Author: UllalaVani

Kannada News From Coastal Karnataka

ಮುಡಿಪು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಡಿಪು ಶಾಖೆಯ 9ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಮುಡಿಪು ಶಾಖೆಯಲ್ಲಿ ಜರುಗಿತು.ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ನವೀನ್ ಚಂದ್ರ, ಕಾಶೀಮ್ ಕೆ, ಶ್ರೀಮತಿ ಕ್ಯಾತರಿನ್ ಡಿಸೋಜ ಹಾಗೂ ದುಶ್ಯಂತ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಘದ ಸದಸ್ಯರಾದ ನವೀನ್ ಚಂದ್ರ ರವರು ಮಾತನಾಡಿ “ಸಂಘದ ಸಿಬ್ಬಂದಿ ವರ್ಗದವರು ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿರುವುದು ಸಂಘದ ಉನ್ನತಿಗೆ ಕಾರಣವಾಗಿದೆ. ಸಂಘವು ಬ್ಯಾಂಕಿಂಗ್ ಸೇವೆಯ ಜೊತೆಗೆ ಸಂಘದ ಸದಸ್ಯರ ಆರೋಗ್ಯದ ಕಾಳಜಿಯಿಂದ ಉಚಿತ ವೈಧ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಇನ್ನು ಹೆಚ್ಚಿನ ಸೇವೆಯನ್ನು ಗ್ರಾಹಕರಿಗೆ ನೀಡುವಂತಾಗಲಿ” ಎಂದು ಆಶಿಸಿದರು.ಸಂಘದ ಸದಸ್ಯರಾದ ಕಾಸಿಮ್ ಕೆ ಇವರು ಮಾತನಾಡಿ “ಸಂಘವು ಅತೀ ಕಡಿಮೆ ಅವಧಿಯಲ್ಲಿ ಸಾಧಿಸಿರುವ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇನ್ನೂ ಹೆಚ್ಚಿನ ಶಾಖೆಯನ್ನು ತೆರೆಯುವಂತಾಗಲಿ” ಎಂದು ಶುಭ ಹಾರೈಸಿದರು.ಸಂಘದ ಅಧ್ಯಕ್ಷರಾದ ಸಹಕಾರ…

Read More

ದೇರಳಕಟ್ಟೆ : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಾಟೆಕಲ್ ಶಾಖೆಯ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ನಾಟೆಕಲ್ ಶಾಖೆಯಲ್ಲಿ ಇತ್ತೀಚೆಗೆ ಜರುಗಿತು.ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಆನಂದ್ ಕೆ, ಎಸ್. ಜಯಪ್ರಸಾದ್, ಅಬ್ಬಾಸ್ ಎಮ್, ಮಹಮ್ಮದ್ ಎ. ಎಸ್ ಹಾಗೂ ಶ್ರೀಮತಿ ಮಾಲತಿ ಕೆ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಘದ ಸದಸ್ಯರಾದ ಆನಂದ್ ಕೆ ರವರು ಮಾತನಾಡಿ “ಯಾವುದೇ ಒಂದು ಸಂಘವು ಬೆಳೆಯಬೇಕಾದರೆ ಎರಡು ಅಂಶಗಳು ಮುಖ್ಯವಾಗಿರುತ್ತದೆ. ಒಂದು ಸಂಸ್ಥೆಯನ್ನು ಮುನ್ನಡೆಸುವ ವ್ಯಕ್ತಿಯ ಆತ್ಮಸ್ಥೈರ್ಯ, ಇನ್ನೊಂದು ಅವರಿಗಿರುವ ವ್ಯಕ್ತಿತ್ವ. ಇವೆರಡು ನಮ್ಮ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರಲ್ಲಿ ಕಾಣಸಿಗಬಹುದು ಎಂದು ಶ್ಲಾಘಿಸಿದರು. ಮುಖ್ಯವಾಗಿ ಇವರು ಸಂಘದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿರುತ್ತಾರೆ. ಹೀಗಾಗಿ ಸಂಘವು ನೀಡುತ್ತಿರುವ ಗುಣಮಟ್ಟದ ಸೇವೆಯೇ ಸಂಘವು ಈ ಮಟ್ಟಕ್ಕೆ ಬೆಳೆಯಲು ಕಾರಣ” ಎಂದರು.ಸಂಘದ ಸದಸ್ಯರಾದ ಅಬ್ಬಾಸ್ ಎಮ್…

