Author: UllalaVani

Kannada News From Coastal Karnataka

ರಾಜ್ಯ ವಿಧಾನಸಭೆಯ ಹಾಲಿ ಸ್ಪೀಕರ್‌ ಯು.ಟಿ.ಖಾದರ್ ವಿರುದ್ಧ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ನಡೆದ ಪುಸ್ತಕ ಮೇಳದಲ್ಲಿ ಭ್ರಷ್ಟಾಚಾರ ಎಸಗಲಾಗಿದೆ. ಬೆಂಗಳೂರಿನ ಶಾಸಕರ ಭವನದ ರೂಮುಗಳಿಗೆ ಕೇವಲ 11 ಸಾವಿರ ರೂಪಾಯಿ ಸ್ಮಾರ್ಟ್ ಲಾಕ್ ಹಾಕಿದ್ದು, ಅದರ ಮೂರು ಪಟ್ಟು ಬಿಲ್ ಮಾಡಿ ಹಣ ಪಡೆದಿದ್ದಾರೆ. ಅಧಿವೇಶನದ ವೇಳೆ ಶಾಸಕರಿಗೆ ಅಗತ್ಯ ಇಲ್ಲದಿದ್ದರೂ ಊಟ, ತಿಂಡಿ ವ್ಯವಸ್ಥೆ, ರೀಕ್ಲೇನರ್ ಚೇರ್ ವ್ಯವಸ್ಥೆ ಮಾಡಿ ಹಣ ಪೋಲು ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.  ಮಂಗಳೂರು ಕಡೆಯವರಿಗೆ, ತಮ್ಮ ಆಪ್ತರಿಗೆ  ಬಹಳಷ್ಟು ಗುತ್ತಿಗೆಗಳನ್ನು ನೀಡಿ ಸ್ವಜನ ಪಕ್ಷಪಾತ ಎಸಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲ ಆರೋಪಗಳಿಗೆ ವಿದೇಶದಿಂದ ಬಂದ ಸ್ಪೀಕರ್ ಯು.ಟಿ. ಖಾದರ್ ಉತ್ತರ ನೀಡಿದ್ದಾರೆ. ಆರೋಪಗಳನ್ನು ನಿರಾಕರಿಸಿದ್ದಾರೆ. ಹಾಲಿ  ಸಂಸದರಾಗಿರುವ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಪತ್ರ ಬರೆದರೇ, ಉತ್ತರ ನೀಡುವುದಾಗಿ ಹೇಳಿದ್ದಾರೆ.  ಇದರ ಬೆನ್ನಲ್ಲೇ ಈ…

Read More

ಮಂಗಳೂರು, ಅ.30: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶ ದ್ವಾರದಿಂದ ಬಜ್ಪೆವರೆಗಿನ ರಾಜ್ಯ ಹೆದ್ದಾರಿ ಹೊಂಡ ಗುಂಡಿಗಳಿಂದ ಕೂಡಿದ್ದು, ಡಾಂಬರು ಕಳಚಿ ಹೋಗಿ ತೀವ್ರ ಹದಗೆಟ್ಟಿದೆ. ಸಂಬಂಧಿಸಿದ ಇಲಾಖೆ ಮುಂದಿನ 15 ದಿನದ ಒಳಗೆ ಈ ರಸ್ತೆಯನ್ನು ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ ದ.ಕ. ಜಿಲ್ಲಾ ಸಮಿತಿ ಹಾಗೂ ಮಂಗಳೂರು ತಾಲೂಕು ಸಮಿತಿ ಎಚ್ಚರಿಸಿದೆ. ವಿಮಾನ ನಿಲ್ದಾಣದ ಪ್ರವೇಶ ದ್ವಾರದಿಂದ ಬಜ್ಪೆವರೆಗಿನ ರಸ್ತೆಯು ಇತ್ತೀಚಿನ ಭಾರೀ ಮಳೆಯಿಂದಾಗಿ ಡಾಂಬರು ಸಂಪೂರ್ಣವಾಗಿ ಕಳಚಿ ಹೋಗಿ ರಸ್ತೆಯಲ್ಲಿ ಅಪಾಯಕಾರಿ ಹೊಂಡ-ಗುಂಡಿಗಳು ನಿರ್ಮಾಣವಾಗಿದೆ. ಇದರಿಂದಾಗಿ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಪ್ರಯಾಣಿಸುವುದೇ ಕಷ್ಟಕರವಾಗಿದೆ.ಇತ್ತೀಚಿನ ದಿನಗಳಲ್ಲಿ ಕೆಲ ದ್ವಿಚಕ್ರ ವಾಹನ ಸವಾರರು ಈ ಭಾಗದಲ್ಲಿ ಅಪಾಯಕಾರಿ ಗುಂಡಿ ತಪ್ಪಿಸಲು ಹೋಗಿ ತಮ್ಮ ವಾಹನ ಸಮೇತ ರಸ್ತೆ ಗುಂಡಿಗೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲ ದ್ವಿಚಕ್ರ ವಾಹನ…

