ಉಳ್ಳಾಲ್ ನ್ಯೂಸ್ ನೆಟ್ ವರ್ಕ್ಸ್
ಉಳ್ಳಾಲ: ಪುಣ್ಯವಂತರು ಸೇರಿದ ಜಾಗದಲ್ಲಿ ಉತ್ತಮ ಕೆಲಸಗಳು ನಡೆಯುವುದು ಸಹಜ. ನಾಲ್ಕು ಶತಮಾನಗಳ ಹಿಂದೆ ಮಕ್ಕಾದಿಂದ ಖುತುಬುಝಮಾನ್ ಅಸ್ಸಯ್ಯದ್ ಮುಹಮ್ಮದುಲ್ ಶರೀಫುಲ್ ಮದನಿಯವರು ಉಳ್ಳಾಲಕ್ಕೆ ಬಂದ ಸಂದರ್ಭ ಅವರ ಬಳಿ ಏನೂ ಇರಲಿಲ್ಲ, ಆ ವೇಳೆ ಉಳ್ಳಾಲದಲ್ಲಿ ಕೂಡಾ ಏನೂ ಕೂಡಾ ಇರಲಿಲ್ಲ. ಅವರು ಆ ಕಾಲದಲ್ಲಿ ಸಾರಿದ ಶಾಂತಿಯ ಸಂದೇಶದಿಂದ ಉಳ್ಳಾಲ ಧಾರ್ಮಿಕ ಕ್ಷೇತ್ರವಾಗಿ ಬೆಳೆದು ನಿಂತಿದೆ ಎಂದು ಸಯ್ಯದ್ ಆದಿಲ್ ಮುಹಮ್ಮದ್ ಅಲ್ ಜಿಫ್ರಿ ಮದೀನತುಲ್ಮುನವ್ವರ ಹೇಳಿದರು.
ಉಳ್ಳಾಲ ಉರೂಸ್ ಕಾರ್ಯಕ್ರಮಕ್ಕೆ ಮದೀನದಿಂದ ಆಗಮಿಸಿದ ಅವರು ಉರೂಸ್ ಪ್ರಯುಕ್ತ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮದನಿ ತಂಙಳ್ರವರ ಮರಣದ ಬಳಿಕ ಅವರು ಉಳ್ಳಾಲದಲ್ಲಿ ಅಂತ್ಯವಿಶ್ರಮಗೊಳ್ಳುತ್ತಿದ್ದಾರೆ. ಅವರ ಪವಾಡದಿಂದ ಇಲ್ಲಿ ವಿವಿದ ಧಾರ್ಮಿಕ ಕೇಂದ್ರಗಳು, ಕಾಲೇಜುಗಳು ಬೆಳೆದಿದೆ. ಬಹಳಷ್ಟು ಮಂದಿ ಧಾರ್ಮಿಕ ಶಿಕ್ಷಣ ಪಡೆದು ಪಂಡಿತರಾಗಿದ್ದಾರೆ. ಮದನಿ ತಂಙಳ ಬಳಿಕ ಉಳ್ಳಾಲದಲ್ಲಿರುವ ಶಿಕ್ಷಣ ಕೇಂದ್ರಗಳನ್ನು ನೋಡಿಕೊಳ್ಳಲು ತಾಜುಲ್ ಉಲಮಾ ಅವರನ್ನು ನೇಮಕ ಮಾಡಲಾಗಿತ್ತು. ಅವರು ಸುಮಾರು 65 ವರ್ಷಗಳ ಕಾಲ ದೀನೀ ಸೇವೆ ಮಾಡಿದ್ದರು. ಈಗ ಅವರು ನಮ್ಮನ್ನಗಲಿ ಹೋಗಿದ್ದಾರೆ. ಅವರ ಮರಣದ ಬಳಿಕ ಅವರ ಪುತ್ರ ಫಝಲ್ ಕೋಯಮ್ಮ ತಂಙಳ್ ಈ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದಾರೆ ಎಂದರು.
ಅಹ್ಮದ್ ಬಾವಾ ಮುಸ್ಲಿಯಾರ್ ದುವಾ ನೆರವೇರಿಸಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಅತಿಥಿಗಳನ್ನು ಸ್ವಾಗತಿಸಿದರು. ಖಾಝಿ ಫಝಲ್ ಕೋಯಮ್ಮ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಜಬ್ಬಾರ್ ಅಲ್ ಅಶ್ರಫಿ, ಮುದುಗುಡ ಅಬ್ದುಲ್ ಖಾದರ್ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಿದರು.