Read More

ಬಂಟ್ವಾಳ, ಅ. 30: ಬಿಸಿಲೆ ಘಾಟ್ ನಲ್ಲಿ ಅಪಘಾತದ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದ ಸಮಯ ಅಲ್ಲಿನ ವೈದ್ಯರು ತುರ್ತು ಚಿಕಿತ್ಸೆ ನೀಡಿ ಗಂಭೀರ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ KA.22.C.1382 ನೇ ಅಂಬ್ಯುಲೆನ್ಸ್ ನಲ್ಲಿ ಪುತ್ತೂರಿನಿಂದ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮದ್ಯಾಹ್ನ 1.30 ಕ್ಕೆ ಬಂಟ್ವಾಳ ತಾಲೂಕು ಬಿ.ಸಿ.ರೋಡ್ ಎನ್ ಜಿ ಸರ್ಕಲ್ನಿಂದ ಅಂಬ್ಯುಲೆನ್ಸ್ ಮುಂದಿನಿಂದ KA.19.EK.0696 ನೇ ದ್ವಿಚಕ್ರ ವಾಹನ ಸವಾರ ಅಂಬ್ಯುಲೆನ್ಸ್ ನ ಸೈರನ್ ಶಬ್ದ ಕೇಳಿಯೂ ಗೆ ದಾರಿ ಬಿಟ್ಟು ಕೊಡದೆ ಅಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ವ್ಯಕ್ತಿಯಾದ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಮಹಮ್ಮದ್ ಮನ್ಸೂರು ( 38) ಎಂಬಾತನ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ 128/2025 ಕಲಂ:110, 125 ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Read More

ಉಳ್ಳಾಲ, ಅ. 30: ವಾಟ್ಸಾಪ್ ನಲ್ಲಿ ಭಾರತ ದೇಶಕ್ಕೆ ವಿರುದ್ಧ ವಾಗಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಟಿಸಿರೋಡ್ ನ ಮೊಹಮ್ಮದ್ ಹನೀಫ್ (48), ಉಚ್ಚಿಲ ನಿವಾಸಿ ಮನೋಜ್ (56), ಫರಂಗಿಪೇಟೆ ನಿವಾಸಿ ಉಮ್ಮರ್ ಫಾರೂಕ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೋಮು ಸಂಘರ್ಷಕ್ಕೆ ಪ್ರಚೋದನೆಯಾಗುವಂತಹ ಪೋಸ್ಟ್ ಅನ್ನು ವಾಟ್ಸಾಪ್ ನಲ್ಲಿ ಹರಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ ಉಳ್ಳಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Read More

ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ (SIR) ಮತಗಟ್ಟೆ BLA 2 ಕಾರ್ಯಾಗಾರ ಬಂಟರ ಭವನ ಅಸೈಗೋಳಿಯಲ್ಲಿ ನಡೆಯಿತು. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ಕಾರ್ಯಗಾರವನ್ನು ಉದ್ಘಾಟನೆ ಮಾಡಿ ಕಾರ್ಯಗಾರದ ಮಹತ್ವವನ್ನು ತಿಳಿಸಿದರು.ಮಂಡಲ ಅಧ್ಯಕ್ಷ ಜಗಧೀಶ್ ಆಳ್ವಾ ಕುವೆತ್ತಬೈಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಸೂಕ್ತ ಸಲಹೆ ಸೂಚನೆ ನೀಡಿ, ಮಂಡಲದ BLA -1 ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು BLA-2 ಗಳಾಗಿ ಜವಾಬ್ದಾರಿ ವಹಿಸಿದ ಎಲ್ಲರೂ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು. ಮಂಡಲದ ಪ್ರಭಾರಿ ದಿನೇಶ್ ಅಮ್ಮ್ಟೂರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ. ಆರ್ ಸ್ವಾಗತಿಸಿದರು, ಮಂಡಲದ ಉಪಾಧ್ಯಕ್ಷರಾದ ಯಶವಂತ ದೇರಾಜೆ ಧನ್ಯವಾದ ನೀಡಿದರು. ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು ಮತ್ತು…

