ರಾಣಿ ದಯಾ ಸಂಘದ ಮೂಲಕ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಳಿಕ ಸ್ವಾö್ಯಬಾ ಟೆಸ್ಟ್ ಗಾಗಿ ಕಳುಹಿಸಿಕೊಡಲಾಗಿತ್ತು.

ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರತಿಕ್ರಿಯೆ

ಈ ಬಗ್ಗೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಮತನಾಡಿ, ದಯಾನಂದ ಅವರನ್ನು ಕೊಂದಿದ್ದ ನಾಯಿ ಪತ್ತೆಯಾಗಿದೆ ಮತ್ತು ಅದರ ದೇಹದ ಮೇಲೆ ಸ್ಪಷ್ಟವಾದ ರಕ್ತದ ಕಲೆಗಳು ಕಂಡುಬAದಿವೆ. ಕೆಲವರು ಇಲ್ಲಿ ಕೊಲೆ ನಡೆದಿದೆ ಎಂದು ವದಂತಿ ಹಬ್ಬಿಸುವ ಕೆಲಸದಲ್ಲಿದ್ದಾರೆ. ಅವರು ಪತ್ತೆಯಾಗುತ್ತಿದ್ದಂತೆಯೇ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಯಾರಿಗಾದರೂ ಯಾವುದೇ ಅನುಮಾನಗಳಿದ್ದರೆ, ಅವರು ಪೋಸ್ಟ್ಮಾರ್ಟಂ ಸಂದರ್ಭದಲ್ಲಿ ಹಾಜರಾಗಿ, ಪೊಲೀಸರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆಂದು ನೇರವಾಗಿ ನೋಡಬಹುದು. ಯಾವುದೇ ಮಾಹಿತಿ, ಸುಳಿವು ಅಥವಾ ಹೊಸ ಬೆಳವಣಿಗೆಗಳು ಯಾವಾಗಾದರೂ, ಎಲ್ಲಿ ್ಲಯಾದರೂ ದೊರಕಿದರೆ, ನಾವು ಸದಾ ಸ್ವಾಗತಿಸುತ್ತೇವೆ. ಇನ್ನೂ ಯಾರಿಗಾದರೂ ಯಾವುದೇ ಅನುಮಾನಗಳಿದ್ದರೆ, ಅವರು ನನಗೆ ಅಥವಾ ಯಾವುದೇ ಹಿರಿಯ ಅಧಿಕಾರಿಗೆ ನೇರವಾಗಿ ಮಾತನಾಡಬಹುದು ಸುಳ್ಳು ಮಾಹಿತಿ ಹಬ್ಬಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಬAಧ ಯು.ಡಿ.ಆರ್. ಕೇಸ್ ದಾಖಲಿಸಲಾಗುವುದು ಹಾಗೂ ಮುಂದಿನ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಅಗತ್ಯವಾದ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಘಟನೆ ಕುರಿತು ರವಿಶಂಕರ್ ಸೋಮೇಶ್ವರ ಮಾತನಾಡಿ, ಸೋಮೇಶ್ವರ ವ್ಯಾಪ್ತಿಯಲ್ಲಿ ಈಗಾಗಲೇ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಹಲವಾರು ದೂರುಗಳು ನಮಗೆ ಬಂದಿದೆ. ದೂರುಗಳನ್ನು ಪರಿಗಣಿಸಿ ಕೆಲ ಪ್ರದೇಶಕ್ಕೆ ತೆರಳಿ ಬೀದಿನಾಯಿಗಳ ಸಂತಾನಹರಣ ಮಾಡುವ ಮೂಲಕ ಅವುಗಳ ಸಂತಾನವನ್ನು ಕಡಿಮೆ ಮಾಡುವಂತಹ ಕೆಲಸ ಮಾಡಿದ್ದೇವೆ. ಆದರೂ ಇಂತಹ ಒಂದು ಸಾವು ಆಗಿರುವುದು ವಿಷಾದನೀಯ ಸಂಗತಿ ಎಂದರು.

ಬೀದಿ-ನಾಯಿಗಳ ಹಾವಳಿಯಿಂದ ವಿದ್ಯಾರ್ಥಿಗಳಿಗೆ ಉಪಟಳ

ಉಳ್ಳಾಲದ ದೇರಳಕಟ್ಟೆ ಪ್ರದೇಶದಲ್ಲಿ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜು, ಯೆನೆಪೋಯ ಮತ್ತು ಕಣಚೂರು ಮೆಡಿಕಲ್ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಈ ಪ್ರದೇಶಗಳಲ್ಲಿ ನಾಯಿಗಳ ದಾಳಿಗಳು ಹೆಚ್ಚಾಗಿರುವುದರಿಂದ, ವಿದ್ಯಾರ್ಥಿಗಳ ಭದ್ರತೆಗೆ ಧಕ್ಕೆ ಉಂಟಾಗಿದೆ.

