UN networks ಉಳ್ಳಾಲ: ಕರ್ನಾಟಕದಲ್ಲಿ ಕೆನ್ ಸ್ಟಾರ್ ಕಂಪನಿಯ 44 ಶಾಖೆಗಳಿದ್ದು ಮಂಗಳೂರಿನಲ್ಲಿ ಅತ್ಯಧಿಕ ಉತ್ಪನ್ನ ಮಾರಾಟವಾಗುವ ಮೂಲಕ ನಾಯಕನ ಸ್ಥಾನದಲ್ಲಿದೆ. ಹೊಸದಾಗಿ ಬಿಡುಗಡೆಗೊಂಡಿರುವ ಏರ್ ಕೂಲರ್ ಮಹಾಕೂಲ್ 120 ಲೀಟರ್‌ನ ಡೆಸರ್ಟ್ ಕೂಲರ್ ಆಗಿದ್ದು ಇಷ್ಟೊಂದು ಸಾಮರ್ಥ್ಯದ ಏರ್ ಕೂಲರ್ ಬಿಡುಗಡೆಗೊಳಿಸಿದ ಪ್ರಥಮ ಕಂಪನಿಯಾಗಿದೆ. ರೆಸ್ಟೋರೆಂಟ್, ವ್ಯಾಪಾರಿ ಮಳಿಗೆ, ಬ್ಯಾಂಕ್, ಕಚೇರಿ, ದೊಡ್ಡ ಸಭಾಂಗಣದಲ್ಲಿ ಬಳಸಬಹುದಾಗಿದೆ ಎಂದುಕೆನ್ ಸ್ಟಾರ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಜೈನ್ ತಿಳಿಸಿದರು. ತೊಕ್ಕೊಟ್ಟಿನ ಅಮ್ಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಶೋರೂಂನಲ್ಲಿ ಕೆನ್ ಸ್ಟಾರ್ ಕಂಪನಿಯ ಹೊಸ ಉತ್ಪನ್ನ ಏರ್ ಕೂಲರ್ ಮಹಾಕೂಲ್ ಬಿಡುಗಡೆಗೊಳಿಸಿ ಮಾತನಾಡಿದರು.ವಿನ್ಯಾಸ ವಿಭಾಗ ಮುಖ್ಯಸ್ಥ ಶ್ರೀಕಾಂತ್ ಕುಲ್ಲೆ ಮಾತನಾಡಿ, ಮಹಾಕೂಲ್ 120 ಬಿಡುಗಡೆಗೊಳಿಸಲಾಗಿದ್ದು ಮಂಗಳೂರಿನ ಜನತೆಗೆ ಇದರ ಅನುಭವ ಸವಿಯುವ ಭಾಗ್ಯ ಸಿಕ್ಕಿದೆ. ಅಮ್ಮ ಎಲೆಕ್ಟ್ರಾನಿಕ್ಸ್ ಮಾರಾಟ ವಿಚಾರದಲ್ಲಿ ಉತ್ತಮ ಸಾಧನೆ ಮಾಡಿದ್ದು ಕೆನ್ ಸ್ಟಾರ್ ಜೊತೆ ಹೀಗೇ ಮುಂದುವರಿಯುವಂತಾಗಲಿ ಎಂದು ತಿಳಿದರು.ಕೆನ್ ಸ್ಟಾರ್ ಪ್ರಾದೇಶಿಕ ವ್ಯವಸ್ಥಾಪಕ ತಿರುಮಲೈ ದೇಸಾಯಿ…
Author: UllalaVani
UN networks ಉಳ್ಳಾಲ: ಸೊಪ್ಪು ತಿಂದ ಎರಡು ಹಸುಗಳು, ಮೂರು ಕರುಗಳು ಅಸೌಖ್ಯಕ್ಕೀಡಾಗಿ ಗಂಭೀರ ಸ್ಥಿತಿ ತಲುಪಿದ್ದು, ಇದರಲ್ಲಿ ಒಂದು ಹಸು ಸಾವನ್ನಪ್ಪಿ ಉಳಿದ ನಾಲ್ಕು ಜಾನುವಾರುಗಳು ಗಂಭೀರ ಸ್ಥಿತಿಗೆ ತಲುಪಿದ ಘಟನೆ ಸೋಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡೋಳಿ ಎಂಬಲ್ಲಿ ಸಂಭವಿಸಿದೆ. ಕೋಟೆಕಾರು ಪಶು ವೈದ್ಯಾಧಿಕಾರಿ ಡಾ. ಗಜೇಂದ್ರ ಕುಮಾರ್ ಪಿ.