ಉಳ್ಳಾಲ: ಮಾನವ ಜೀವನದ ವರ್ಣಾಶ್ರಮ ಧರ್ಮದಲ್ಲಿ ಗೃಹಸ್ಥಾಶ್ರಮಕ್ಕೆ ಅತ್ಯಂತ ಮಹತ್ವವಾದ ಸ್ಥಾನವಿದ್ದು, ಪಾಣಿಗ್ರಹಣ ಮೂಲಕ ಗೃಹಸ್ಥಾಶ್ರಮಕ್ಕೆ ಪ್ರವೇಶಿಸುವುದು ಒಂದು ಪವಿತ್ರವಾದ ಸಂಸ್ಕಾರವಾಗಿದ್ದು, ಇದೊಂದು ದೈವೀ ಕಾರ್ಯ ಮತ್ತು ಯಜ್ಞದಂತೆ ಎಂದು ಮಂಗಳೂರಿನ ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.| ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು.ಹಿಂದೂ ಸೇವಾ ಪ್ರತಿಷ್ಠಾನ, ಸಮಗ್ರ ಶಿಶು ಶಿಕ್ಷಣ ಸಹಯೋಗ ಬೆಂಗಳೂರು ಇದರ ಆಶ್ರಯದ ಕೇಶವ ಶಿಶು ಮಂದಿರ ಕಿನ್ಯ ಹಾಗೂ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಪಾಡಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಇವರ ಮಾರ್ಗದರ್ಶನದಲ್ಲಿ ಕೇಶವ ಶಿಶು ಮಂದಿರ ಕಿನ್ಯದಲ್ಲಿ ನಡೆದ ದಂಪತಿ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಭಾರತದಲ್ಲಿ ಅನಾದಿಕಾಲದಿಂದಲೂ ದಾಂಪತ್ಯ ಜೀವನಕ್ಕೆ ಒಂದು ವಿಶೇಷ ಸ್ಥಾನವಿದೆ. ಆಯುರ್ವೇದದಲ್ಲೂ ಇದಕ್ಕೆ ಮಹತ್ವವಿದೆ. ಭಾರತೀಯ ಸಂಸ್ಕಾರದಲ್ಲಿ ಅತ್ಯಂತ ಪವಿತ್ರ ಕಾರ್ಯದಲ್ಲಿ ನವವಧೂವರರಾಗಿ ಇಲ್ಲಿಗೆ ಬಂದಿದ್ದು, ಇದೊಂದು ಏಕಕಾಲದಲ್ಲಿ ನಡೆಯುವ ಪ್ರಕ್ರಿಯೆ ಅಲ್ಲ. ಹಲವಾರು ಬಾರಿ ಚಿಂತನೆ ನಡೆಸಿದ ಬಳಿಕ ದಾಂಪತ್ಯ…
Author: UllalaVani
ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ಸ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅಕ್ಷಯ ಕುಮಾರ್ ಎ. ಅವರು 2020-21 ನೇ ಸಾಲಿನ ಬ್ರಿಟಿಷ್ ಕೌನ್ಸಿಲ್ ಹಾಗೂ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರತಿಷ್ಠಿತ ನ್ಯೂಟನ್ ಭಾಭಾ ಸಂಶೋಧನಾ ಫೆಲೋಶಿಪ್ ಗೆ ಆಯ್ಕೆಯಾಗಿದ್ದಾರೆ.ಅಕ್ಷಯ್ ಕುಮಾರ್ ಅವರು ಎಲೆಕ್ಟ್ರಾನಿಕ್ಸ್ ವಿಭಾಗದ ಅಧ್ಯಕ್ಷ ಪೆÇ್ರ| ನವೀನ್ ಕುಮಾರ್ ಎಸ್ ಕೆ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್ ಡಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ.ಯು.