Author: UllalaVani

Kannada News From Coastal Karnataka

ಉಳ್ಳಾಲ: ಮಂಗಳೂರು ಪೊಲೀಸ್‌ ಕಮೀಷನರ್‌ ಹಾಗೂ ದ.ಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಜಿಲ್ಲೆಯಾದ್ಯಂತ ಜೂಜು ಸಹಿತ ಕೋಳಿ ಅಂಕಕ್ಕೆ ತಡೆ ಹಾಕಿರುವ ಬೆನ್ನಲ್ಲೇ ಪೊಲೀಸ್‌ ಸರಹದ್ದಿನಲ್ಲಿ ಜೂಜು ರಹಿತ ಕೋಳಿ ಅಂಕ ಹರೇಕಳದ ಕುತ್ತಿಮುಗೇರು ಜಾತ್ರೆ ಸಂದರ್ಭ ಸಾಂಪ್ರದಾಯಿಕವಾಗಿ ಜರಗಿದ್ದು, ಈ ಕುರಿತ ಜವಾಬ್ದಾರಿಯನ್ನು ಬಿಜೆಪಿ ಮುಖಂಡ, ಅರೆ ಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ವಹಿಸಿ ತನ್ನೂರಿನ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕರಾವಳಿಗರ ಕೋಳಿ ಅಂಕವನ್ನು ಸಾಂಪ್ರಾದಾಯಿಕ ಹಿನ್ನಲೆಯಲ್ಲಿ ನೋಡುತ್ತಾರೆ. ತುಳುನಾಡಿನಲ್ಲಿ ಆರಾಧಿಸಲಾಗುವ ಪ್ರತಿಯೊಂದು ದೈವಕ್ಕೆ ಸಂಬAಧಪಟ್ಟ ದೈವಸ್ಥಾನದಲ್ಲೂ ಕೋಳಿ ಅಂಕ ಮಾಡೋದು ಕಡ್ಡಾಯ ಎನ್ನುವ ಅಲಿಖಿತ ನಂಬಿಕೆ ಇದೆ. ಆದರೆ ರಾಜ್ಯಸರಕಾದ ಕಾನೂನಿಂದ ಸಾಂಪ್ರಾದಾಯಕ್ಕೆ ಕುತ್ತು ಬಂದಿದೆ. ಇದರಿಂದ ಆಕ್ರೋಶ ವ್ಯಕ್ತವಾದ ಹಿನ್ನಲೆ ಕೇವಲ ಗಂಟೆಗಳ ಸಮಯದಲ್ಲಿ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಮಾತ್ರ ಅವಕಾಶವನ್ನು ನೀಡಲಾಗುತ್ತಿದೆ. ಅಂತೆಯೇ ನಿಗದಿತ ಸಮಯದಲ್ಲಿ ಕುತ್ತಿಮುಗೇರು ಜಾತ್ರೆಯ ಹಿನ್ನಲೆ ಕೋಳಿ ಅಂಕ ನಡೆಯಿತು. ಪೊಲೀಸ್ ಆಯುಕ್ತರು ನೀಡಿದ ಗಡುವಿನೊಳಗೆ ಕೋಳಿ…

