ಉಳ್ಳಾಲ:ಪತ್ರಕರ್ತ ಮನೋಹರ್ ಪ್ರಸಾದ್ ಅವರೇ ನನ್ನ ಮಾಧ್ಯಮ ವೃತ್ತಿ ಜೀವನಕ್ಕೆ ಪ್ರೇರಣೆಯಾಗಿದ್ದರು.ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ರಾಜಕೀಯ ನಾಯಕರು,ಸಿನೆಮಾ ಸೆಲೆಬ್ರಿಟಿಗಳು,ಕ್ರೀಡಾಪಟುಗಳ ಬಗೆಗಿನ ವರದಿಗಳನ್ನು ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಾಮಾಜಿಕ ಮಾಧ್ಯಮಗಳನ್ನೂ ಅವರು ಸಮರ್ಪಕವಾಗಿ ಬಳಸಿ ಹೊಸ ತಲೆಮಾರಿಗೆ ಮಾರ್ಗದರ್ಶನ ನೀಡಿದ್ದಾರೆ.ಅವರು ಮಾಡಿರುವ ಸಾಧನೆಗಳು ಮತ್ತು ಮಾಧ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ನಮ್ಮೆಲ್ಲರಿಗೂ ಆದರ್ಶವಾಗಿವೆ ಎಂದು ಖ್ಯಾತ ಜಾನಪದ ಸಂಸ್ಕೃತಿ ಚಿಂತಕರಾದ ಕದ್ರಿ ನವನೀತ್ ಶೆಟ್ಟಿ ಹೇಳಿದರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕುತ್ತಾರಿನ ಖಾಸಗಿ ಸಭಾಂಗಣದಲ್ಲಿ ಶನಿವಾರದಂದು ನಡೆದ ಕನ್ನಡ ರಾಜ್ಯೋತ್ಸವ ಮತ್ತು ಅಗಲಿದ ಹಿರಿಯ ಪತ್ರಕರ್ತರಾದ ದಿ.ಮನೋಹರ ಪ್ರಸಾದ್ ಸಂಸ್ಮರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಹಿರಿಯ ಪತ್ರಕರ್ತರಾದ ಆನಂದ ಶೆಟ್ಟಿ,ವಿದ್ಯಾಧರ ಶೆಟ್ಟಿ,ಛಾಯಾಗ್ರಾಹಕ ಅಶೋಕ್ ಉಳ್ಳಾಲ್ ಮತ್ತು ಏಷಿಯನ್ ಕ್ಲಾಸಿಕ್ ಆಂಡ್ ಎಕ್ವಿಪ್ಡ್ ಬೆಂಚ್ ಚಾಂಪಿಯನ್ಶಿಪ್ 2025 ರಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ವರ್ಣ ಪದಕವನ್ನು ಗಳಿಸಿದ ಉಳ್ಳಾಲ ನಗರಸಭೆಯ…
Author: UllalaVani
ಬೆಂಗಳೂರು, ನವೆಂಬರ್ 3: ಬೆಂಗಳೂರಿನ ರಸ್ತೆಯೊಂದರಲ್ಲಿ ಸ್ಕೂಟರ್ ಸವಾರನೊಬ್ಬ ತನ್ನ ಗಾಡಿಗೆ ಕುದುರೆಯೊಂದನ್ನು ಕಟ್ಟಿ ಎಳೆದುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಈ ಅಮಾನವೀಯ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಅಸಹನೆ ವ್ಯಕ್ತಪಡಿಸಿದ್ದಾರೆ. ಸ್ಕೂಟರ್ಗೆ ಸವಾರನ ಅನಾಗರಿಕತೆ ಸವಾರನೊಬ್ಬ ತನ್ನ ಸ್ಕೂಟರ್ಗೆ ಅಸಹಾಯಕ ಕುದುರೆಯನ್ನು ಕಟ್ಟಿ, ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ತನ್ನ ಸುತ್ತ ಮುತ್ತಲೂ ಓಡಾಡುತ್ತಿರುವ ವಾಹನಗಳನ್ನು ನೋಡಿ ಕುದುರೆ ಭಯಭೀತವಾದಂತೆ ಈ ವೀಡಿಯೋದಲ್ಲಿ ಕಂಡುಬಂದಿದೆ. ಸ್ಕೂಟರ್ಗೆ ಓಡಿಸುತ್ತಿದ್ದ ವ್ಯಕ್ತಿ ಹೆಲ್ಮೆಟ್ ಧರಿಸದೆ ಕೈಯಲ್ಲಿ ಫೋನ್ ಹಿಡಿದು ಪುಂಡಾಟ ಮೆರೆದಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈತನ ಬೇಜವಾಬ್ದಾರಿತನ ಮತ್ತು ಅನಾಗರಿಕತೆಗೆ ಅಸಹನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. ಈ ಕುರಿತು ಕರ್ನಾಟಕ ಪೋರ್ಟ್ಫೋಲಿಯೋ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಪ್ರಾಣಿಗಳು ಮನರಂಜನಾ ಸಾಧನಗಳಲ್ಲ; ಅವು ನಮ್ಮಂತೆಯೇ ನೋವು, ಭಯ ಮತ್ತು ಆಯಾಸವನ್ನು ಅನುಭವಿಸುತ್ತವೆ. ಅಧಿಕಾರಿಗಳು ಈ ಕ್ರೌರ್ಯದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವನಂತಹ…