ಕೆ ನೇತೃತ್ವದಲ್ಲಿ ಚಿಕಿತ್ಸೆ ನಡೆಸಲಾಗುತ್ತಿದೆ. ಕೃಷಿಕ ಸಂಜೀವ ಪೂಜಾರಿ ಎಂಬವರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದೆ. ಮಾ.8 ರ ಮಧ್ಯಾಹ್ನ ಮನೆಯವರು ಕರಿ ಬಸ್ರಿ ತಳಿಯ ಸೊಪ್ಪು ಜಾನುವಾರುಗಳು ಮಲಗುವ ಬೆಡ್ಡಿಂಗ್ ಗೆಂದು ಹಾಕಲಾಗಿದೆ. ಆದರೆ ಹಸುಗಳೆಲ್ಲಾ ಅದನ್ನೇ ತಿಂದ ನಂತರ ಅಸ್ವಸ್ಥತೆಗೆ ಒಳಗಾಗಿದೆ. ಸಂಜೆ ನಂತರ ಹಸುಗಳು ಕೆಲವು ಮಲಗಿದ್ದಲ್ಲೇ ಬಿದ್ದರೆ, ಇನ್ನುಳಿದ ಕಾಲುಗಳನ್ನು ನೆಲಕ್ಕೆ ಹೊಡೆಯುವ ರೀತಿಯಲ್ಲಿ ವರ್ತಿಸುತಿತ್ತು. ಇದನ್ನು ಗಮನಿಸಿದ ಮನೆಮಂದಿ ಕೋಟೆಕಾರು ಪಶುವೈದ್ಯರಿಗೆ ದೂರವಾಣಿ ಮೂಲಕ ತಿಳಿಸಿದ್ದರು . ಅವರು ಸಹಾಯಕ ಆಯುಕ್ತರ ತುರ್ತು ಸಭೆಯಲ್ಲಿದ್ದ ಕಾರಣ ಸಹಾಯಕರನ್ನು ಸ್ಥಳಕ್ಕೆ ಕಳುಹಿಸಿ ಪ್ರಾಥಮಿಕ…
UN networks ಉಳ್ಳಾಲ: ನಮ್ಮ ಜೀವನದಲ್ಲಿ ಇತರರಿಗೆ ಉಪಯೋಗವಾಗುವಂತೆ ನಾವು ಬದುಕಿ ಮಾದರಿಯಾಗಬೇಕು. ಸಂಪತ್ತನ್ನು ನಾವು ಧರ್ಮಯುಕ್ತವಾಗಿ ಗಳಿಸಬೇಕು, ಧರ್ಮಯುಕ್ತವಾಗಿ ಉಳಿಕೆ ಮಾಡಿ, ಧರ್ಮಯುಕ್ತ ಬಳಕೆ ಮಾಡಿ ಸಮಾಜಮುಖಿಯಾಗಿದ್ದರೆ ಜೀವನದಲ್ಲಿ ಸಂತೃಪ್ತಿ ಮತ್ತು ಯಶಸ್ಸು ಸಾಧ್ಯ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.ಅವರು ಭಾನುವಾರ ದೇರಳಕಟ್ಟೆಯಲ್ಲಿ ಯಕ್ಷಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಪ್ರಾಮಾಣಿಕತೆ ಮತ್ತು ಪಾರದರ್ಶಕ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಯಕ್ಷಧ್ರುವ ಸೌಹಾರ್ದ ಕೋಆಪರೇಟಿವ್ ಸೊಸೈಟಿಯು ಉತ್ತಮ ಉದ್ದೇಶದಿಂದ ಆರಂಭಗೊಂಡಿದ್ದು, ಸಮಾಜಕ್ಕೆ ಬೆಳಕು ಮೂಡಿಸುವ ಪ್ರಯತ್ನದೊಂದಿಗೆ ಇದರ ಕೀರ್ತಿ ಇಡೀ ಜಗತ್ತಿಗೆ ಪಸರಿಸಲಿ ಎಂದು ಹೇಳಿದರು. ಹೇರಂಭಾ ಇಂಡಸ್ಟೀಸ್ ಲಿ.ಮತ್ತು ಕೆಮಿನೋ ಫಾರ್ಮಾಲಿಯ ಅಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಕೆಲವೇ ಜನ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಸತೀಶ್ ಪಟ್ಲ ಅವರು ದೊಡ್ಡ ಕಲಾವಿದರರಾಗಿದ್ದುಕೊಂಡು ಕಲಾವಿದರ ಸಂಕಷ್ಟಕ್ಕೆ ನೆರವಾಗುವುದರೊಂದಿಗೆ ಸಮಾಜಸೇವೆಯಲ್ಲಿ…
