Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ವೈದ್ಯರು ಹಣಗಳಿಸುವ ಯಂತ್ರವಲ್ಲ:ವಿನಯ್ ಹೆಗ್ಡೆ

UllalaVaniBy UllalaVaniMay 9, 2015No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ನೇಪಾಳ ಭೂಕಂಪಪೀಡಿತ ಪ್ರದೇಶಕ್ಕೆ ತೆರಳಿ ಗಾಯಾಳುಗಳ ಸೇವೆ ಮಾಡುವ ಮೂಲಕ ವೈದ್ಯ ವೃತ್ತಿ ಕೇವಲ ಹಣ ಗಳಿಸುವ ಯಂತ್ರವಲ್ಲ ಎನ್ನುವ ಮಾತನ್ನು ನಿಟ್ಟೆ ವಿಶ್ವವಿದ್ಯಾಲಯದ ವೈದ್ಯರು ಸುಳ್ಳಾಗಿಸಿದ್ದಾರೆ. ಅದರಲ್ಲೂ ಯುವ ವೈದ್ಯರು ಈ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದು ಶ್ಲಾಘನೀಯ. ಆ ಮೂಲಕ ನಿಟ್ಟೆ ವಿವಿಯ ಕೀರ್ತಿ ಪತಾಕೆಯನ್ನು ಹಿಮಾಲಯದ ತಪ್ಪಲಲ್ಲಿ ಹಾರಿಸಿರುವುದು ಅಭಿನಂದನೀಯ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಹೇಳಿದರು.

ಭೂಕಂಪ ಪೀಡಿತ ನೇಪಾಳದಲ್ಲಿ ನರಳುತ್ತಿರುವ ಜನರಿಗೆ ತುರ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅಲ್ಲಿಗೆ ತೆರಳಿದ್ದ ಚಿಕಿತ್ಸೆ ನೀಡಿದ ನಿಟ್ಟೆ ವಿಶ್ವವಿದ್ಯಾಲಯ ವೈದ್ಯರ ತಂಡಕ್ಕೆ ಶುಕ್ರವಾರ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದಲ್ಲಿ ಸೇವೆ ಸಲ್ಲಿಸಿದ ವೈದ್ಯರನ್ನು ಸನ್ಮಾನಿಸಲಾಯಿತು.

8 ullal 1ತಂಡದ ನೇತೃತ್ವ ವಹಿಸಿದ್ದ ಡಾ. ಸತೀಶ್ ರಾವ್ ಮಾತನಾಡಿ ಏ. ೨೭ರಂದು ಭೂಕಂಪ ಪೀಡಿತಪೀಡಿತ ನೇಪಾಳದಲ್ಲಿ ತುರ್ತು ಚಿಕಿತ್ಸೆ ನಿಟ್ಟಿನಲ್ಲಿ ತಂಡ ರಚಿಸುವಂತೆ ನಿಟ್ಟೆ ಕುಲಾಧಿಪತಿ ಹೇಳಿದರು. ಆ ದೇಶದಲ್ಲಿ ಕಠಿಣ ಪರಿಸ್ಥಿತಿ ಇದ್ದ ಕಾರಣ ಅಲ್ಲಿಗೆ ತೆರಳಲು ಕುಟುಂಬಸ್ಥರ ಒಪ್ಪಿಗೆ ಸಿಗುವುದು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ತಂಡ ರಚನೆ ಕಷ್ಟಕರವಾಗಿತ್ತಾದರೂ ವೈದ್ಯರು ಉತ್ಸಾಹ ತೋರಿದ್ದರಿಂದ ಸುಲಲಿತವಾಯಿತು ಎಂದು ಹೇಳಿದರು.

ಮನಶಾಸ್ತ್ರಜ್ಞ ಡಾ. ಸತೀಶ್ ರಾವ್ ನೇತೃತ್ವದ ತಂಡದಲ್ಲಿದ್ದ ಪ್ರಥಮ ಎಂಪಿಎಚ್ ವಿದ್ಯಾರ್ಥಿ ನೇಪಾಲ ಮೂಲದ ಗಣೇಶ್ ಶ್ರೇಷ್ಠ, ಹರ್ಷರಾಜ್ ದಹಾಲ್, ನ್ಯೂರೋ ಸರ್ಜನ್ ಡಾ. ಅನಂತನ್, ಇಂಟೆನ್ಸಿವಿಟ್ ಡಾ. ನರೇಶ್ ರೈ, ಆರ್ಥೊಪೆಡಿಕ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ್ ಬಾಬು, ಸರ್ಜರಿ ವಿಭಾಗದ ಡಾ. ಗೌರವ್ ಶೆಟ್ಟಿ, ಆರ್ಥೊಪೇಡಿಕ್ಸ್ ವಿಭಾಗದ ಡಾ.ಕುಶಾಲಪ್ಪ, ಅನೇಸ್ತಿಯಾ ವಿಭಾಗದ ಡಾ. ಮಯೂರ್ ಹಾಗೂ ಮುಖ ಮತ್ತು ಸೌಂದರ್ಯ ಚಿಕಿತ್ಸಾ ವಿಭಾಗದ ಸರ್ಜನ್ ಡಾ.ಗೋಪಿನಾಥ ಅವರನ್ನು ಅಭಿನಂದಿಸಲಾಯಿತು.

