ಮಂಗಳೂರು ;ಸುಪ್ರಸಿದ್ಧ ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ವಿಚಾರಕ್ಕೆ ಸಂಬಂಧಿಸಿದ ಗೊಂದಲ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಅಧ್ಯಕ್ಷರ ಅನುಮತಿ ಪಡೆಯದೇ ಮೂವರು ಆಡಳಿತ ಸಮಿತಿ ಸದಸ್ಯರು ಸಭೆ ನಡೆಸಿ, ಎಂಟು ಸದಸ್ಯರ ಪೈಕಿ ಐವರು ಗೈರಾಗಿದ್ದ ಸಂದರ್ಭದಲ್ಲೇ ಕೆಲವೇ ಸದಸ್ಯರ ಮೂಲಕ ಅಸಂವಿಧಾನಿಕವಾಗಿ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹಿಂದಿನ ಪದಾಧಿಕಾರಿಗಳ ಸಮಿತಿ ಆರೋಪಿಸಿದೆ.

ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಸಮಗ್ರ ಪರಿಶೀಲನೆಯ ಬಳಿಕ ನ್ಯಾಯಾಲಯವು ಹಿಂದಿನ ಸಮಿತಿಯ ಪರವಾಗಿ ಆದೇಶ ನೀಡಿದೆ ಎಂದು ಸಮಿತಿಯ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶದಂತೆ 16-02-2026ರಂದು ಕ್ಷೇತ್ರದ ಸಮೀಪದ ನಾರಾಯಣ ಗುರು ಕಾಲೇಜು ಸಭಾಂಗಣದಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ) ವಾರ್ಷಿಕ ಪ್ರತಿನಿಧಿ ಸಭೆ ನಡೆಯಿತು. ಸಭೆಯಲ್ಲಿ ಕೈಗೊಂಡ ನಿರ್ಣಯದ ಅನ್ವಯ 50 ಸದಸ್ಯರ ಹೊಸ ಸಮಿತಿಯನ್ನು ರಚಿಸಿ, 2026-27ನೇ ಸಾಲಿನ ಆಡಳಿತ ಸಮಿತಿಗೆ ಅಧಿಕೃತವಾಗಿ 9 ಮಂದಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನೂತನ ಪದಾಧಿಕಾರಿಗಳು
- ಅಧ್ಯಕ್ಷರು : ಎಚ್.ಎಸ್. ಸಾಯಿರಾಮ್
- ಉಪಾಧ್ಯಕ್ಷರು : ಊರ್ಮಿಳಾ ರಮೇಶ್ ಕುಮಾರ್
- ಕಾರ್ಯದರ್ಶಿ : ರವಿಶಂಕರ್ ಮಿಜಾರ್
- ಖಜಾಂಜಿ : ಶೇಖರ್ ಪೂಜಾರಿ
- ಸದಸ್ಯರು : ಜಗದೀಪ್ ಸುವರ್ಣ, ಕೆ.ಟಿ. ಸುವರ್ಣ, ಎಚ್. ರತೀಂದ್ರನಾಥ್, ಸದಾನಂದ ಪೂಜಾರಿ ಹಾಗೂ ಶರತ್ ಸುವರ್ಣ ಬಜ್ಪೆ.

