Author: UllalaVani

Kannada News From Coastal Karnataka

ಉಳ್ಳಾಲ: ಉಳ್ಳಾಲ ತಾಲೂಕಿನ ನಾಟೆಕಲ್ ಸಮೀಪ ಪಿ.ಎ. ಕಾಲೇಜಿಗೆ ಸಂಬಂಧಿಸಿದ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರರು ದುರ್ಮರಣಕ್ಕೀಡಾಗಿದ್ದು, ಬಸ್ಸಿನಲ್ಲಿದ್ದ ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ತೀವ್ರ ನೋವು ತಂದಿದೆ. ಈ ದುರ್ಘಟನೆಯ ಕುರಿತು ಆಳವಾದ ಸಂತಾಪ ವ್ಯಕ್ತಪಡಿಸಿರುವ NSUI ಉಳ್ಳಾಲ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಯು.ಟಿ. ಫರೀದ್ ಅವರು, ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸಿ, ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಹಾರೈಸಿದರು. ಘಟನೆಯ ಬಳಿಕ ಕಾಲೇಜಿನ ಆಡಳಿತ ಮಂಡಳಿ ಹಾಗೂ ಶಿಕ್ಷಕರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ವಿಶೇಷವಾಗಿ ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಕಾಲೇಜು ಬಸ್ಸುಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಹಾಗೂ ಚಾಲಕರ ಜವಾಬ್ದಾರಿಯುತ ವಾಹನ ಚಾಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ನಿಷ್ಪಕ್ಷಪಾತ ಮತ್ತು ಸಮಗ್ರ…

Read More

ವಿದೇಶದಲ್ಲಿ ವಿವಿಧ ಕಾರಣಗಳಿಂದ ಕಾನೂನು ಕುಣಿಕೆಯೊಳಗೆ ಸಿಲುಕಿದ ದಕ್ಷಿಣ ಕನ್ನಡ ಜಿಲ್ಲೆಯ ಯುವಕರನ್ನು ಬಿಡುಗಡೆ ಭಾಗ್ಯ ಒದಗಿಸುವಂಥ ಕಾರ್ಯದಲ್ಲಿ ತೊಡಗಿಸಿಕೊಂಡು ಹಲವರ ಬಾಳಿಗೆ ಬೆಳಕಾಗಿ ಮದುವೆಯ ಸಂಭ್ರಮದಲ್ಲಿದ್ದ ಉಳ್ಳಾಲದ ಯುವಕನಿಗೆ ನಾಗರಿಕರು ಅಭಿನಂದನೆ ಸಲ್ಲಿಸಿದರು. ಕಳೆದ ಒಂಭತ್ತು ವರ್ಷಗಳಿಂದ ಯುಎಇ ಅಲೈನ್ ನಲ್ಲಿ ಅಬುಧಾಬಿ ಸರ್ಕಾರದ ಪೊಲೀಸ್ ಇಲಾಖಾ ಕಚೇರಿ ಕೆಲಸದಲ್ಲಿರುವ ಉಳ್ಳಾಲ‌ದ ಮುಹಮ್ಮದ್ ತೌಸೀಫ್ ದುಬೈಗೆ ಉದ್ಯೋಗಕ್ಕಾಗಿ ತೆರಳಿ ವಿವಿಧ ಕಾರಣಗಳಿಂದ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದ ಹಾಗೂ ಪೊಲೀಸರ ಕೈಗೆ ಸಿಕ್ಕಿಬಿದ್ದು ಅಸಹಾಯಕರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯುವಕರಿಗೆ ಕಾನೂನು ನೆರವು ನೀಡುತ್ತಾ ಬಂದಿದ್ದಾರೆ.‌ ಈಗಾಗಲೇ ಒಂಭತ್ತು ಯುವಕರನ್ನು ಕಾನೂನಿನ ಕುಣಿಕೆಯಿಂದ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ‌.ಅವರ ಮದುವೆಯ ಔತಣಕೂಟ ನಿನ್ನೆ ಉಳ್ಳಾಲದಲ್ಲಿ ನಡೆದಿದೆ. ಈತ ದುಬೈಯಲ್ಲಿ ಮಾಡುತ್ತಿರುವ ಸಮಾಜ ಸೇವೆಯ ಬಗ್ಗೆ ಮಂಗಳೂರು ಬ್ಯಾರಿ ಗಲ್ಫ್ ಗಯ್ಸ್ ಮತ್ತು ಕರ್ನಾಟಕ ಪ್ರವಾಸಿ ಅಸೋಸಿಯೇಷನ್ ಉಳ್ಳಾಲ ಮೇಲಂಗಡಿ ಜುಮಾ ಮಸೀದಿಯ ಅಧ್ಯಕ್ಷರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಭಾನುವಾರ ಔತಣಕೂಟದ ಸಭಾಂಗಣದಲ್ಲೇ ಮಂಗಳೂರು…