ಸುಳ್ಯ,ನ.03:ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಬಗ್ಗೆ ಮಾಜಿ ಸ್ಪೀಕರ್ ಕಾಗೇರಿ ಮತ್ತು ಪ್ರತಿಪಕ್ಷಗಳ ಕೆಲವು ಶಾಸಕರು ಮಾಡಿರುವ ಆಧಾರ ರಹಿತ ಆರೋಪ ದುರುದ್ದೇಶ ಪೂರಿತವಾಗಿದೆ. ಪ್ರಚಾರಕ್ಕಾಗಿ ಆರೋಪ ಮಾಡಿದ್ದು ಇದನ್ನು ಕಟುವಾದ ಶಬ್ದಗಳಿಂದ ಖಂಡಿಸುತ್ತೇನೆ ಎಂದು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ಹೇಳಿದ್ದಾರೆ. ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಿಂದಿನ ಸಭಾಪತಿಗಳು ಅಧಿಕಾರ ದುರುಪಯೋಗ, ಸ್ವೇಚಾಚ್ಚಾರ, ಸ್ವಜನ ಪಕ್ಷಪಾತ ಮಾಡಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರು ವಿನಃ ಕಾರಣ ಕೋಮು ಭಾವನೆ ಕೆರಳಿಸಿ ಮತ ಗಳಿಸುವ ಉದ್ದೇಶ ಮಾತ್ರ, ಜಿಲ್ಲೆಗೆ ಅವರ ಕೊಡುಗೆ ಏನು?” ಎಂದು ಪ್ರಶ್ನಿಸಿದರು.ಖಾದರ್ ಅವರು ಎಲ್ಲಾ ಜಾತಿ ಧರ್ಮ ಪಕ್ಷದವರನ್ನು ಒಂದೇ ಭಾವಣೆಯಲ್ಲಿ ನೋಡುತ್ತಿದ್ದು ಅವರನ್ನು ನೋಡಿ ಮಾದರಿಯಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಜೊತೆಗೆ ವಿಶ್ವೇಶ್ವರ ಕಾಗೇರಿ ಮತ್ತು ಬೋಪಯ್ಯ ಅವರ ಅವಧಿಯಲ್ಲಿ ಆದ ಹಣಕಾಸಿನ ಬಿಡುಗಡೆ ಬಗ್ಗೆ ತನಿಖೆಗೆ…
ಕನ್ನಡ ನಾಡು, ನುಡಿ, ಸಾಹಿತ್ಯ, ಕಲೆಗಳು ಬಹಳ ವೈಶಿಷ್ಟ್ಯತೆಗಳೊಂದಿಗೆ ಶ್ರೀಮಂತವಾಗಿದೆ. ಕನ್ನಡ ಭಾಷೆ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪ್ರತಿನಿಧಿಸಿದೆ ಎಂದು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮೋಹಿನಿ ಅಭಿಪ್ರಾಯ ಪಟ್ಟರು. ಇವರು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳ ಜಂಟಿ ಆಶ್ರಯದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭವನ್ನು ಜಂಟಿ ಶಾಲೆಗಳ ಸಂಚಾಲಕರು ಕಡೆಂಜ ಸೋಮಶೇಖರ ಚೌಟ ಅವರು ಉದ್ಘಾಟಿಸಿದರು ಸಮಾರಂಭದ ಆಚರಣೆಯ ಮಹತ್ವವನ್ನು ತಿಳಿಸಿಕೊಟ್ಟ ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಇವರು ಕನ್ನಡ ರಾಜ್ಯೋತ್ಸವವು ನಮ್ಮ ಜನರ ಅಸ್ಮಿತೆಯನ್ನು ಹಾಗೂ ಏಕತೆಯನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ, ಕನ್ನಡಿಗರಾದ ನಾವುಗಳು ಕನ್ನಡ ಭಾಷೆಯ ಬಗ್ಗೆ ಒಳ್ಳೆಯ ಭಾವನೆ, ಸಾಹಿತ್ಯದಲ್ಲಿ ಒಳ್ಳೆಯ ಅಭಿರುಚಿ, ನಮ್ಮ ರಾಜ್ಯದ ಇತಿಹಾಸದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡು ಪರ ಭಾಷಿಗರಿಗೆ ನಮ್ಮ ರಾಜ್ಯದ ವೈಶಿಷ್ಟ್ಯತೆಗಳನ್ನು ತಿಳಿಸಿ ಕೊಡುವ…