Read More

ಭಾರತದ 29 ವರ್ಷದ ಯುವಕನೊಬ್ಬ ಅಬುಧಾಬಿಯಲ್ಲಿ 240 ಕೋಟಿ ರೂಪಾಯಿ ಜಾಕ್ ಪಾಟ್‌ ಲಾಟರಿ ಗೆದ್ದಿದ್ದಾನೆ.  ಭಾರತದ ಅನಿಲ್ ಕುಮಾರ್ ಬೊಲ್ಲಾ ಎಂಬಾತನೇ ಆ ಅದೃಷ್ಟಶಾಲಿ. ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ಲಕ್ಕಿ ಡೇ ಡ್ರಾನಲ್ಲಿ ಅನಿಲ್ ಕುಮಾರ್ ಗ್ರ್ಯಾಂಡ್ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಲಾಟರಿ ವಿಜೇತ ಅನಿಲ್ ಕುಮಾರ್ ವಿಡಿಯೋವನ್ನು ಯುಎಇ ಲಾಟರಿ ಸಂಸ್ಥೆಯು ಟ್ವೀಟರ್ ನಲ್ಲಿ ಜನರ ಜೊತೆ ಹಂಚಿಕೊಂಡಿದೆ. ನಿರೀಕ್ಷೆಯಿಂದ ಆಚರಣೆವರೆಗೆ ಎಂದು ಕಾಪ್ಷನ್ ನೀಡಲಾಗಿದೆ. ಒಂದು ಅದೃಷ್ಟದ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅನಿಲ್‌ಕುಮಾರ್ ಗೆ ಅಕ್ಟೋಬರ್ 18 ಬರೀ ಮತ್ತೊಂದು ದಿನವಲ್ಲ. ಆ ದಿನ ಎಲ್ಲವನ್ನೂ ಬದಲಾಯಿಸಿಬಿಟ್ಟಿತ್ತು. ಜೀವನ ಬದಲಾವಣೆ ಮತ್ತು ನೀವು ಧೈರ್ಯ ಮಾಡಿ ಊಹಿಸಿಕೊಳ್ಳುವುದರಿಂದ ಏನಾಗುತ್ತೆ ಎಂಬುದರ ನೆನಪು. ಕಂಗ್ರಾಜುಲೇಷನ್ ಅನಿಲ್ ಕುಮಾರ್ ಎಂದು ಯುಎಇ ಲಾಟರಿ ಸಂಸ್ಥೆ ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಅನಿಲ್ ಕುಮಾರ್ ತಮ್ಮ ಲಾಟರಿ ಗೆಲುವು ಅನ್ನು ಸಂಭ್ರಮಿಸುವುದನ್ನು ತೋರಿಸಲಾಗಿದೆ.ಅನಿಲ್ ಕುಮಾರ್‌ಗೆ ಲಾಟರಿ ಗೆದ್ದ ಹಣದ ಚೆಕ್ ನೀಡಲಾಗಿದೆ. ವಿಡಿಯೋದಲ್ಲಿ…

