ಉಳ್ಳಾಲ; ಮಲ್ಲಿಕಾ ಅವರ ನೇತೃತ್ವದ ದಕ್ಷ್ ಪ್ಲೇ ಸ್ಕೂಲ್ ವತಿಯಿಂದ ಉಳ್ಳಾಲ ಬೈಲ್‌ನಲ್ಲಿ ಮಕ್ಕಳಿಗಾಗಿ ವಿಶೇಷ ಸಮರ್ ಕ್ಯಾಂಪ್ ನಡೆಯುತ್ತಿದೆ. ಬೇಸಿಗೆ ರಜಾದಿನಗಳಲ್ಲಿ ಮಕ್ಕಳಿಗೆ ಸೃಜನಾತ್ಮಕ ಹಾಗೂ ಶೈಕ್ಷಣಿಕ ವಾತಾವರಣ ಒದಗಿಸಿ ಅವರ ಪ್ರತಿಭೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸಮರ್ ಕ್ಯಾಂಪ್ ಆಯೋಜಿಸಲಾಗಿದೆ. ಮಕ್ಕಳಿಗೆ ಮನರಂಜನೆಯ ಜೊತೆಗೆ ಬುದ್ಧಿವರ್ಧಕ ಚಟುವಟಿಕೆಗಳನ್ನು ಕಲಿಸುವ ವ್ಯವಸ್ಥೆಯೂ ಲಭ್ಯವಿದೆ. ಅದಲ್ಲದೇ ವಾಹನದ ಸೌಲಭ್ಯವೂ ಇದೆ. ಮಕ್ಕಳು ಹೆಚ್ಚು ಸ್ಮಾರ್ಟ್ ಆಗಿ, ಖುಷಿಯಿಂದ ಕಾಲ ಕಳೆಯಲು ಇದು ಉತ್ತಮ ಅವಕಾಶವಾಗಿದ್ದು, ಪೋಷಕರು ಆರಾಮದಾಯಕವಾಗಿ ಮಕ್ಕಳನ್ನು ಈ ಕ್ಯಾಂಪ್‌ಗೆ ಸೇರಿಸಬಹುದಾಗಿದೆ. ಏಪ್ರಿಲ್, ಮೇ ಎರಡು ತಿಂಗಳ ಕ್ಯಾಂಪಿನಲ್ಲಿ ಚಿತ್ರಕಲೆ, ಹಸ್ತಕಲೆ, ಕರಾಟೆ, ಯೋಗ, ಮೆಹೆಂದಿ, ತಬಲಾ, ವೆಸ್ಟರ್ನ್ ಡ್ಯಾನ್ಸ್ ಸೇರಿದಂತೆ ವಿವಿಧ ಸೃಜನಾತ್ಮಕ ಚಟುವಟಿಕೆಗಳ ಜೊತೆಗೆ ಅಥ್ಲೆಟಿಕ್ಸ್ ಟ್ರೆöÊನಿಂಗ್ ನೀಡಲಾಗುತ್ತದೆ. ಈ ಶಿಬಿರದ ಶುಲ್ಕ 750 ಆಗಿದೆ. ಇನ್ನು ಇಲ್ಲಿ ಡೇ ಕೇರ್ ಸೌಲಭ್ಯವೂ ಲಭ್ಯವಿದ್ದು, ಹಾಫ್ ಡೇ ಹಾಗೂ ಫುಲ್ ಡೇ ಆಯ್ಕೆಗಳು ಕೂಡ ಇವೆ.…
Author: UllalaVani
ಕಿನ್ಯ ಬೆಳರಿಂಗೆ ಭಂಡಾರ ಮನೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ವಾರ್ಷಿಕ ನೇಮೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ಭಂಡಾರ ಮನೆಯಲ್ಲಿ ನಡೆಯಿತು. ಟ್ರಸ್ಟಿನ ಗೌರವಾಧ್ಯಕ್ಷ ಕೆ.ಟಿ ಸುವರ್ಣ ಸಭೆಯ ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ, ದೈವ ದೇವರ ಸೇವೆ ಮಾಡುವುದು ಅತ್ಯಂತ ಪುಣ್ಯದ ಕೆಲಸ, ಆದರೆ ನಮ್ಮ ಮನೆಯಲ್ಲಿ ತಂದೆ ತಾಯಿ ಹಿರಿಯರನ್ನು ಗೌರವಿಸದೆ ನೋಡದೆ, ದೈವ ದೇವರ ಸೇವೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ, ನಾವು ಗುರು ಹಿರಿಯರನ್ನು ಗೌರವಿಸಿ ಮಾಡುವ ಸೇವೆ ಎಲ್ಲಕ್ಕಿಂತ ದೊಡ್ಡದು ಎಂದು ತಿಳಿಸಿದರು.ದೇವರು ಎಲ್ಲಿಯೂ ಇದ್ದಾನೆ, ಹಾಗಾಗಿ ಪ್ರತ್ಯೇಕವಾಗಿ ದೇವಸ್ಥಾನಕ್ಕೆ ಯಾಕೆ ಹೋಗಬೇಕು, ಎನ್ನುವವರು ಇದ್ದಾರೆ, ಗಾಳಿ ಎಲ್ಲಾ ಕಡೆ ಇದೆ, ಆದರೆ ಅತ್ಯಂತ ಸೆಕೆ ಆದಾಗ ನಾವು ಫ್ಯಾನಿನ ಗಾಳಿಯನ್ನು ಹುಡುಕಿಕೊಂಡು ಅದರ ಹತ್ತಿರ ಹೋಗುತ್ತೇವೆ ಹಾಗೆಯೆ ದೇವರು ಕೂಡ ಎಲ್ಲೆಲ್ಲಿ ಇದ್ದರೂ, ಮನಸ್ಸಿಗೆ ಶಾಂತಿ ನೆಮ್ಮದಿ ಬೇಕಾದಾಗ ನಾವು ಪವಿತ್ರ ಕ್ಷೇತ್ರಗಳಿಗೆ ಹೋಗುತ್ತೇವೆ, ಮನುಷ್ಯರಲ್ಲಿ…