Read More

ಮಂಗಳೂರು: ಹೊಸವರ್ಷದ ಶುಭಾರಂಭದಂದು ‘ಸಾಂಗ್ಸ್ ಪ್ರೀಮಿಯರ್’ ಎನ್ನುವ ವರ್ಣರಂಜಿತ ಕಾರ್ಯಕ್ರಮದಲ್ಲಿ ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ “ಕೊರಗಜ್ಜ” ಚಿತ್ರದ ಎಲ್ಲಾ ಹಾಡುಗಳನ್ನು ನಮ್ಮ ಚಿತ್ರತಂಡ ಸುಮಾರು ಮುನ್ನೂರಕ್ಕೂ ಹೆಚ್ಚು ಆಡಿಯೋ ಪ್ಲಾಟ್ ಫಾರ್ಮ್ ಗಳಲ್ಲಿ ಝೀ ಮ್ಯೂಜಿಕ್ ಮುಖೇನ ಹರಿಯಬಿಟ್ಟಿತ್ತು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಹಾಲಿಡೇ ಇನ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾವು ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆಯನ್ನು ಘೋಷಿಸಿದ್ದೆವೆಯೇ ಹೊರತು, ತ್ರಿವಿಕ್ರಮ ಸಪಲ್ಯ ನಿರ್ಮಾಣ ದಲ್ಲಿರುವ “ಕೊರಗಜ್ಜ” ಚಿತ್ರದ ದೈವದ ಬಗ್ಗೆ ರೀಲ್ಸ್ ಮಾಡಿ ಎಂದು ಹೇಳಿಲ್ಲ. ನಮ್ಮ ಮಾತನ್ನು ಕರ್ನಾಟಕದ ಕೆಲ ಭಾಗಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಿನಿಮಾದ ನಿರ್ದೇಶಕ ಸುಧೀರ್ ಅತ್ತಾವರ ತಿಳಿಸಿದ್ದಾರೆ.ರೀಲ್ಸ್ ಎಂದರೆ ವೀಡಿಯೋ ತುಣುಕುಗಳು. ಈಗಾಗಲೇ ದೈವಗಳ ಬಗ್ಗೆ ಮತ್ತು ದೈವದ ಆರಾಧನಾ ಕ್ರಮಗಳಾದ ಕೋಲ, ನೇಮ, ತಂಬಿಲ, ಅಗೆಲು…ಹೀಗೆ ದೈವದ ವಿಚಾರವಾಗಿ ಸಹಸ್ರಾರು ರೀಲ್ಸ್ ಗಳು ಸೋಷಿಯಲ್ ಮೇಡಿಯಾಗಳಲ್ಲಿ ಹರಿದಾಡುತ್ತಿದೆ. ಹಾಗಿರುವಾಗ ಚಿತ್ರದ ಹಾಡುಗಳಿಗೆ ರೀಲ್ಸ್…

Read More

ತೊಕ್ಕೊಟ್ಟು; ಉಳ್ಳಾಲ ತಾಲೂಕಿನಲ್ಲಿ ಆರೋಗ್ಯ ಮತ್ತು ಶೈಕ್ಷಣಿಕ ಕ್ರಾಂತಿಯನ್ನು ನಡೆಸಿರುವ ಸೇವಾ ಮಾಣಿಕ್ಯ ನಿಟ್ಟೆ ಸಮೂಹ ಸಂಸ್ಥೆಯ ಅಧ್ಯಕ್ಷರು ಡಾ.ಎನ್ ವಿನಯ ಹೆಗ್ಡೆಯವರಿಗೆ ಶ್ರದ್ಧಾಂಜಲಿ ಸಭೆ ಮತ್ತು ನುಡಿನಮನವನ್ನು ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ತೊಕ್ಕೊಟು ವಿನಂಬ್ರಾ ಸಭಾಂಗಣದಲ್ಲಿ ನಡೆಯಿತು. ಸರಳ, ಸಜ್ಜನಿಕೆಯ ನಿಸ್ವಾರ್ಥ ಗುಣದ ಡಾ.ವಿನಯ ಹೆಗ್ಡೆ ಅವರ ಭಾವಚಿತ್ರಕ್ಕೆ ಪುರ್ಷ್ಪಾಚನೆ ಮಾಡುವ ಮೂಲಕ ಗಣ್ಯರು ಗೌರವದ ನಮನ ಸಲ್ಲಿಸಿದ್ದಾರೆ. ಸಹಕಾರಿ ಪ್ರಕೊಷ್ಠ ಜಿಲ್ಲಾ ಸಂಚಾಲಕರಾದ ಟಿ ರಾಜಾರಾಮ್ ಭಟ್ ಅವರು ಮಾತನಾಡಿ, ಹುಟ್ಟು ಮತ್ತು ಸಾವುಗಳ ನಡುವಿನ ಸಾಧನೆ ಆದರ್ಶಮಯ ಅನ್ನುವ ಮಾತಿದೆ. ಇದಕ್ಕೆ ಶಿಕ್ಷಣದಲ್ಲಿ ಕ್ರಾಂತಿಯನ್ನು ಮಾಡಿದ ಡಾ.ವಿನಯ ಹೆಗ್ಡೆ ಅವರ ಬದುಕು ಸಾಕ್ಷಿಯಾಗತ್ತೆ. ಡಾ.ವಿನಯ ಹೆಗ್ಡೆಯವರ ಜೀವನ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ ಎಂದು ಹಾರೈಸಿದ್ರು. ಈ ವೇಳೆ ಅರೆಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ವಿನಯ ಹೆಗ್ಡೆ ಅವರು ದೇರಳಕಟ್ಟೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ…

