ಉಳ್ಳಾಲ: ಮಂಗಳೂರಿನಲ್ಲೂ ಫೆಂಗಲ್ ಚಂಡಮಾರುತದ ಅಬ್ಬರದ ಹಿನ್ನಲೆ ಸೋಮವಾರ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಹಲವಡೆ ಜಲಾವೃತವಾಗಿದೆ. ಕೇರಳ ಗಡಿಭಾಗದ ತಲಪಾಡಿ, ಉಚ್ಚಿಲ, ಉಳ್ಳಾಲ, ಕೋಟೆಕಾರಿನಲ್ಲಿ ರಾತ್ರಿ ಇಡಿ ಎಡೆಬಿಡದೇ ಮಳೆ ಸುರಿಯುತ್ತಿದ್ದು ಉಚ್ಚಿಲ ಬಳಿ ಭಾರೀ ಮಳೆಗೆ ಅಂಡರ್ ಪಾಸ್ ಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಯಾಗಿದೆ. ಅಂಡರ್ ಪಾಸ್ ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿದ ಪರಿಣಾಮ ಕಾರು ದ್ವಿಚಕ್ರ ವಾಹನಗಳು ಅಂಡರ್ ಪಾಸ್ ನಲ್ಲಿ ಸಾಗಲು ಸಾಧ್ಯವಾಗದೇ ವಾಹನಗಳನ್ನು ತಳ್ಳಿಕೊಂಡು ಸವಾರರು ಮುಂದೆ ಸಾಗುವಂತಾಗಿದೆ. ಹೆದ್ದಾರಿ ಬದಿಗಳಲ್ಲೂ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.
Author: UllalaVani
ಕುತ್ತಾರು: ಮಕ್ಕಳು ದಿನನಿತ್ಯ ತಮ್ಮ ಆಟಪಾಠಗಳಲ್ಲಿ ತೊಡಗಿಕೊಂಡು ಚಟುವಟಿಕೆಯಿಂದ ಕೂಡಿರುತ್ತಾರೆ. ಯಾವುದೇ ಚಿಂತೆ, ಜವಾಬ್ದಾರಿಗಳಿಲ್ಲದೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುವ ಮಕ್ಕಳು ಸಂತಸದಿಂದಿದ್ದು ನಿತ್ಯ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿರುತ್ತಾರೆ. ಮಕ್ಕಳು ಇತಿಹಾಸ ಅರಿತುಕೊಂಡರೆ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗುತ್ತದೆ ” ಎಂದು ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷರಾದ ಸುಮಲತ ಎನ್ ಸುವರ್ಣ ಹೇಳಿದರು.ಅವರು ಮಹಿಳಾ ಸಂಘದ ವತಿಯಿಂದ ಇದೇ ಭಾನುವಾರ ಕುತ್ತಾರು ಪದವಿನ ಬಾಲಸಂರಕ್ಷಣಾ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸುತ್ತಾ ಮಾತನಾಡಿದರು.ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ವತಿಯಿಂದ ಮಕ್ಕಳಿಗೆ ರಸಪ್ರಶ್ನೆ, ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅನಾಥಾಶ್ರಮದ ಮಕ್ಕಳು ಹಾಡು, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಕೊನೆಗೆ ಎಲ್ಲಾ ಮಕ್ಕಳಿಗೆ ಆಹಾರತಿನಿಸುಗಳ ಜೊತೆ ದಿನಬಳಕೆಯ ವಸ್ತುಗಳನ್ನು ಉಡುಗೊರೆಯಾಗಿ ಹಂಚಲಾಯಿತು. ಸಂಘದ ವತಿಯಿಂದ ಆಶ್ರಮಕ್ಕೆ ಧನಸಹಾಯ ನೀಡಲಾಯಿತು.ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಸುಖಲಾಕ್ಷಿ ವೈ. ಸುವರ್ಣ ಸ್ವಾಗತಿಸಿದರು.…