Read More

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ರಾಜ್ಯ ಸರ್ಕಾರ ಮಹತ್ವದ ಸುದ್ದಿಯನ್ನು ನೀಡಿದೆ. ಒಟ್ಟು 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಶೀಘ್ರವೇ ಅಧಿಸೂಚನೆ ಹೊರಡಿಸುವಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ರಾಜ್ಯ ಬಜೆಟ್‌ನಲ್ಲಿ ಆರಂಭದಲ್ಲಿ 56,942 ಹುದ್ದೆಗಳ ನೇಮಕಾತಿ ಘೋಷಿಸಲಾಗಿತ್ತು. ಬಳಿಕ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಈಗಾಗಲೇ ಸುಮಾರು 24 ಸಾವಿರ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ. ಈ ನಡುವೆ ಸರ್ಕಾರವು ನೇಮಕಾತಿಯ ವ್ಯಾಪ್ತಿಯನ್ನು ವಿಸ್ತರಿಸಿ ಒಟ್ಟು 72 ಸಾವಿರ ಹುದ್ದೆಗಳ ಭರ್ತಿಗೆ ತೀರ್ಮಾನಿಸಿದೆ ಎಂದು ಅವರು ಹೇಳಿದರು. ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆಗಳನ್ನು ಪ್ರಕಟಿಸಲು ನಿರ್ದೇಶನ ನೀಡಲಾಗಿದೆ. ಶಿಕ್ಷಕರು, ವೈದ್ಯರು, ಪಶುವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಇಲಾಖೆಗಳ ತುರ್ತು ಅಗತ್ಯವನ್ನು ಪರಿಗಣಿಸಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನೇಮಕಾತಿ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಗಳಾದ ಉಮಾ ಮಹದೇವನ್ ಹಾಗೂ…