ಪ್ರಯಾಣದ ದಿನ ಸಂಜೆ ೪.೩೦ರ ಹಾರಾಟದ ವಿಮಾನದ ಟಿಕೆಟ್ ಬುಕ್ ಮಾಡುವ ಸಂದರ್ಭ ಮಧ್ಯಾಹ್ನ ಒಂದು ಗಂಟೆ ಕಳೆದಿತ್ತು. ನಿಲ್ದಾಣ ತಲುಪುವಾಗ ಗಂಟೆ ೩.೪೫ ಆಗಿದ್ದು ಸಿಬ್ಬಂದಿ ಒಳಹೋಗಲು ಅವಕಾಶ ಒಡಲಿಲ್ಲ. ೭೦ಲಗೇಜ್ ಬ್ಯಾಗ್ಗಳಿದ್ದವು. ಸಿಬ್ಬಂದಿ ಬಳಿ ನೇಪಾಳಕ್ಕೆ ತೆರಳುವ ಅಗತ್ಯತೆ ಬಗ್ಗೆ ಮಾಹಿತಿ ನೀಡಿದ ಪರಿಣಾಮ ಸ್ಪಂದಿಸಿದರು. ದಾಡಿಂಗ್ ತಲುಪಿದಾಗ ಸಂಪೂರ್ಣ ನಾಶವಾದ ದೃಶ್ಯ ಕಂಡು ಬಂತು. ಎಲ್ಲರೂ ಪ್ರತ್ಯೇಕ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಲ್ಲಿ ಕೆಲಸ ಮಾಡಿದರು. ಆಹಾರ ಸೇವನೆಗೆ ಸಮಯವಿರಲಿಲ್ಲ. ಬೆಳಗ್ಗೆ ಚಹಾಕ್ಕೆ ತಿಂಡಿಯಿಲ್ಲದ ಕಾರಣ ಕಡ್ಲೆ, ಹಾಲು ಇಲ್ಲದ ಚಹಾ ಸೇವಿಸಿದೆವು. ನೇಪಾಲ ಮೂಲದ ವಿದ್ಯಾರ್ಥಿನಿ ಸರಸ್ವತಿ ಪ್ರತಿದಿನ ರೋಗಿಗಳ ಆರೈಕೆ ಮಾಡುತ್ತಿದ್ದರು. ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿತ್ತು. ಸ್ವಯಂಭುನಾಥ ದೇವಸ್ಥಾನ ಬಹುತೇಕ ಹಾನಿಗೀಡಾಗಿತ್ತು. ಸೇವೆಗಾಗಿ ಅಂತಹ ಅವಕಾಶ ಯಾವಾಗಲೂ ಸಿಗದು ಎಂದರು.

ನಿಟ್ಟೆ ವಿವಿ ಉಪ ಕುಲಪತಿ ಡಾ.ಎಸ್.ರಮಾನಂದ ಶೆಟ್ಟಿ ಉಪಸ್ಥಿತರಿದ್ದರು. ಡಾ.ಜಯಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ವಂದಿಸಿದರು.