Read More

ಉಡುಪಿ, ಜ.07: ಶಿರೂರು ಮಠದ ಪರ್ಯಾಯ ಮಹೋತ್ಸವದ ಕುರಿತು ಅಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪಿಯೋರ್ವನನ್ನು ಬಂಧಿಸಲಾಗಿದೆ. ಈ ಬಾರಿಯ ಶಿರೂರು ಮಠದ ಪರ್ಯಾಯ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಅರ್ಪಿಸುವ ಸಂಬAಧ ರಚಿಸಲಾದ ಉಡುಪಿ ಜಿಲ್ಲಾ ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ರೀತಿ ಆಕ್ಷೇಪಾರ್ಹ ಬರಹ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ಎರಡು ಪ್ರತ್ಯೇಕ ಆರೋಪ ಪ್ರಕರಣಗಳಿಗೆ ಸಂಬAಧಿಸಿ ಓರ್ವನನ್ನು ಬಂಧಿಸಲಾಗಿದೆ.ಕಾರ್ಕಳ ತಾಲೂಕಿನ ನಿಟ್ಟೆ ಅಂಬಡೆಕಲ್ಲು ನಿವಾಸಿ ಸುಧಾಕರ (37) ಬಂಧಿತ ಆರೋಪಿ. ಈತನನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೊಂದು ಪ್ರಕರಣದ ಆರೋಪಿ ನಿಟ್ಟೆಯ ಸುದೀಪ್ ಶೆಟ್ಟಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Read More

ತಲಪಾಡಿ,ಜ.7: ಮೀನು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಅದರಲ್ಲೂ ಕರಾವಳಿಗರಿಗಂತೂ ದಿನನಿತ್ಯದ ಊಟದಲ್ಲಿ ಮೀನು ಇರಲೇ ಬೇಕು. ಹೆಚ್ಚಾಗಿ ಫ್ರೆಶ್ ಮೀನನ್ನು ಜನರು ಮುಗಿಬಿದ್ದು ಖರೀದಿಸುತ್ತಾರೆ. ಅದರಲ್ಲೂ ತಲಪಾಡಿ ಮೀನು ಮಾರುಕಟ್ಟೆ ಎಲ್ಲ ಬಗೆಯ ವೆರೈಟಿ ಮೀನುಗಳ ಗೂಡು. ಹೌದು, ತಲಪಾಡಿ ಮೀನು ಮಾರುಕಟ್ಟೆಗೆ ಕಾಸರಗೋಡಿನಿಂದ ಉಳ್ಳಾಲದವರೆಗಿನ ಜನರು ಹೋಗಿ ರುಚಿ-ಶುಚಿಯಾದ ಮೀನುಗಳನ್ನು ಖರೀದಿಸುತ್ತಾರೆ. ಸಂಜೆಯಾಗಿತ್ತಿದ್ದAತೆ ಮಾರುಕಟ್ಟೆಯಲ್ಲಿ ಜನಜಂಗುಳಿ ಜಾಸ್ತಿಯಾಗುತ್ತದೆ. ಇಲ್ಲಿ ಸಿಗುವಂತಹ ಫ್ರೆಶ್ ವೆರೈಟಿ ಮೀನುಗಳು ಇತರ ಕಡೆ ಸಿಗುವುದಿಲ್ಲ. ಇದು ಮಾರುಕಟ್ಟೆಯ ಅಭಿವೃದ್ಧಿಗೆ ಕಾರಣವಾಗಿದೆ ಎಂದರೆ ತಪ್ಪಗಲಾರದು. ಮಾರುಕಟ್ಟೆಗೆ ಬರುವ ಗ್ರಾಹಕರು ನಿರಾಶರಾಗಿ ವಾಪಾಸ್ ಹೋಗುವುದಿಲ್ಲ ಎಂಬುವುದೇ ಇಲ್ಲಿನ ಮಾರುಕಟ್ಟೆಯ ವಿಶೇಷವಾಗಿದೆ. ಬೂತಾಯಿ, ಬಂಗುಡೆ, ಅಂಜಲ್, ಸಿಗಡಿ, ಏಡಿ, ಸೇರಿದಂತೆ ಸಣ್ಣ ಮೀನಿನಿಂದ ಹಿಡಿದು ದೊಡ್ಡ ಮೀನಿನವರೆಗಿನ ಎಲ್ಲ ವೈವಿಧ್ಯಮಯ ಮೀನುಗಳು ಲಭ್ಯ.