Read More

ಬೆಳ್ತಂಗಡಿ, ಅ. 30: ಕನ್ಯಾಡಿ ಸೇವಾ ಧಾಮದ ಸಮೀಪದ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಅಸ್ಪತ್ರೆಯಲ್ಲಿ ಸಾವನ್ನಪ್ಪಿದ ದುರ್ಘಟನೆ ಅಕ್ಟೋಬರ್ 29ರಂದು ನಡೆದಿದೆ. ನಾವೂರು ಗ್ರಾಮದ ಹೊಡಿಕ್ಕಾರು ಗಂಗಯ್ಯ ಎಂಬವರ ಪುತ್ರ, ಬೈಕ್ ಸವಾರ ಚಂದ್ರಹಾಸ (28) ಮೃತರು ಎಂದು ಗುರುತಿಸಲಾಗಿದೆ. ಚಂದ್ರಹಾಸ ಅವರು ಸತೀಶ್ ಎಂಬವರ ಜತೆ ಸೇರಿ ಟೈಲ್ಸ್ ಹಾಕುವ ಕೆಲಸವನ್ನು ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಅ.29ರಂದು ಬೆಳಿಗ್ಗೆ ಧರ್ಮಸ್ಥಳ ಕಡೆ ಕೆಲಸಕ್ಕಾಗಿ ತನ್ನ ಬೈಕ್‌ನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಸೇವಾ ಧಾಮದ ಸಮೀಪ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.ಅಪಘಾತದ ರಭಸಕ್ಕೆ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಚಂದ್ರಹಾಸ್ ಅವರ ತಲೆ ಹಾಗೂ ಕಾಲಿಗೆ ಏಟು ತಗಲಿ ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು…

Read More

ಪಾಣೆಮಂಗಳೂರು,ಅ.30; ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಇಲೆಕ್ಟ್ರಿಕ್ ಆಟೋ ರಿಕ್ಷಾ ನಿಲ್ಲಿಸಿ ನಾಪತ್ತೆಯಾಗಿದ್ದ ಮಾರ್ನಬೈಲು ನಿವಾಸಿ ಆಟೋ ಚಾಲಕ ಪ್ರೀತಂ ಲೋಬೋ ಅವರ ಮೃತದೇಹ ಗುರುವಾರ ನೇತ್ರಾವತಿ ನದಿಯ ಡ್ಯಾಂ ಸಮೀಪ ಮರವೊಂದರಲ್ಲಿ ಸಿಲುಕಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ. ರಿಕ್ಷಾದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಂಟ್ವಾಳ ನಗರ ಠಾಣಾ ಪೋಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ಕೂಡ ನಡೆಸಿದ್ದರು. ಇದೀಗ ಮೃತದೇಹ ಮರವೊಂದರಲ್ಲಿ ಸಿಲುಕಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ.

Read More

ಲಯನ್ಸ್ ಕ್ಲಬ್ ಮಂಗಳೂರು ಸೋಮೇಶ್ವರ ವತಿಯಿಂದ ವಿಶ್ವ ಶಾಂತಿ ಚಿತ್ರಕಲಾ ಸ್ಪರ್ಧೆಯನ್ನು ಪರಿಜ್ಞಾನ ವಿದ್ಯಾಲಯ ಸೋಮೇಶ್ವರದಲ್ಲಿ ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಲಯನ್ ಕಮಾಂಡರ್ ಕೆ ವಿಜಯಕುಮಾರ್ (ನಿವೃತ್ತ) ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಲಯನ್ ಕೆ ವಿಜಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ರಂಜಿತಾ ಮಹೇಶ್ ಜೋಶಿ ಉಪಸ್ಥಿತರನ್ನು ಸ್ವಾಗತಿಸಿದರು. ಕ್ಲಬ್ ಸದಸ್ಯರಾದ ನಿತೀಶ್ ಕೃಷ್ಣ, ಶಶಿಕುಮಾರ್ ನಾಯರ್, ಫ್ಲೇವಿಯಾ ಡಿ’ಸೋಜಾ ಮತ್ತು ನಿರ್ಮಿತಾ ಭಂಡಾರಿ ಸಭೆಯಲ್ಲಿ ಭಾಗವಹಿಸಿದರು . ಕ್ಲಬ್ ಕಾರ್ಯದರ್ಶಿ ಲಯನ್ ಕೆ ಗೋಪಿನಾಥ್ ಧನ್ಯವಾದ ಅರ್ಪಿಸಿದರು. ವಿಜೇತರಿಗೆ ಲಯನ್ ಇಂಟರ್ನ್ಯಾಷನಲ್ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಪರಿಜ್ಞಾನ ವಿದ್ಯಾಲಯದ ವಿದ್ಯಾರ್ಥಿಗಳಾದ ಮಾಸ್ಟರ್ ದಿಶಾನ್ ಕೆ 7ನೇ ತರಗತಿ,ಮಾಸ್ಟರ್ ಮಹಿನ್ ಶ್ರೀರಾಮ್ 6ನೇ ತರಗತಿ ಹಾಗೂ ಕುಮಾರಿ ಶ್ರೇಯ 8ನೇ ತರಗತಿ ಕ್ರಮೇಣವಾಗಿ 1,2,3 ಬಹುಮಾನವನ್ನು ಪಡೆದರು.