ಕೊಣಾಜೆ;ಹಿಂದುಳಿದ ವರ್ಗಳ ಕಲ್ಯಾಣ ಇಲಾಖೆಯ ವತಿಯಿಂದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಸ್ನಾತಕೋತ್ತರ ವಿದ್ಯಾರ್ಥಿ ನಿಲಯದ ರಜತ ಸಂಭ್ರಮದ ಹಾಸ್ಟೆಲ್ ಡೇ ಅನರ್ಘ್ಯ-2026 ಕಾರ್ಯಕ್ರಮ ವಿಜೃಂಭಣೆಯಿoದ ನಡೆಯಿತು. ಚಿತ್ರನಟ, ಹಿರಿಯ ರಂಗಭೂಮಿ ಕಲಾವಿದ ಅರವಿಂದ ಬೋಳಾರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು, ಬೇರೆ ಬೇರೆ ಮನೆಯಿಂದ ಬಂದರೂ ಇಲ್ಲಿ ಒಂದೇ ಕುಟುಂಬದ ಸದಸ್ಯರಂತೆ ವಿದ್ಯಾರ್ಥಿಗಳು ಜೊತೆಯಾಗಿರುವುದು ವಿಶೇಷವಾದ ಅನುಭವವನ್ನು ನೀಡುತ್ತದೆ.ವಿದ್ಯಾ ಸಂಸ್ಥೆಗಳು ದೇವಸ್ಥಾನದಂತೆ ಶ್ರೇಷ್ಟ ಎಂದರು. ಹಿAದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಬಿಂದಿಯಾ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರದ್ಧೆಯಿಂದ ಕೆಲಸ ಮಾಡಿದಾಗ ಯಶಸ್ಸು ಸಾಧಿಸಲು ಸಾಧ್ಯವಿದೆ. ಏನನ್ನು ಯೋಚಿಸುತ್ತೇವೆಯೋ ಅದೇ ಆಗುತ್ತೇವೆ.ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರಯತ್ನ ಇರಲಿ ಎಂದು ಆಶಿಸಿದರು. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಮಾಧವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಜೀವನ ನಡೆಸಿ ನಮ್ಮ ಗುರಿಯನ್ನು ಸಾಧಿಸ ಬೇಕೆಂದರು. ಈ ಸಂದರ್ಭ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.…
ಉಚ್ಚಿಲ; ಇಲ್ಲಿನ ಕೋಟೆ ಶ್ರೀ ದೂಮಾವತಿ ಬಂಟ ವೈದ್ಯನಾಥ ಪರಿವಾರ ದೈವಗಳು ಮತ್ತು ಸಂಕೋಳಿಗೆ ಗುಳಿಗ ದೈವದ ಸೇವಾ ಟ್ರಸ್ಟ್ ಇದರ ಅನುವಂಶಿಕ ಆಡಳಿತ ಮೊಕ್ತೇಸರರಾದ ಉಚ್ಚಿಲತ್ತಾಯ ನಿಲೇಶ್ವರ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಂತೆ ಅಧ್ಯಕ್ಷರಾಗಿ ರಾಘವ ಆರ್ ಉಚ್ಚಿಲ್, ಉಪಾಧ್ಯಕ್ಷರಾಗಿ ಅಶೋಕ್ ಉಚ್ಚಿಲ್, ಪ್ರಧಾನಕಾರ್ಯದರ್ಶಿಯಾಗಿ ಮುರಳಿಮೋಹನ್ ಹಾಗೂ ಕೋಶಧಿಕಾರಿಯಾಗಿ ರಘು ಉಚ್ಚಿಲ್ ಆಯ್ಕೆಗೊಂಡಿದ್ದಾರೆ.