Read More

ದೇರಳಕಟ್ಟೆ : 114 ವರ್ಷಗಳ ಸೇವಾ ಪರಂಪರೆಯನ್ನು ಹೊಂದಿರುವ ಎಂಸಿಸಿ ಬ್ಯಾಂಕ್ ತನ್ನ 22ನೇ ಶಾಖೆಯನ್ನು ದೇರಳಕಟ್ಟೆಯಲ್ಲಿ ಉದ್ಘಾಟಿಸುವ ಮೂಲಕ ಕರಾವಳಿಯ ಜನರಿಗೆ ಮತ್ತಷ್ಟು ಹತ್ತಿರವಾಗಿದೆ. ವೇಗವಾಗಿ ಬೆಳೆಯುತ್ತಿರುವ ದೇರಳಕಟ್ಟೆ ಪ್ರದೇಶದಲ್ಲಿ ಆರಂಭವಾದ ಈ ಶಾಖೆಯು ಜನರ ವಿಶ್ವಾಸವನ್ನು ಇನ್ನಷ್ಟು ಬಲಪಡಿಸುವ ಕೇಂದ್ರವಾಗಲಿದೆ ಎಂದು  ಪಾನೀರ್‌ನ ಅವರ್ ಲೇಡಿ ಆಫ್ ಮರ್ಸಿ ಚರ್ಚ್‌ನ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೊ ಅಭಿಪ್ರಾಯಪಟ್ಟರು.  ಅವರು ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ 114 ವರ್ಷಗಳಿಂದ ಯಶಸ್ವಿಯಾಗಿ ಬ್ಯಾಂಕಿಂಗ್ ಸೇವೆ ಸಲ್ಲಿಸುತ್ತಿರುವ ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್‌ನ 22ನೇ ಶಾಖೆ ಯನ್ನು ದೇರಳಕಟ್ಟೆ ಫಾದರ್‌ ಮುಲ್ಲರ್ಸ್‌ ಕಾಂಪ್ಲೆಕ್ಸ್‌ ನೆಲಮಹಡಿಯಲ್ಲಿ ಭಾನುವಾರ ಉದ್ಘಾಟಿಸಿ   ,ಎಟಿಎಂ ಉದ್ಘಾಟನೆಯಲ್ಲಿ ಭಾಗವಹಿಸಿ  ಬಳಿಕ ನಡೆದ  ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.  ಪವಿತ್ರ ಸಭೆಗೆ ಪವಿತ್ರ ಧ್ಯೇಯ ಇರಬೇಕು. ಹೊಸದಾಗಿ ಆರಂಭವಾದ 22ನೇ ಶಾಖೆ ಯಶಸ್ವಿಯಾಗಿ ಬೆಳೆಯಲಿ. ಈ ಶಾಖೆಯ ಎಲ್ಲ ಸಿಬ್ಬಂದಿಗೆ ಅಭಿನಂದನೆಗಳು. ದೇರಳಕಟ್ಟೆ ಹಾಗೂ ಸುತ್ತಮುತ್ತಲಿನ ಜನರ ಸಂಪೂರ್ಣ ಸಹಕಾರ ಈ ಶಾಖೆಗೆ ಲಭಿಸಲಿ.ಬ್ಯಾಂಕ್ ವ್ಯವಹಾರಗಳ…

Read More

ಹರೇಕಳ : ಒಳ್ಳೆಯ ಸಂಸ್ಕಾರ, ಉತ್ತಮ ವ್ಯಕ್ತಿತ್ವ, ಉತ್ತಮ ಮಾತುಗಾರಿಕೆ ಹಾಗು ಕಠಿಣ ಪರಿಶ್ರಮದಿಂದ ಅತ್ಯುತ್ತಮ ನಾಯಕರಾಗಿ ಮೂಡಿಬರಲು ಸಾಧ್ಯ ಎಂದು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ   ವಿಜಯಕ್ರಾಂತಿ ಅವರು ಅಭಿಪ್ರಾಯ ಪಟ್ಟರು. ಇವರು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಶಾಲಾ ವಿದ್ಯಾರ್ಥಿ ಸರಕಾರದ ಉದ್ಘಾಟನೆ ಮಾಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಶೆ ಮುಕ್ತ ಭಾರತ ಎನ್ನುವ ವಿಚಾರದಲ್ಲಿ ಮಾಹಿತಿ ನೀಡಿದ ಇವರು ಮಾದಕ ದ್ರವ್ಯಗಳು ಅಂದರೆ ಏನು ಎಂದು ನಿಮಗೆ ಗೊತ್ತಿರಬೇಕು ಅದನ್ನು ಸೇವನೆ ಮಾಡುವುದರಿಂದ ನಿಮ್ಮ ಬದುಕಿಗೆ ಎಷ್ಟು ಹಾನಿಯಾಗುತ್ತದೆ ಎನ್ನುವುದನ್ನು ಸಹ ನೀವು ತಿಳಿದುಕೊಂಡಿರಬೇಕು ಮಾದಕ ವಸ್ತುವನ್ನು ಸೇವಿಸುವುದು ಅಪರಾಧ ಅದನ್ನು ಇನ್ನೊಬ್ಬರಿಗೆ ನೀಡುವುದು ಅತೀ ದೊಡ್ಡ ಅಪರಾಧ, ಹಾಗಾಗಿ ಜೀವನದಲ್ಲಿ ಒಮ್ಮೆ ದುಶ್ಚಟಗಳಿಗೆ ಅಂಟಿಕೊಂಡರೆ ಅದರಿಂದ ಸುಲಭದಲ್ಲಿ ಹೊರ ಬರಲು ಅಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ…