ವೈದ್ಯ ಪದವಿ ಪಡೆಯುವವರು ಇಂತಹ ಘಟನೆಗಳಾದಾಗ ಸಹಾಯ ಮಾಡಬೇಕು. ಈ ಮೂಲಕ ವೈದ್ಯನ ನಿಜ ಸ್ವರೂಪ ಕಂಡುಬರುತ್ತದೆ. ವೈದ್ಯನಾದಾತ ಇಂತಹ ಸ್ಥಿತಿಯಲ್ಲಿ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಅನ್ನುವ ಅವಕಾಶ ಎಂದು ಭಾವಿಸಿ ಕೂಡಲೇ ಕೆಲಸ ಕಾರ್ಯಗಳನ್ನು ಬಿಟ್ಟು ದೈವೀ ಕಾರ್ಯವೆಂದು ಭಾವಿಸಿ ವಿಮಾನ ಏರಿದ್ದೇವೆ. ತಾಯಿಯ ಪ್ರೇರಣೆಯಿಂದಲೇ ನೇಪಾಳ ಹೋಗುವಂತಾಯ್ತು. ಒಂದೇ ದಿನದ ನಿರ್ಧಾರದಲ್ಲಿ ಬೆಳಿಗ್ಗೆ ತಾಯಿಯಲ್ಲಿ ಅನುಮತಿ ಕೇಳಿದಾಗ ಹೆದರಿದ್ದರು. ಆದರೆ ಧೈರ್ಯ ತುಂಬಿದ ನಂತರ ಅವರೇ ಸಂಕಷ್ಟದಲ್ಲಿರುವವರ ಸೇವೆ ದೇವತಾ ಸೇವೆ ಎಂಬ ಪ್ರೇರಣೆಯಿಂದ ಹಿಂದೆ ಮುಂದೆ ನೋಡದೆ ಪ್ಯಾಕ್ ಅಪ್ ಮಾಡಿ ಹೊರಡಿದ್ದೆ. ನಾವು ಉಳಿದುಕೊಂಡ ಹೊಟೇಲಿನಲ್ಲಿ ೩-೪ ಸೆಕೆಂಡುಗಳವರೆಗೆ ಭೂಕಂಪನದ ಅನುಭವವಾಗಿತ್ತು. ಬಳಿಕ ಎರಡು ದಿನಗಳಲ್ಲಿ ಗೋರ್ಕಾ ಪ್ರದೇಶದಲ್ಲಿ ೪.೮ ರಿಕ್ಟರ್ ಮಾಪಕದಲ್ಲಿ ಕಂಪನವಾಯಿತು. ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ಕಂಪನದ ಅನುಭವವಾಯಿತು. ಆದರೆ ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಧೈರ್ಯ ತುಂಬಿದ್ದರಿಂದ ಹೆದರದೆ ಧರ್ಯದಲ್ಲೇ ಇದ್ದೆವು. ಆದರೆ ಸ್ಥಳದಲ್ಲಿದ್ದ ಹಳೇಯ ಕಟ್ಟಡಗಳು ಉರುಳಿಬಿದ್ದವು. ಅದರ ನಡುವೆ ಎರಡು ತಂಡದಲ್ಲಿದ್ದ ನಮ್ಮವರು ಅಪಾಯಕಾರಿ ದಾಧಿಂಗ್ ಮತ್ತು ಹಾರ್ಡ್ಕೋ ಬೆಟ್ಟದ ಪ್ರದೇಶದಲ್ಲಿ ರೋಗಿಗಳ ಆರೈಕೆಯನ್ನು ನಡೆಸಿದರು. ೧೩೩ ಮನೆಗಳು ಧರಾಶಾಹಿಯಾದ ಪ್ರದೇಶದಲ್ಲಿ ಅವರಿಗೇ ಆಹಾರಕ್ಕೆ ಕಷ್ಟ ಇರುವ ಸಂದರ್ಭ, ನಮ್ಮನ್ನು ಬಿಡದೇ ತಾವು ತಯಾರಿಸಿದ ಆಹಾರವನ್ನು ನೀಡುತ್ತಿದ್ದರು. ಒಳ್ಳೆಯ ಗೌರವವನ್ನು ನೀಡಿದ್ದಾರೆ.
ಡಾ.ಮಯೂರ್
ಅನೇಸ್ತಿಯಾ ವಿಭಾಗ
ಕೆ.ಎಸ್.ಹೆಗ್ಡೆ ಆಸ್ಪತ್ರೆ