ಬೆಂಗಳೂರು : ಮಂಗಳೂರು ದಾಸ್ ಪ್ರಮೋಷನ್ಸ್ ಹೋಂ ನರ್ಸಿಂಗ್ ಹೆಲ್ತ್ ಕೇರ್ ಕರ್ನಾಟಕ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಲಯನ್ ಅನಿಲ್ ದಾಸ್ ಅವರಿಗೆ ಸುವರ್ಣ ಕನ್ನಡಿಗ-2026′ ಪ್ರಶಸ್ತಿ ಲಭಿಸಿದೆ. ಕನ್ನಡಪ್ರಭ- ಸುವರ್ಣ ನ್ಯೂಸ್ ವತಿಯಿಂದ ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ನಡೆದ ಸಮಾರಂಭದಲ್ಲಿ ‘ಸುವರ್ಣ ಕನ್ನಡಿಗ-2026’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಲಯನ್ ಅನಿಲ್ ದಾಸ್ ಹಾಗೂ ಅವರ ಪತ್ನಿ ಆಶಾಲತಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಸಂದರ್ಭ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು, ಸಂಸದೀಯ ವ್ಯವಹಾರ, ಶಾಸನ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷಿö್ಮÃ ಹೆಬ್ಬಾಳ್ಕರ್, ಚಿತ್ರನಟ ಅನಿರುದ್ಧ ಜಟ್ಕರ್, ಕನ್ನಡಪ್ರಭ ಏಷಿಯಾನೆಟ್ ಸುವರ್ಣ ನ್ಯೂಸ್ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಳ್ಳಾಲ: ಕೋಟೆಕಾರ್ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಹಿದಾಯತ್ ನಗರ ಇದರ ಪ್ರಾರಂಭೋತ್ಸವ ಕಾರ್ಯಕ್ರಮ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಅಧ್ಯಕ್ಷತೆಯಲ್ಲಿ ಜರಗಿತು. ಮದರಸಕ್ಕೆ ಆಗಮಿಸಿದ ಮಕ್ಕಳನ್ನು ಆಧರದಿಂದ ಬರ ಮಾಡಿಕೊಳ್ಳಲಾಯಿತು. ಮಖ್ಯೋಪದ್ಯಾಯ ಅಬ್ದುಲ್ ನಯೀಮಿ ಲೌಕಿಕ ಶಿಕ್ಷಣದೊಂದಿಗೆ ಬೌಧಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್, ಮುಅಲ್ಲಿಂ ಫಾರೂಕ್ ಸಅದಿ ಕೊಮರಂಗಳ, ಝುಬೈರ್ ಝುಹ್ರಿ, ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದ್ದರು. ಮದರಸ ವಿಧ್ಯಾರ್ಥಿ ಗಳಿಗೆ ಸಿಹಿ ಹಂಚಲಾಯಿತು ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ ಎಚ್ ವಂದಿಸಿದರು.
