Author: UllalaVani

Kannada News From Coastal Karnataka

UN networks ಮಂಗಳೂರು: ಅಪರೂಪದ ಪ್ರಕರಣವೊಂದರಲ್ಲಿ ಪುತ್ರಿಯರೇ ತಮ್ಮ ತಂದೆಯ ಮೇಲೆ ಮಾಡಿದ ಅತ್ಯಾಚಾರ ಆರೋಪದ ಪೈಕಿ ಒಂದು ಪ್ರಕರಣ ನಗರದ ಪೋಕ್ಸೋ ನ್ಯಾಯಾಲಯದಲ್ಲಿ ಇನ್ನೊಂದು ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ಮಾನ್ಯ ನ್ಯಾಯಾಲಯ ಆದೇಶ ಹೊರಡಿಸಿದೆ . ಇದೊಂದು ವಿಶೇಷ ಪ್ರಕರಣವಾಗಿದ್ದು, 2021ರ ಜೂನ್ ತಿಂಗಳಿನಲ್ಲಿ ಕಾಟಿಪಳ್ಳದ ನಿವಾಸಿಯಾದ ಅಬ್ದುಲ್ ಹಕೀಂ (48) ಎಂಬವರ ಮೇಲೆ ಅವರ ಇಬ್ಬರು ಹೆಣ್ಣು ಮಕ್ಕಳು ತಾವು ಅಪ್ರಾಪ್ತರಾಗಿ ಇದ್ದ ಸಂದರ್ಭದಲ್ಲಿ ನಮ್ಮ ತಂದೆ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಆರೋಪ ಮಾಡಿದ್ದರು. ಪ್ರಕರಣದ ಕುರಿತು ಮಂಗಳೂರಿನ ಮಹಿಳಾ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದವು. ಈ ಪೈಕಿ, ಆರೋಪಿಯ ಕಿರಿಯ ಮಗಳು ನನ್ನ ತಂದೆಯು ಸತತ ಮೂರು ವರ್ಷಗಳಿಂದ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಳು ಈ ಪ್ರಕರಣವನ್ನು ನ್ಯಾಯಾಲಯ ಕಳೆದ ಎರಡು ತಿಂಗಳಿನ ಹಿಂದೆ ಆರೋಪಿಯನ್ನು ಖುಲಾಸೆಗೊಳಿಸಿದೆ. ಹಿರಿಯ ಮಗಳು ತಂದೆ ವಿರುದ್ಧ ದಾಖಲಿಸಿದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ…

Read More

UN networks ಉಳ್ಳಾಲ: ಮುಂಬೈ ಉತ್ತರ ಕ್ಷೇತ್ರ ಸಂಸದೆ , ಬಿಜೆಪಿ ಯುವಮೋರ್ಚಾ  ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ಕೇಂದ್ರದ ಪ್ರಭಾವಿ ಬಿಜೆಪಿ ನಾಯಕ ದಿ. ಪ್ರಮೋದ್ ಮಹಾಜನ್ ಅವರ ಪುತ್ರಿ ಪೂನಂ ಮಹಾಜನ್ ಎ.25 ಕ್ಕೆ ಉಳ್ಳಾಲ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ, ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಪರವಾಗಿ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.ಮುಡಿಪುವಿನ ಕಾಯರ್‍ಗೋಳಿ ಕ್ರಾಸ್‍ನಿಂದ ಮುಡಿಪು ಜಂಕ್ಷನ್ನಿನವರೆಗೆ ಸಂಜೆ 5 ಕ್ಕೆ  ಬೃಹತ್ ರೋಡ್ ಷೋ ನಡೆಯಲಿದ್ದು,  ಬಳಿಕ ಮುಡಿಪುವಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Read More