ದೇರಳಕಟ್ಟೆ, .ನ.1:ಇಂದು ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಸ್ಥೆಯ ಸಾಹಿತ್ಯ ವೇದಿಕೆ ವತಿಯಿಂದ ಆಚರಿಸಲಾಯಿತು. ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸ್ಥಾಪಕ ಅಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ದೀಪ ಬೆಳಗಿಸಿ ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪರ್ಚಾಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕನ್ನಡ ನಾಡಿನ ನೆಲ ಜಲದ ರಕ್ಷಣೆ ಮತ್ತು ನಮ್ಮ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು ವ್ಯವಹಾರಿಕಾವಾಗಿ ಇತರ ಭಾಷೆಗಳನ್ನು ಬಳಸಿದರೂ ಕನ್ನಡ ಭಾಷೆಯನ್ನು ನಾವು ಯಾವತ್ತೂ ಮರೆಯಬಾರದು ಎಂದರು. ಈ ಸಂಧರ್ಭ ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಆರ್ ಶೆಟ್ಟಿ, ಶಾಲಾ ಮುಖ್ಯ್ಯೊ ಪಾಧ್ಯಯರಾದ ನಯೀಮ್ ಹಮೀದ್, ಸಹ ಶಿಕ್ಷಕರಾದ ರವಿಕುಮಾರ್ ಕೊಡಿ, ಶಾಲಾ ವಿದ್ಯಾರ್ಥಿ ನಾಯಕ ಭವಿತ್ ಸುವರ್ಣ ಶಾಲಾ ಸಹ ಶಿಕ್ಷಕರು, ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳಿಳು ಉಪಸ್ಥಿತರಿದ್ದರು ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ವಿದ್ಯಾರ್ಥಿನಿ ಯುಕ್ತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಅನುಶ್ರೀ…
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡೀಲ್ ಶಾಖೆಯ ವತಿಯಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ, ನೇತ್ರ ತಪಾಸಣಾ, ದಂತ ಚಿಕಿತ್ಸಾ ಹಾಗೂ ರಕ್ತದಾನ ಶಿಬಿರವು ಹಿಂದೂ ಯುವ ಸೇನೆ ಸೂರ್ಯನಾರಾಯಣ ಶಾಖೆ, ಮರೋಳಿ , ಗ್ರಾಮ ಸಮಿತಿ ಮರೋಳಿ, ಶ್ರೀ ರಾಮ ಭಜನಾ ಮಂದಿರ, ಮರೋಳಿ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇವರುಗಳ ಜಂಟಿ ಸಹಯೋಗದೊಂದಿಗೆ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಸೂರ್ಯರಶ್ಮಿ ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೊದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಕೆ. ಪಿ ಶೆಟ್ಟಿ ರವರು ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಮುಂದಾಳತ್ವದಲ್ಲಿ ಹಾಗೂ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ತನ್ನ ಎಲ್ಲಾ ಶಾಖೆಗಳ ವಾರ್ಷಿಕೋತ್ಸವದ ಪ್ರಯುಕ್ತ ಆರೋಗ್ಯದ ಕಾಳಜಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗಿದೆ, ಸಂಘದ ಈ ಕಾರ್ಯವು ಶ್ಲಾಘನೀಯ. ಈ ಶಿಬಿರದಲ್ಲಿ ಅನೇಕ…