UN networks ಉಳ್ಳಾಲ: ಅಧಿಕಾರಿಗಳು ಚುನಾವಣಾ ಆಯೋಗದ ವಿಚಾರದಲ್ಲಿ ಪ್ರಚೋದನಕಾರಿ ವಿಚಾರಗಳನ್ನು ಮಾತನಾಡದೇ, ಆಯೋಗದ ಆದೇಶಕ್ಕೆ ಬದ್ಧರಾಗಿರಬೇಕು ಎಂದು 204 ಮಂಗಳೂರು ವಿಧಾನಸಭಾ ಕ್ಷೇತ್ರದಚುನಾವಣಾ ಅಧಿಕಾರಿ ರಾಜು ಕೆ.ಹೇಳಿದರು ಅವರು ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಚುನಾವಣಾ ಆಯೋಗದ ವತಿಯಿಂದ ಆಯೋಜಿಸಲಾದ 204 ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಎಲ್ ಒ ಬಿಎಲ್ ಎ ಗಳಿಗೆ ಚುನಾವಣಾ ಪೂರ್ವ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು. ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್ಒ ಬಿಎಲ್ಎಗಳಿಗೆ ಅನುಕೂಲವಾಗುವ ಉದ್ದೇಶದಿಂದ ತರಬೇತಿಯನ್ನು ನೀಡಲಾಗಿದೆ. ಉಳ್ಳಾಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತರಬೇತಿ, ಶಾಸಕರು ಕೂಡಾ ಹಾಜರಾಗಿ ತರಬೇತಿ ಪಡೆದುಕೊಂಡಿದ್ದಾರೆ. ಹಲವು ವಿಚಾರಗಳಲ್ಲಿ ಬಿಎಲ್ ಎಗಳು ಗೊಂದಲದ ಕುರಿತು ತಿಳಿಸಿರುವುದರ ಸ್ಪಷ್ಟತೆಯನ್ನು ನೀಡಲಾಗಿದೆ.ಎಸ್ ಎಸ್ ಟಿ, ಎನ್ ಎಸ್ ಟಿ ರೀತಿಯ ತರಬೇತಿಯನ್ನು ನೀಡಲಾಗಿದೆ. ಪ್ರತಿ ಚುನಾವಣೆಯ ಸಂದರ್ಭದಲ್ಲಿ ವೇತನ ಕುರಿತು ಸಿಬ್ಬಂದಿ ಅಸಮಧಾನ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತರುವುದಾಗಿ ತಿಳಿಸಿದರು . ಈ ಸಂದರ್ಭ ಸಹಾಯಕ ಚುನಾವಣಾಧಿಕಾರಿ…
PostsResponsible GamblingNo deposit Extra Rules To own Current PlayersBetter Totally free Spins Mobile Local casino IncentivesFinest No deposit Bonus CasinosAllege A great twenty-fivepercent Match Extra Of up to 600 On the Last Deposit During the Vegas Cellular Gambling establishment Because it’s the fresh 2020s, you will find that cellular gambling enterprises are available to the ios and Android os devices. Recall, whether or not, that you need a more recent type of their cellphone phone’s operating-system’s.
