ಉಳ್ಳಾಲ:ವೀರರಾಣಿ ಅಬ್ಬಕ್ಕ ಪ್ರಶಸ್ತಿ ಹಾಗೂ ವೀರರಾಣಿ ಅಬ್ಬಕ್ಕ ಪುರಸ್ಕಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹೌದು, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ 2026ರ ಫೆಬ್ರವರಿ 14ರಂದು ನಡೆಯಲಿರುವ ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಓರ್ವ ಮಹಿಳಾ ಸಾಧಕರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಮತ್ತು ಓರ್ವ ಮಹಿಳಾ ಸಾಧಕರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರಗಳನ್ನು ನೀಡಲಾಗುತ್ತದೆ. ತುಳುನಾಡಿನಲ್ಲಿ ಹುಟ್ಟಿ ಸಾಹಿತ್ಯ, ಸಂಸ್ಕೃತಿ ಮತ್ತು ಸಂಶೋಧನಾ ವಿಭಾಗಗಳಲ್ಲಿ ಗಣನೀಯ ಸಾಧನೆ ಮಾಡಿದ ಓರ್ವ ಮಹಿಳೆಗೆ ಈ ಪ್ರಶಸ್ತಿ ಮೀಸಲಾಗಿದೆ. ನಡು, ನುಡಿ ಹಾಗೂ ಪರಂಪರೆಗೆ ನೀಡಿದ ಮಹತ್ವದ ಸೇವೆಯನ್ನು ಗಮನಿಸಿ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ವೀರರಾಣಿ ಅಬ್ಬಕ್ಕ ಪುರಸ್ಕಾರವನ್ನು ತುಳು ಸಂಸ್ಕೃತಿಯ ಹಿನ್ನೆಲೆಯೊಂದಿಗೆ ಕಲೆ, ಕ್ರೀಡೆ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ಮಹಿಳೆಯೋರ್ವರಿಗೆ ಅಬ್ಬಕ್ಕ ಪುರಸ್ಕಾರ ನೀಡಲು ಉದ್ದೇಶಿಸಲಾಗಿದೆ. ಚಲನಚಿತ್ರ, ನಾಟಕ, ಲಲಿತ ಕಲೆಗಳು, ಕ್ರೀಡಾರಂಗ, ನಾಟಿವೈದ್ಯ, ಜಾನಪದ ಪ್ರಕಾರಗಳಲ್ಲಿರುವ ಪರಿಶ್ರಮಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಅರ್ಹತೆ ಹೊಂದಿದವರು…
Author: UllalaVani
ಉಳ್ಳಾಲ ;ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಪೊಲೀಸ್ ಇಲಾಖೆ ದಂಡ ಶುಲ್ಕದಲ್ಲಿ 50ಶೇ.ರಿಯಾಯಿತಿ ಘೋಷಿಸಿದ್ದರೂ ಅದು ಅವಧಿ ಮುಗಿಯುವ ಹೊತ್ತಿಗೆ ಜನಸಾಮಾನ್ಯರ ಗಮನಕ್ಕೆ ಬರುತ್ತದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರಚಾರ ಕೊಡಬೇಕು ಎಂದು ಕೌನ್ಸಿಲರ್ ಸುಜಿತ್ ಮಾಡೂರು ಆಗ್ರಹಿಸಿದರು. ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ, ದಂಡ ಶುಲ್ಕ ರಿಯಾಯಿತಿ ಕುರಿತು ವ್ಯಾಪಕ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಯಶವಂತ್ ಸಂಚಾರಿ ನಿಯಮ ಉಲ್ಲಂಘನೆ ಬಹಳಷ್ಟು ಹೆಚ್ಚಾಗುತ್ತಿದೆ. ಅದಕ್ಕಾಗಿ ಇಲಾಖೆ ನಿರ್ದೇಶನದಡಿಯಲ್ಲಿ ಸಂಘ-ಸoಸ್ಥೆಗಳು, ಕಾಲೇಜು, ಠಾಣೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಅದು ಇನ್ನೂ ಪರಿಣಾಮಕಾರಿಯಾಗಿಲ್ಲ ಎಂಬoತೆ ನಿತ್ಯವೂ ಮೂರರಿಂದ ನಾಲ್ಕು ಅಪಘಾತವಾಗುತ್ತಿದೆ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಆಡಳಿತ ಅವಕಾಶ ನೀಡುತ್ತಿಲ್ಲ. ಹಾಗಾಗಿ ಪಟ್ಟಣ ಪoಚಾಯಿತಿ ಆಡಳಿತದ ನೇತೃತ್ವದಲ್ಲಿ ಜಾಗೃತಿ ಮೂಡಿಸುವತ್ತ ಗಮನಹರಿಸಬೇಕು…
ಮಂಗಳೂರು ನಗರ ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕು ಸೋಮೇಶ್ವರ ಗ್ರಾಮದ, ತಲಪಾಡಿ ರೈಲ್ವೇ ಟ್ರ್ಯಾಕ್ ಬಳಿ ಕಲ್ಪನೆ ಎಂಬಲ್ಲಿ ಸಾರ್ವಜನಿಕ ಸ್ಥಳಕ್ಕೆ ದಾಳಿ ನಡೆಸಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವ ಕೃತ್ಯದಲ್ಲಿ ತೊಡಗಿದ್ದ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಒಟ್ಟು 21,000/- ರೂಪಾಯಿ ಬೆಲೆ ಬಾಳುವ ನಿಷೇಧಿತ ಮಾದಕ ವಸ್ತುವಾದ 425 ಗ್ರಾಂ ತೂಕದ ಗಾಂಜಾ ಮತ್ತು ನಗದು ರೂ 650/-, 1 ಮೊಬೈಲ್ ಫೋನ್ ಹಾಗೂ ಇತರೆ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಮೂಲತಃ ಉತ್ತರ ಪ್ರದೇಶ ರಾಜ್ಯದ ಹಸ್ಟೋಯಿ ಜಿಲ್ಲೆಯ ಜೂರಿ ಚಂದ್ರಾಪುರ್ ವಾಸಿಯಾದ ರಾಜ್ ಪಾಲ್ ಎಂಬಾತನು ಉತ್ತರಪ್ರದೇಶದ ತನ್ನ ಊರಿನಿಂದ ತೆಗೆದುಕೊಂಡು ಬಂದು ಹಣಕ್ಕಾಗಿ ಬೇರೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ದಿನಾಂಕ 30/12/2025 ರಂದು ಬೆಳಗ್ಗಿನ ಜಾವ ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕು ಸೋಮೇಶ್ವರ ಗ್ರಾಮದ, ತಲಪಾಡಿ ರೈಲ್ವೇ ಟ್ರ್ಯಾಕ್ ಬಳಿ ಕಲ್ಪನೆ ಎಂಬಲ್ಲಿ…
ಉಳ್ಳಾಲ: ಮನುಷ್ಯರೊಂದಿಗೆ ಎಂಬ ಧ್ಯೇಯವಾಕ್ಯದಲ್ಲಿ ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಆಯೋಜಿಸಿರುವ ಕೇರಳ ಯಾತ್ರೆಯು ಜನವರಿ 1 ಗುರುವಾರ ಮಧ್ಯಾಹ್ನ 1.30 ಕ್ಕೆ ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಪ್ರಾರಂಭವಾಗಲಿದೆ. ಅಂದು ಸಂಜೆ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ . ಜನವರಿ 16 ರಂದು ತಿರುವನಂತಪುರದಲ್ಲಿ ಸಮಾರೋಪ ಗೊಳ್ಳಲಿದೆ ಎಂದು ದೀವಾನೇ ಖಾಝಿ ಸುನ್ನಿ ಸಂಯುಕ್ತ ಜಮಾಅತ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರು ತಿಳಿಸಿದ್ದಾರೆ. ಅವರು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು. ದಿವಾನೇ ಖಾಝಿ ಸುನ್ನೀ ಸಂಯುಕ್ತ ಜಮಾಅತ್ ಕರ್ನಾಟಕ ಇದರ ವ್ಯಾಪ್ತಿಯ 400 ಮೊಹಲ್ಲಾಗಳ ಖಾಝಿ , ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಈ ಯಾತ್ರೆಯ ನೇತೃತ್ವವನ್ನು ವಹಿಸಲಿದ್ದಾರೆ. ಧಾರ್ಮಿಕ ಸೌಹಾರ್ದತೆ, ಮಾನವೀಯ ಏಕತೆ ಮತ್ತು ಭಾವೈಕ್ಯತೆಯನ್ನು ಸಾರುವ ಈ ಯಾತ್ರೆಗೆ ಕೇರಳದ 17 ಕೇಂದ್ರಗಳಲ್ಲಿ ಸ್ವಾಗತ ಸಮಾರಂಭಗಳು ನಡೆಯಲಿವೆ ಎಂದರು.ಸಮಸ್ತ…
