ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕಿನ್ಯ: ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಕಿನ್ಯ ಬೆಳರಿಂಗೆ ಇಲ್ಲಿ ನಡೆಯುತ್ತಿರುವ ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದ ಜೀಣೋದ್ಧಾರಕ್ಕೆ ಪರಮಪೂಜ್ಯ ಡಾ. ಡಿ. ವಿರೇಂದ್ರ ಹೆಗ್ಡೆಯವರು ನೀಡಿದ 2 ಲಕ್ಷ ಡಿ.ಡಿಯನ್ನು ಮಂಗಳೂರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸುಧೀರ್ ಕುಮಾರ್ ಬಂಟ್ವಾಳ, ಯೋಜನಾಧಿಕಾರಿ ರಾಘವ ಎಮ್., ಇವರು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಬಾಬು ಕಿನ್ಯ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ, ಯಶವಂತ್ ಬೆಳರಿಂಗೆ, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಭವ್ಯ ಬೆಳರಿಂಗೆ, ಸುರೇಶ್ ಬೆಳರಿಂಗೆ, ಮುಂತಾದವರು ಉಪಸ್ಥಿತರಿದ್ದರು.