Read More

ಉಳ್ಳಾಲ,ಅ.30: ಮಂಜೇಶ್ವರದಲ್ಲಿ ಕಾರ್ಯಾಚರಿಸುತ್ತಿರುವ ಮಳ್‌ಹರ್ ನೂರಿಲ್ ಇಸ್ಲಾಮಿತ್ತ ಅಲೀಮಿ ಇದರ ಅಧೀನದಲ್ಲಿ `ಅಲ್ ಖಲಂ ಮಳ್‌ಹರ್ ಫೆಸ್ಟ್’ ಕಾರ್ಯಕ್ರಮವು ನವೆಂಬರ್ 6 ರಿಂದ 9 ರವರೆಗೆ ಬುಖಾರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಮಳ್‌ಹರ್ ವಿದ್ಯಾ ಸಂಸ್ಥೆ ವಿದ್ಯಾರ್ಥಿ ಫಾಝಿಲ್ ಮಂಗಳೂರು ಹೇಳಿದರು. ಅವರು ತೊಕ್ಕೊಟ್ಟು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ನವೆಂಬರ್ 6ರಂದು ಸಂಜೆ 5 ಗಂಟೆಗೆ ಮಳ್‌ಹರ್ ದಅವಾ ಕಾಲೇಜಿನ ಪ್ರಾಧ್ಯಾಪಕ ಸಯ್ಯಿದ್ ಮುಸ್ತಫಾ ಸಿದ್ದೀಖಿ ಅಲ್ ಬುಖಾರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಳ್‌ಹರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಳ್‌ಹರ್ ದಅವಾ ಕಾಲೇಜು ಅಡ್ಮಿನಿಸ್ಟ್ರೇಟೇಟಿವ್ ಹಸನ್ ಸಅದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಜೇಶ್ವರ ಕ್ಷೇತ್ರದ ಶಾಸಕ ಎಕೆಎಂ ಅಶ್ರಫ್ ಮುಖ್ಯ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕೇರಳದ ಖ್ಯಾತ ಗಾಯಕ ಹಾಫಿಲ್ ಮುಬಶ್ಶಿರ್ ಅದನಿ ಮತ್ತು ಅವರ ತಂಡ ಮದ್‌ಹ್ ಮಜ್‌ಲಿಸ್‌ಗೆ ನೇತೃತ್ವ ವಹಿಸಲಿದ್ದಾರೆ ಎಂದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ…

Read More

ಮಲ್ಪೆ ,ಅ.30: ಸುಮಾರು 20 ಅಡಿ ಆಳದ ಕೆರೆ ನೀರಿಗೆ ಬಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿರುವ ಚೀಲವನ್ನು ಮೇಲಕ್ಕೆತ್ತಿದ ಈಶ್ವ‌ರ್ ಮಲ್ಪೆ ಅವರ ತಂಡ ವಾರಸುದಾರರಿಗೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಚಿಕ್ಕಮಗಳೂರು ಮಾಗಡಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕೆರೆಗೆ ಬಿದ್ದಿತ್ತು. ಅದರಲ್ಲಿದ್ದ ಜ್ಯುವೆಲ್ಲರಿ ಅಂಗಡಿಯ ಮಾಲೀಕ ಈಜಿ ದಡ ಸೇರಿದ್ದರು. ಕಾರನ್ನು ಕ್ರೇನ್ ತರಿಸಿ ಮೇಲಕ್ಕೆತ್ತಲಾಯಿತು. ಆದರೆ ಕಾರಿನಲ್ಲಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಚೀಲ ನೀರಿನಲ್ಲಿ ಬಿದ್ದಿತ್ತು. ಕೂಡಲೇ ಉಡುಪಿಯ ಈಶ್ವರ್ ಮಲ್ಪೆಗೆ ಕರೆ ಮಾಡಿ ತಿಳಿಸಲಾಯಿತು. ಕೂಡಲೇ ಅಲ್ಲಿಗೆ ತೆರಳಿದ್ದ ಈಶ್ವ‌ರ್ ಮಲ್ಪೆ ಅವರ ತಂಡ ಕೇವಲ 15 ನಿಮಿಷದಲ್ಲಿ ಚಿನ್ನದ ಚೀಲವನ್ನು ನೀರಿನಿಂದ ಮೇಲಕ್ಕೆತ್ತಿದರು. ಈ ಕುರಿತು ಮಾತನಾಡಿದ ಈಶ್ವರ್ ಮಲ್ಪೆ, ‘ಈ ಮೊದಲು ಕೂಡ ಸಾಕಷ್ಟು ಬಾರಿ ನೀರಿಗೆ ಬಿದ್ದ ಚಿನ್ನಾಭರಣಗಳನ್ನು ಹುಡುಕಿ ಕೊಟ್ಟಿದ್ದೇನೆ. ಇದೇ ಮೊದಲ ಸಲ ಏನಲ್ಲ. ಆದರೆ, ಈ ಬಾರಿ ಲಕ್ಷಾಂತರ ಮೌಲ್ಯದ…