ಉಳ್ಳಾಲ.ನ.1: ಕರ್ನಾಟಕ ರಾಜ್ಯೋತ್ಸವ ನಮ್ಮ ರಾಜ್ಯದ ಗೌರವ, ಸಂಸ್ಕೃತಿ ಮತ್ತು ಸೇವಾ ಮನೋಭಾವದ ಪ್ರತೀಕ. ಪ್ರತೀ ವರ್ಷ ಈ ದಿನದಲ್ಲಿ ಸರ್ಕಾರ ರಾಜ್ಯದ ಹಿತಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಗೌರವ ನೀಡುತ್ತದೆ. ಆದರೆ ದುಃಖಕರ ಸಂಗತಿಯೆಂದರೆ, ಕಳೆದ ಕೆಲವು ವರ್ಷಗಳಿಂದ ಈ ಪ್ರಶಸ್ತಿಗಳು ನೈಜ ಸೇವೆಗೆ ತಕ್ಕಂತೆ ನೀಡಲಾಗದೆ, ರಾಜಕೀಯ ಪ್ರಭಾವ, ಸಂಬಂಧ ಮತ್ತು ವ್ಯಾಪಾರಮೂಲಕವಾದ ಪ್ರಚಾರದ ಹಾದಿಗೆ ತಿರುಗಿವೆ. ಇಂದು ರಾಜ್ಯೋತ್ಸವ ವೇದಿಕೆಯಲ್ಲಿ ಕಾಣುವ ಬಹುತೇಕ ಮುಖಗಳು ಕೇವಲ ಹತ್ತು ವರ್ಷಕ್ಕಿಂತ ಕಡಿಮೆ “ಬದುವ್ಯಾಪಾರ–ರಾಜಕೀಯ” ನಡೆಸಿದ ವ್ಯಕ್ತಿಗಳೇ. ನೈಜವಾಗಿ ಜನರ ಕಷ್ಟದ ಸಮಯದಲ್ಲಿ ಅವರ ಜೊತೆ ನಿಂತು ಸಮಾಜ ನಿರ್ಮಾಣದ ಹಾದಿಯಲ್ಲಿ ದುಡಿದ ಸಂಘಟನೆಗಳು ಮೌನವಾಗಿ ಅಣಕಕ್ಕೊಳಗಾಗುತ್ತಿವೆ. ಇಂತಹ ನಿಸ್ವಾರ್ಥ ಕಾರ್ಯಕರ್ತರನ್ನು ಗುರುತಿಸಲು ನಮ್ಮ ಆಡಳಿತ ವ್ಯವಸ್ಥೆ ವಿಫಲವಾಗಿರುವುದು ಕಳವಳಕಾರಿ ಸಂಗತಿ. ನಾರಾಯಣ ಗುರುವಿನ ತತ್ವದ ಜೀವಂತ ರೂಪ ತುಳುನಾಡಿನ ಮಣ್ಣು ಸತ್ಯ ಮತ್ತು ಧರ್ಮದ ಮಣ್ಣು — “ಧರ್ಮ ದೈವ ಸತ್ಯೊಲು” ಎನ್ನುವ ನಂಬಿಕೆ…
ಮಂಗಳೂರು: ನ.1, ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ನವೆಂಬರ್ 1 ರಂದು ಅದ್ಧೂರಿಯಾಗಿ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಗೌರವ ವಂದನೆಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರು 80 ಮಂದಿ ಸಾಧಕರು ಮತ್ತು ವಿಶಿಷ್ಟ ಸಂಸ್ಥೆಗಳಿಗೆ 2025ರ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಇಂದು ನಾವು ಕರ್ನಾಟಕ ರಚನೆಯ 69ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಏಕೀಕೃತ ಕನ್ನಡ ರಾಜ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರು, ಲೇಖಕರು ಮತ್ತು ದೂರದೃಷ್ಟಿಯ ವ್ಯಕ್ತಿಗಳನ್ನು ನಾವು ಸ್ಮರಿಸಬೇಕು. ನಮ್ಮದು ಸಂಸ್ಕೃತಿ, ಭಾಷೆ, ಕಲೆ ಮತ್ತು ಪರಂಪರೆಯಲ್ಲಿ ಸಮೃದ್ಧವಾಗಿರುವ ನಾಡು. ಈ ಪರಂಪರೆಯ ಭಾಗವಾಗಿರುವುದಕ್ಕೆ ನಾವು ಹೆಮ್ಮೆ ಪಡಬೇಕು” ಎಂದರು.”ಕರ್ನಾಟಕವು ಸದಾ ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ಇಲ್ಲಿ ಎಲ್ಲಾ ಧರ್ಮ ಮತ್ತು ಸಮುದಾಯದ ಜನರು ಪರಸ್ಪರ ಗೌರವದಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಮಹಾತ್ಮ ಗಾಂಧೀಜಿ ಹೇಳಿದಂತೆ, ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ತಾಯ್ನುಡಿಯನ್ನು ಪ್ರೀತಿಸಬೇಕು. ನಾವು ನಮ್ಮ ದೈನಂದಿನ…
