ಕಲ್ಮಂಜ: ಪಜಿರಡ್ಕದ ನೇತ್ರಾವತಿ ನದಿಯಲ್ಲಿ ಉಜಿರೆಯ ಖಾಸಗಿ ಕಾಲೇಜಿನ 7 ಜನ ಐಟಿ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಶ್ರೀ ಪೂರ್ಣ ದೇಶ್ಪಾಂಡೆ ನೀರುಪಾಲಾದ ಘಟನೆ ದೇವಸ್ಥಾನದ ಹತ್ತಿರದ ಅಣೆಕಟ್ಟು ಸಮೀಪ ಮೇ 19 ರಂದು ಸಂಜೆ ನಡೆದಿದೆ.


ಎಂಟು ಜನ ಸ್ನೇಹಿತರು ಒಟ್ಟಾಗಿ ನೇತ್ರಾವತಿ ನದಿಗೆ ಈಜಲು ತೆರಳಿದ್ದರು, ಈ ವೇಳೆ ಗೋಕಾಕ್ ಮೂಲದ ಎನ್ನಲಾದ 21ರ ಹರೆಯದ ಶ್ರೀ ಪೂರ್ಣ ದೇಶ್ಪಾಂಡೆ ನೀರುಪಾಲಾಗಿರುವ ಘಟನೆ ನಡೆದಿದ್ದು, ಕೂಡಲೇ ಸ್ಥಳೀಯರು, ಶೌರ್ಯ ತಂಡದವರು, ಮುಳುಗು ತಜ್ಞರು ಹುಡುಕಾಟ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.

ಈತ ತನ್ನ ಸ್ನೇಹಿತರೊಂದಿಗೆ ನದಿಗೆ ಇಳಿದಿದ್ದು, ಈ ವೇಳೆ ಈತ ಆಳವಿಲ್ಲ ಎನ್ನುತ್ತಾ ಫೋಟೋ ಕ್ಲಿಕ್ಕಿಸಿಕೊಳ್ಳಲು ಹಿಂದೆ ಹೋಗಿದ್ದಾರೆ. ಈ ಸಂದರ್ಭ ಆಯತಪ್ಪಿ ನದಿ ಆಳಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ತಾಯಿಗೆ ಈತ ಒಬ್ಬನೇ ಮಗ ಎಂದು ತಿಳಿದು ಬಂದಿದ್ದು, ಇಂದು ಊರಿಗೆ ಮರಳುವವರಿದ್ದರು. ಆದರೆ ವಿಧಿಯಾಟಕ್ಕೆ 21ರ ಹರೆಯದ ಯುವಕ ಬಲಿಯಾಗಿದ್ದಾನೆ.


