ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಪೆರ್ಮನ್ನೂರು: ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಪೆರ್ಮನ್ನೂರಿನಲ್ಲಿ ಪವಿತ್ರ ಗುರುವಾರವನ್ನು ಎಪ್ರಿಲ್ 13 ರಂದು ಆಚರಿಸಲಾಯಿತು.ಪ್ರಭುಯೇಸುವಿನ ಕಷ್ಟ,ಮರಣ ಶಿಲುಬೆ ಹಾಊ ಪುನರುಸ್ಥಾನವನ್ನು ಧ್ಯಾನಿಸುವ ವಾರವೇ ಪವಿತ್ರವಾರ. ಈ ವಾರದಲ್ಲಿರುವ ಪ್ರಮುಖ ದಿನಗಳಲ್ಲಿ ಮೊದಲನೆಯ ಆಚರಣೆಯೇ ಪವಿತ್ರ ಗುರುವಾರ ಪೆರ್ಮನ್ನೂರು ಕೇಂದ್ರದ ಧರ್ಮಗುರುಗಳಾದ ಅತಿ ನಂದನೀಯ ಫಾದರ್ ಜೆ.ಬಿ ಸಲ್ಡಾನ್ಹಾರವರು ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು . ಸಹಾಯಕ ಧರ್ಮಗುರುಗಳಾದ ನಂದನೀಯ ಫಾದರ್ ಪ್ರವೀಣ್ ಜೋಯ್ ಸಲ್ಡಾನ್ಹಾರವರು ಪ್ರಭು ಕ್ರಿಸ್ತರ ಆದರ್ಶದಂತೆ ನಾವು ನಮ್ಮ ಸಹೋದರ ಸಹೋದರಿಯರ ಸೆಲೆಯನ್ನು ಮಾಡಬೇಕು ಎಂಬ ಪ್ರಭೋದನೆಯನ್ನು ನೀಡಿದರು ಸೇನೆಯ ಹಾಗೂ ದೀನತೆಯ ಸಂಕೇತವಾಗಿ ಯೇಸುವಿನ ಆದರ್ಶದಂತೆ ವಂ|ಫಾ|ಜೆ.ಬಿ.ಸಲ್ಡಾನ್ಹಾರವರು 12 ಮಂದಿಯ ಪಾದಗಳನ್ನು ತೊಳೆದರು.ವಂ|ಫಾ|ನಿಲೇಶ್ ಕ್ರಾಸ್ತಾ,ವಂ|ಫಾ| ಎಡ್ವಿನ್ ಮಸ್ಕರೇನ್ಹಸ್,ಉಪಯೋಜಕ ರವಿ ರಿಚ್ಚರ್ಡ್ ಫೆರ್ನಾಂಡಿಸ್,ಧರ್ಮಭಗಿನಿಯರು ಹಾಗೂ 2000 ಮಂದಿ ಈ ಪವಿತ್ರ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡರು. ಈ ದಿನದ ವಿಶೇಷತೆ ಎಂದರೆ ಪ್ರಭು ಕ್ರಿಸ್ತರು ಶಿಲುಬೆಯಲ್ಲಿ ಸಾಯಲು ಹೋಗುವ ಹಿಂದಿನ ದಿನ ತಮ್ಮ 12 ಶಿಷ್ಯರ ಜೊತೆ…
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಪೆರ್ಮನ್ನೂರು: ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬಾಸ್ತಿಯನ್ನರ ಚರ್ಚ್‍ನಲ್ಲಿ ಶುಭ ಶುಕ್ರವಾರ ಶೃದ್ಧೆ ಭಕ್ತಿಯಿಂದ ನಡೆಯಿತು. ರೇ. ಫಾ| ಅಜಿತ್ ಮಿನೇಜಸ್ ಮತ್ತು ರೆ| ಫಾ| ಜೆ.ಬಿ. ಸಲ್ದಾನ ಉಪಸ್ಥಿತರಿದ್ದರು. ಫೋಟೋ ಸ್ಟಾರ್ ಸ್ಟುಡಿಯೋ ಉಳ್ಳಾಲ
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಕರ್ನಾಟಕ ರಾಜ್ಯ ಎಸ್‍ವೈಎಸ್ ಇದರ ಸೆಂಟರ್ ಸಮ್ಮೇಳನದ ಪ್ರಯುಕ್ತ ಎಸ್‍ವೈಎಸ್ ಕೆ.ಸಿ ರೋಡ್ ಸೆಂಟರ್ ಮಹಾ ಸಮ್ಮೇಳನ ಎ.16ರಂದು ಸಂಜೆ 5ಗಂಟೆಗೆ ಕೆ.ಸಿ ನಗರ ಜಂಕ್ಷನ್‍ನಲ್ಲಿ ನಡೆಯಲಿದೆ. ಸಯ್ಯದ್ ಸಿ.ಟಿ.