ಮಂಗಳೂರು; ವಿಮಾನ ನಿಲ್ದಾಣದ ಭದ್ರತಾ ಸನ್ನದ್ಧತೆ ಮತ್ತು ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ಸಾಮರ್ಥ್ಯವನ್ನು ಪರೀಕ್ಷಿಸಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ವಾರ್ಷಿಕ ‘ಬಾಂಬ್ ಬೆದರಿಕೆ ಅಣಕು ಕಾರ್ಯಾಚರಣೆ’ಯನ್ನು ಯಶಸ್ವಿಯಾಗಿ ನಡೆಸಲಾಯಿತು. “ವಿಮಾನ ನಿಲ್ದಾಣದ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್‌ನಲ್ಲಿ ಸ್ಫೋಟಕಗಳನ್ನು ಹೊಂದಿರುವ ಅನಾಮಧೇಯ ಬ್ಯಾಗ್ ಪತ್ತೆಯಾದಂತೆ ಕೃತಕ ಸನ್ನಿವೇಶವನ್ನು ಸೃಷ್ಟಿಸಿ ಈ ಅಣಕು ಕಾರ್ಯಾಚರಣೆ ನಡೆಸಲಾಯಿತು ಎಂದು ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಲಿಂಕ್ಡ್ಇನ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ವಿಮಾನ ನಿಲ್ದಾಣ ಭದ್ರತಾ ಗುಂಪು, ಕರ್ನಾಟಕ ರಾಜ್ಯ ಪೊಲೀಸ್‌ನ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ, ಮಂಗಳೂರು ನಗರ ಪೊಲೀಸ್ ಮತ್ತು ವಿಮಾನ ನಿಲ್ದಾಣದ ಇತರ ಆಂತರಿಕ ಪಾಲುದಾರರೊಂದಿಗೆ ಸಮನ್ವಯ ಸಾಧಿಸಿ ಈ ಸಂಭಾವ್ಯ ಬೆದರಿಕೆಯನ್ನು ಹತ್ತಿಕ್ಕುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತು.ಕಾರ್ಯಾಚರಣೆಯ ನಂತರ, ಈ ಸನ್ನದ್ಧತೆಯ ಪರಿಣಾಮಕಾರಿತ್ವವನ್ನು ಪರಿಶೀಲಿಸಲು ಮತ್ತು ಸುಧಾರಿಸಬೇಕಾದ ಅಂಶಗಳನ್ನು ಗುರುತಿಸಲು ವಿವರವಾದ ಪರಾಮರ್ಶನಾ ಸಭೆಯನ್ನು ನಡೆಸಲಾಯಿತು. ಸಿಐಎಸ್‌ಎಫ್ ಕಮಾಂಡೆಂಟ್ ಮತ್ತು ಮುಖ್ಯ ವಿಮಾನ ನಿಲ್ದಾಣ…
ಮಂಗಳೂರು, ಡಿ. 30 : ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೃಷ್ಣ ಜೆ. ರಾವ್ ತಂದೆ ಹಾಗೂ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರನ್ನು ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಪಕ್ಷದಿಂದ ಉಚ್ಛಾಟಿಸಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು, ಜಗನ್ನಿವಾಸ ರಾವ್ ಅವರು ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸದ ಕಾರಣ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಜಗನ್ನಿವಾಸ ರಾವ್ ಅವರಿಗೆ ನೋಟಿಸ್ ನೀಡಲಾಗಿತ್ತು. ಪಕ್ಷದ ಚಟುವಟಿಕೆಗಳಿಂದ ದೂರ ಇಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.ಒಂದು ವೇಳೆ ಡಿಎನ್‌ಎ ಪರೀಕ್ಷೆಯಲ್ಲಿ ಕೃಷ್ಣ ಜೆ. ರಾವ್ ಮಗುವಿನ ತಂದೆ ಎಂದು ಸಾಬೀತಾದರೆ, ಆ ಯುವತಿಯನ್ನು ತನ್ನ ಮಗ ಮದುವೆಯಾಗುವಂತೆ ಮಾಡುವುದಾಗಿ ಜಗನ್ನಿವಾಸ ರಾವ್ ಪಕ್ಷಕ್ಕೆ ಭರವಸೆ ನೀಡಿದ್ದರು. ಇದೇ ರೀತಿಯ ಭರವಸೆಯನ್ನು ಅವರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೂ ನೀಡಿದ್ದರು ಎನ್ನಲಾಗಿದೆ. ಆದರೆ ಅವರು ಕೊಟ್ಟ…
