UN NETWORKS
ಉಳ್ಳಾಲ: ನನ್ನೊಳಗಿನ ಅಂತರಾತ್ಮದ ಕಥನವನ್ನು ಲೋಕಾರ್ಪಣೆಗೊಳ್ಳುವ ಮುನ್ನವೇ ಅಲ್ಲಾಹನ ಕರೆಗೆ ಓಗೊಟ್ಟು ಇಂದು ನಮ್ಮನ್ನಗಲಿದ ಕರ್ನಾಟಕ ರಾಜ್ಯ ಕಂಡ ಸರಳ, ಸಜ್ಜನ ಮತ್ತು ನೇರ ನಡೆ ನುಡಿಯ ಪ್ರಾಮಾಣಿಕ ಮುಸ್ಲಿಮ್ ಸಮುದಾಯದ ಹೆಮ್ಮೆಯ ರಾಜಕಾರಣಿ
ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ ಮೊಯಿದಿನ್ ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಮ್ಮನ್ನಗಲಿದ್ದಾರೆ .
ಇವರ ಮರಣವು ಸಮಾಜಕ್ಕೆ ತುಂಬಲಾರದ ನಷ್ಟ ಇವರು ಶಿಕ್ಷಣದಲ್ಲಿ ಯಾವ ರೀತಿ ಕ್ರಾಂತಿಯ ಅಲೆ ಎಬ್ಬಿಸಿದ್ದರೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲ ಕರ್ನಾಟಕ ರಾಜ್ಯದಲ್ಲಿ ಶಿಕ್ಷಣದ ಅಲೆಯನ್ನೇ ಎಬ್ಬಿಸಿ , ಹಗಲಲ್ಲಿ ಖಾಲಿಯಾಗಿರುವ ಮದರಸಾಗಳಲ್ಲಿ ಆಂಗ್ಲ ಮಾಧ್ಯಮ ತರಗತಿಯನ್ನು ಪ್ರಾರಂಭಿಸಲು ಹೆಚ್ಚು ಒತ್ತು ನೀಡಿ , ಅಲ್ಪಸಂಖ್ಯಾತ ಸಮುದಾಯದಲ್ಲಿ ಶಿಕ್ಷಣದ ಕ್ರಾಂತಿ ಮೂಡಿಸಿದವರು. ಶಿಕ್ಷಣ ಸಚಿವರು ಆಗುವ ಮೊದಲು ಮತ್ತು ನಂತರವೂ ತನ್ನ ಜೀವನವನ್ನೇ ಈ ಸಮಾಜದ ಶಿಕ್ಷಣದ ಸಬಲೀಕರಣಕ್ಕಾಗಿ ಒತ್ತೆ ಇಟ್ಟ ಸರಳ , ಸಜ್ಜನ, ಪ್ರಾಮಾಣಿಕ ನಾಯಕ .
ಇವರ ಅಗಲುವಿಕೆಗೆ ಇಂದು ಬೆಳಗ್ಗೆ ಎಸ್.ಡಿ.ಪಿ.ಐ. ಜಿಲ್ಲಾ ಕಛೇರಿಯಲ್ಲಿ ಜಿಲ್ಲಾ ಸಮಿತಿ ಸಭೆ ಕರೆದು ಸಭೆಯಲ್ಲಿ ತೀವ್ರ ಸಂತಾಪ ಸೂಚಿಸುತ್ತಾ , ಸರ್ವಶಕ್ತನು ಅವರ ಸೇವೆಯನ್ನು ಸ್ವೀಕರಿಸಲಿ ಮತ್ತು ಇವರ ರಾಜಕೀಯ ಮತ್ತು ಸಾಮಾಜಿಕ ಜೀವನವು ಜನಪ್ರತಿನಿಧಿಗಳಿಗೆ ಮಾದರಿಯಾಗಲಿ ಎಂದು ಎಸ್.ಡಿ.ಪಿ.ಐ. ದ.ಕ. ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ಯವರು ತಿಳಿಸಿದ್ದಾರೆ .