ಸಮಸ್ಯೆಯ ತೀವ್ರತೆ: ಉಳ್ಳಾಲ ತಾಲೂಕಿನಾದ್ಯಂತ ಹಾವಳಿ

ಉಳ್ಳಾಲ ತಾಲೂಕು ಸೇರಿದಂತೆ ಡೆಪ್ಯುಟಿ ಕಮಿಷನರ್ ಸ್ವರೂಪಾ ಟಿ.ಕೆ. ಅವರು 2025ರ ಸೆಪ್ಟೆಂಬರ್‌ನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಆಹಾರ ನಿಯಂತ್ರಣ, ಸ್ಟೆರಿಲೈಜೇಶನ್ (ಂಃಅ) ಮತ್ತು ರೇಬೀಸ್ ಲಸಿಕೆ ಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಆದರೆ, ಸ್ಥಳೀಯ ಪಂಚಾಯತ್‌ಗಳಲ್ಲಿ ಇದರ ಜಾರಿ ದುರ್ಬಲವಾಗಿದೆ.

ಉಳ್ಳಾಲ ತಾಲೂಕಿನಲ್ಲಿ ನಾಯಿ ಕಚ್ಚುವ ಪ್ರಕರಣಗಳು ಹೆಚ್ಚು ಕಡಿಮೆ ನೋಂದಾಯಿತವಾಗಿದೆ ಎಂದು ಕೆಲವು ವರದಿಗಳು ಸೂಚಿಸುತ್ತವೆ. ಆದರೆ ಸಾರ್ವಜನಿಕ ಆತಂಕ ಹೆಚ್ಚು. ಇದರಿಂದ ಭಯದಲ್ಲಿ ಜನರು ಬದುಕುತ್ತಿದ್ದಾರೆ. ಕರ್ನಾಟಕದಲ್ಲಿ ಈ ವರ್ಷ 32 ರೇಬೀಸ್ ಮರಣಗಳು ನೋಂದಾಗಿವೆ ಎಂದು ರಾಜ್ಯ ಆರೋಗ್ಯ ಸಚಿವಾಲಯ ವರದಿ ಮಾಡಿದೆ.

ಸುಪ್ರೀಂ ಕೋರ್ಟಿನ ಹಸ್ತಕ್ಷೇಪ:

ರಾಜ್ಯ ಮತ್ತು ಜಿಲ್ಲಾಡಳಿತ ನಿಷ್ಕ್ರಿಯತೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ಹಾವಳಿಯ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿಷ್ಕ್ರಿಯತೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅದರೂ ಜಿಲ್ಲಾಡಳಿತ ಮತ್ತು ಉಳ್ಳಾಲ ತಾಲೂಕು ಅಡಳಿತ ಎಚ್ಚತ್ತುಕೊಂಡಿಲ್ಲ.

ಅಧಿಕಾರಿಗಳ ನಿಷ್ಕಿçಯತೆ: ತಾಲೂಕು ಅಧಿಕಾರಿಗಳ ಹೊಣೆಗಾರಿಕೆ

ಉಳ್ಳಾಲ ತಾಲೂಕು ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿಲ್ಲ. ಸ್ಥಳೀಯ ಪಂಚಾಯತ್‌ಗಳು ಂಃಅ ಕಾರ್ಯಕ್ರಮಕ್ಕೆ ಅನುದಾನವನ್ನು ವ್ಯಯಿಸದೆ ಇದ್ದಾರೆ. ಉಡುಪಿ ಜಿಲ್ಲಾ ಕಾರ್ಯಕ್ರಮಗಳು ಉಳ್ಳಾಲಕ್ಕೂ ವಿಸ್ತರಿಸಬೇಕು, ಆದರೆ ಜಾರಿ ಲೋಪವಿದೆ. ರಾಜ್ಯ ಸರ್ಕಾರವು 2022ರಲ್ಲಿ ಸುಪ್ರೀಂ ಕೋರ್ಟ್ಗೆ ಸಮೀಪಿಸುವ ಆಯ್ಕೆಯನ್ನು ಪರಿಗಣಿಸಿತ್ತು, ಆದರೆ ಇದು ಇನ್ನೂ ಸಾಧ್ಯವಾಗಿಲ್ಲ. ಇದರಿಂದ ತಾಲೂಕು ನಿವಾಸಿಗಳು ತತ್ತರಿಸಿ ಹೋಗಿದ್ದಾರೆ.