Read More

ಎಜು ಕಾರುಣ್ಯ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯ ಸಮಾಜಕ್ಕೆ ಪ್ರೇರಣಾದಾಯಿ: ಕಾಜವ ಮಂಗಳೂರು: ಪ್ರಾಮಾಣಿಕ, ನೇರ ಮತ್ತು ನಿಷ್ಠುರ ಪತ್ರಕರ್ತರಾಗಿದ್ದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೇಪುಣಿಯವರ ಸ್ಮರಣಾರ್ಥ ದತ್ತಿ ನಿಧಿ ಯೋಜನೆ ಆರಂಭಿಸಿರುವ ಎಜು ಕಾರುಣ್ಯ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯ ಸಮಾಜಕ್ಕೆ ಪ್ರೇರಣಾದಾಯಿ ಎಂದು ನರಿಂಗಾನ ಕಂಬಳೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕಾಜವ ಶ್ಲಾಘಿಸಿದರು. ಮಂಗಳೂರಿನ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಎಜುಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಮಂಗಳೂರು ವತಿಯಿಂದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೇಪುಣಿಯವರ ಸ್ಮರಣಾರ್ಥ ಆಯೋಜಿಸಿದ್ದ ದತ್ತಿನಿಧಿ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ೧.೫೦ ಲಕ್ಷ ರೂ. ಮೊತ್ತದ ದತ್ತಿನಿಧಿಯನ್ನು ವಿವಿಧ ಶಾಲೆ – ಕಾಲೇಜುಗಳ ಒಟ್ಟು ೯ ಮಂದಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ಸದಾ ಸಮಾಜಮುಖಿಯಾಗಿ ಯೋಚಿಸುತ್ತಿದ್ದ ಬಾಳೇಪುಣಿಯವರು ನ್ಯಾಯಕ್ಕಾಗಿ ಹೋರಾಟ ಮಾಡುವ ವ್ಯಕ್ತಿತ್ವವುಳ್ಳವರಾಗಿದ್ದರು. ಒಡನಾಡಿಯಾಗಿದ್ದು, ಶಾಲಾ – ಕಾಲೇಜುಗಳಲ್ಲಿಯೇ ನಿಷ್ಠುರವಾದಿಯಾಗಿದ್ದರು. ಅವರ ಹೆಸರಿನಲ್ಲಿ ಕಳೆದ ಎರಡು ವರ್ಷದಿಂದ ನೀಡುತ್ತಿರುವ ದತ್ತಿ ನಿಧಿ ಯೋಜನೆ ಮತ್ತಷ್ಟು…

