Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ಮಾಗಣೆಗಳ ಮಹಾ ಮಂಡಳಿ ನೂತನ ಕಚೇರಿಗೆ ಚಾಲನೆ

UllalaVaniBy UllalaVaniJuly 11, 2017No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಚ್ಚಿಲ: ದೇವಸ್ಥಾನಗಳು ದೈವಸ್ಥಾನಗಳು ಒಂದೇ ಛತ್ರದಡಿ ಬರುವ ಮೂಲಕ ಏಕರೂಪ ನಿರ್ಣಯಗಳನ್ನು ತರುವ ಕಾರ್ಯ ಮಾಗಣೆಗಳ ಮಹಾ ಮಂಡಳಿಯಿಂದ ನಡೆದಾಗ ಹಿಂದೂ ಸಮಾಜಕ್ಕೆ ಸುಭದ್ರವಾದ ಬುನಾದಿ ಹಾಕಲು ಸಹಕಾರಿ ಎಂದು ಎಂದು ಶ್ರೀ ಕ್ಷೇತ್ರ ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

unnamedಸೋಮೇಶ್ವರ ಉಚ್ಚಿಲದ ಪದ್ಮ ವಿಹಾರದಲ್ಲಿ ಉಳ್ಳಾಲ ವ್ಯಾಪ್ತಿಯ 17 ಗ್ರಾಮಗಳನ್ನೊಳಗೊಂಡ ಐದು ಮಾಗಣೆಗಳ ಎಲ್ಲಾ ಹಿಂದೂ ಸಮುದಾಯಗಳ ಒಕ್ಕೂಟವಾದ `ಮಾಗಣೆಗಳ ಮಹಾ ಮಂಡಳಿ’ ಇದರ ನೂತನ ಕಚೇರಿಗೆ ಚಾಲನೆ ನೀಡಿ ಮಾತನಾಡಿದರು.

ದೇವಸ್ಥಾನಗಳಲ್ಲಿ ಆರಾಧನೆ ಸಂಸ್ಕøತಿ ಅವರವರ ಭಾವಕ್ಕೆ ತಕ್ಕಂತೆ ಇರುವುದು ಸಹಜ ಆದರೆ ದೇವಸ್ಥಾನಗಳು ವ್ಯವಾಹಾರಿಕ ತಾಣವಾಗದೆ ಸಮಾಜದ ವಿಚಾರಗಳ ಕಡೆ ಹೆಚ್ಚಿನ ಒಲವು ನೀಡುವ ಕಾರ್ಯದೊಂದಿಗೆ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಒಲವು ನೀಡಬೇಕು ಎಂದರು.

ಖ್ಯಾತ ಸಾಹಿತಿ ಹಿರಿಯ ಸಮಾಜಿಕ ಚಿಂತಕ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ ಮಾಗಣೆಗಳ ಮಹಾ ಮಂಡಳಿ ಯಾವಾಗಲೂ ಆಗಬೇಕಾದ ಕಾರ್ಯವಾಗಿತ್ತು. ಆದರೆ ತಡವಾಗಿಯಾದರೂ ಒಕ್ಕೂಟ ನಡೆಸುತ್ತಿರುವುದು ಶ್ಲಾಘನೀಯ. ಹಿಂದೂ ಸಮಾಜ ಮಾತ್ರವಲ್ಲ ಎಲ್ಲಾ ಸಮಾಜದ ಜಾತಿಯಲ್ಲಿ ಉಪ ಜಾತಿಗಳಿವೆ ಆದರೆ ಹಿಂದೂಗಳಲ್ಲಿ ಮಾತ್ರ ಒಂದು ಬೇರೆ ಬೇರೆ ಜಾತಿಯನ್ನು ಎತ್ತಿಕಟ್ಟುವ ಕಾರ್ಯ ನಡೆಯುತ್ತಿದೆ. ರಾಜಕೀಯದಲ್ಲೂ ಧರ್ಮ ಮತ್ತು ಜಾತೀಯತೆಯ ವಿಚಾರ ಹೆಚ್ಚಿದ್ದು ಖೇದನೀಯ ಎಂದರು.