ಮಾರ್ಗಸೂಚಿಗಳು: ಏನು ಮಾಡಬೇಕು?

ಸ್ಥಳೀಯ ಕ್ರಮಗಳು ಪಂಚಾಯತ್‌ಗಳು ಂಃಅ ಕಾರ್ಯಕ್ರಮವನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಿ, ನಾಯಿ ಸ್ಟೆರಿಲೈಜೇಶನ್ ಕೇಂದ್ರಗಳನ್ನು ಸ್ಥಾಪಿಸಲಿ. ಆಹಾರ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಿ.

ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳಿ, ಈ ಘಟನೆಯನ್ನು ಎಚ್ಚರಿಕೆಯ ಗಂಟೆಯಾಗಿ ತಿಳಿದುಕೊಂಡು ಬೀದಿ ನಾಯಿಗಳ ಹಾವಳಿಗೆ ಕಠಿವಾಣಕ್ಕೆ ಸೂಕ್ತ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಿ. ಇದರ ಜೊತೆಗೆ ಯಾವುದೇ ತಪ್ಪಿಲ್ಲದೇ ತನ್ನ ಜೀವವನ್ನು ಕಳೆದುಕೊಂಡಿರುವ ಮೃತರ ಕುಟುಂಬಕ್ಕೆ ಸರಕಾರ ಪರಿಹಾರವನ್ನು ಒದಗಿಸುವಂತೆ ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗಿದೆ.

ಇಂತಹ ಘಟನೆ ಯಾವತ್ತೂ ಮರುಕಳಿಸದಂತೆ ನೋಡಿಕೊಳ್ಳುವ ಹೊಣೆ ಜಿಲ್ಲಾಡಳಿತದ್ದಾಗಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026

Comments are closed.

Advertise
ಸಂಪರ್ಕಿಸಿ

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025

ಕ್ಯಾನ್ಸರ್ ಹಾಗೂ ಸ್ತ್ರೀ ರೋಗ ಜಾಗ್ರತಿ ಅರಿವು

November 11, 2025
suddi

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

By UllalaVaniFebruary 5, 20260

ಉಳ್ಳಾಲ: 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್‌ ಹೊಂದಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕೈಕೋ ರೋಡ್‌ ಸುಭಾಷನಗರ ನಿವಾಸಿ ಅನ್ವರ್…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026

ಪಟ್ಲ ಫೌಂಡೇಶನ್ ಟ್ರಸ್ಟ್: ಕೇಂದ್ರೀಯ ಮಹಿಳಾ ಘಟಕದ ವಾರ್ಷಿಕೋತ್ಸವ

February 4, 2026
1 2 3 … 1,793 Next
Automatic YouTube Gallery

ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ

ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ಕಾರ್ಯಕ್ರಮಕ್ಕೆ ಚಾಲನೆ

ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣರಿಂದ ಆಶೀವರ್ಚನ
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
Now Playing
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ...
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ಕಾರ್ಯಕ್ರಮಕ್ಕೆ ಚಾಲನೆ

ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣರಿಂದ ಆಶೀವರ್ಚನ
ಮಹಿಷಾಸುರನ್ ಕೆರ್ನಗ ದೇವಿಗ್ ಬೇಜಾರ್..??
Now Playing
ಮಹಿಷಾಸುರನ್ ಕೆರ್ನಗ ದೇವಿಗ್ ಬೇಜಾರ್..??
ಮಹಿಷಾಸುರನ ಜೊತೆ ತಾಯಿ 9 ದಿನ ಯುದ್ಧ ಮಾಡಿದ ಕಾರಣವೇ ರೋಚಕ.. ಸ್ವರ್ಗದತ್ತ ಮಹಿಷಾ ...
ಮಹಿಷಾಸುರನ ಜೊತೆ ತಾಯಿ 9 ದಿನ ಯುದ್ಧ ಮಾಡಿದ ಕಾರಣವೇ ರೋಚಕ..

ಸ್ವರ್ಗದತ್ತ ಮಹಿಷಾ ಹೋಗಲು ಇದೇ ಕಾರಣ; ಕಟೀಲು ಅಸ್ರಣ್ಣರಿಂದ ಅದ್ಭುತ ವಿವರಣೆ
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d