ಯುನಿಸೆಫ್, ‘ಮಾಸಿ’ ಮಲೇಷಿಯಾದ ತಂಡ, ಯುಎನ್ ಓ, ಡಬ್ಲ್ಯು ಹೆಚ್ ಓ, ಇಸ್ರೇಲ್, ಸೌದಿ ಅರೆಬಿಯಾ, ಪಾಕಿಸ್ತಾನದ ತಂಡಗಳು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮೊದಲು ಮೌಂಟ್ ಎವರೆಸ್ಟ್ ಶಿಖರವನ್ನು ಭಾರತೀಯ ತೀನ್ ಸಿಂಗ್ ಜತೆಗೆ ಏರಿದ ಹೆಡ್ಮಂಡ್ ಹಿಲರಿ ಅವರ ಮೊಮ್ಮಗಳು ಎಮಿಲ್ಲಿಯಾ ಹಿಲ್ಲರಿ ಓರ್ವಳೇ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ವಿಶೇಷ ಅನ್ನಿಸಿತ್ತು. ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿರುವ ನೇಪಾಳ ಮೂಲದ ಇಬ್ಬರನ್ನು ಜತೆಗೆ ಕರೆದುಕೊಂಡು ಹೋದ ಪರಿಣಾಮ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಚಯ ಸುಲಭದಿಂದ ಆಯಿತು. ಅಲ್ಲಿ ೧೫ ಹಾಸಿಗೆಗಳಿರುವ ಆಸ್ಪತ್ರೆಯಲ್ಲಿ ೬೦ ಗಾಯಾಳುಗಳು ದಾಖಲಾಗಿದ್ದರು. ಅದರಿಂದ ದಿನಕ್ಕೆ ೬೦ ರೋಗಿಗಳ ಶುಶ್ರೂಷೆಯನ್ನು ನಡೆಸಿದೆವು. ಇದರಿಂದ ವೃತ್ತಿಯಲ್ಲಿ ಸಿಗದ ಅನುಭವ ದೊರೆತಂತಾಯಿತು. ಒಂದು ಆಪರೇಷನ್ ಥಿಯೇಟರಿನಲ್ಲಿ ತಂಡದ ಕೇವಲ ಇಬ್ಬರು ವೈದ್ಯರುಗಳು ಕರ್ತವ್ಯ ನಿಭಾಯಿಸಿದರು. ಎರಡು ವರ್ಷಗಳ ನಂತರ ಮತ್ತದೇ ಪ್ರದೇಶಕ್ಕೆ ಹೋಗುವ ಆಸೆಯನ್ನು ಹೊಂದಿದ್ದೇವೆ.೧೯೯೨ರಲ್ಲಿ ನೇಪಾಳ ಹೋಗುವ ಆಸೆಯಿತ್ತು. ಆದರೆ ಈ ಬಾರಿ ಜನರ ಸೇವೆ ಮಾಡುವ ಭಾಗ್ಯದಿಂದ ಅಲ್ಲಿಗೆ ಹೋಗಿದ್ದೇವೆ. ಬಡತನ ಹೆಚ್ಚಾಗಿದೆ. ನೆಪಾಳವನ್ನು ಪರಕೀಯರು ನಿಯಂತ್ರಿಸುವಂತೆ ಕಾಣುತ್ತಿದೆ. ಸರಿಯಾದ ಮೂಲಸೌಲಭ್ಯಗಳು ಸಿಗುತ್ತಿಲ್ಲ. ಆದರೂ ಯುನಿಸೆಫ್ ಮತ್ತು ಡಬ್ಲ್ಯುಹೆಚ್ ಓ ಅವರ ಕಾರ್ಯವೈಖರಿಯಿಂದ ಸಾಂಕ್ರಾಮಿಕ ರೋಗಗಳು ಯಾವುದೇ ಭಾಧಿಸಿಲ್ಲ.
ವೈದ್ಯ ಡಾ.ಗೋಪಿನಾಥ್
ಮುಖ ಮತ್ತು ಸೌಂದರ್ಯ ವಿಭಾಗದ ಮುಖ್ಯಸ್ಥರು
ಕೆ.ಎಸ್.ಹೆಗ್ಡೆ
ಆಸ್ಪತ್ರೆ

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದ ಮಂದಿ ಸ್ವಾಭಿಮಾನದಿಂದ ಬಾಳಲುವೀರರಾಣಿ ಅಬ್ಬಕ್ಕಳೇ ಕಾರಣ : ಮಂಜಪ್ಪ ಕಾರ್ನವರ್

February 5, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
ಉಳ್ಳಾಲ

ಉಳ್ಳಾಲದ ಮಂದಿ ಸ್ವಾಭಿಮಾನದಿಂದ ಬಾಳಲುವೀರರಾಣಿ ಅಬ್ಬಕ್ಕಳೇ ಕಾರಣ : ಮಂಜಪ್ಪ ಕಾರ್ನವರ್

By UllalaVaniFebruary 5, 20260

ಅಬ್ಬಕ್ಕ ಉತ್ಸವದ ಕರಪತ್ರ ಬಿಡುಗಡೆಗೊಳಿಸಿದ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರುಉಳ್ಳಾಲ: ಉಳ್ಳಾಲದ ಮಣ್ಣಿನಲ್ಲಿ ನಾವು ಖುಷಿಯಿಂದ, ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿರುವುದು…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026
1 2 3 … 1,793 Next
Automatic YouTube Gallery

ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ

ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
Now Playing
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ...
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
Now Playing
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು ...
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು

ದೇವಳದ ಆಡಳಿತ ಮೋಕ್ತೆಸರರಾದ ಎ.ಜೆ.ಶೇಖರ್ ಹೇಳಿದ್ರೂ ಅಂದಿನ ಕಥನ

#ullalavani #news #tulunad #latestnews #ullala #kapikad #umamaheshwaridevi #history
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d