Read More

ಮಂಗಳೂರು, ಅ.30:ರೋಹನ್ ಕಾರ್ಪೊರೇಶನ್ ಸಂಸ್ಥೆಯ ಸ್ಥಾಪಕ ಡಾ.ರೋಹನ್ ಮೊಂತೆರೋ ರವರು ಲಯನ್ಸ್ ಜಿಲ್ಲಾ 317D ರ ‘ಸನ್ಮಿತ್ರ’ ಜಿಲ್ಲಾ ಡೈರೆಕ್ಟರಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಯನ್ಸ್ ಕ್ಲಬ್‌ಗಳು ಕೈಗೊಂಡಿರುವ ವಿವಿಧ ಸೇವಾ ಚಟುವಟಿಕೆಗಳನ್ನು ಮೆಚ್ಚಿಕೊಂಡು, “ಲಯನ್ಸ್ ಜಿಲ್ಲಾ 317D ಕೈಗೊಂಡಿರುವ ಸಮಾಜಮುಖಿ ಕಾರ್ಯಕ್ರಮಗಳಿಗೆ ಬೆಂಬಲ ನೀಡಲು ನನಗೆ ಸಂತೋಷವಾಗಿದೆ” ಎಂದು ಹೇಳಿದರು. ಈ ಜಿಲ್ಲೆಯಲ್ಲಿ ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಾದ್ಯಂತ 120ಕ್ಕೂ ಹೆಚ್ಚು ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ, ಜಿಲ್ಲಾ ಖಜಾಂಚಿ ಬಾಲಕೃಷ್ಣ ಹೆಗ್ಡೆ, ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ್ ರೈ, ಡೈರೆಕ್ಟರಿ ಸಂಪಾದಕಿ ಗೀತಾ ಕಲ್ಯಾಣಪುರ, ನ್ಯಾನ್ಸಿ ಮಸ್ಕರೆನಸ್, ದಯಾವತಿ ಮೆಂಡೋನ್, ಲಿಡಿಯಾ ಡಿ’ಕೋಸ್ಟಾ, ಹೇಮಾ ರಾವ್, ಸೀಮಾ ಮಯ್ಯಾ ಮತ್ತು ಮೊಹಿದಿನ್ ಕುಂಞಿ ಉಪಸ್ಥಿತರಿದ್ದರು

Read More

ಬೀರಿ,ಅ.30: ಬೀರಿ ಜಂಕ್ಷನಿಗೆ ಕಳಸವಿದ್ದಂತೆ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿರುವ ಐಸ್ ಕೆಫೆ ಸದ್ಯ ವೆರೈಟಿಯಾದ ತಿನಿಸುಗಳನ್ನು ನೀಡುವಲ್ಲಿ ಹೆಸರುವಾಸಿಯಾಗುತ್ತಿದೆ. ಇಲ್ಲಿ ಹಾಟ್ ಆ್ಯಂಡ್ ಕೂಲ್ ಆಂಬಿಯೆನ್ಸ್ ಜೊತೆ ಆಕರ್ಷಕವಾದ ಸೋಫಾದಲ್ಲಿ ಕುಳಿತು ನಿಮಗೆ ಇಷ್ಟವಾದ ವೆರೈಟಿ ಫುಡ್‌ಗಳನ್ನು ನೀವು ಟೇಸ್ಟ್ ಮಾಡಬಹುದಾಗಿದೆ. ವಿಶಾಲವಾದ ಇನ್ಸೈಡ್ ಸೀಟಿಂಗ್ ಕೆಪ್ಯಾಸಿಟಿ ಜೊತೆಗೆ ಹೊರಗಡೆ ಕುಳಿತು ನಿಮಗೆ ಇಷ್ಟವಾದ ತಿನಿಸುಗಳನ್ನು ನೀವು ಆರ್ಡರ್ ಮಾಡಿದರೆ ಕೆಲವೇ ಕ್ಷಣಗಳಲ್ಲಿ ನೀವು ಕೇಳಿದ ತಿನಿಸುಗಳು ನಿಮಗೆ ಇಷ್ಟವಾದ ರೀತಿಯಲ್ಲಿ ನಿಮಗೆ ಸಿಗುವುದಂತು ಗ್ಯಾರಂಟಿ. ಎಗ್ ಮ್ಯಾಗಿ, ಚಿಕನ್ ಮ್ಯಾಗಿ, ಎಗ್ ರೋಲ್, ಚಿಕನ್ ರೋಲ್, ವೆಜ್ ಅಂಡ್ ನಾನ್ ವೆಜ್, ಪಾಸ್ತಾ, ಬ್ರೋಸ್ಟೆಡ್ ಚಿಕನ್, ಚಿಕನ್ ಪಾಪ್ಸ್, ಚಿಕನ್ ಬರ್ಗರ್, ಚಿಕನ್ ಲೋಡೆಡ್ ಫ್ರೆಂಚ್ ಫ್ರೆöÊಸ್, ವೆಜ್ ಬರ್ಗರ್, ಚಿಕನ್ ಪಿಜ್ಜಾ, ಸ್ಯಾಂಡ್ವಿಚ್ ಇದು ಇವರ ಸಿಗ್ನೇಚರ್ ಡಿಶ್ ಅಂತ ಹೇಳಬಹುದು. ಇಷ್ಟೆಲ್ಲಾ ತಿಂದು ಕುಡಿಯೋಕೆ ಏನು ಅಂತ ಯೋಚನೆ ಮಾಡುವವರಿಗೆ ಇಲ್ಲಿದೆ ಐಸ್ ಕೆಫೆ ಯ ವೆರೈಟಿ…