UN networksಉಳ್ಳಾಲ: ಕ್ಷೇತ್ರದುದ್ದಕ್ಕೂ ಕಾಂಗ್ರೆಸ್ ಶಾಸಕರ ಆಡಳಿತ ವೈಫಲ್ಯದಿಂದ ಬೇಸತ್ತು ಕಾಂಗ್ರೆಸ್ ನಾಯಕರು- ಕಾರ್ಯಕರ್ತರು ಬಿಜೆಪಿ ಸೇರಲು ಉತ್ಸುಕರಾಗಿದ್ದು, ಇದರ ಮೊದಲ ಭಾಗವೆಂಬಂತೆ ಅಂಬ್ಲಮೊಗರುವಿನಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಗೆ ಇಂದು ಸೇರ್ಪಡೆಗೊಂಡಿದ್ದಾರೆ ಎಂದು ಉಳ್ಳಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಹೇಳಿದರು.ಅವರು ಅಂಬ್ಲಮೊಗರುವಿನ ಕೋಟ್ರಗುತ್ತು ಕಾಂಗ್ರೆಸ್ ಮುಖಂಡ ಮೊಹಮ್ಮದ್ ಕುಂಞÂಮೋನು ಸಹಿತ ಕಾರ್ಯಕರ್ತರನ್ನು ಬಿಜೆಪಿಗೆ ಶಾಲುಹಾಕಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಕ್ಷೇತ್ರದ ಶಾಸಕ ಸಚಿವನಾದರೂ ಊರಿಗೆ ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲ. ಗ್ರಾಮಾಂತರ ಭಾಗಗಳಲ್ಲಿ ಕೆಲಸ ಕಾರ್ಯಗಳಿಲ್ಲದೆ ಕಷ್ಟದಲ್ಲಿ ದಿನದೂಡುವ ಸ್ಥಿತಿಯಿದೆ. ಕೃಷಿ ಕಾರ್ಯಕ್ಕೆ ಪ್ರೋತ್ಸಾಹವೇ ಸಿಗುತ್ತಿಲ್ಲ, ಚಾಲಕನಾಗಿ ದುಡಿದರೂ ಮನೆ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಈ ಭಾಗದಲ್ಲಿ ದುಡಿಯುವಂತಹ ವಾತಾವರಣ ಇಲ್ಲದಾಗಿದೆ. ಬ್ಯಾನರ್ ಗಳಿಗೆ ಮಾತ್ರ ಸೀಮಿತವಾಗಿರುವ ಅಭಿವೃದ್ಧಿಯಿಂದ ಬೇಸತ್ತು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.ಈ ಸಂದರ್ಭ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಮುಖಂಡರುಗಳಾದ ಸುಕೇಶ್ ಶೆಟ್ಟಿ, ಪ್ರವೀಣ್ ಆಳ್ವ, ಕಿಶೋರ್ ಪಂಡಿತ್ ಹೌಸ್ ಮೊದಲಾದವರು ಉಪಸ್ಥಿತರಿದ್ದರು.

Read More

UN networks ಉಳ್ಳಾಲ: ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಎಸ್ ಎಸ್ ಎಫ್ ನಾಯಕ ಅಲ್ತಾಫ್ ಕುಂಪಲ ಪಕ್ಷದ ಮುಖಂಡರಿಗೆ ಮಾಹಿತಿಯೇ ನೀಡದೆ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. ಅಲ್ಲದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವುದಾಗಿ ನಾಯಕರು ಆರೋಪಿಸಿದ್ದಾರೆ. ಅಲ್ತಾಫ್ ಕುಂಪಲ ಇವರು ಹಲವು ವರ್ಷಗಳಿಂದ ಎಸ್ ಎಸ್ ಎಫ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಇತ್ತೀಚೆಗೆ ಜೆಡಿಎಸ್ ಪಕ್ಷದಲ್ಲಿ ಕಾಣಿಸಿಕೊಂಡ ಅವರು ವಿಧಾನಪರಿಷತ್ ಸದಸ್ಯ ಬಿ.ಎಂ ಫಾರುಕ್ ಅವರ ಮನವೊಲಿಸಿ ಜೆಡಿಎಸ್ ನಿಂದ ಉಳ್ಳಾಲ ಕ್ಷೇತ್ರದಿಂದ ಸ್ಪರ್ಧಿಸಲು ಬ್ಲ್ಯಾಕ್ ಫಾರಂ ಪಡೆದುಕೊಂಡಿದ್ದರು. ಉಳ್ಳಾಲ ನಗರಸಭೆಯ ಜೆಡಿಎಸ್ ಕೌನ್ಸಿಲರ್ ಹಾಗೂ ಜಿಲ್ಲಾ ಮುಖಂಡರ ಜೊತೆಗೆ ನಾಮಪತ್ರ ಸಲ್ಲಿಸಿದ್ದ ಅವರು ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಎ.21 ರಂದು ಅಲ್ತಾಫ್ ಅವರು ತನ್ನ ಪಕ್ಷದ ಮುಖಂಡರುಗಳಿಗೆ ಮಾಹಿತಿಯೇ ಇಲ್ಲದೆ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದರು. ಈ ಕುರಿತು ಎ.22 ರಂದು ನೋಟೀಸು ಬೋರ್ಡಿನಲ್ಲಿ ಮಾಹಿತಿಯನ್ನು ಹಾಕಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಜೆಡಿಎಸ್ ಮುಖಂಡರುಗಳಿಗೆ…

Read More

UN networks ಉಳ್ಳಾಲ: ಮಂಗಳೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಸಮರ್ಥ ಅಭ್ಯರ್ಥಿಯ ಆಯ್ಕೆ ನಡೆದಿದೆ. 210 ಬೂತ್ ಗಳಲ್ಲಿ , ತಾಲೂಕು ಮತ್ತು ಗ್ರಾಮದ ಶಕ್ತಿಕೇಂದ್ರಗಳಲ್ಲಿನ ಅವಿರತ ಶ್ರಮದಿಂದ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ. ಈ ಮೂಲಕ ಜಿಲ್ಲೆಯ 8 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂಬುದನ್ನು ತನ್ನ ಅನುಭವದಿಂದ ಹೇಳಬಲ್ಲೆ ಎಂದು ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಪಂಡಿತ್ ಹೌಸ್ ಬಿಜೆಪಿ ಕಾರ್ಯಾಲಯದಲ್ಲಿ ಇಂದು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಸರಕಾರ ನೀಡಿರುವುದರಿಂದ ಈ ಬಾರಿ ಜನತೆಯಿಂದ ಅಚ್ಚರಿಯ ಫಲಿತಾಂಶ ಬಿಜೆಪಿ ಮಂಗಳೂರು ಕ್ಷೇತ್ರದಲ್ಲಿ ನೀಡಲಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ವಿಶ್ವಾಸದ ಬಾಳು ನಡೆಸಬೇಕು ಅನ್ನುವ ಉದ್ದೇಶದಿಂದ ರಾಜ್ಯ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಈವರೆಗಿನ ಸರಕಾರಗಳು ಮಾಡದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿ ಹೆಚ್ಚಳ, 75 ಯುನಿಟ್ ಉಚಿತ ವಿದ್ಯುತ್, ಗ್ರಾಮಗಳಿಗೆ 17,000 ಕೊಳವೆ ಬಾವಿಗಳ ನಿರ್ಮಾಣ, 10,000 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳ…