ಎಂ ಸಲೀಂ ಅಸ್ಸಖಾಫ್ ತಂಙಳ್ ದುಅ ನೇತೃತ್ವವಹಿಸಲಿದ್ದು, ಸೆಂಟರ್ ಅಧ್ಯಕ್ಷ ಎನ್.ಎಸ್ ಉಮರ್ ಮಾಸ್ಟರ್ ಅಧ್ಯಕ್ಷತೆಯಲ್ಲಿ ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್ ಉದ್ಘಾಟಿಸಲ್ಲಿದ್ದಾರೆ. ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಅಲ್-ಕಾಮಿಲ್ ಮತ್ತು ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ಉಪಚುನಾವಣೆಯಲ್ಲಿ ಬಿಜೆಪಿಯು ಇಲ್ಲಸಲ್ಲದ ಅಪಪ್ರಚಾರ ಮಾಡಿದರೂ ಸಿದ್ದರಾಮಯ್ಯರವರ ಅಭಿವೃದ್ದಿ ಪರ ಆಡಳಿತದ ಫಲವಾಗಿ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದ್ದು ಇದು ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ ಅವರು ಹೇಳಿದರು. ಅವರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿಯಾದ ಹಿನ್ನೆಲೆಯಲ್ಲಿ ಮುಡಿಪುವಿನಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೇ ಯಾವುತ್ತೂ ಕಾರ್ಯಕರ್ತರೇ ಶಕ್ತಿಯಾಗಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅವರು ಅಧಿಕಾರದ ದಾಹದಿಂದ ಬಿಜೆಪಿಗೆ ಸೇರ್ಪಡೆಗೊಂಡರೂ ಅಲ್ಲಿಯ ಕಾರ್ಯಕರ್ತರು ಕಾಂಗ್ರೆಸ್‍ನ ಕೈಯನ್ನು ಬಿಡದೆ ಮತ್ತಷ್ಟು ಶಕ್ತಿ ತುಂಬಿದ್ದಾರೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಮಾತನಾಡಿ, ರಾಜ್ಯ ಮುಖ್ಯಮಂತ್ರಿಯವರ ಅನ್ನಭಾಗ್ಯ, ಕ್ಷೀರ ಭಾಗ್ಯ ಮುಂತಾದ ಜನಪರವಾದ ಆಡಳಿತಕ್ಕೆ ಜನರು ಇಂದು ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಿದ್ದಾರೆ. ಮುಂದೆ ನಡೆಯುವ ರಾಜ್ಯದ ಚುನಾವಣೆಯಲ್ಲೂ ರಾಜ್ಯದೆಲ್ಲೆಡೆ ಇದೇ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಹಲವು ದೇಶಗಳನ್ನು ಸುತ್ತಿ ದೇಶಕ್ಕೆ ಸಂವಿಧಾನವನ್ನು ರಚಿಸಿದ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರನ್ನು ನೆನಪಿಸುವ ಕಾರ್ಯ ಮಹತ್ತರವಾದುದು, ಈ ಮೂಲಕ ಎಲ್ಲರೂ ಒಂದೇ ಅನ್ನುವ ಭಾವನೆ ಮೂಡಬೇಕಿದೆ ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ತೊಕ್ಕೊಟ್ಟು ಕಾಪಿಕಾಡಿನ ಗಾಂಧಿನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ಶತಾಬ್ದಿ ವರ್ಷಾಚರಣೆ ಹಾಗೂ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಸೀರೆ ಮತ್ತು ಮಕ್ಕಳಿಗೆ ಪುಸ್ತಕ ವಿತರಿಸಿ ಮಾತನಾಡಿದರು. ದೇಶದಲ್ಲಿ ಇಸ್ಲಾಂ ಧರ್ಮ ವ್ಯಾಪಿಸಿದ ನಂತರ ಹಿಂದು ಧರ್ಮದ ತತ್ವ, ಸಿದ್ಧಾಂತಗಳು ಹುಟ್ಟಿಕೊಂಡಿತ್ತು. ಆದರೆ ಅದರಲ್ಲಿ ನಿರ್ದಿಷ್ಟ ಸಮುದಾಯದವರು ಸಮಾಜದ ಮುಖ್ಯವಾಹಿನಿಯಲ್ಲಿ ಬಹಳ ಹಿಂದೆ ಬಿದ್ದಿದ್ದರು. ಆದರೆ ಸದ್ಯ ಶಿಕ್ಷಣ ಪಡೆದು ಶಿಕ್ಷಿತರಾದಂತೆ ಹಿಂದುಳಿದವರೆನ್ನುವ ಬೇಧವವನ್ನು ಇಟ್ಟುಕೊಳ್ಳದೆ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಅಧ್ಯಕ್ಷ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ವೃದ್ಧರೋರ್ವರ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸುವುದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ , ಅದೇ ಸಿಬ್ಬಂದಿ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗುರುವಾರ ತಲಪಾಡಿ ಟೋಲ್ ಗೇಟಿನಲ್ಲಿ ನಡೆದಿದೆ. ಕಂದಕ ನಿವಾಸಿ ಹಾಜಿ ರೆಸಿಡೆನ್ಸಿಯ ಮಹಮ್ಮದ್ ಸಾಲಿ ಎಂಬವರ ಪುತ್ರ ಅಬ್ದುಲ್ ಹಮೀದ್ ಸರಾಫತ್ (25) ಹಲ್ಲೆಗೊಳಗಾದವರು. ಕೆಲಸದ ನಿಮಿತ್ತ ಮಂಗಳೂರಿನಿಂದ ಕಾಸರಗೋಡಿಗೆ ಕಾರಿನಲ್ಲಿ ತೆರಳುವ ಸಂದರ್ಭ ಘಟನೆ ನಡೆದಿದೆ. ಮಧ್ಯಾಹ್ನ 2.30 ರ ವೇಳೆ ತಲಪಾಡಿ ಟೋಲ್ ಗೇಟ್ ತಲುಪುತ್ತಿದ್ದಂತೆ ಅಲ್ಲಿ ವಾಹನ ಚಾಲಕ ವೃದ್ಧರೋರ್ವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಇದನ್ನು ಪ್ರಶ್ನಿಸಿ ಅವರದ್ದು ತಪ್ಪಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸುವುದು ಸರಿಯಲ್ಲ ಎಂದು ತಿಳಿಸಿದ್ದರು. ಇದೇ ವೇಳೆ ಟೋಲ್‍ಗೇಟಿನ ಸುಮಾರು 20 ರಷ್ಟು ಸಿಬ್ಬಂದಿ ಸುತ್ತುವರಿದು ಕೆನ್ನೆಗೆ, ಬೆನ್ನಿಗೆ, ಎದೆಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಅಪರಿಚಿತರೊಬ್ಬರು…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಬೀರಿ: ಬೋರ್‍ವೆಲ್ ಪೈಪ್ ಹಿಂತೆಗೆಯುವ ಕಾಮಗಾರಿ ವೇಳೆ ಹೈಟೆನ್ಶನ್ ತಂತಿ ತಗಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಟೆಕಾರು ಬೀರಿ ಎಂಬಲ್ಲಿ ಗುರುವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಘಟನೆಯಲ್ಲಿ ಇನ್ನೋರ್ವ ಯುವಕ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಕೊಣಾಜೆ ಅಡ್ಕರೆಪಡ್ಪು ನಿವಾಸಿ ಹಸೈನಾರ್ ಎಂಬವರ ಪುತ್ರ ಉಸ್ಮಾನ್ (20) ಮೃತ ಯುವಕ. ಕೊಣಾಜೆ ತಿಬ್ಲೆಪದವಿನ ಶರೀಫ್ (25) ಗಾಯಗೊಂಡವರು. ಖಲೀಲ್ ಎಂಬವರು ಗುತ್ತಿಗೆ ಪಡೆದುಕೊಂಡಿದ್ದ ಕೋಟೆಕಾರು ಬೀರಿ ಸಮೀಪ ಬೋರ್ ವೆಲ್ ಪೈಪ್ ಹಿಂತೆಗೆಯುವ ಕಾಮಗಾರಿಯಲ್ಲಿ 6 ಮಂದಿ ಕಾರ್ಮಿಕರು ನಿರತರಾಗಿದ್ದರು. ಸುಮಾರು ನಾಲ್ಕು ಪೈಪುಗಳನ್ನು ಮೇಲಕ್ಕೆತ್ತಿದ್ದ ಉಸ್ಮಾನ್ ಮತ್ತಯ ಶರೀಫ್, ಐದನೇ ಪೈಪನ್ನು ಮೇಲಕ್ಕೆತ್ತುವ ಸಂದರ್ಭ ಪೈಪ್ ಮೇಲಿದ್ದ ಹೈಟೆನ್ಶನ್ ತಂತಿಗೆ ತಗಲಿದೆ. ಪರಿಣಾಮ ಶರೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ಶರೀಫ್ ಎಂಬವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಪಡೆದು ಅವರು ಅಲ್ಲಿಂದ ತೆರಳಿದ್ದಾರೆ. ಮೃತ ಉಸ್ಮಾನ್ ಹೆತ್ತವರಿಗೆ ಓರ್ವನೇ ಪುತ್ರನಾಗಿದ್ದ. 9 ನೇ ತರಗತಿ ಮುಗಿಸಿದ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಾಡೂರು: ಮಾಡೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಶಬರಿ ಫ್ರೆಂಡ್ಸ್ ಮಾಡೂರು ಇದರ ಜಂಟಿ ಸಹಯೋಗದೊಂದಿಗೆ ಯೆನೆಪೋಯ ವಿಶ್ವವಿದ್ಯಾನಿಲಯ ಇದರ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ ಮತ್ತು ದೇರಳಕಟ್ಟೆ ಯೇನೆಪೋಯ ದಂತ ವೈದ್ಯಕೀಯ ಕಾಲೇಜು ಇದರ ಸಮುದಾಯ ದಂತ ವೈದ್ಯಕೀಯ ವಿಭಾಗದ ವೈದ್ಯರ ತಂಡದಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಎ.16ರ ಭಾನುವಾರದಂದು ಮಾಡೂರು ಕೊರಗಜ್ಜನ ಕಟ್ಟೆಯ ಬಳಿಯ ಮಾತೃಶ್ರೀ ಕಾಂಪ್ಲೆಕ್ಸ್ ನಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನದಿಂದ 12.30ರ ತನಕ ನಡೆಯಲಿದೆ. ವೈದ್ಯಕೀಯ ಶಿಬಿರದಲ್ಲಿ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ, ಮಕ್ಕಳ ತಪಾಸಣೆ, ರಕ್ತದ ಗುಂಪಿನ ವರ್ಗೀಕರಣ ತಪಾಸಣೆ, ಸಕ್ಕರೆ ಕಾಯಿಲೆ, ಗಂಟು,ಎಲುಬು,ಮೂಗು, ಕಿವಿ,ಚರ್ಮಗಳಿಗೆ ಸಂಬಂಧಿಸಿದ ತಪಾಸಣೆ, ಉಚಿತ ದಮತ ತಪಾಸಣೆ ಮತ್ತು ಸಲಹೆ, ಹಲ್ಲುಗಳ ಶುಚಿಕರಣ, ಉಚಿತ ಸೀಳುತುಟಿ ತಪಾಸಣೆ ಮತ್ತು ಚಿಕಿತ್ಸೆ ನಡೆಯಲಿದ್ದು ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಹಸಿರು ಕಾರ್ಡ್ ಹಾಗೂ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತೊಕ್ಕೊಟ್ಟು: ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟುವಿನಲ್ಲಿ ವಿಜಯೋತ್ಸವ ಆಚರಿಸಲಾಯಿತು. ಈ ವೇಳೆ ಕ್ಷೇತ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಹಿಂದುಳಿದ ವರ್ಗಗಳ ಮುಖಂಡ ಸದಾಶಿವ ಉಳ್ಳಾಲ್, ನಗರಸಭೆ ಅಧ್ಯಕ್ಷ ಹುಸೈನ್ ಕುಂಞÂಮೋನು, ಯುವಕಾಂಗ್ರೆಸ್ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಕ್ಷೇತ್ರ ಕಾರ್ಯದರ್ಶಿ ರೆಹಮಾನ್ ಕೋಡಿಜಾಲ್, ಕೊಣಾಜೆ ಪಂ. ಅಧ್ಯಕ್ಷ ಶೌಕತ್ ಅಲಿ, ತಾ.ಪಂ ಮಾಜಿ ಸದಸ್ಯ ಮುಸ್ತಾಫ ಹರೇಕಳ, ನಗರಸಭೆ ಸದಸ್ಯರಾದ ಮುಸ್ತಾಫ ಅಬ್ದುಲ್ಲಾ, ಬಾಝಿಲ್ ಡಿಸೋಜಾ, ಯು.ಎ.ಇಸ್ಮಾಯಿಲ್, ಸುಹಾಸಿನಿ ಬಬ್ಬುಕಟ್ಟೆ, ತಾ.ಪಂ ಸದಸ್ಯೆ ಸುರೇಖಾ ಚಂದ್ರಹಾಸ್, ಸುರೇಶ್ ಭಟ್ನಗರ, ವಿಲ್ಮಾ ಆಲ್ಫ್ರೆಡ್ ಡಿಸೋಜಾ, ಕಬೀರ್ ಉಳ್ಳಾಲ, ದೀಪಕ್ ಉಳ್ಳಾಲ್, ನಾಸೀರ್ ಟಿ.ಎಸ್ ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಮಿಹ್ರಾಜ್ ಜುಮಾ ಮಸೀದಿ ಮತ್ತು ಅಲ್ ಅಮೀನ್ ಸ್ವಲಾತ್ ಕಮಿಟಿ ಮಾರ್ಗತಲೆ ಇದರ ಜಂಟಿ ಆಶ್ರಯದಲ್ಲಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಇವರ ದುವಾ ಆಶೀರ್ವಾದದೊಂದಿಗೆ 2 ದಿನಗಳ ಧಾರ್ಮಿಕ ಪ್ರವಚನ ಮತ್ತು ಸ್ವಲಾತ್ ವಾರ್ಷಿಕ, ಬೃಹತ್ ಮುಂಜಿ (ಸುನ್ನತ್) ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭ ಎಪ್ರಿಲ್ 16 ರಿಂದ 18 ರ ವರೆಗೆ ಮಾರ್ಗತಲೆ ಮಸೀದಿ ವಠಾರದಲ್ಲಿ ನಡೆಯಲಿದೆ. 16-04 ರವಿವಾರ ಬೆಳಿಗ್ಗೆ 9 ಗಂಟೆಗೆ ಉಚಿತ ಮುಂಜಿ ಕಾರ್ಯಕ್ರಮದ ನಡೆಯಲಿದೆ. ಇಶಾ ನಮಾಝಿನ ಬಳಿಕ ಅಲ್ಹಾಜ್ ಎಂ.ಪಿ ಹಸನ್ ಮುಅಲ್ಲಿಂ ಅವರಿಂದ ಪ್ರವಾದಿ ಪ್ರೇಮ ಎಂಬ ವಿಷಯದ ಕುರಿತು ಮತ ಪ್ರಭಾಷನ ನಡೆಯಲಿದೆ.17-04 ಸೋಮವಾರ ಇಶಾ ನಮಾಝಿನ ಬಳಿಕ ಟಿ.ಎಂ ಮುಹಿಯದ್ದೀನ್ ಕಾಮಿಲ್ ಸಖಾಫಿ ಅವರಿಂದ ಮತ ಪ್ರಭಾಷನ ನಡೆಯಲಿದೆ. 18-04 ಮಂಗಳವಾರ ಇಶಾ ನಮಾಝಿನ ಬಳಿಕ ಅಸ್ಸಯ್ಯದ್ ಶಿಹಾಬುದ್ದೀನ್ ಸಖಾಫಿ ಅಲ್ ಹೈದ್ರೋಸಿ, ಕಿಲ್ಲೂರ್ ತಂಙಳ್ ರವರ ನೇತೃತ್ವದಲ್ಲಿ ಬ್ರಹತ್…