ಬಾಳೆಪುಣಿ: ಫತ್ಹೇ ಮುಬಾರಕ್ ಮದ್ರಸಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು, ಧಾರ್ಮಿಕ ಮುಖಂಡರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮವು ದುಆದೊಂದಿಗೆ ಆರಂಭಗೊಂಡಿತು.ನಂತರ ಮದ್ರಸಾ ಸದರ್ ಉಸ್ತಾದ್ ಹಾರಿಸ್ ಹನೀಫಿ ಅಲ್ ಫುರ್ಖಾನಿ ಯವರು ಶಿಕ್ಷಣದ ಮಹತ್ವವನ್ನು ವಿವರಿಸಿದರು. ಇಸ್ಲಾಮಿಕ್ ಶಿಕ್ಷಣವು ಮಕ್ಕಳಲ್ಲಿ ಶಿಸ್ತು, ಸತ್ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟರು.ಜಮಾಅತ್ ಅಧ್ಯಕ್ಷರಾದ ಮೊಯ್ದಿನ್ ಹಾಜಿ ಯವರು ಈ ಮದ್ರಸ ಸ್ಥಳೀಯ ಮಕ್ಕಳಿಗೆ ಉತ್ತಮ ಧಾರ್ಮಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಆರಂಭಿಸಲಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ಹೊಂದಿ ಸಮಾಜಕ್ಕೆ ಸೇವೆ ಮಾಡುವಂತೆ ಬೆಳೆಯಬೇಕು ಎಂದು ಆಶಿಸಿದರು.ಮುಅಲ್ಲಿಮರಾದ ಮುಹಮ್ಮದ್ ಮದನಿ ಕಜೆ ಕಾರ್ಯಕ್ರಮ ಉದ್ಘಾಟಿಸಿ ಉಮರ್ ಹಾಜಿ ಹಾಗೂ ಸಹ ಅಧ್ಯಾಪಕರಾದ ಸಿದ್ದೀಕ್ ಸಅದಿ ಅಲ್ ಹಾದಿ ಆಶಂಸೆ ಭಾಷಣ ಮಾಡಿದರು.ಸಹ ಅಧ್ಯಾಪಕರಾದ ಸ್ವಾದಿಕ್ ಸಖಾಫಿ, ಸಫ್ವಾನ್ ಸುಲ್ತಾನಿ ಅಲ್ ಫುರ್ಖಾನಿ ಉಪಸ್ಥಿತರಿದ್ದರು.ಮದ್ರಸಾ ಹಳೆ ವಿದ್ಯಾರ್ಥಿಗಳ ವತಿಯಿಂದ ವಿದ್ಯಾರ್ಥಿಗಳಿಗೆ ಕಿತಾಬ್…
ಮಂಗಳೂರು: ಈಶ್ವರನ ಹೂದೋಟ ಎಂದೇ ಬಣ್ಣಿಸಲಾಗುವ ಪ್ರಶಾಂತ, ಪ್ರಕೃತಿಯ ಸೊಬಗು, ಹಸಿರು ಸಿರಿಯ ಮಧ್ಯೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಾರ್ಚ್ 30ರಿಂದ ಏಪ್ರಿಲ್ 6ವರೆಗೆ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ. ಏಪ್ರಿಲ್ ೭ರಂದು ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ ಶ್ಯಾಮ್ ಹೇಳಿದರು. ಭಾರತದ ಏಕಾದಶ ಪುಣ್ಯ ನದಿಗಳ ತೀರ್ಥದೊಂದಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿರುವುದು ವಿಶೇಷವಾಗಿದೆ, (ಗಂಗೆ, ಯಮುನೆ, ಸರಸ್ವತಿ, ನರ್ಮದೆ, ಗಂಡಕೀ, ನಾರಾಯಣಿ, ತ್ರಿಶೂಲಿ, ಸರಯೂ, ಕಾವೇರಿ, ತುಂಗೆ, ನೇತ್ರಾವತಿ) ಈ ತೀರ್ಥದ ಭವ್ಯ ಮೆರವಣಿಗೆ ಸಂಗಮ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ, ಮಹಾಕಾಳಿ ದೇವಸ್ಥಾನದಿಂದ ಮಾರ್ಚ್ ೩೦ರಂದು ಚಾಲನೆಗೊಂಡು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದು, ಹೊರೆಕಾಣಿಕೆಗಳ ಸಹಿತ ನಾಡಿನ ಸಾಧು, ಸಂತರ ನೇತೃತ್ವದಲ್ಲಿ ಶ್ರೀ ಕ್ಷೇತ್ರ…