Read More

ಮಂಗಳೂರು, ಅಕ್ಟೋಬರ್ 30: ದಾಯ್ಜಿವರ್ಲ್ಡ್ ಮೀಡಿಯಾ ತನ್ನ 25 ವರ್ಷಗಳ ಮಾಧ್ಯಮ ಶ್ರೇಷ್ಠತೆಯ ಆಚರಣೆಯ ಭಾಗವಾಗಿ, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ (MIO) ಸಹಯೋಗದಲ್ಲಿ ‘ಕ್ಯಾನ್ಸರ್ ಗೆಲ್ಲೋಣ’ ಎಂಬ ಒಂದು ವರ್ಷದ ಕ್ಯಾನ್ಸರ್ ಜಾಗೃತಿ ಅಭಿಯಾನವನ್ನು ಭವ್ಯವಾಗಿ ಆರಂಭಿಸಿದೆ. ಈ ಉಪಕ್ರಮದ ಮೂಲಕ ಕ್ಯಾನ್ಸರ್ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಗುಣಮುಖತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ. ಒIಔ ಆವರಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ(MIO)ಯ ವಿಕಿರಣ ಆಂಕೊಲಾಜಿ ವಿಭಾಗದ ನಿರ್ದೇಶಕ ಡಾ. ಸುರೇಶ್ ರಾವ್, ದಾಯ್ಜಿವರ್ಲ್ಡ್ ಮೀಡಿಯಾದ ಸಂಸ್ಥಾಪಕ ವಾಲ್ಟರ್ ನಂದಳಿಕೆ, (MIO)ಯ ಮುಖ್ಯ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಜಲಾಲುದ್ದೀನ್ ಅಕ್ಬರ್ ಮತ್ತು ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ರೋಹನ್ಚಂದ್ರ ಗಟ್ಟಿ ಅವರು ಗೌರವಾರ್ಥವಾಗಿ ಹಾಜರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಪಾರಂಪರಿಕ ದೀಪ ಪ್ರಜ್ವಲನೆ ಮಾಡಲಾಯಿತು. ತಮ್ಮ ಉದ್ಘಾಟನಾ ಭಾಷಣದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಕಾರಾತ್ಮಕ ದೃಷ್ಟಿಕೋನದಿಂದ ಸಾಮಾಜಿಕ ಜಾಗೃತಿ ಸೃಷ್ಟಿಸಲು ದಾಯ್ಜಿವರ್ಲ್ಡ್ ಮತ್ತು ಎಂಐಒ ಸಹಯೋಗಿತ…