Read More

ಮಂಗಳೂರು: ಕರ್ನಾಟಕ ವಿಧಾನ ಪರಿಷತ್ ನೂತನ ಸದಸ್ಯರಾಗಿ ಆಯ್ಕೆಯಾದ ವಿ.ಪಿ. ಮೋಹನ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಅವರು ಶಾಲು ಹೊದಿಸಿ ಸನ್ಮಾನಿಸಿ, ವಿಧಾನ ಪರಿಷತ್ ಸದಸ್ಯರಾಗಿ ಅವರ ಮುಂದಿನ ಕಾರ್ಯಯೋಜನೆಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ರಾಜ್ಯದ ಅಭಿವೃದ್ಧಿ ಹಾಗೂ ಜನಪರ ಆಡಳಿತಕ್ಕೆ ಅವರ ಸೇವೆ ಮತ್ತಷ್ಟು ಬಲ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದು, ನೂತನ ವಿಧಾನ ಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಶುಭಾಶಯ ಕೋರಿದರು. ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಮಂಗಳೂರು: ಉರ್ವ ಸಂತ ಅಲೋಶಿಯಸ್ ಇಂಗ್ಲೀಷ್‌ ಮೀಡಿಯಂ ಸ್ಕೂಲ್ ನಲ್ಲಿ ಕಂಪ್ಯೂಟರ್ ಕ್ಲಬ್ ನ ಉದ್ಘಾಟನೆಯನ್ನು ಶಾಲಾ ಹಿರಿಯ ಶಿಕ್ಷಕಿಯಾದ ಶ್ರೀಮತಿ ಲವೀನ ಡಿಕುನ್ನರವರು ನೆರವೇರಿಸಿ, ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ಕಂಪ್ಯೂಟರ್ ಕ್ಲಬ್ ಎಂದರೆ ತಂತ್ರಜ್ಞಾನದಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಒಂದು ವೇದಿಕೆ. ಇದು ತಂತ್ರಜ್ಞಾನದ ಬಗ್ಗೆ ಕಲಿಯಲು, ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ಸಹಪಾಠಿಗಳೊಂದಿಗೆ ಸಹಕರಿಸಲು ಒಂದು ಅವಕಾಶ. ಕಂಪ್ಯೂಟರ್ ಕ್ಲಬ್‌ನಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಪ್ರೋಗ್ರಾಮಿಂಗ್, ಗೇಮ್ ಡೆವಲಪ್ಮೆಂಟ್, ವೆಬ್ ಡಿಸೈನಿಂಗ್ ಮುಂತಾದ ವಿಷಯಗಳ ಬಗ್ಗೆ ಕಲಿಯಬಹುದು. ಅಲ್ಲದೆ, ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಬಹುದು. ಈ ಕ್ಲಬ್ ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಕ್ಲಬ್ ಸದಸ್ಯರು ಪ್ರಾರ್ಥನೆ ಕಾರ್ಯಕ್ರಮ ಆರಂಭಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ಲಬ್‌ನ ಮಂತ್ರಿ ಸಮಕ್ಷ್, ಕಂಪ್ಯೂಟರ್ ಶಿಕ್ಷಕರಾದ ಮತ್ತು ಕ್ಲಬ್‌ನ ಮೇಲ್ವಿಚಾರಕರಾದ ದಿವ್ಯಶ್ರೀ ಮತ್ತು ಸರಿತಾ ಉಪಸ್ಥಿತರಿದ್ದರು. ಕ್ಲಬ್‌ನ ಸದಸ್ಯರಾದ ಆರನ್ ಕಾರ್ಯಕ್ರಮ ನಿರೂಪಿಸಿ ಪ್ರಿಯೋಲ…

Read More

ಕೋಟೆಕಾರು: 11ನೇ ವಾರ್ಡಿನ ಶಾಸ್ತಾವು ಮಾತೃಶ್ರೀ ಬಡಾವಣೆಯ ನಿವಾಸಿ ಮಮತಾ ಶೆಟ್ಟಿ ಮತ್ತು ಅಗಸ್ಟಿನ್ ಅವರ ಮನೆಗೆ ಹೋಗಲು ಇರುವ ದಾರಿ ಸಂಪೂರ್ಣ ಹದಗೆಟ್ಟಿದ್ದು ಇಲ್ಲಿನ ದಾರಿಗೆ ಹಾಸುಗಲ್ಲು ಅಳವಡಿಸುವ ಕಾಮಗಾರಿಗಾಗಿ ಈಗಾಗಲೇ ₹1.50 ಲಕ್ಷ ಅನುದಾನವನ್ನು ಮೀಸಲಿರಿಸಲಾಗಿದೆ. ಆದರೆ ಅನುದಾನ ಮಂಜೂರಾಗಿ ಸುಮಾರು ಆರು ತಿಂಗಳುಗಳು ಕಳೆದಿದ್ದರೂ, ಇನ್ನೂ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದೇ ಕಾಮಗಾರಿ ಆರಂಭವಾಗಿಲ್ಲಈ ವಿಷಯವನ್ನು ವಾರ್ಡಿನ ಸದಸ್ಯ ಹಾಗೂ ಕೌನ್ಸಿಲರ್‌ ಹರೀಶ್‌ ರಾವ್‌ ಮಡ್ಯಾರ್ ಅವರು ಕೋಟೆಕಾರು ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ, ಅನುದಾನ ಲಭ್ಯವಿದ್ದರೂ ಕಾಮಗಾರಿ ವಿಳಂಬವಾಗುತ್ತಿರುವ ಕಾರಣವನ್ನು ಅಧಿಕಾರಿಗಳಿಂದ ಪ್ರಶ್ನಿಸಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಟೆಂಡರ್‌ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಹಾಸುಕಲ್ಲು ಅಳವಡಿಸುವ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿರುವ ಹಿನ್ನೆಲೆಯಲ್ಲಿ, ನಿವಾಸಿಗಳು ಹಾಗೂ ಶಾಲಾ ಮಕ್ಕಳು, ಹಿರಿಯ ನಾಗರಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ವಿಳಂಬಕ್ಕೆ ಕಾರಣವಾಗಿರುವ ಸಮಸ್ಯೆಗಳನ್ನು…