ಉಳ್ಳಾಲ: ಕೇರಳ, ಕರ್ನಾಟಕ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಕಿನ್ಯ ಕೇಂದ್ರ ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಹಝ್ರತ್ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ ರವರ ಹೆಸರಿನಲ್ಲಿ ನಡೆಸಿಕೊಂಡು ಬರುವ ಮುಖಾಂ ಕೂಟು ಝಿಯಾರತ್ ಎಪ್ರಿಲ್ 9 ಗುರುವಾರ ರಾತ್ರಿ ನಡೆಯಲಿದ್ದು , ಈ ಪ್ರಯುಕ್ತ ಮಾ.30 ರಿಂದ ಏಪ್ರಿಲ್ 8 ಬುಧವಾರ ಅಸ್ತ ಗುರುವಾರ ರಾತ್ರಿ ವರೆಗೆ ಧಾರ್ಮಿಕ ಮತ ಪಂಡಿತರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬೂಸ್ವಾಲಿ ಹಾಜಿ ತಿಳಿಸಿದ್ದಾರೆ. ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಮಾಅತ್ ಅಧ್ಯಕ್ಷ ಅಬೂಸ್ವಾಲಿ ಹಾಜಿ ಕಿನ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕೂಟು ಝಿಯಾರತ್ ಕಾರ್ಯಕ್ರಮ ದ ಉದ್ಘಾಟನೆಮಾ.30 ರಂದು ಸೋಮವಾರ ರಾತ್ರಿ 8.30 ಕ್ಕೆ ನಡೆಯಲಿದ್ದು, ಸಯ್ಯಿದ್ ಮುಕ್ತಾರ್ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಅಮೀರ್ ತಂಙಳ್ ಕಿನ್ಯ ದುಆ ಆಶೀರ್ವಚನ ನೀಡಲಿದ್ದಾರೆ. ಕೇಂದ್ರ ಜುಮಾ ಮಸೀದಿಯಮುದರ್ರಿಸ್…
ಕೋಟಿಪದವು; ಕೋಟಿಪದವು ಗ್ರಾಮದ ಶ್ರೀರಾಮ ಭಜನಾ ಮಂದಿರ (ರಿ.) ಇದರ ವತಿಯಿಂದ ಶ್ರೀ ರಾಮನವಮಿ ಉತ್ಸವದ ಅಂಗವಾಗಿ, ದಕ್ಷ ಯುವ ಬಳಗ (ರಿ.) ಗ್ರಾಮಚಾವಡಿ ಇವರ ಸಹಯೋಗದಲ್ಲಿ ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ರಾಮನವಮಿ ಹಬ್ಬದಂದು ಬೆಳಿಗ್ಗೆ 6.20 ಗಂಟೆಗೆ ಏಕಹ ಭಜನೆಯ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಅಶಕ್ತ ಮತ್ತು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ, ಹಾಗು ಭಜನಾ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕೀರ್ತನ ಸಂಪುಟ ಜನಜನಿತ ಭಜನೆಗಳ ಉಪಯುಕ್ತ ಸಂಗ್ರಹ ಎಂಬ ಪುಸ್ತಕವನ್ನು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸುರೇಂದ್ರ ರೈ, ಭಾರತಿ ಎಸ್ ರೈ, ವಿಜೇತ್ ಫಜೀರು, ಸುಂದರ ಕೋಟ್ಯಾನ್, ದಿನೇಶ್ ಮಾಯಿಲೋಡಿ, ಸುರೇಶ್ ಆಚಾರ್ಯ, ಹೊನ್ನಪ್ಪ ಕುಲಾಲ್, ಡಾ!ನವೀನ್ ಎನ್ ಕೊಣಾಜೆ ಕೃಷ್ಣಪ್ರಸಾದ್, ವಿಶ್ವನಾಥಗಟ್ಟಿ ರಾಜೇಶ್ ಬೋಸ್ತುಕೋಡಿ, ಸೀತಾರಾಮ ಸಣ್ಣಪದವು, ನಾರಾಯಣ ಟೈಲರ್, ಚಂದ್ರಹಾಸ ಬೆಲ್ಚಡ, ವರದರಾಜ್ ಬೊಳ್ಳೆಕುಮೆರ್, ಮಂದಿರದ ಪದಾಧಿಕಾರಿಗಳು…