Read More

ಕರ್ನಾಟಕ; ಅಡಿಕೆ ಬೆಳೆಗಳನ್ನು ಇತರೆ ಬೆಳೆಗಳಿಗೆ ಹೋಲಿಸಿದರೆ ಬೆಳೆಯುವುದು ಸುಲಭ. ಒಮ್ಮೆ ಗಿಡ ನೆಟ್ಟರೆ ಮುಗೀತು. ಉಳಿದ ಬೆಳೆಗಳಷ್ಟು ಪಾಲನೆ ಇವಕ್ಕೆ ಬೇಕಿಲ್ಲ. ಆದಾಯವೂ ಭರ್ಜರಿಯಾಗಿ ಬರುತ್ತೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದ್ರೆ ವಾಸ್ತವದಲ್ಲಿ ಅಡಿಕೆ ಬೆಳಗಾರರ ಗೋಳು ಒಂದೆರಡಲ್ಲ. ಸುಳಿ ರೋಗ, ಕೊಳೆ ರೋಗ ಹೀಗೆ ನಾನಾ ಸಂಕಷ್ಟಗಳನ್ನು ಇವರು ಎದುರಿಸುತ್ತಿದ್ದಾರೆ. ಇವುಗಳ ಪಟ್ಟಿಗೆ ಈಗ ಎಲೆಚುಕ್ಕಿ ರೋಗವೂ ಸೇರ್ಪಡೆಯಾಗಿರೋದು, ಅಡಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವವರ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದೆ. ಈ ನಡುವೆ ಕೇಂದ್ರ ಸರ್ಕಾರ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಕಾರಣ ಬೆಳೆಗೆ ಉತ್ತಮ ಬೆಲೆಯ ನಿರೀಕ್ಷೆಯೂ ಹುಸಿಯಾಗಿದೆ.ಕರ್ನಾಟಕ ರಾಜ್ಯದಲ್ಲಿ ಹೆಚ್ಚಿರುವ ಕೊಳೆ ಮತ್ತು ಎಲೆ ಚುಕ್ಕಿ ರೋಗಕ್ಕೆ ರೈತರು ಅಕ್ಷರಶಃ ನಲುಗಿದ್ದಾರೆ. ಕೊಳೆ ರೋಗದ ಕಾರಣ ಅಡಿಕೆ ಉದುರಿ ಹಾಳಾದರೆ, ಹಿಡಿಮುಂಡಿ ರೋಗದಿಂದ ಮೇಲ್ಭಾಗ ಸಂಪೂರ್ಣ ಒಣಗಿ ಅಡಿಕೆ ಗಿಡಗಳು ಸಾಯುತ್ತಿವೆ. ಇದು ಸಾಲದಕ್ಕೆ ಎಲೆಚುಕ್ಕಿ ರೋಗವೂ ಗಿಡಗಳನ್ನು ಬಾಧಿಸುತ್ತಿರುವ ಕಾರಣ ಬೆಳೆ ಹಾಗಿರಲಿ, ಅಡಿಕೆ ಗಿಡಗಳನ್ನ…