ಕೆಯ ನ್ಯೂಟನ್- ಭಾಭಾ ಫೆಲೋಶಿಪ್ ಭಾರತದ ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಉನ್ನತಮಟ್ಟದ ಸಂಶೋಧನೆಯ ಅವಕಾಶವನ್ನು ಒದಗಿಸಿಕೊಡುತ್ತಿದೆ. ಅಕ್ಷಯ ಕುಮಾರ್ ಎ ಅವರು ಯುಕೆ ಸ್ಕಾಟ್ಲೆಂಡಿನ ಪ್ರತಿಷ್ಠಿತ ಗ್ಲಾಸ್ಗೋ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಸಂಶೋಧನೆಯನ್ನು ನಡೆಸಲಿದ್ದಾರೆ. ಇವರು ಸ್ಮಾರ್ಟ್ hಣಿಷಿಗೆ ಅನುಕೂಲವಾಗುವಂತಹ ಮಣ್ಣಿನಲ್ಲಿರುವ ಪಿ. ಯಚ್ ಮತ್ತು ನ್ಯೂಟ್ರಿನ್ಟ್ ಅನ್ನು ಪತ್ತೆ ಹಚ್ಚುವ ಸಂವೇದಕಗಳನ್ನು ನ್ಯಾನೋ ಮೆಟೀರಿಯಲ್ಸ್ ಬಳಕೆಯೊಂದಿಗೆ ಅಭಿವೃದ್ಧಿ ಪಡಿಸುವ ಗುರಿ ಹೊಂದಿರುತ್ತಾರ
ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ ರೋಡು ನಿವಾಸಿ ಆಕೀಫ್ (12) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ರಕ್ಷಣೆ ನೀಡಿದ್ದ ಆತನ ತಂದೆಯನ್ನು ಉಳ್ಳಾಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿ ಬಾಲಕನನ್ನು ರಿಮಾಂಡ್ ಹೋಂಗೆ ಕಳುಹಿಸಲಾಗಿದೆ.ಉತ್ತರಪ್ರದೇಶ ಮೂಲದ ಕೆ.ಸಿ ರೋಡು ಪಿಲಿಕೂರು ನಿವಾಸಿ ಸಂತೋಷ್ (45) ಎಂಬಾತನನ್ನು ಬಂಧಿಸಲಾಗಿದೆ. ಆಕೀಫ್ ನನ್ನು ಹತ್ಯೆ ನಡೆಸಿ ಬಂದಿದ್ದ ಬಾಲಕ ತನ್ನ ತಂದೆ ಸಂತೋಷ್ ಅವರಲ್ಲಿ ವಿಚಾರ ತಿಳಿಸಿದ್ದನು. ಘಟನೆ ಕುರಿತು ಯಾರಲ್ಲೂ ತಿಳಿಸದಂತೆ ಹೇಳಿರುವುದು ಮತ್ತು ಆರೋಪಿ ಮನೆಯಲ್ಲೇ ರಕ್ಷಣೆ ನೀಡಿದ ಆರೋಪದ ಮೇರೆಗೆ ಪೊಲೀಸರು ಸಂತೋಷ್‍ನನ್ನು ಬಂಧಿಸಿದ್ದಾರೆ. ಸಂತೋಷ್ ಕಳೆದ 30 ವರ್ಷಗಳಿಂದ ತಲಪಾಡಿಯಲ್ಲೇ ಇದ್ದು, ಲಾರಿ ಚಾಲಕನಾಗಿ ದುಡಿಯುತ್ತಿದ್ದರು.ಆರೋಪಿ ಉಡುಪಿ ಬಾಲ ನ್ಯಾಯಾಲಯಕ್ಕೆ :ಆರೋಪಿ ಬಾಲಪರಾಧಿ ಆಗಿರುವ ಹಿನ್ನೆಲೆಯಲ್ಲಿ ಉಡುಪಿ ದೊಡ್ಡಣಗುಡ್ಡೆಯ ಬಾಲ ನ್ಯಾಯ ಮಂಡಳಿಗೆ ಸೋಮವಾರ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ ರಿಮಾಂಡ್ ಹೋಂ ಶಿಕ್ಷೆ ವಿಧಿಸಿ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ರಿಮಾಂಡ್ ಹೋಂಗೆ ದಾಖಲಿಸಲಾಗಿದೆ.ಆರೋಪಿ ಮನೆಗೆ…
ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಕೆ.ಸಿ.ರೋಡ್ ನಿವಾಸಿ ಶನಿವಾರ ರಾತ್ರಿ ನಾಪತ್ತೆಯಾಗಿದ್ದ ಹನ್ನೆರಡರ ಹರೆಯದ ಬಾಲಕ ಆಕೀಫ್ ಮೃತದೇಹ ಭಾನುವಾರ ಕೆ.ಸಿರೋಡ್ ಬಳಿ ಮೈದಾನದ ಬಳಿ ತೆಂಗಿನಗರಿಯ ಅಡಿಯಲ್ಲಿ ಪತ್ತೆಯಾಗಿದ್ದು, ಪಬ್‍ಜಿ ಮಾದರಿಯ ಫ್ರೀ ಫಯರ್ ಮೊಬೈಲ್ ಗೇಮ್ ವಿಚಾರದಲ್ಲಿ ಆತನ ಸ್ನೇಹಿತನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೆ.ಸಿ.ರೋಡ್ ನಿವಾಸಿ ದ್ವಿತೀಯ ಪಿಯುಸಿ ಕಲಿಯುತ್ತಿರುವ ಉತ್ತರ ಪ್ರದೇಶ ಮೂಲದ ದೀಪಕ್(17) ಆಕೀಫ್‍ನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಆರೋಪಿಯಾಗಿದ್ದು, ಫ್ರೀ ಫಯರ್ ಮೊಬೈಲ್ ಗೇಮ್ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿದ್ದು, ದೀಪಕ್‍ನನ್ನು ಉಳ್ಳಾಲ ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯ ವಿವರ : ಕೆ.ಸಿ ರೋಡ್ ನಿವಾಸಿ ಹನೀಫ್ ಅವರ ಐವರು ಮಕ್ಕಳಲ್ಲಿ ಮಹಮ್ಮದ್ ಆಕೀಫ್ ನಾಲಕನೆಯವನಾಗಿದ್ದು ಮೂವರು ಸಹೋದರಿ, ಓರ್ವ ಸಹೋದರ ಮತ್ತು ತಂದೆ ತಾಯಿಯನ್ನು ಅಗಲಿದ್ದಾನೆ. ಕೆ.ಸಿ. ರೋಡ್‍ನ ಫಲಾಹ್ ಶಿಕ್ಷಣ ಸಂಸ್ಥೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಈತನಿಗೆ ಕೊರೊನ ಹಿನ್ನಲೆಯಲ್ಲಿ ಆನ್‍ಲೈನ್…
ತಲಪಾಡಿ: ತಲಪಾಡಿ ತಚ್ಚಣಿ ಬಳಿಯ ಬಾರೊಂದರ ಬಳಿ ನಿಷೇ„ತ ಎಂ.ಡಿ.ಎಂ.ಎ. ಡ್ರಗ್ ಪೌಡರ್ ಮಾರಾಟ ಮಾಡುತ್ತಿದ್ದ ಉಪ್ಪಳ ಮೂಲದ ಇಬ್ಬರನ್ನು ಮಂಗಳೂರು ದಕ್ಷಿಣ ಸಹಾಯಕ ಪೆÇಲೀಸ್ ಆಯುಕ್ತ ರಂಜಿತ್ ಬಂಡಾರು ನೇತೃತ್ವದ ತಂಡ ಮತ್ತು ಉಳ್ಳಾಲ ಪೆÇಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂ„ಸಿದ್ದಾರೆ.ಉಪ್ಪಳ ಪಚ್ಚಿಲಮಾರ್ ನಿವಾಸಿ ಫಜಲ್ ಪಿ.ಎಂ.(27), ಮತ್ತು ಉಪ್ಪಳ ಮಜಲ್ ನಿವಾಸಿ ಮೊಹಮ್ಮದ್ ನೌಫಾಲ್ ಬಂ„ತ ಆರೋಪಿಗಳಾಗಿದ್ದು, ತಲಪಾಡಿ ತಚ್ಛಣಿ ಬಾರ್ ಬಳಿ ನಿಷೇ„ತ ಡ್ರಗ್ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಂ„ಸಿ ಅವರಿಂದ ಡ್ರಗ್ ಪೌಡರ್ ಸಹಿತ ಬೈಕ್ ಮತ್ತು ಕಾರನ್ನು ವಶಕ್ಕ ತೆಗೆದುಕೊಂಡಿದ್ದಾರೆ. ಪೆÇಲೀಸ್ ಆಯುಕ್ತ ಶಶಿಕುಮಾರ್ ನಿರ್ದೇಶನದಂತೆ ಡಿಸಿಪಿಗಳಾದ ಹರಿರಾಮ್ ಶಂಕರ್ ಮತ್ತು ವಿನಯ ಗಾಂವ್ಕರ್ ಮಾರ್ಗದರ್ಶನದಲ್ಲಿ ಎಸಿಪಿ ನೇತೃತ್ವದಲ್ಲಿ ಸಿಬಂದಿಗಳು ಭಾಗವಹಿಸಿದ್ದರು.