UN networks ಬೆಂಗಳೂರು: ಜಾಗತಿಕ ಹೆಗ್ಗುರುತುಗಳಾಗಿ ‘ಪ್ರಪಂಚದ 7 ಅದ್ಭುತಗಳು’ ಇರುವ ರೀತಿಯಲ್ಲೇ ಇದೀಗ ಕರುನಾಡಿನ ಹೆಗ್ಗುರುತುಗಳಾಗಿ ‘ಕರ್ನಾಟಕದ 7 ಅದ್ಭುತಗಳು’ ಘೋಷಣೆಯಾಗಿದೆ. ರಾಜ್ಯದ ನೆಲ-ಜಲ, ಕಾಡು-ಕಡಲು, ವಾಸ್ತು-ವಿಜ್ಞಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿದಂತೆ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟ ತಾಣಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಕರ್ನಾಟಕದ 7 ಅದ್ಭುತಗಳು’ ಎಂದು ಘೋಷಿಸಿದ್ದಾರೆ. ಬೆಂಗಳೂರಿನ ಪಂಚತಾರಾ ಹೋಟೆಲ್‌ವೊಂದರಲ್ಲಿ ಶನಿವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ‘ಕರ್ನಾಟಕದ 7 ಅದ್ಭುತಗಳನ್ನು ಉದ್ಯೋಷಿಸಲಾಯಿತು. ಇದೇ ವೇಳೆ, ವಿಜೇತ ತಾಣಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರಮಾಣಪತ್ರ ಹಸ್ತಾಂತರಿಸಲಾಯಿತು. ನಾಡಿನ ಏಳು ಅದ್ಭುತ ತಾಣಗಳನ್ನು ಏಳು ವಿಭಾಗಗಳ ಅಡಿಯಲ್ಲಿ ಹೆಸರಿಸಲಾಗಿದ್ದು, ಅವು ಇಂತಿವೆ. ಅದ್ಭುತಗಳೆಂದ ಈ ವಿಶ್ವ ಸುಂದರಿಯರು ನೂರಾರು ವರ್ಷಗಳಿಂದ ಸೌಂದರ್ಯ ಉಳಿಸಿಕೊಂಡಿವೆ. ಸರ್ವ ಕಾಲಕ್ಕೂ ಈ ಸೌಂದರ್ಯ ಹಾಗೇ ಇರಲಿದೆ. ನಮ್ಮ ಗ್ರಂಥಗಳಲ್ಲಿ ಸತ್ಯಂ ಶಿವಂ ಸುಂದರಂ ಎಂದು ತಿಳಿಸಿದಂತೆ ಒಂದು ವಿಚಾರ ಶಾಶ್ವತವಾಗಿ ಸುಂದರವಾಗಿರಬೇಕಾದರೆ ಅದರ ಹಿಂದೆ ಸತ್ಯ, ದೈವತ್ವ, ಸತ್ವ ಅಡಗಿರಬೇಕು. ಈ…
UN NEWS NETWORKS ಉಳ್ಳಾಲ : ಅಲಿಮಾರು ಶ್ರ್ತೀ ರಕ್ತೇಶ್ವರಿ ಕ್ಷೇತ್ರ ಇರಾ ಸೈಟ್ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಕರ್ಕೇರ ಇರಾ ಪುನರಾಯ್ಕೆಯಾಗಿದ್ದಾರೆ. ಯತಿರಾಜ ಶೆಟ್ಟಿ ಸಂಪಿಲ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಪದಾ„ಕಾರಿಗಳನ್ನು ಆಯ್ಕೆ ಮಾಡಿದ್ದು, ಉಪಾಧ್ಯಕ್ಷರಾಗಿ ರೇಖಾ ಅವಿನಾಶ್‍ಇರಾ, ಕಾರ್ಯದರ್ಶಿಯಾಗಿ ಸತೀಶ್ ಸೈಟ್, ಜೊತೆ ಕಾರ್ಯದರ್ಶಿಯಾಗಿ ರಾಜ ಸೈಟ್, ಕೋಶಾ„ಕಾರಿಯಾಗಿ ಕವಿತಾ ಗೋಪಾಲ್ ನಾಯ್ಕ್, ಸಮಿತಿ ಸದಸ್ಯರಾಗಿ ಬಾಲಕೃಷ್ಣ ಶೆಟ್ಟಿ ಗೋಪಾಲ ಕೋಡಿ, ಪ್ರಕಾಶ್ ಬಾಬು, ದೀಕ್ಷಾ ಮಂಜುನಾಥ ಕೊಟ್ಯಾನ್, ಜೀವನ್ ಮತ್ತು ಸವಿತ ಕೇಶವ ಆಯ್ಕೆಯಾಗಿದ್ದರೆ.