Read More

PostsBest 5 Buck Deposit Gambling establishment WebsitesDesk Video gameExamining the Some other Games Provided with Put ten And you may Have fun with 29 During the Casino On this web site, you might fool around with several currencies, speak to a multiple-lingual help, and use quick detachment tricks for their profits. No-deposit incentives are often simply for specific games.

Read More

UN networks ತೊಕ್ಕೊಟ್ಟು : ಮಂಗಳೂರು ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ ವಿಸ್ಮಯಿ ಪೊಯ್ಯತ್ತಬೈಲ್ ಈ ಬಾರಿಯ ಪಿಯುಸಿ(ಪಿಸಿಎಂಸಿ) ಪರೀಕ್ಷೆಯಲ್ಲಿ 95.8%( 575/600) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಇವರು ಅಬ್ಬಕ್ಕ ಟಿ.ವಿ ಮಾಲಕ, ಪತ್ರಕರ್ತ ಶಶಿಧರ್ ಪೊಯ್ಯತ್ತಬೈಲ್ ಹಾಗೂ ಶಿಕ್ಷಕಿ ಭುವನ ಪೊಯ್ಯತ್ತಬೈಲ್ ಇವರ ಪುತ್ರಿಯಾಗಿದ್ದಾರೆ.

Read More

ಉಳ್ಳಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ನಾಮಪತ್ರ ಸಲ್ಲಿಸುವ ಮುನ್ನ ಪಂಡಿತ್ ಹೌಸ್ ನಿಂದ ತೊಕ್ಕೊಟ್ಟು ವರೆಗೆ ನಡೆದ ಪಾದಯಾತ್ರೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿ ಉಳ್ಳಾಲದಲ್ಲಿ ಬಿಜೆಪಿ ಶಕ್ತಿಪ್ರದರ್ಶನ ತೋರಿಸಿತು. ಚೆಂಡೆ ವಾದ್ಯ, ಕಲ್ಲಡ್ಕ ಗೊಂಬೆ, ಕಾಸರಗೋಡು ಬಿಜೆಪಿ ಮುಖಂಡ ಕುಂಟಾರು ರವೀಶ್ ತಂತ್ರಿ ಸೇರಿದಂತೆ ಹಲವು ಮುಖಂಡರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.

Read More

UN networks ಉಳ್ಳಾಲ: ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ನಾಮಪತ್ರ ಸಲ್ಲಿಸುವ ಮುನ್ನ ಉಳ್ಳಾಲದ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಗೌರವ ಸಲ್ಲಿಸಿದರು. ಜೊತೆಗೆ ನವಮಂಗಳೂರು ನಿರ್ಮಾಣದ ಹರಿಕಾರ ಉಳ್ಳಾಲದ ಬಂಡಿಕೊಟ್ಯದ ನಿವಾಸಕ್ಕೆ ಭೇಟಿ ಕೊಟ್ಟು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಮುಖಂಡರುಗಳಾದ ಚಂದ್ರಹಾಸ್ ಉಳ್ಳಾಲ್, ಚಂದ್ರಶೇಖರ್ ಉಚ್ಚಿಲ್, ಕುಂಟಾರು ರವೀಶ್ ತಂತ್ರಿ, ರವೀಂದ್ರ ಶೆಟ್ಟಿ ಉಳಿದೊಟ್ಟು ಮೊದಲಾದವರು ಉಪಸ್ಥಿತರಿದ್ದರು.

Read More

Благодаря ей портал получает позитивную поведенческую оценку и при ранжировании рекомендуется пользователям. Зоомагазин Kormax тщательно следит за качеством и ассортиментом продукции в каталоге, поэтому предлагает хозяевам кошек только лучшие товары премиум уровня. Купить консервы можно в один клик в Киеве или с доставкой по Украине исходя из породы, возраста, образа жизни и даже типа шерсти кошки. Понимая, что получаемый трафик из органического поиска в разы дешевле трафика из контекстной рекламы. Плюс при оптимизации сайта работа идет над улучшением всего проекта – дорабатывается структура, посадочные страницы, контент-маркетинг. И заказчик получает и целевой трафик, и улучшение сайта, в отличие от других видов…

Read More