ಉಳ್ಳಾಲ: ಸ್ಕೂಟರ್ ಮತ್ತು ಬೈಕ್ ಮುಖಾಮುಖಿಯಾಗಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಈ ಪೈಕಿ ಚಿಂತಾಜನಕ ಸ್ಥಿತಿಯಲ್ಲುದ್ದ ಇಬ್ಬರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಸ್ಕೂಟರಿನಲ್ಲಿದ್ದ ಕಿನ್ಯ ನಿವಾಸಿ ರಾಮಣ್ಣ (50) ಮತ್ತು ಮಾಡೂರು ನಿವಾಸಿ ಸತೀಶ್ (34) ಸಾವನ್ನಪ್ಪಿದವರು. ಮಾಡೂರು ನಿವಾಸಿಗಳಾಗಿರುವ ಬೆನ್ಸನ್ ಮತ್ತು ನರೇಂದ್ರ ಎಂಬವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾ. 27 ರಂದು ರಾತ್ರಿ 10 ಗಂಟೆಗೆ ಕೊಂಡಾಣ ಕಟ್ಟೆ ಜಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದ ರಾಮಣ್ಣ ಮತ್ತು ಸತೀಶ್ ಎಂಬವರಿದ್ದ ಸ್ಕೂಟರಿಗೆ , ಎದುರಿನಿಂದ ಬಂದ ಬೆನ್ಸನ್, ನರೇಂದ್ರ ಅವರಿದ್ದ ಬೈಕ್ ಮುಖಾಮುಖಿಯಾಗಿ ಗುದ್ದಿತ್ತು. ಗಾಯಗೊಂಡಿದ್ದ ನಾಲ್ವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ರಾಮಣ್ಣ ಅವರು ಮಾ. 28 ರಂದೇ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೆ, ಸತೀಶ್ ಅವರು ಮಾ. 30 ರಂದು ಸಾವನ್ನಪ್ಪಿದ್ದಾರೆ . ಇಬ್ಬರೂ ಕೂಲಿ ಕಾರ್ಮಿಕರಾಗಿದ್ದು, ರಾಮಣ್ಣ ಅವರು…
ಉಳ್ಳಾಲ :ಫಾ.ಮುಲ್ಲರ್ ವಿದ್ಯಾಸಂಸ್ಥೆಯ ಪ್ರವರ್ತಕರು ಆಗಿರುವ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಪಡೆದ ಜ್ಞಾನದಿಂದ ಜಗತ್ತಿಗೆ ಹಾಗೂ ಸಮಾಜಕ್ಕೆ ಉತ್ತಮ ಸೇವೆಯನ್ನು ಒದಗಿಸುವಂತಾಗಬೇಕಿದೆ ಎಂದುಎಂದು ಫಾ. ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಷನ್ಸ್ ಉಪಾಧ್ಯಕ್ಷ ರೆವರೆಂಡ್ ಮೊನ್ಸಿಂಜರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ ಹೇಳಿದರು. ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಆಡಿಟೋರಿಯಂನಲ್ಲಿ ಗುರುವಾರ ನಡೆದ ಫಾ. ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ಪದವಿ ಹಾಗೂ ಸ್ನಾತಕೋತ್ತರ ಪದವಿಯ 30ನೇ ಪದವಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು. ಸಮಾಜಕ್ಕೆ ಹಾಗೂ ಜಗತ್ತಿಗೆ ಸೇವೆಯನ್ನು ನೀಡಲು ಆದಷ್ಟೋ ವೈದ್ಯರನ್ನು ಈ ಸಂಸ್ಥೆ ನೀಡಿದೆ ಹಾಗೂ ನೀಡುತ್ತಾ ಬರುತ್ತಿದೆ. ಇಲ್ಲಿ ಸಂಶೋಧನೆಯನ್ನು ಮಾಡಿ ವೈದ್ಯಕೀಯ ಪದವಿಯನ್ನು ಪಡೆದ ಪ್ರತಿಯೊಬ್ಬರು ಮುಂದೆ ಪ್ರೀತಿ ಮತ್ತು ಸಹಾನುಭೂತಿಯಿಂದ ಜನರ ಸೇವೆಯನ್ನು ಮಾಡಬೇಕು.ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ 1985ರಿಂದ ಹೋಮಿಯೋಪಥಿ ವೈದ್ಯಕೀಯ ಪದ್ಧತಿಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಾ ಬಂದಿದ್ದು ಎಲ್ಲ ವಿಭಾಗದ ಜನರಿಗೂ…
ಉಳ್ಳಾಲ: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಅಂಬಾಸಿಡರ್ ಕಾರು ಉರುಳಿಬಿದ್ದ ಘಟನೆ ಬೆಳ್ಮ ಪೆಲತ್ತಡಿ ಎಂಬಲ್ಲಿ ಮಂಗಳವಾರ ತಡರಾತ್ರಿ ವೇಳೆ ಸಂಭವಿಸಿದೆ. ಕಾರಿನಲ್ಲಿದ್ದ ಇಬ್ಬರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಉಳ್ಳಾಲ: ಬೈಕೊಂದು ಸ್ಕೂಟಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಕಡಬದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ.ಮೃತ ಯುವಕನನ್ನು ಕಡಬ ತಾಲೂಕಿನ ಮರ್ಧಾಳ ಸಮೀಪದ ಕೆರ್ಮಾಯಿ ನಿವಾಸಿ ಸನು ಅಬ್ರಹಾಂ (21) ಎಂದು ಗುರುತಿಸಲಾಗಿದೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಯಾಗಿದ್ದ ಸನು ಅಬ್ರಹಾಂ ಚಲಾಯಿಸುತ್ತಿದ್ದ ಯಮಹಾ ಯಂಟಿ ಬೈಕ್ ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಸೋಮವಾರ ರಾತ್ರಿ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಸನು ಅಬ್ರಹಾಂನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಸನು ಅಬ್ರಹಾಂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರದಂದು ಮೃತಪಟ್ಟಿದ್ದಾರೆ. ಮೃತರ ತಾಯಿ ಎರಡು ವರ್ಷಗಳ ಹಿಂದಷ್ಟೇ ಸಿಡಿಲು ಬಡಿದು ಮೃತಪಟ್ಟಿದ್ದರು. ಮೃತರು ತಂದೆ, ಓರ್ವ ಸಹೋದರನನ್ನು ಅಗಲಿದ್ದಾರೆ.