UN NEWS NETWORKSಉಳ್ಳಾಲ : ಶಿವರಾತ್ರಿಯಂದು ನಾವು ಎಚ್ಚರದಲ್ಲಿರ ಬೇಕು. ಮನುಷ್ಯ ಸದಾ ಜಾಗೃತನಾಗಿರುವುದು ಅಗತ್ಯ. ಮನುಷ್ಯರು ಶಿವ ಸ್ವರೂಪಿ ಹಾಗೂ ಜ್ಞಾನ ಸ್ವರೂಪಿಗಳಾದರೆ ಉತ್ತಮ. ಶಿವ ಚಿಂತನೆಗಳನ್ನು ಕವಿಗಳು ಕಾವ್ಯ ರೂಪದಲ್ಲಿ ಕಟ್ಟಿಕೊಡಬೇಕು ಎಂದು ಹಿರಿಯ ಯಕ್ಷಗಾನ ಕಲಾವಿದ ಸಾಹಿತಿ ಸರ್ಪಂಗಳ ಈಶ್ವರ ಭಟ್ ಹೇಳಿದರು.ಶಿವರಾತ್ರಿಯಂದು ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಾಲಯದ ಸಭಾಂಗಣದಲ್ಲಿ ಶಿವರಾತ್ರಿ ಪ್ರಯುಕ್ತ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಚು. ಸಾ.ಪರಿಷತ್ತು ಇದರ ದ.ಕ.ಜಿಲ್ಲಾಧ್ಯಕ್ಷ ಕವಿ ಹರೀಶ್ ಸುಲಾಯ ಒಡ್ಡಂ ಬೆಟ್ಟು ಉಪವಾಸ ಎಂದರೆ ದೇವರ ಸಮೀಪ ಇರುವುದು.ಇದಕ್ಕೆ ಮಿತಾಹಾರ ಸೇವನೆ ಪೂರಕ. ನಮ್ಮನ್ನು ನಾವು ಅರಿಯಬೇಕು. ನಮ್ಮ ದೋಷಗಳನ್ನು ತಿದ್ದಲು ಭಜನೆ,ಸತ್ಸಂಗ ಅಗತ್ಯ. ಋಷಿ ಮುನಿಗಳ ಸಾಧನೆ ನಮಗೆ ಆದರ್ಶ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕವಿ ಗುಣಾಜೆ ರಾಮಚಂದ್ರ ಭಟ್ ಮಾತನಾಡಿ ಶಿವನೆಂದರೆ ನಟರಾಜ,ಲಯ ಕಾರಕ. ರುದ್ರ ,ಸೌಂದರ್ಯಗಳೆರಡರ ಸಂಗಮ.ಹುಟ್ಟು ಸಾವುಗಳನ್ನು ತರುವವನು, ಜ್ಞಾನದ ಪ್ರತೀಕ ಎಂದರು.ದೇವಾಲಯದ ಅರ್ಚಕ ರಾಮಕೃಷ್ಣ ಹೊಳ್ಳರು ದೀಪ ಬೆಳಗಿಸಿ…
UN NEWS NETWORKS ಉಳ್ಳಾಲ: ಅಂತರಶಿಸ್ತಿನ ವಿಧಾನ, ನಗು, ಉತ್ತಮವಾದ ಮಾತುಗಳನ್ನು ರೋಗಿಗಳೆದುರು ಪ್ರಸ್ತುಪಡಿಸುವ ತರಬೇತಿ ಯುವವೈದ್ಯರಿಗೆ ವೈದ್ಯಕೀಯ ಕಾಲೇಜಿನ ಉಪನ್ಯಾಸಕರಿಂದ ದೊರೆಯಬೇಕಿದೆ ಎಂದು ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ. ಎಂ. ಶಾಂತರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ನಾಟೆಕಲ್ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆರ್ಥೊಪೆಡಿಕ್ಸ್ ವಿಭಾಗದ ಆಶ್ರಯದಲ್ಲಿ ಲೆಕ್ಚರ್ ಹಾಲ್ ನಲ್ಲಿ ಆಯೋಜಿಸಲಾದ ಆರ್ಥೊಸ್ಕ್ಯಾನ್ -2023 ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿದರು.ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ರೋಗಿಗಳ ಜೊತೆಗಿನ ಒಡನಾಟ ಉತ್ತಮವಾಗಿದ್ದಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆ ಒದಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಕಲ್ಪಿಸಬೇಕಿದೆ. ಕಳೆದ 20 ವರ್ಷಗಳ ಅವಧಿಯಲ್ಲಿ ಆರ್ಥಪೆಡಿಕ್ ವಿಭಾಗ ಮನುಕುಲದಲ್ಲಿ ಹೊಸ ಇತಿಹಾಸವನ್ನು ಸಾಧಿಸಿದೆ. ಜಾಯಿಂಟ್ ರಿಪ್ಲೇಸ್ ಮೆಂಟ್, ಸ್ಟೆಮ್ ಸೆಲ್ ಥೆರಪಿ, ರೊಬೋಟಿಕ್ ಸರ್ಜರಿಯಂತಹ ನೂತನ ತಂತ್ರಜ್ಞಾನದ ಆವಿಷ್ಕಾರಗಳು ನಡೆದಿವೆ. ತರಬೇತುದಾರರು ನಾವೀನ್ಯತೆಯ ಜ್ಞಾನವನ್ನು ಪಡೆಯದೇ ಇದ್ದಲ್ಲಿ ಹಿಂದೆ ಉಳಿಯುವ ಸ್ಥಿತಿಯಿದೆ. ರೇಡಿಯಾಲಜಿ, ನ್ಯೂಕ್ಲಿಯರ್ ಮೆಡಿಸಿನ್ ವಿಭಾಗ ಮಹತ್ತರ ಪಾತ್ರವನ್ನು…
UN NEWS NETWORKSಉಳ್ಳಾಲ: ಮೂರು ದಶಕಗಳ ಅಭ್ಯಾಸವೇ ಆರೋಗ್ಯ ಕ್ಷೇತ್ರದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಎಂತಹ ತಂತ್ರಜ್ಞಾನಕ್ಕಿಂತಲೂ ಮಿಗಿಲಾಗಿರುವುದು ಅಭ್ಯಾಸದ ಜ್ಞಾನ. ಯುವವೈದ್ಯರು ತಂತ್ರಜ್ಞಾನದ ಜೊತೆಗೆ ನಾವೀನ್ಯತೆಯತ್ತ ಚಿತ್ತ ಹರಿಸಿ ಮೂತ್ರಶಾಸ್ತ್ರದಲ್ಲಿ ರೋಗಿಗಳ ಆರೈಕೆಯಲ್ಲಿ ಮುಂದುವರಿಯಿರಿ ಎಂದು ಯುರಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಇದರ ಕಾರ್ಯದರ್ಶಿ ಡಾ. ಜಿಜಿ ಲಕ್ಷ್ಮಣ್ ಪ್ರಭು ಅಭಿಪ್ರಾಯಪಟ್ಟರು. ಅವರು ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಜರಗಿದ ‘ ಮಾಸ್ಟರ್ ಕ್ಲಾಸ್ ಇನ್ ವ್ಯಾಸ್ಕುಲರ್ ಆಕ್ಸೆಸ್ ಸರ್ಜರಿ ಆಂಡ್ ಹ್ಯಾಂಡ್ಸ್ ಆನ್ ವಕ್9ಶಾಪ್ ಆನ್ ವ್ಯಾಸ್ಕ್ಯುಲರ್ ಸೂಚರಿಂಗ್’ ಕುರಿತು ಒಂದು ದಿನದ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಅಮೆರಿಕಾದ ಇಂಡಿಯನ್ ಸ್ಕೂಲ್ ಆಫ್ ಯುರಾಲಜಿ ಸಂಸ್ಥೆ ಮೂತ್ರಶಾಸ್ತ್ರ ವಿಭಾಗದಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದೆ. ಕಸಿ ವಿಭಾಗಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಅಂಗರಚನಾಶಾಸ್ತ್ರದಲ್ಲಿ ಭಾಗಿಯಾಗಿದೆ. ಯುವವೈದ್ಯರಲ್ಲಿ ತಾಂತ್ರಿಕ ಜ್ಞಾನದ ವೃದ್ಧಿಗೆ ಕಾರ್ಯಗಾರಗಳು ಸಹಕಾರಿ ಎಂದರು.ಕಾರ್ಯಗಾರವನ್ನು ಉದ್ಘಾಟಿಸಿದ ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯದ ಡಾ|…