ಉಡುಪಿ; ಡ್ರಗ್ ಮಾಫಿಯಾ ರಾಜ್ಯವನ್ನು ಸುತ್ತುವರೆದಿದೆ. ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಪತ್ತೆ ಮಾಡಿದ ಮಹಾರಾಷ್ಟ್ರ ಪೊಲೀಸರು ಈ ಸರ್ಕಾರವನ್ನು ತಡೆಯುವ ಕೆಲಸ ಮಾಡಿಲ್ಲ ಎಂದು ಬಿಜೆಪಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ. ಉಡುಪಿಯಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ ಈ ಬಾರಿ ಹೊಸ ವರ್ಷ ಆಚರಣೆ ಅಲ್ಲ. ಈ ಬಾರಿ ಡ್ರಗ್ಸ್ ಸೆಲೆಬ್ರೇಶನ್. ಮಹಾರಾಷ್ಟ್ರ ಪೊಲೀಸರು ಬೆಂಗಳೂರಲ್ಲಿ ರೈಡ್ ಮಾಡಿ, ಕೋಟ್ಯಂತರ ರೂಪಾಯಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದು ನಮ್ಮ ಪೊಲೀಸರಿಗೆ ಯಾಕೆ ಗೊತ್ತಾಗಲ್ಲ?. ಇದಕ್ಕಿಂತ ಅವಮಾನ ಏನಿದೆ?. ಮಹಾರಾಷ್ಟ್ರ ಪೂಲೀಸರು ಎರಡು ಮಹತ್ವದ ಕಾರ್ಯಚರಣೆ ನಡೆಸಿದ್ದಾರೆ.ಈ ಸರ್ಕಾರಕ್ಕೆ ನಾಚಿಕೆ ಆಗಬೇಕು, ಮಾನ ಮರ್ಯಾದೆ ಇದೆಯಾ?. ಕರ್ನಾಟಕದಲ್ಲಿ ಇಂಟಲಿಜೆನ್ಸ್ ಸತ್ತು ಹೋಗಿದೆಯಾ?, ಕರ್ನಾಟಕ ಪೊಲೀಸರ ಸಹಾಯ ಪಡೆದು ಕಾರ್ಯಚರಣೆ ಮಾಡಿದ್ದು ಎನ್ನುತ್ತಿರಿ. ನಿಮಗೆ ಯಾಕೆ ಈ ಮಾಫಿಯಾ ಗೊತ್ತಾಗಿಲ್ಲ?, ಗೃಹ ಸಚಿವರಿಗೆ ಕಾಮನ್ ಸೆನ್ಸ್ ಇಲ್ವಾ?, ಇದು ಬೇಜವಾಬ್ದಾರಿ ಸರ್ಕಾರ, ಮಂಗಳೂರು ಬೆಂಗಳೂರು ಜೈಲಿನಲ್ಲಿ ಡ್ರಗ್ ಪೆಡ್ಲರುಗಳು ತುಂಬಿದ್ದಾರೆ. ಪೊಲೀಸರೇ…
ಪೊಳಲಿ;ಹಾಸನದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಜೂಡೋ ಸ್ಪರ್ಧೆಯಲ್ಲಿ, ತರಬೇತುದಾರರಾದ ರಾಜೇಶ್ ಶ್ರೀಮಾನ್ ಅವರ ಮಾರ್ಗದರ್ಶನದಲ್ಲಿ ನೆತ್ತರಕೆರೆಯಲ್ಲಿ ನಡೆಯುತ್ತಿರುವ ಪೊಳಲಿ ಮಿಕ್ಸೆಡ್ ಮಾರ್ಟಿಯಲ್ ಆರ್ಟ್ಸ್ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ಅಭ್ಯಾಸದ ಫಲವಾಗಿ ವಿದ್ಯಾರ್ಥಿಗಳು ಸಾಧಿಸಿದ ಈ ಯಶಸ್ಸು ಹೆಮ್ಮೆಯ ಸಂಗತಿಯಾಗಿದೆ. ಅವರ ಪ್ರತಿಭೆಯನ್ನು ಗುರುತಿಸಿ ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದ ತರಬೇತುದಾರರಾದ ರಾಜೇಶ್ ಶ್ರೀಮಾನ್ ಅವರಿಗೆ ಹಾಗೂ ಪ್ರಶಸ್ತಿ ಪಡೆದ ಸ್ಪರ್ಧಿಗಳಿಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
