ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಜಿಲ್ಲೆಯಲ್ಲಿ ಸೌಹಾರ್ದ ನೆಲೆನಿಂತುವಂತೆ ಮಾಡುವ ಪ್ರಯತ್ನ ಎಲ್ಲರಿಂದಲೂ ನಡೆಯಬೇಕು, ಧರ್ಮದ ಮೇಲಿರುವ ಪರಸ್ಪರ ಅಪನಂಬಿಕೆಗಳು ದೂರಗೊಂಡಲ್ಲಿ ಸೌಹಾರ್ದತೆ ಸಾಧ್ಯ, ಈ ಹಿನ್ನೆಲೆಯಲ್ಲಿ ಇತರ ಯಾವುದೇ ದುರುದ್ದೇಶ ಇಲ್ಲದೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತಪ್ಪಲ್ಲ ಎಂದು ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಭಿಪ್ರಾಯಪಟ್ಟರು. ಉಳ್ಳಾಲ ಮೆಲಂಗಡಿ ಮೊಹಿಯುದ್ದೀನ್ ಜುಮಾ ಮಸೀದಿ (ಹೊಸಪಳ್ಳಿ)ಯಲ್ಲಿ ನಡೆದ 87ನೇ ರಾತೀಬು ನೇರ್ಚೆ, 10 ದಿನಗಳ ಮತ ಪ್ರವಚನ, ಸ್ವಲಾತ್ ಮಜ್ಲೀಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ, ನ್ಯಾಯವಾದಿ ಕೆ.ಪಿ.ಶುಕೂರು, ಮೊಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್, ಮನಪಾ ಮಾಜಿ ಮೇಯರ್ ಕೆ.ಅಶ್ರಫ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಪ್ರಮುಖರಾದ ಯು.ಎಚ್.ಅಹ್ಮದ್ ಬಾವ, ಇಬ್ರಾಹಿಂ ಖಾಸಿಂ, ಅಶ್ರಫ್ ಮುಸ್ಲಿಯಾರ್, ಅಲಿ ಅಕ್ಬರ್, ಜಮಾಲ್ ಬಾರ್ಲಿ, ಆಸಿಫ್ ಅಬ್ದುಲ್ಲಾ, ಬಾವಾ ಅಹ್ಮದ್, ಅಮ್ಮದ್ ಕಬೀರ್, ಅದ್ದು, ಮುಸ್ತಫಾ ಇಸ್ಮಾಯಿಲ್, ಆಮಿಲ ಮೋನು, ಬಾವ ಫಕೀರ್ ಸಾಹೇಬ್, ಯು.ಕೆ.ಯೂಸುಫ್ ಉಳ್ಳಾಲ್, ಯು.ಕೆ.ಮುಸ್ತಫಾ ಬಾವ ಮಂಚಿಲ, ಅಬ್ದುಲ್ ಹಮೀದ್ ಬೀಜಮಾರ್ ಮೊದಲಾದವರು ಉಪಸ್ಥಿತರಿದ್ದರು.ಆಡಳಿತ ಸಮಿತಿ ವ್ಯವಸ್ಥಾಪಕ ರಹೀಂ ಮುಟ್ಟಿಕ್ಕಲ್ ಕಾರ್ಯಕ್ರಮ ನಿರ್ವಹಿಸಿದರು.