Read More

ಬಂಟ್ವಾಳ;ಬಿ.ಸಿರೋಡ್-ತಲಪಾಡಿ ಎಂಬಲ್ಲಿ ನಸುಕಿನ ವೇಳೆ ವಿದ್ಯುತ್ ಕಂಬಕ್ಕೆ ಲಾರಿ ಢಿಕ್ಕಿಯಾಗಿ ಮಗುಚಿದ ಘಟನೆ ನಡೆದಿದೆ. ಘಟನೆಯಿಂದ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಪವರ್ ಸಬ್‌ಸ್ಟೇಶನ್ ಎದುರಲ್ಲೇ ಘಟನೆ ನಡೆದಿದ್ದು, ವಿದ್ಯುತ್ ತಂತಿಗಳು ಹೆದ್ದಾರಿಯಲ್ಲಿ ತುಂಡಾಗಿ ಬಿದ್ದುಕೊಂಡಿದ್ದವು. ಘಟನೆಯಿಂದಾಗಿ ಬಿ.ಸಿ.ರೋಡ್ ಸುತ್ತಮುತ್ತ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. .

Read More

ಪುತ್ತೂರು, ಜ. 07 ; ಕುರಿಯ ಗ್ರಾಮದ ಬೂದಿಯಾರು ಎಂಬಲ್ಲಿ ಮಂಗಳವಾರ ವಿದ್ಯುತ್ ತಂತಿ ತುಂಡಾಗಿ ತೋಟದ ಮೇಲೆ ಬಿದ್ದ ಪರಿಣಾಮ 900 ಕ್ಕೂ ಹೆಚ್ಚು ಅಡಿಕೆ ಸಸಿಗಳು ಸುಟ್ಟು ಭಸ್ಮವಾಗಿವೆ. ತೋಟ ಬೂದಿಯಾರು ನಿವಾಸಿ ಗಣೇಶ್ ರೈ ಅವರಿಗೆ ಸೇರಿದ್ದು, ಸುಮಾರು ಒಂದು ವರ್ಷದ ಹಿಂದೆ ನೆಟ್ಟಿದ್ದ ಸಸಿಗಳು ಚೆನ್ನಾಗಿ ಬೆಳೆದಿದ್ದವು ಎಂದು ವರದಿಯಾಗಿದೆ.ಮೂಲಗಳ ಪ್ರಕಾರ, ಮಂಗಳವಾರ ಮಧ್ಯಾಹ್ನ ವಿದ್ಯುತ್ ತಂತಿ ಹಠಾತ್ತನೆ ತುಂಡಾಯಿತು. ಬಿದ್ದ ತಂತಿಯಿಂದ ಬೆಂಕಿ ಹೊತ್ತಿಕೊಂಡಿತು, ಅದು ಬೇಗನೆ ತೋಟದಾದ್ಯಂತ ಹರಡಿ, ಸಸಿಗಳನ್ನು ಸಂಪೂರ್ಣವಾಗಿ ಸುಟ್ಟುಹಾಕಿತು.ಘಟನೆಯಲ್ಲಿ ಹೊಲದಲ್ಲಿ ಅಳವಡಿಸಲಾದ ನೀರಾವರಿ ಪೈಪ್‌ಗಳು ಸಹ ಸಂಪೂರ್ಣವಾಗಿ ಹಾನಿಗೊಳಗಾದವು. ಬೆಂಕಿಯಿಂದ ಉಂಟಾದ ಒಟ್ಟು ನಷ್ಟ ಸುಮಾರು 5 ಲಕ್ಷ ರೂ.ಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