Read More

ಉಳ್ಳಾಲ:  ರಾಮಾಶ್ರಯ ರಸ್ತೆ ಕಾಂಕ್ರೀಟಿಕರಣ ಇಲ್ಲಿನ ಜನರ ಬಹುಬೇಡಿಕೆಯಾಗಿತ್ತು, ಹಿರಿಯ ಬಿಜೆಪಿ ಕಾರ್ಯಕರ್ತರು  ರಸ್ತೆಗಾಗಿ ಸತತ ಪ್ರಯತ್ನ ಮಾಡುತ್ತಿದ್ದರು. ಸಂಸದರು, ವಿಧಾನಪರಿಷತ್‌  ಸದಸ್ಯರು, ಪಟ್ಟಣ ಪಂಚಾಯತ್‌ ಆಡಳಿತದಿಂದ  ಕಾಂಕ್ರೀಟ್‌ ರಸ್ತೆ  ಪೂರ್ಣಗೊಂಡಿದೆ. ತಪ್ಪು ಹುಡುಕುವ ಸಾಕಷ್ಟು ಪ್ರಯತ್ನಗಳಾಗುತ್ತಿದೆ, ಅಭಿವೃದ್ಧಿ ಸಂದರ್ಭ ಎಲ್ಲಾ ವರ್ಗದವರನ್ನು ಗೌರವಿಸಿ ಸಿಕ್ಕಿದ ಅನುದಾನದಲ್ಲಿ  ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದೇವೆ  ಎಂದು   ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಹೇಳಿದರು. ಕೋಟೆಕಾರು ಪಟ್ಟಣ ಪಂಚಾಯತ್‌  ಇದರ  ರೂ. ೫ ಲಕ್ಷ  ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ  ೧೧ನೇ ವಾರ್ಡಿನ ಶ್ರೀ ರಾಮಾಶ್ರಯ ರಸ್ತೆಯನ್ನು    ಉದ್ಘಾಟಿಸಿದರು.  ಮಡ್ಯಾರ್‌ ರಾಮಾಶ್ರಯ ರಸ್ತೆ ಹಾಳಾಗಿದ್ದು, ಸ್ಥಳೀಯ ಬಿಜೆಪಿ ಕಾರ್ಯಕರ್ತರುಗಳಾದ ಜಯಂತ್‌, ಜೀವನ್‌  ಸಹಿತ  ಎಲ್ಲಾ ಕಾರ್ಯಕರ್ತರು ನಾಗರಿಕರು ಹಲವು ಬಾರಿ ಬೇಡಿಕೆಗಳನ್ನು ಮುಂದಿರಿಸಿದ್ದರು. ಪಟ್ಟಣ ಪಂಚಾಯಿತಿ ಆಡಳಿತ ಸತತ ೮ ವರ್ಷಗಳಿಂದ  ಸತತ ಪ್ರಯತ್ನ ಮಾಡುತ್ತಿದ್ದರು. ಇದೀಗ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ  ಸಹಕಾರದೊಂದಿಗೆ  ಸುಸಜ್ಜಿತ ಕಾಂಕ್ರೀಟ್‌ ರಸ್ತೆ ನಿರ್ಮಾಣಗೊಂಡಿದೆ. ಸಂಸದರು, ವಿಧಾನಪರಿಷತ್‌ ಸದಸ್ಯರ ಅನುದಾನವನ್ನು  ಒದಗಿಸಿರುವುದರ…

Read More