Read More

ಮ0ಗಳೂರು,ಅ.30: ಬಾಲಿವುಡ್‌ನ ಪ್ರಸಿದ್ಧ ಹೇರ್ ಡಿಸೈನರ್ ಡಾ| ಶಿವರಾಮ ಕೆ.ಭಂಡಾರಿ ಆಡಳಿತ್ವದ ಶಿವಾ’ಸ್ ಹೇರ್ ಡಿಸೈನರ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಶಿವಾ’ಸ್ ಸಿಗ್ನೇಚರ್ ಫ್ಯಾಮಿಲಿ ಸಲೂನ್‌ನ 26ನೇ ಹಾಗೂ ಮಂಗಳೂರು ನಗರದಲ್ಲಿನ ದ್ವಿತೀಯ ಶಾಖೆ ಉದ್ಘಾಟನೆ ಸಮಾರಂಭ ನಡೆಯಿತು. ಶಿವಾ’ಸ್ ಹೇರ್ ಡಿಸೈನರ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಶಿವಾ’ಸ್ ಸಿಗ್ನೇಚರ್ ಫ್ಯಾಮಿಲಿ ಸಲೂನ್ ನ್ನು ಅಂತರಾಷ್ಟ್ರೀಯ ಪ್ರಸಿದ್ಧ ಬಾಲಿವುಡ್‌ನ ಚಲನಚಿತ್ರ ನಿರ್ಮಾಪಕ-ನಿರ್ದೇಶಕ ಪದ್ಮಶ್ರೀ ಡಾ| ಮಧುರ್ ಭಂಡಾರ್ಕರ್ ಮತ್ತು ಮಿಸ್ ಇಂಡಿಯಾ ಇಂಟರ್‌ನ್ಯಾಶನಲ್ ಪುರಸ್ಕೃತ ಬಾಲಿವುಡ್ ಅಭಿನೇತ್ರಿ ಆಯೀಷಾ ಎಸ್.ಐಮನ್ ಉದ್ಘಾಟಿಸಿದರು. ಪದ್ಮಶ್ರೀ ಡಾ| ಮಧುರ್ ಭಂಡಾರ್ಕರ್ ಮಾತನಾಡಿ, ಬದುಕಿನುದ್ದದ ಅವಿರತ ಶ್ರಮ, ಒದ್ದಾಟವು ಶಿವರಾಮ ಅವರ ಆರಾಧ್ಯ ಕುಲವೃತ್ತಿಗೆ ಸಾಥ್ ನೀಡಿದ್ದು, ಇವೆಲ್ಲವುಗಳ ಫಲಿತಾಂಶ ಶಿವಾ’ಸ್ ಸಲೂನ್‌ಗಳ ಉಗಮ, ವಿಸ್ತಾರತ್ವವಾಗಿದೆ. ನಾವು ವಿಶ್ವವಿಡೀ ಸಾಧನೆ ಸಿದ್ಧಿಸಿದರೂ ತವರೂರಲ್ಲಿ ಕನಿಷ್ಠ ಮಟ್ಟದ ಉದ್ಯಮ ನಡೆಸಿದಾಗ ಮಾತ್ರ ನಮ್ಮೂರ ಸಾಧಕರೆಣಿಸಲು ಸಾಧ್ಯವಾಗುವುದು. ಕ್ಷೌರ್ಯವೃತ್ತಿ ಮೂಲಕ ಮುಂಬಯಿ, ಮಂಗಳೂರು ಮಹಾನಗರಗಳಲ್ಲಿ ಹೆಸರುವಾಸಿಯಾದ ಶಿವಾಸ್ ಭವಿಷ್ಯದಲ್ಲಿ…

Read More

ಉಳ್ಳಾಲ: ಸಂತ ಸೆಬಾಸ್ತಿಯನ್ನರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಸಂಘವು 1996–2002 ಬ್ಯಾಚ್‌ ಸಹಯೋಗದೊಂದಿಗೆ ನವೆಂಬರ್‌ 7, 2025 ಶುಕ್ರವಾರದಂದು ಶಾಲಾ ಸಭಾಂಗಣದಲ್ಲಿ “ಸವಿನೆನಪಿನ ಸಂಜೆ – ಹಳೆಯ ನೆನಪುಗಳ ಮೆಲುಕು” ಕಾರ್ಯಕ್ರಮವನ್ನು ಆಯೋಜಿಸಿದೆ. ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಸಿಹಿ ಕ್ಷಣಗಳನ್ನು ನೆನೆದು, ಶಾಲೆಯೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಸೆಬಾಸ್ತಿಯನ್ನರ ಚರ್ಚ್‌ ತೊಕ್ಕೊಟ್ಟು ಪಾರಿಷ್‌ ಧರ್ಮಗುರು ರೆ| ಫಾ| ಸಿಪ್ರಿಯನ್‌ ಪಿಂಟೋ ವಹಿಸಲಿದ್ದು, ಗೌರವಾಧ್ಯಕ್ಷತೆಯನ್ನು ಕರ್ನಾಟಕ ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಯಾ. ಬ್ರಿಜೇಶ್‌ ಚೌಟ, ವಿಧಾನಪರಿಷತ್‌ ಸದಸ್ಯ ಯತೀಂದ್ರ ಸಿದ್ಧರಾಮಯ್ಯ, ಯು.ಟಿ. ಹಲೀಮ ಮೆಮೋರಿಯಲ್‌ ಟ್ರಸ್ಟ್‌ ಬೆಂಗಳೂರು ಚೇರ್‌ಮನ್‌ ಝುಲ್ಫೀಕರ್‌ ಅಲಿ ಅಹ್ಮದ್‌, ಯುವ ಉದ್ಯಮಿ ಪ್ರಕಾಶ್‌ ಕುಂಪಲ, ಜಾನ್‌ ಕಿಶೋರ್‌ ಡಿಸೋಜ, ಮೈಸೂರಿನ ಉದ್ಯಮಿ ಹಿಮೆನ್‌, ಶಾಲಾ ಮುಖ್ಯೋಪಾಧ್ಯಾಯಿನಿ ಅವಿಟ ಮರಿಯಾ ಡಿಸೋಜ ಸೇರಿದಂತೆ ಅತಿಥಿಗಳಾಗಿ ಹೆಚ್‌ಎಸ್‌ಬಿಸಿ ಬ್ಯಾಂಕ್‌ ನಿರ್ದೇಶಕಿ ಕವಿತಾ ಶೆಟ್ಟಿ, ಇನ್ಫೋಸಿಸ್‌…