ಹಿಂದೂ ಸಮಾಜ ಅತ್ಯಂತ ಪ್ರಾಚೀನ ಮತ್ತು ವೈe್ಞÁನಿಕತೆಯನ್ನು ಹೊಂದಿತ್ತು. ಹಿಂದೆ ಪ್ರತಿಯೊಂದು ವಿಚಾರವನ್ನು ಖರಾರುವಕ್ಕಾಗಿ ಪಂಚಾಂಗದಲ್ಲಿ ಮಾಹಿತಿ ನೀಡುತ್ತಿದ್ದರು. ಅದು ಇಂದಿನ ವೈe್ಞÁನಿಕ ಯುಗದಲ್ಲಿ ಸಾಬೀತಾಗಿದೆ ಎಂದ ಅವರು ಹಿಂದೂ ಸಮಾಜದ ಸಂಸ್ಕಾರ ನೀಡುವ ಕೇಂದ್ರಗಳಾದ ದೇವಸ್ಥಾನ, ದೈವಸ್ಥಾನಗಳನ್ನು ಒಗ್ಗೂಡಿಸುವ ಕಾರ್ಯ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಬ್ರಹ್ಮ ಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಉತ್ತಮ ಕಾರ್ಯವನ್ನು ಮಾಡಿದ್ದಾರೆ ಎಂದರು.

ಮಾಗಣೆಗಳ ಮಹಾ ಮಂಡಳಿಯ ಅಧ್ಯಕ್ಷರಾದ ಬ್ರಹ್ಮ ಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಮಾತನಾಡಿ ಭಾರತದಲ್ಲಿ ಹಿಂದಿನಿಂದಲೂ ಹಿಂದೂ ಸಮಾಜವನ್ನು ಒಡೆದು ಮತಾಂತರ ಮಾಡುವ ಪ್ರಯತ್ನ ನಡೆದಿದ್ದು, ಮೊಗಲರ ಆಳ್ವಿಕೆ ಸಂದರ್ಭದಲ್ಲಿ ಬ್ರಿಟಷರ ಆಡಳಿತ ಸಂದರ್ಭದಲ್ಲಿ ಪ್ರಯತ್ನಗಳು ನಡೆಯುತ್ತಲೇ ಬಂದಿದೆ. ಆದರೆ ಸುಮಾರು 800 ವರ್ಷಗಳ ಹಿಂದೆ ಇಲ್ಲಿ ಅಕ್ರಮಣ ಮಾಡಿದವರಿಗೆ ಭಾರತವನ್ನು ಮತಾಂತರ ಮಾಡಲು ಸಾಧ್ಯವಾಗಿಲ್ಲ ಯಾಕೆಂದರೆ ನಮ್ಮಲ್ಲಿರುವ ಬಲವಾದ ಸಂಪ್ರದಾಯ, ಕುಟಂಬ ವ್ಯವಸ್ಥೆ, ಗ್ರಾಮ ವ್ಯವಸ್ಥೆ, ಮಾಗಣೆ ವ್ಯವಸ್ಥೆ, ಸೀಮೆ ವ್ಯವಸ್ಥೆ ಮತ್ತು ಪರಸ್ಪರ ಸಹಕಾರ ಇದಕ್ಕೆ ಕಾರಣವಾಗಿದ್ದು,ಹಿಂದೆ ಮೇಲು ಕೀಳೆಂಬದೆ ನಮ್ಮ ವ್ಯವಸ್ಥೆ, ಸಂಪ್ರದಾಯ, ದೇವಸ್ಥಾನ ರಕ್ಷಣೆಗೆ ನಾವು ಕಂಕಣ ಬದ್ಧರಾಗಿದ್ದೆವು. ಆದರೆ ಸ್ವಾತಂತ್ರ್ಯ ನಂತರ ಬ್ರಿಟೀಷರ ಮಾದರಿಯಲ್ಲೇ ಇಸ್ಲಾಮಿಸಂ, ಕಮ್ಯುನಿಸಂ ಹಿಂದೂ ಸಮಾಜವನ್ನು ವಿಭಜಿಸಿ ನಾಶಪಡಿಸುವ ಕಾರ್ಯಗಳಿಗೆ ಕಾರ್ಯಕ್ಕೆ ಕೈ ಹಾಕಿದೆ. ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರ ಇದರೊಂದಿಗೆ ಕಮ್ಯನಿಸಂ ವಿವಿಗಳ ಮೂಲಕ ವೈಚಾರಿಕತೆಯನ್ನು ಬಿತ್ತುವ ಕಾರ್ಯ ಮಾಡುತ್ತಿದ್ದು, ಇದರ ವಿರುದ್ಧ ನಾವು ಜಾಗೃತರಾಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಗಣೆಗಳ ಮಹಾಮಂಡಳಿ ದುಡಿದ ಹಿರಿಯರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷ ರವೀಂದ್ರನಾಥ ಶೆಟ್ಟಿ, ಶ್ರೀ ಸೋಮೇಶ್ವರ ಸೋಮನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ. ಉಚ್ಚಿಲ್ ಉಪಸ್ಥಿತರಿದ್ದರು.

ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೋಹನ್‍ದಾಸ್ ಗಾಂಭೀರ್ ಸ್ವಾಗತಿಸಿದರು. ಉಪ ಕಾರ್ಯದರ್ಶಿ ಸತ್ಯನಾರಾಯಣ ಹೂಡೆ ದೇವಸ್ಥಾನ ದೈವಸ್ಥಾನಗಳ ಮತ್ತು ಸಮುದಾಯಗಳ ಪ್ರತಿನಿ„ಗಳನ್ನು ಪರಿಚಯಿಸಿದರು, ಸದಸ್ಯ ರಾಜೇಶ್ ಶೆಟ್ಟಿ ಪಜೀರುಗುತ್ತು ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟಿ ಯಶವಂತ ಉಚ್ಚಿಲ್ ವಂದಿಸಿದರು.

* ನಮ್ಮ ಹಿಂದಿನ ಪೂರ್ವಜರು ಹಾಕಿಕೊಟ್ಟ ಮಾಗಣೆಗಳ ಸ್ವರೂಪದಂತೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜವನ್ನು ಒಂದು ಮಾಡುವ ನಿಟ್ಟಿನಲ್ಲಿ ಹಿಂದಿದ್ದ ವ್ಯವಸ್ಥೆಯನ್ನು ಪುನರ್ ನವೀಕರಣ ಮಾಡುವ ಕಾರ್ಯ ಈಗ ಮಾಡಬೇಕಾಗಿದೆ. ಉಳ್ಳಾಲ ವ್ಯಾಪ್ತಿಯ 17 ಗ್ರಾಮಗಳನ್ನೊಳಗೊಂಡ ಐದು ಮಾಗಣೆಗಳ ಎಲ್ಲಾ ಹಿಂದೂ ಸಮುದಾಯಗಳ ಒಕ್ಕೂಟವಾದ `ಮಾಗಣೆಗಳ ಮಹಾ ಮಂಡಳಿ’ಯನ್ನು ಆರಂಭದ ಹಂತದಲ್ಲಿ ಒಟ್ಟು ಸೇರಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳನ್ನು ಸೇರಿಸಲಾಗುವುದು ಈ ಕಾರ್ಯದಲ್ಲಿ ಹಿಂದೂ ಸಮಾಜದ ಎಲ್ಲರ ಸಹಕಾರ ಅಗತ್ಯ

ಬ್ರಹ್ಮ ಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು
ಅಧ್ಯಕ್ಷರು, ಮಾಗಣೆಗಳ ಮಹಾ ಮಂಡಳಿ

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದ ಮಂದಿ ಸ್ವಾಭಿಮಾನದಿಂದ ಬಾಳಲುವೀರರಾಣಿ ಅಬ್ಬಕ್ಕಳೇ ಕಾರಣ : ಮಂಜಪ್ಪ ಕಾರ್ನವರ್

February 5, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
ಉಳ್ಳಾಲ

ಉಳ್ಳಾಲದ ಮಂದಿ ಸ್ವಾಭಿಮಾನದಿಂದ ಬಾಳಲುವೀರರಾಣಿ ಅಬ್ಬಕ್ಕಳೇ ಕಾರಣ : ಮಂಜಪ್ಪ ಕಾರ್ನವರ್

By UllalaVaniFebruary 5, 20260

ಅಬ್ಬಕ್ಕ ಉತ್ಸವದ ಕರಪತ್ರ ಬಿಡುಗಡೆಗೊಳಿಸಿದ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರುಉಳ್ಳಾಲ: ಉಳ್ಳಾಲದ ಮಣ್ಣಿನಲ್ಲಿ ನಾವು ಖುಷಿಯಿಂದ, ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿರುವುದು…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026
1 2 3 … 1,793 Next
Automatic YouTube Gallery

ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ

ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
Now Playing
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ...
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
Now Playing
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು ...
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು

ದೇವಳದ ಆಡಳಿತ ಮೋಕ್ತೆಸರರಾದ ಎ.ಜೆ.ಶೇಖರ್ ಹೇಳಿದ್ರೂ ಅಂದಿನ ಕಥನ

#ullalavani #news #tulunad #latestnews #ullala #kapikad #umamaheshwaridevi #history
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d