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ರವರ ವಿರುದ್ಧ ಶಾಸಕರಾದ ಭರತ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ಸತ್ಯಕ್ಕೆ ದೂರವಾಗಿವೆ ಎಂದು ಅಖಿಲ ಭಾರತೀಯ ಕ್ರೈಸ್ತ ಒಕ್ಕೂಟ ಇದರ ಕರ್ನಾಟಕ ರಾಜ್ಯಾಧ್ಯಕ್ಷರಾದ ಆಲ್ವಿನ್ ಡಿಸೋಜ ಪಾನೀರ್ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ. ಅವರು ನೀಡಿದ ಹೇಳಿಕೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ನಿಷ್ಕಳಂಕ ಹಾಗೂ ಜನಪರ ನಾಯಕರಲ್ಲಿ ಒಬ್ಬರಾಗಿರುವ ಸನ್ಮಾನ್ಯ ಯು.ಟಿ. ಖಾದರ್ ರವರು ಎಂದಿಗೂ ಲಂಚ ಸ್ವೀಕರಿಸಿದವರು ಅಲ್ಲ ಎಂದು ಹೇಳಿದರು. ಭರತ್ ಶೆಟ್ಟಿಯವರು ಮಾಡಿದ ಆರೋಪಗಳು ಅಸತ್ಯ ಹಾಗೂ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಎಂದು ಅವರು ಆರೋಪಿಸಿದರು. ಖಾದರ್ ರವರ ವಿರುದ್ಧದ ಅಪವಾದವನ್ನು ಖಂಡಿಸುತ್ತಾ, ರಾಜಕೀಯ ಲಾಭಕ್ಕಾಗಿ ವ್ಯಕ್ತಿತ್ವ ಹಾನಿಗೆ ಯತ್ನಿಸುವಂತ ಹೇಳಿಕೆಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಲ್ವಿನ್ ಡಿಸೋಜರವರು ಒತ್ತಾಯಿಸಿದ್ದಾರೆ. ಸ್ಪೀಕರ್ ಖಾದರ್ ರವರ ಬಗ್ಗೆ ಕಾಂಗ್ರೆಸ್ ಪಕ್ಷದ ವಿಶ್ವಾಸ: ಕರ್ನಾಟಕ ರಾಜ್ಯದ ರಾಜಕೀಯ ವಲಯದಲ್ಲಿ ಸ್ಪೀಕರ್ ಯು.ಟಿ. ಖಾದರ್ ರವರ ನಿಷ್ಠೆ ಮತ್ತು…
ಪಡುಬಿದ್ರಿ : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಪಡುಬಿದ್ರಿ ಶಾಖೆಯ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ನೇತ್ರ ತಪಾಸಣಾ ಶಿಬಿರವು ಯುವವಾಹಿನಿ (ರಿ) ಪಡುಬಿದ್ರಿ ಘಟಕ ಮತ್ತು ಲಯನ್ಸ್ ಕ್ಲಬ್ ಪಡುಬಿದ್ರಿ, ಇವರುಗಳ ಜಂಟಿ ಸಹಯೋಗದೊಂದಿಗೆ ನ.2ರಂದು ಬೆಳಿಗ್ಗೆ 9.3೦ ರಿಂದ ಮದ್ಯಾಹ್ನ 12.30ರ ವರೆಗೆ ಪಡುಬಿದ್ರಿ ಬಿಲ್ಲವ ಸೇವಾ ಸಂಘ (ರಿ.) ಇದರ ಸಭಾಭವನದಲ್ಲಿ ಆಯೋಜಿಸಲಾಗಿದೆ. ಈ ನೇತ್ರ ತಪಾಸಣಾ ಶಿಬಿರದಲ್ಲಿ ನೇತ್ರ ಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್, ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇವರ ನುರಿತ ವೈದ್ಯರ ತಂಡದವರಿಂದ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು. ಅಗತ್ಯವುಳ್ಳವರಿಗೆ ಸಂಘದ ವತಿಯಿಂದ ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಗುವುದು. ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ತಿಳಿಸಿರುತ್ತಾರೆ.