Read More

ಉಳ್ಳಾಲ : ಕಡಲತಡಿ ಸುರಕ್ಷತೆಯಿಂದ ಹಿಡಿದು ರಸ್ತೆ, ನೀರು, ಶಿಕ್ಷಣ ಆರೋಗ್ಯ ಹಾಗೂ ಕೃಷಿಯೆಡೆಗೆ ಕಳೆದ 25 ವರ್ಷಗಳಲ್ಲಿ  ರಾಜ್ಯ ಹಾಗೂ ಕೇಂದ್ರ ಸರಕಾರದಿಂದ  ರೂ.5,000 ಕೋಟಿ ಸರ್ಕಾರಿ ಅನುದಾನ ಬಿಡುಗಡೆಯಾಗಿರುವುದಾಗಿ ಅಂದಾಜಿಸಲಾಗಿದೆ.ಉಳ್ಳಾಲ ತಾಲೂಕು, ಅದರ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಯೊಂದಿಗೆ, ಕಡಲ ಕಿನಾರೆಯ ಈ ಭೂಮಿಯಲ್ಲಿ ಸರ್ಕಾರಿ ಅಭಿವೃದ್ಧಿ ಯೋಜನೆಗಳಿಗೆ ಗಮನ ಹಿಂತಿರುಗಿದೆ. 2000ರಿಂದ 2025 ರವರೆಗಿನ 25 ವರ್ಷಗಳಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಉಳ್ಳಾಲಕ್ಕೆ ಬಿಡುಗಡೆಯಾದ ಅನುದಾನದ ಒಟ್ಟು ಮೊತ್ತವು ನಿಖರವಾಗಿ ಲಭ್ಯವಿಲ್ಲ ಎಂಬುದು ಒಂದು ಸವಾಲು. ಆದರೂ, ಲಭ್ಯವಿರುವ ಮಾಹಿತಿಯ ಆಧಾರದಲ್ಲಿ, ಇದು ಸುಮಾರು 5,000 ಕೋಟಿ ರೂಪಾಯಿಗಳಿಗೂ ಹೆಚ್ಚು ಇರಬಹುದು ಎಂದು ಅಂದಾಜಿಸಬಹುದು. ಈ ಅನುದಾನಗಳು ಮೂಲತಃ ರಸ್ತೆ, ನೀರು, ಶಿಕ್ಷಣ, ಆರೋಗ್ಯ ಮತ್ತು ಕೃಷಿ ಅಭಿವೃದ್ಧಿಗೆ ಸಂಬಂಧಿಸಿವೆ. ಪ್ರಮುಖ ಅನುದಾನಗಳ ಸ್ವರೂಪ ರಸ್ತೆ ಮತ್ತು ಸಾರಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ (NHDP) ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ…

Read More