Read More

ಮಂಗಳೂರು; ದ.ಕ. ಜಿಲ್ಲಾಡಳಿತ ಕರಾವಳಿ ಉತ್ಸವ ಪ್ರಯುಕ್ತ ಮಂಗಳೂರಿನ ಶರಧಿ ಪ್ರತಿಷ್ಠಾನ, ಅಸ್ತç ಗೋಲ್ಡ್& ಡೈಮಂಡ್ಸ್ ಸಹಭಾಗಿತ್ವದಲ್ಲಿ “ಕಲಾ ಪರ್ಬ” ಚಿತ್ರ-ಶಿಲ್ಪ-ಸಾಂಸ್ಕೃತಿಕ ಮೇಳ ಕದ್ರಿ ಪಾರ್ಕ್ನಲ್ಲಿ ಜ.9ರಿಂದ 11ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಎಸ್.ಎಂ.ಶಿವಪ್ರಕಾಶ್ ತಿಳಿಸಿದ್ದಾರೆ. ಕದ್ರಿ ಪಾರ್ಕ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇವರು. ಈಗಾಗಲೇ 120ಮಳಿಗೆಗಳಲ್ಲಿ ರಾಜ್ಯಾದ್ಯಂತ ಕಲಾವಿದರ ಸಾವಿರಾರು ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ರಾಷ್ಟçಮಟ್ಟದ ಛಾಯಾಚಿತ್ರ ಪ್ರದರ್ಶನ ಮಕ್ಕಳಿಗಾಗಿ ಚಿತ್ರ ಕಲಾ ಸ್ಪರ್ಧೆ ನಡೆಯಲಿದೆ. ಕಲಾವಿದರಿಗೆ ಉತ್ತೇಜನ ಸಿಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಈಉತ್ಸವದಲ್ಲಿ ದೇಶದ 120ಕ್ಕೂ ಅಧಿಕ ಕಲಾವಿದರು ಭಾಗಿಯಾಗಲಿದ್ದು, 5000ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು. ಜ.9ರಂದು ಸಂಜೆ 5.30ಕ್ಕೆ ಕಲಾ ಪರ್ಬ ಉದ್ಘಾಟನೆ, ಮಳಿಗೆಗಳ ಉದ್ಘಾಟನೆ ಹಾಗೂ ಶಿಲ್ಪಕಲಾ ಮಳಿಗೆಗಳ ಉದ್ಘಾಟನೆ, ಭರತನಾಟ್ಯ ನಡೆಯಲಿದೆ. ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಮೊದಲಾದವರು…

Read More

ಮಂಗಳೂರು: ನಗರದ ನವ ಭಾರತ್ ಸರ್ಕಲ್ ಬಳಿಯಿರುವ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಜನವರಿ 10 ರಂದು ಶನಿವಾರ ದಂದು ಮಧ್ಯಾಹ್ನ 3.00 ರಿಂದ ರಾತ್ರಿ 8 ಗಂಟೆಯ ವರೆಗೆ ಸ್ವರಾನುಬಂಧ ಸಂಗೀತ ಉತ್ಸವ ನಡೆಯಲಿದೆ. ಈ ಉತ್ಸವದಲ್ಲಿ ಕಲಾಸಾಧನ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ಬಳಿಕ ಶ್ರೀಮತಿ ವಿಭಾ ಎಸ್. ನಾಯಕ್ ಮಂಗಳೂರು ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ. ತಬಲಾದಲ್ಲಿ ವಿಘ್ನೇಶ್ ಪ್ರಭು, ಹಾಗೂ ಹಾರ್ಮೋನಿಯಂನಲ್ಲಿ ಮೇಧಾ ಜಿ. ಭಟ್ ಸಾಥ್ ನೀಡಲಿದ್ದಾರೆ. ಸಿತಾರ್-ಕೊಳಲು-ತಬಲಾ ಜುಗಲ್ ಬಂಧಿ ಉಸ್ತಾದ್ ರಫೀಕ್ ಖಾನ್ ಮತ್ತು ಪಿ. ಸಮೀರ್ ರಾವ್ ಅವರಿಂದ ಸಿತಾರ್ ಮತ್ತು ಕೊಳಲು ಜುಗಲ್ಬಂದಿ, ಪಂ. ರಾಜೇಂದ್ರ ನಾಕೋಡ್ ಅವರೊಂದಿಗೆ ನಡೆಯಲಿದೆ.ವಯುವ ಕಲಾವಿದರಲ್ಲಿ ಸಂಗೀತದ ಕುರಿತು ಆಸಕ್ತಿ ಹೆಚ್ಚಿಸಲು ಹಾಗೂ ಅವರಿಗೆ ವೇದಿಕೆ ಕಲ್ಪಿಸಲು ಪ್ರತೀ ವರ್ಷ ಸಂಗೀತ ಉತ್ಸವ ಆಯೋಜಿಸಲಾಗುತ್ತಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

Read More