ಕೋಟೆಕಾರು : ಚಂಡಾಮಾರುತದ ಪರಿಣಾಮ ತೀವ್ರವಾಗಿ ಮಳೆಯಾಗುತ್ತಿದ್ದು, ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯುದ್ದಕ್ಕೂ ನಡೆಯುತ್ತಿದ್ದು, ಎಲ್ಲೆಡೆ ಮಣ್ಣು ಅಗೆದು ಹಾಕಿರುವುದರಿಂದ ಪಾದಚಾರಿಗಳು, ವಾಹನ ಸವಾರರು ಜಾಗರೂಕರಾಗಿರಬೇಕಾಗಿ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.ಕೋಟೆಕಾರು, ಬೀರಿ, ಮಾಡೂರು, ಮಡ್ಯಾರ್, ಪಾನೀರು, ದೇರಳಕಟ್ಟೆವರೆಗಿನ ಮುಖ್ಯರಸ್ತೆ ಬದಿಯಲ್ಲಿ ಪೈಪ್ ಅಳವಡಿಸಲು ಮಣ್ಣು ಅಗೆಯಲಾಗಿದೆ. ತೀವ್ರ ಮಳೆಯಿಂದಾಗಿ, ರಸ್ತೆಬದಿಯಲ್ಲಿ ಹಲವೆಡೆ ಮಣ್ಣು ಶೇಖರಣೆಯಾಗಿದ್ದರೆ, ಇನ್ನು ಹಲವೆಡೆ ಪೈಪ್ ಅಳವಡಿಸಿದ ಬಳಿಕ ಮಣ್ಣು ಮೃದುವಾಗಿದೆ. ಇದರಿಂದಾಗಿ ವಾಹನ ಸವಾರರು ಜಾಗರೂಕರಾಗಿ ಚಲಿಸುವಂತೆಯೂ, ಪಾದಚಾರಿಗಳು ಸುರಕ್ಷತಾ ಕ್ರಮಗಳನ್ನು ಅನುಸರಿ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ: ಫೆಂಗಲ್ ಚಂಡಮಾರುತದ ಅಬ್ಬರ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಾದ್ಯಂತ ಡಿ. 3ರಂದು ನಾಳೆಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿಯಿಂದ ಪದವಿ ಪೂರ್ವ ಕಾಲೇಜ ಗಳವರೆಗೆ ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನೀಡಿದ್ದಾರೆ. ಫೆಂಗಲ್ ಚಂಡಮಾರುತ ದ ಹಿನ್ನಲೆ ಉಳ್ಳಾಲದಲ್ಲೂ ಗುಡುಗು ಸಹಿತ ಭಾರೀ ಮಳೆಯಾಗಿದ್ದು ಮಾಧ್ಯಾಹ್ನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ರಾಷ್ಟ್ರೀಯ ಹೆದ್ದಾರಿಯ ತುಂಬಾ ನೀರು ತುಂಬಿ ವಾಹನ ಸವಾರರು ತತ್ತರಿಸುವಂತಾಗಿದೆ.
ಮಂಗಳೂರು: ಯಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ರವರ ಪ್ರತೀಕ್ ಪೂಜಾರಿ ನಿರ್ಮಾಣದ, ಯುವ ನಿರ್ದೇಶಕ ಭರತ್ ಶೆಟ್ಟಿ ನಿರ್ದೇಶನದ “ಪಿಲಿಪಂಜ” ವಿಭಿನ್ನ ಕಥಾ ಹಂದರದ, ವಿಭಿನ್ನ ಶೈಲಿಯ ತುಳು ಚಲನಚಿತ್ರದ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಯತು..ಮುಡಿಪು, ಹೂಹಾಕುವ ಕಲ್ಲು, ವರ್ಕಾಡಿ, ನರಿಂಗಾನ, ಇರಾ ಮುಂತಾದ ಕಡೆ ಸತತ 25 ದಿನಗಳಿಂದ ಚಿತ್ರೀಕರಣ ಗೊಂಡಿತ್ತು. ಇದು ತುಳು ಚಿತ್ರ ರಂಗದಲ್ಲಿ ಹೊಸ ಪ್ರಯೋಗದೊಂದಿಗೆ ವಿಭಿನ್ನವಾಗಿ ಮೂಡಿ ಬರಲಿದೆ.ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಪ್ರವೀಣ್ ಕೊಡಕ್ಕಲ್, ಶಿವಪ್ರಕಾಶ್ ಪೂಂಜ, ಪ್ರಕಾಶ್ ಶೆಟ್ಟಿ ಧರ್ಮನಗರ, ಪ್ರತೀಕ್ ಪೂಜಾರಿ, ರಕ್ಷಣ್ ಮಾಡೂರು, ರೂಪಶ್ರೀ ವರ್ಕಾಡಿ, ಜಯಶೀಲ ಮಂಗಳೂರು, ವಿಜಯಹರಿ ರೈ, ದಯಾನಂದ ರೈ ಬೆಟ್ಟಂಪಾಡಿ, ರಂಜನ್ ಬೋಳೂರು, ಹೊಸ ಪರಿಚಯ ದಿಶಾರಾಣಿ, ಭಾಸ್ಕರ್ ಮಣಿಪಾಲ ಮುಂತಾದವರು ಬಣ್ಣ ಹಚ್ಚಿದ್ದಾರೆ..ಛಾಯಾಗ್ರಹಣ ಉದಯ ಬಳ್ಳಾಲ್, ಸಂಗೀತ ಲಾಯ್ ವೆಲಂಟೀನ್ ಸಲ್ದಾನ, ಸಂಕಲನ ಶ್ರೀನಾಥ್ ಪವಾರ್, ಸಹಾಸ…
ಉಳ್ಳಾಲ : ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಡಿ. 4 ರಂದು ಜ್ಯೋತಿ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಸಂಘಪರಿವಾರ ಮತ್ತು ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದ್ದು, ಮಂಗಳೂರು ವಿಧಾನಸಭಾ ಕ್ಷೇತ್ರದಿಂದಲೂ 2500 ಮಂದಿಯನ್ನು ನಿರೀಕ್ಷಿಸಲಾಗಿದೆ. ದೈವಸ್ಥಾನ, ದೇವಸ್ಥಾನ ಹಾಗೂ ಮಂದಿರಗಳಿಂದ ಸರ್ವ ಹಿಂದೂ ಬಾಂಧವರು ಭಾಗವಹಿಸುವಂತೆ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಕರೆ ನೀಡಿದ್ದಾರೆ.ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ವ್ಯಾಪಕ ಹಲ್ಲೆ ದಾಳಿಗಳಾಗುತ್ತಿವೆ. ಬೇರೆಡೆ ಅಲ್ಪಸಂಖ್ಯಾತರ ಮೇಲೆ ದಾಳಿಗಾಗಳಾಗುವಾಗ ಮಾತನಾಡಬೇಕಾದ ಸಂಸ್ಥೆಗಳು ಮೌನವಾಗಿದೆ. ಇದನ್ನು ಖಂಡಿಸಿ ಇಸ್ಕಾನ್ ಸಂಸ್ಥೆಯ ಸನ್ಯಾಸಿ ಚಿನ್ಮಯೀ ಕೃಷ್ಣದಾಸ್ ಪ್ರಭು ಕೇಸರಿ ಪತಾಕೆ ಹಿಡಿದು ಪ್ರತಿಭಟಿಸಿದಾಗ, ಅವರ ಮೇಲೆಯೂ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಹಿಂದೂ ನಾಯಕರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ವ್ಯಾಪಕ ಅನಾಚಾರದ ವಿರುದ್ದ,…
ಹರೇಕಳ: ಜಗತ್ತಿನಲ್ಲಿ ಬದುಕಲು ನೀರು ಬೇಕೇ ಬೇಕು. ಆದರೆ ನಾವು ನಮ್ಮ ಅಗತ್ಯಗಳಿಗಾಗಿ ಮಾತ್ರ ನೀರನ್ನು ಸಂರಕ್ಷಿಸುತ್ತಿದ್ದೇವೆ ಎಂಬುದು ಕೂಡ ಅರ್ಥವಲ್ಲ. ಮಾತ್ರವಲ್ಲದೇ ಜಗತ್ತಿನ ಎಲ್ಲಾ ಜೀವಿಗಳಿಗೂ ಸಂಪನ್ಮೂಲಗಳಿಗೂ ನೀರು ಅತಿ ಅವಶ್ಯಕ ಹಾಗಾಗಿ ಸಮಾನ ಹಕ್ಕು ಎಲ್ಲರಿಗೂ ಇದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನೀರನ್ನು ಸಂರಕ್ಷಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಮಕ್ಕಳ ದಂತ ಚಿಕಿತ್ಸಾ ವಿಭಾಗದ ಹಿರಿಯ ಉಪನ್ಯಾಸಕರಾದ ಡಾ. ಮೇಘ ಭಂಡಾರಿ ತಿಳಿಸಿದರು.ಅವರುಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜು ಮತ್ತು ಶ್ರೀ ರಾಮಕೃಷ್ಣ ಫ್ರೌಢಶಾಲೆ ಹರೇಕಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆಯ ಸವಿನೆನಪಿಗಾಗಿ ನಡೆದ ನೀರಿನ ಸಂರಕ್ಷಣೆ ಮತ್ತು ನೈರ್ಮಲ್ಯ ಬಗ್ಗೆ ನಡೆದ ಪ್ರಾಯೋಗಿಕ ತರಭೇತಿಯಲ್ಲಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಹಲ್ಲಿನ ಸಂರಕ್ಷಣೆ ಮತ್ತು ಹಲ್ಲನ್ನು ಶುಚಿಯಾಗಿಡುವ ವಿಧಾನಗಳ ಬಗ್ಗೆ ಹಿರಿಯ ಉಪನ್ಯಾಸಕಿ ಡಾ. ಕೃತಿಕ ಅವರು ರಚಿಸಿದ ಭಿತ್ತಿಪತ್ರಿಕೆಯನ್ನು ಶ್ರೀ ರಾಮಕೃಷ್ಣ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಉಷಾಲತ…
ಮಂಗಳೂರು : ಶಿಕ್ಷಕರು ಸಮಾಜದ ಎರಡು ಕಣ್ಣುಗಳು ಇದ್ದ ಹಾಗೆ, ದೇಶದ ಮುಂದಿನ ಭವಿಷ್ಯ ಯುವಕರ ಕೈಯಲ್ಲಿದೆ, ವಿದ್ಯಾರ್ಥಿ ಜೀವನದಲ್ಲೇ ಮಕ್ಕಳಿಗೆ ಹೊಂದಾಣಿಕೆಯ ಮನೋಭಾವ,ದೇಶಭಿಮಾನ,ಸೌಹಾರ್ದತೆ, ಸ್ವಯಂ ಶಿಸ್ತು ಮುಂತಾದ ಗುಣಗಳನ್ನು ಕಲಿಸಿ, ಸಮಾಜಕ್ಕೆ ಅರ್ಪಣೆ ಮಾಡುವ ಶಕ್ತಿ ಶಿಕ್ಷಕರಿಗಿದೆ. ಅಂತಹ ಜ್ಞಾನವನ್ನು ಪಡೆದ ಮಕ್ಕಳು ದೇಶವನ್ನು ಕಟ್ಟುತ್ತಾರೆ. ಈ ದೃಷ್ಟಿಯಲ್ಲಿ ಶಿಕ್ಷಕರ ಪಾತ್ರ ಅಪಾರ ವಾದದ್ದು ಎಂದು ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಆರ್ ಈಶ್ವರ್ ಅಭಿಪ್ರಾಯ ಪಟ್ಟರು.ಅವರು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘ ಮಂಗಳೂರು ದಕ್ಷಿಣ ವಲಯ ವತಿಯಿಂದ ನಡೆದ ನಿವೃತ್ತ ಶಿಕ್ಷಕಿ ಜಾನೆಟ್ ಲೋಬೊ ಅವರ ವಿದಾಯ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಭಿನಂದನ ಭಾಷಣವನ್ನು ಸಂಘದ ಪ್ರಧಾನ ಕಾರ್ಯದರ್ಶಿ ತ್ಯಾಗಮ್ ಹರೇಕಳ ನೆರವೇರಿಸಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಪಾಡು ಹೇಳುವಂತಿಲ್ಲ, ಒಂದು ಕಡೆ ಶಿಕ್ಷಕರ ಕೊರತೆ, ಮತ್ತೊಂದಡೆ ಶಾಲೆ ಮುಚ್ಚುವ ಭೀತಿ, ಇವೆರಡರ ನಡುವೆ ಕರ್ತವ್ಯ ನಿರ್ವಹಿಸುವ ಶಿಕ್ಷಕರಲ್ಲಿ…
ಮಂಗಳೂರು: ವಿಶೇಷ ಚೇತನ ಮಕ್ಕಳನ್ನು ಒಗ್ಗೂಡಿಸಿ ಅವರಲ್ಲಿರುವ ನ್ಯೂನ್ಯತೆಗಳ ಪಟ್ಟಿ ಮಾಡಿ ಅವಶ್ಯಕತೆಯಿರುವ ಸಲಕರಣೆಗಳ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಶಿಕ್ಷಣ ಇಲಾಖೆ ದಾನಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಜತೆಗೆ ಸೇರಿಕೊಂಡು ಸಮಾಜಮುಖಿಯಾದ ಕಾರ್ಯವನ್ನು ಆಯೋಜಿಸಿರುವುದು ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಪೂರಕ ಎಂದು ಡಿಡಿಪಿಐ ವೆಂಕಟೇಶ್ ಪಟಗಾರ್ ಹೇಳಿದರು. ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ದ.ಕ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡಬಿದ್ರೆ ವಲಯ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೊಗವೀರಪಟ್ನದ ಮಾರುತಿ ಜನಸೇವಾ ಸಂಘ , ಮಾರುತಿ ಯುವಕ ಮಂಡಲ ಆಶ್ರಯದಲ್ಲಿ ಲೇಡಿಹಿಲ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ವಿಕಲ ಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ 2024-2025 ದಲ್ಲಿ ಭಾಗವಹಿಸಿ ಮಾತನಾಡಿದರು.ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಇಡೀ ತಂಡದ್ದಾಗಿದೆ. ಮೂರು ವಲಯದಿಂದ ಭಾಗವಹಿಸಿದ…
ಉಳ್ಳಾಲ: ಮುನ್ನೂರು ಗ್ರಾಮದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿ ಬಂದಿರುವುದರಿಂದ ಶಿಕ್ಷಣ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆಗಳಾಗಿವೆ. ಶಿಕ್ಷಣದ ಕಾಶಿಯಾಗಿ ಪ್ರದೇಶ ಮಾರ್ಪಾಡಾದರೂ, ಹೊರಗಿನಿಂದ ಬರುವ ಜನರಿಂದ ಮೂಲ ಸಂಸ್ಕೃತಿಗಳ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ಸೌಹಾರ್ದಯುತ ವಾತಾವರಣದ ಜೊತೆಗಿನ ಸಂಸ್ಕೃತಿ ಅರಿವು ಮೂಡಿಸುವ ಗ್ರಾಮಡೊಂಜಿ ಗೌಜಿ ಕಾರ್ಯಕ್ರಮ ಸಮಾಜಕ್ಕೆ ಪೂರಕ ಎಂದು ಗ್ರಾಮಡೊಂಜಿ ಗೌಜಿ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಬಿ. ವಿವೇಕ್ ಶೆಟ್ಟಿ ಬೊಳ್ಯಗುತ್ತು ಹೇಳಿದರು.ಅವರು ಸೌಹಾರ್ದ ಕಲಾವಿದರು ಕುತ್ತಾರು, ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ, ಮುನ್ನೂರು ಯುವಕ ಮಂಡಲ , ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಇದರ ಜಂಟಿ ಸಹಯೋಗದಲ್ಲಿ ದೆಪ್ಪೆಲಿಮಾರು ಗದ್ದೆಯಲ್ಲಿ ಜರಗಿದ ಮುನ್ನೂರು ಗ್ರಾಮಡೊಂಜಿ ಗೌಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮ ಆರಂಭಿಸುವುದು ಸುಲಭ, ಆದರೆ 15 ವರ್ಷಗಳ ಕಾಲ ಅದನ್ನು ಮುನ್ನಡೆಸುವುದು ಬಹುದೊಡ್ಡ ಕಾರ್ಯ. ವೇದಿಕೆಯಲ್ಲಿ ಎಲ್ಲಾ ಧರ್ಮೀಯರು, ಮೇಲು-ಕೀಳು ಅನ್ನುವ ಭಾವನೆಯಿಲ್ಲದೆ ಭಾಗವಹಿಸುವ ವಿಶಿಷ್ಟವಾದ ಕಾರ್ಯಕ್ರಮ. ಶೇ.80 ಹೊರಗಿನವರೇ ಇರುವಾಗ ಮೂಲ ಗ್ರಾಮದವರು ಶೇ.20 ಮಂದಿ…

