ಉಳ್ಳಾಲ: ಉಳ್ಳಾಲ ನಗರಸಭೆಯ ಅಧ್ಯಕ್ಷರ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತಿದ್ದ, ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾದ ಅಶೋಕ್ ಉಳ್ಳಾಲಬೈಲ್ (64) ವಿಧಿವಶರಾಗಿದ್ದಾರೆ.

ಮೃತರು 2 ಮಕ್ಕಳನ್ನು ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ, ಮತ್ತು ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮ ನೀಡಲಿ ಎಂದು ಕರ್ನಾಟಕ ರಾಜ್ಯ ವಿಧಾನ ಸಭಾ ಸಭಾಧ್ಯಕ್ಷ ಯು. ಟಿ. ಖಾದರ್, ಮಗಳೂರು ಮುಡ ಅಧ್ಯಕ್ಷ ಸದಾಶಿವ ಉಳ್ಳಾಲ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಸಭಾಧ್ಯಕ್ಷರ ಆಪ್ತ ಸಹಾಯಕ ಮನ್ಸೂರ್ ಮಂಚಿಲ, ದಿನೇಶ್ ರೈ, ಸುರೇಶ್ ಭಟ್ನಗರ, ಮುಸ್ತಾಫ ಅಬ್ದುಲ್ಲ, ಪದ್ಮನಾಭ ಉಳ್ಳಾಲಬೈಲ್ ಪ್ರಾರ್ಥಿಸಿದರು.