ದಾರುಲ್ ಅಶ್-ಅರಿಯ್ಯಾದ ಮೆನೇಜರ್ ಮಹಮ್ಮದಾಲಿ ಸಖಾಫಿ, ಹಾಜಿ ಅಬ್ದುಲ್ ಶುಕೂರು ದುಬೈ, ಪಟ್ಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್, ಕಾರ್ಯದರ್ಶಿ ಹಾರೀಸ್ ಪಟ್ಲ, ಮೊಯ್ದಿನ್ ವಿ. ಪಟ್ಲ, ಅಮೀರ್ ಹಾಜಿ ಪಟ್ಲ, ಸಯ್ಯದ್ ಅಮೀರ್ ತಂಙಳ್ ಅಮ್ಮೆಂಬಳ, ದರ್ಗಾ ಕಾರ್ಯದರ್ಶಿ ಯು.ಟಿ. ಇಲ್ಯಾಸ್, ಉಪಾಧ್ಯಕ್ಷ ಅಶ್ರಫ್ ರೈಟ್ವೇ ,ಅಶ್ರಫ್ ಸಅದಿ ಮಲ್ಲೂರು,ಸುಲೈಮಾನ್ ಹಾಜಿ ಸಿಂಗಾರಿ, ಕೇಂದ್ರ ಮಸೀದಿಯ ಖತೀಬ್ ರವೂಫ್ ಮುಸ್ಲಿಯಾರ್, ರಶೀದ್ ಮದನಿ ಆಲಪುಝ, ಮುಫತ್ತಶ್ ಸುಲೈಮಾನ್ ಸಖಾಫಿ, ದರ್ಗಾ ಸದಸ್ಯರಾದ ಉಮರಬ್ಬ ಕುಂಞÂಮೋನು ಕಲ್ಲಾಪು, ಅಬ್ದುಲ್ ರವೂಫ್ ಮದನಿನಗರ, ಮಹಮದ್ ಹನೀಫ್ ಚೆಂಬುಗುಡ್ಡೆ, ಯು.ಎ. ಇಸ್ಮಾಯಿಲ್ ಅಳೇಕಲ, ಮನ್ಸೂರ್ ಕೈಕೋ, ಅಬ್ದುಲ್ ಹಮೀದ್ ಕಲ್ಲಾಪು, ತಾಜುಲ್ ಉಲಮಾ ಕ್ರಿಯಾಸಮಿತಿ ಅಧ್ಯಕ್ಷ ಅಬ್ದುಲ್ ಬುಖಾರಿ ಕಲ್ಲಾಪು, ಯು,ಎಚ್. ಹಸೈನಾರ್, ಕಲ್ಲಾಪು ಮಸೀದಿಯ ಅಧ್ಯಕ್ಷ ಇಲ್ಯಾಸ್ ಫೆರ್ಮನ್ನೂರು, ಉಪಾಧ್ಯಕ್ಷ ಅಬ್ದುಲ್ ರಝಾಕ್ ಹಾಜಿ, ಕಾರ್ಯದರ್ಶಿ ಮಹಮ್ಮದ್ ಅಶ್ರಫ್, ಖತೀಬ್ ಅಬ್ದುಲ್ ನಾಸಿರ್ ಸಅದಿ ಅಮ್ಮೆಂಬಳ, ಕೈಕೊ ಮಸೀದಿಯ ಅಧ್ಯಕ್ಷ ತೌಫೀಕ್, ಕಾರ್ಯದರ್ಶಿ ಶಹಬಾನ್, ಇಮಾಂ ಉಸ್ಮಾನ್ ಸಖಾಫಿ, ಇಮಾಂ ಮಹಮ್ಮದ್ ಮದನಿ ದಾರಂದಬಾಗಿಲು,ಎಕೆ. ಮೊಯ್ದಿನ್ ಕೋಟೆಪುರ ,ಅಬೂಬಕರ್ ಪಟ್ಟಾಡಿ, ಝಿಯಾದ್ ತಂಙಳ್, ನಾಝಿಂ ಮುಕಚೇರಿ ಮೊದಲಾದವರು ಉಪಸ್ಥಿತರಿದ್ದರು.