ಉಳ್ಳಾಲ: ಆಸ್ಪತ್ರೆಗೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ರೋಗಿಗಳಿಗೆ ಅನುಕೂಲವಾಗುವ ಸವಲತ್ತುಗಳು ಆಸ್ಪತ್ರೆ ಪೂರೈಸಬೇಕಾಗಿರುವುದು ಕರ್ತವ್ಯ. ಈ ಉದ್ದೇಶದಿಂದ ಫಾದರ್ ಮುಲ್ಲರ್ಸ್ ಸಂಸ್ಥೆಯ ಎಲ್ಲಾ ವಿಭಾಗಗಳು ಉತ್ತಮವಾದ ಮೂಲಭೂತ ಸೌಕರ್ಯಗಳನ್ನು ಪೂರೈಸುತ್ತಿದೆ ಎಂದು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಉಪಾಧ್ಯಕ್ಷ ರೆ. ಮ್ಯಾಕ್ಸಿಂ ಎಲ್. ನೊರೊನ್ಹಾ ಅಭಿಪ್ರಾಂiÀiಪಟ್ಟರು. ಅವರು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯ ವಠಾರದಲ್ಲಿ ನವೀಕರಣಗೊಂಡ ಫಾದರ್ ಮುಲ್ಲರ್ ಆಡಿಟೋರಿಯಂ ಅನ್ನು ಉದ್ಘಾಟಿಸಿ ಮಾತನಾಡಿದರು.ನೂತನವಾಗಿ ಆರಂಭವಾಗಿರುವ ಸಭಾಂಗಣದ ಸದುಪಯೋಗವನ್ನು ವಿದ್ಯಾರ್ಥಿಗಳು ಹೆಚ್ಚಾಗಿ ತರಬೇತಿ ಶಿಬಿರಗಳಿಗೆ ಪಡೆದುಕೊಳ್ಳಲಿ. ಈ ಮೂಲಕ ಶೈಕ್ಷಣಿಕವಾಗಿ ಉತ್ತಮ ಸ್ಥಾನವನ್ನು ಪಡೆಯುವುದರ ಜೊತೆಗೆ ಶಿಕ್ಷಣ ಸಂಸ್ಥೆಯ ಹೆಸರನ್ನು ಉಜ್ವಲಗೊಳಿಸಲಿ ಎಂದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ. ರಿಚರ್ಡ್ ಅಲೋಷಿಯಸ್ ಕೊಯೆಲ್ಹೋ, ಮಾತನಾಡಿ ಒಳ್ಳೆಯ ದಿನಾವದ ಇಂದು ಸಭಾಂಗಣ ಉದ್ಘಾಟನೆ ಮತ್ತು ಘಟಿಕೋತ್ಸವವನ್ನು ಏರ್ಪಡಿಸಲಾಗಿದೆ. ಸಂಸ್ಥೆಯ ಎಲ್ಲಾ ಸಂಸ್ಥೆಗಳಿಂದಲೂ ವಿವಿಧ ಮನವಿಗಳು ಇವೆ ಹಂತಹಂತವಾಗಿ ಅದನ್ನು ಪೂರೈಸುತ್ತಾ ಬರುತ್ತೇವೆ. ಎಲ್ಲಾ ಸಂಸ್ಥೆಗಳ ಮಂದಿ ಕುಟುಂಬದ ರೀತಿಯಲ್ಲಿ…