ಉಳ್ಳಾಲ : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಂಸ್ಥೆ ಶತಮಾನೋತ್ಸವದ ಅಂಗವಾಗಿ ‘ಮನುಷ್ಯರೊಂದಿಗೆ’ ಎಂಬ ಧ್ಯೇಯ ದಡಿ ಕೇರಳ ಮುಸ್ಲಿಮ್ ಜಮಾಅತ್ ವತಿಯಿಂದ ಉಳ್ಳಾಲ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹಾಗೂ ಇಬ್ರಾಹಿಮ್ ಖಲೀಲ್ ಅಲ್ ಬುಖಾರಿ ಕಡಲುಂಡಿ ತಂಙಳ್ ನೇತೃತ್ವದಲ್ಲಿ ಜ.1 ರಂದು ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಆರಂಭಗೊಳ್ಳಲಿರುವ ಕೇರಳ ಯಾತ್ರೆ ಪ್ರಯುಕ್ತ ಪೂರ್ವ ಭಾವಿ ಸಭೆ ಉಳ್ಳಾಲ ದರ್ಗಾ ಕಚೇರಿಯಲ್ಲಿ ನಡೆಯಿತು. ಸ್ಪೀಕರ್ ಯುಟಿ ಖಾದರ್ ಮಾತನಾಡಿ,ಉಳ್ಳಾಲ ಝಿಯಾರತ್ ನೊಂದಿಗೆ ಈ ಕೇರಳ ಯಾತ್ರೆ ಆರಂಭಗೊಳ್ಳುವುದರಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಉಳ್ಳಾಲ ಇನ್ಸ್ಪೆಕ್ಟರ್ ವಿರೂಪಾಕ್ಷ, ದರ್ಗಾ ಕೋಶಾಧಿಕಾರಿ ನಾಝೀಮ್ ಮುಕಚೇರಿ, ಕಾರ್ಯದರ್ಶಿ ಇಸಾಕ್, ಸದಸ್ಯರು ಉಪಸ್ಥಿತರಿದ್ದರು.
ಕೊಣಾಜೆ: ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿರುತ್ತವೆ. ಪ್ರತಿಭೆಗಳನ್ಬು ಅವಕಾಶಗಳನ್ನಾಗಿ ಮಾಡುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಶಿಕ್ಷಣವು ಅಂಕಗಳಿಗೆ ಮಾತ್ರವಲ್ಲ ಜ್ಞಾನ ಹಾಗೂ ಜೀವನದ ಮೌಲ್ಯಗಳನ್ನು ಬೆಳೆಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಮಂಗಳೂರು ವಿವಿ ಕುಲಸಚಿವರಾದ ಪ್ರೊ.ಗಣೇಶ್ ಸಂಜೀವ್ ಅವರು ಹೇಳಿದರು. ಅವರು ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಸಾಧನೆ ಮಾಡಿದಾಗ ಪಾಲಕರು ಮಾತ್ರವಲ್ಲ ಶಿಕ್ಷಕರೂ ಸಂತಸಪಡುತ್ತಾರೆ. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಗೌರವ ನೀಡುವ ಮನೋಭಾವನೆ, ನಾಯಕತ್ವ ಗುಣವನ್ನು ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ಜವಬ್ಧಾರಿ ಶಿಕ್ಷಕರದ್ದಾಗಿದೆ ಎಂದರು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ರಘುರಾಜ್ ಕದ್ರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ಇಂದು ಎಷ್ಟೋ ಜನರು ಶಿಕ್ಷಣಕ್ಕೆ ಸೀಮಿತವಾಗಿ ಹೋಗುತ್ತಿರುವುದನ್ನು ಕಾಣುತ್ತೇವೆ. ಸಮಾನತೆ, ಸಾಮರಸ್ಯ, ಮಾನವೀಯತೆಯ ಮನೋಭಾವಗಳು ಶಿಕ್ಷಣದ ಮೂಲಕ ಸಿಗುವಂತಾಗಲಿ ಎಂದರು.ವಿಶ್ವಮಂಗಳ ಆಡಳಿತ ಅಧ್ಯಕ್ಷರಾದ ಪ್ರೊ.ಜಗದೀಶ್ ಪ್ರಸಾದ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸದ ಜೊತಗೆ ನಾರಾಯಣ ಗುರು, ಬಸವಣ್ಣ ,ಗಾಂಧೀಜಿ ಯವರಂತಹ ಮಹಾತ್ಮರ ಆದರ್ಶ ತತ್ವಗಳನ್ನು…