Read More

ಬೆಂಗಳೂರು, ಅ.30:ರಾಜ್ಯದಲ್ಲೀಗ ಸಿಎಂ ಬದಲಾಗ್ತಾರಾ? ಇಲ್ವಾ? ಅನ್ನೋದೇ ದೊಡ್ಡ ಚರ್ಚೆ. ಸಿದ್ದರಾಮಯ್ಯ ಮುಂದುವರೀತಾರೆ ಅನ್ನೋ ವಾದ ಒಂದು ಕಡೆ ಇದ್ರೆ, ಡಿ.ಕೆ.ಶಿವಕುಮಾರ್​ ಸಿಎಂ ಆಗೋದು ಪಕ್ಕಾ ಅನ್ನೋದು ಮತ್ತೊಂದು ವಾದ. ಎರಡು ಕಡೆಯ ಬೆಂಬಲಿಗರಲ್ಲಿ ಇಂತಾದ್ದೊಂದು ಭಾವನೆ ಇದೆ. ಈ ಬೆಳವಣಿಗೆಯನ್ನ ಮತ್ತಷ್ಟು ರೋಚಕ ಮಾಡಿರೋದು ಮತ್ತೊಂದು ವಿಷಯ ಅದೇ ದಲಿತ ಸಿಎಂ ಅಸ್ತ್ರ, ಡಾ.ಜಿ.ಪರಮೇಶ್ವರ್​​, ಸತೀಶ್​ ಜಾರಕಿಹೊಳಿ, ಡಾ.ಹೆಚ್​​​.ಸಿ.ಮಹದೇವಪ್ಪ ಪದೇ ಪದೇ ಭೇಟಿ ಮಾಡ್ತಿರೋದು ಚರ್ಚೆ ಮಾಡ್ತಿರೋದು ಗೊತ್ತಿರೋ ವಿಚಾರವೇ. ಅದರ ನಡುವೆ ಆಹಾರ ಮತ್ತು ನಾಗರೀಕ ಸಚಿವ ಕೆ.ಎಚ್​​.ಮುನಿಯಪ್ಪ ಅವರೇ ಬೇಕಾದ್ರೆ ಸಿಎಂ ಆಗಲಿ ಅಂತಾ ಗೃಹ ಸಚಿವ ಪರಮೇಶ್ವರ್​ ಅವರೂ ಹೇಳಿ ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾದ್ರು. ಈ ಚರ್ಚೆಗಳೆಲ್ಲಾ ಒಂದು ಕಡೆಯಾದ್ರೆ ಇದುವರೆಗೂ ಕಾಂಗ್ರೆಸ್​​ನಲ್ಲಿ ಯಾವೆಲ್ಲಾ ಸಮುದಾಯದವರು ಮುಖ್ಯಮಂತ್ರಿಗಳಾಗಿದ್ದಾರೆ ಗೊತ್ತಾ?ಯಾವ್ಯಾವ ಸಮುದಾಯದವರು ಮುಖ್ಯಮಂತ್ರಿಗಳಾಗಿದ್ರು?1947 – 1952                ಕೆ.ಸಿ.ರೆಡ್ಡಿ               …

Read More