
ಉಳ್ಳಾಲ: ಶ್ರೀ ರಮಾನಂದ ಸ್ವಾಮೀಜಿಯವರಿಂದ ಸ್ಥಾಪಿಸಲ್ಪಟ್ಟು ಆರಾಧಿಸಲ್ಪಟ್ಟ ಶ್ರೀ ಕ್ಷೇತ್ರ ಕೊಲ್ಯದಲ್ಲಿ ನೆಲೆಸಿರುವ ತಾಯಿ ಮೂಕಾಂಬಿಕೆಯ ಸಾನಿಧ್ಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಅ.3 ರಿಂದ 13 ರ ವರೆಗೆ ದೇವತಾ ವಿಧಿ ವಿಧಾನಗಳನ್ನು ಒಳಗೊಂಡು ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಮೂಕಾಂಬಿಕ ದೇವಸ್ಥಾನದ ಆಡಳಿತ ಕಮಿಟಿಯ ಕೋಶಾಧಿಕಾರಿ ಕೃಷ್ಣ ಮೂರ್ತಿ ಹೇಳಿದರು.


ಕ್ಚೇತ್ರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿದರು.ವಿವಿಧ ಗಣ್ಯರ ಉಪಸ್ಥಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹರಿಕಥೆ, ಯಕ್ಷಗಾನ,ಭರತನಾಟ್ಯ, ಭಕ್ತಿ ರಸಮಂಜರಿ,ಮಾತೃಮಂಡಳಿ ಹಾಗೂ ಹೊಲಿಗೆ ತರಬೇತಿಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಪರಿಸರದ ಮಕ್ಕಳ ಪ್ರತಿಭೆಗಳ ಅನಾವರಣ, ಅಂಗನವಾಡಿ ಮಕ್ಕಳ ನೃತ್ಯ ಕಾರ್ಯಕ್ರಮ, ಕುಣಿತ ಭಜನೆ ನಡೆಯಲಿರುವುದು.


ಅ.12 ರಂದು ಕ್ಷೇತ್ರದಲ್ಲಿ ಆಯುಧ ಪೂಜೆಯು ನಡೆಯಲಿರುವುದು.ಅ.13ರಂದು ಕ್ಷೇತ್ರದಲ್ಲಿ ಮಕ್ಕಳಿಗೆ ವಿದ್ಯಾರಂಭ ನಡೆಯಲಿರುವುದು.ಅ.13 ರಂದು ಬೆಳಿಗ್ಗೆ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಚಂಡಿಕಾಹವನ ನಡೆಯಲಿರುವುದು.ಅದೇ ದಿನ ಸಂಜೆ ಭರತನಾಟ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ,ಸಾವಿರಾರು ಶಿಷ್ಯರನ್ನು ಹೊಂದಿರುವ ರಾಜ್ಯೋತ್ಸವ ಪ್ರಶಸ್ತಿ ,ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತರಾದ ನಾಟ್ಯಾಚಾರ್ಯ ಉಳ್ಳಾಲ ಶ್ರೀ ಮೋಹನ್ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.



ಪತ್ರಿಕಾಗೋಷ್ಠಿಯಲ್ಲಿ ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನದ ಆಡಳಿತ ಕಮಿಟಿಯ ಕಾರ್ಯದರ್ಶಿ ನಾರಾಯಣ ಕುಂಪಲ,ಮಾಜಿ ಅಧ್ಯಕ್ಷರಾದ ಮಹಾಬಲ ಶೆಟ್ಟಿ, ಟ್ರಸ್ಟಿಗಳಾದ ಗೋಪಾಲ ಕುತ್ತಾರ್,ರಾಧಾಕೃಷ್ಣ ಶೆಟ್ಟಿ, ಜಿ. ವಾಸುದೇವ ಗೌಡ,ಶಿವಾನಂದ ಮೆಂಡನ್,ಮೋಹನ್ ಗೋರಿಗುಡ್ಡ, ಗುಣವತಿ ಆಚಾರ್, ಮಾತೃಮಂಡಳಿ ಅಧ್ಯಕ್ಷರಾದ ಸುಲೋಚಿನಿ ಟೀಚರ್ ಉಪಸ್ಥಿತರಿದ್ದರು.






