
ಹರೇಕಳ: ಜಗತ್ತಿನಲ್ಲಿ ಬದುಕಲು ನೀರು ಬೇಕೇ ಬೇಕು. ಆದರೆ ನಾವು ನಮ್ಮ ಅಗತ್ಯಗಳಿಗಾಗಿ ಮಾತ್ರ ನೀರನ್ನು ಸಂರಕ್ಷಿಸುತ್ತಿದ್ದೇವೆ ಎಂಬುದು ಕೂಡ ಅರ್ಥವಲ್ಲ. ಮಾತ್ರವಲ್ಲದೇ ಜಗತ್ತಿನ ಎಲ್ಲಾ ಜೀವಿಗಳಿಗೂ ಸಂಪನ್ಮೂಲಗಳಿಗೂ ನೀರು ಅತಿ ಅವಶ್ಯಕ ಹಾಗಾಗಿ ಸಮಾನ ಹಕ್ಕು ಎಲ್ಲರಿಗೂ ಇದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನೀರನ್ನು ಸಂರಕ್ಷಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಮಕ್ಕಳ ದಂತ ಚಿಕಿತ್ಸಾ ವಿಭಾಗದ ಹಿರಿಯ ಉಪನ್ಯಾಸಕರಾದ ಡಾ. ಮೇಘ ಭಂಡಾರಿ ತಿಳಿಸಿದರು.
ಅವರುಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜು ಮತ್ತು ಶ್ರೀ ರಾಮಕೃಷ್ಣ ಫ್ರೌಢಶಾಲೆ ಹರೇಕಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆಯ ಸವಿನೆನಪಿಗಾಗಿ ನಡೆದ ನೀರಿನ ಸಂರಕ್ಷಣೆ ಮತ್ತು ನೈರ್ಮಲ್ಯ ಬಗ್ಗೆ ನಡೆದ ಪ್ರಾಯೋಗಿಕ ತರಭೇತಿಯಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಲ್ಲಿನ ಸಂರಕ್ಷಣೆ ಮತ್ತು ಹಲ್ಲನ್ನು ಶುಚಿಯಾಗಿಡುವ ವಿಧಾನಗಳ ಬಗ್ಗೆ ಹಿರಿಯ ಉಪನ್ಯಾಸಕಿ ಡಾ. ಕೃತಿಕ ಅವರು ರಚಿಸಿದ ಭಿತ್ತಿಪತ್ರಿಕೆಯನ್ನು ಶ್ರೀ ರಾಮಕೃಷ್ಣ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಉಷಾಲತ ಬಿಡುಗಡೆಗೊಳಿಸಿದರು. ಹಾಗೂ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಪ್ರಾಯೋಗಿಕ ನೀರಿನ ಸಂರಕ್ಷಣೆ ಬಗ್ಗೆ ನಡೆದ ಮಾದರಿ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ವೀಕ್ಷಿತಾ ಮತ್ತು ಬಳಗ ಪ್ರಥಮ ಮತ್ತು ಫಾತಿಮಾ ರಫಿದಾ ಮತ್ತು ಬಳಗ ದ್ವಿತೀಯ ಸ್ಥಾನ ಪಡೆದುಕೊಂಡರು.
ಪೋಸ್ಟರ್ ಸ್ಪರ್ಧೆಯಲ್ಲಿ ಲಾವಣ್ಯ ಮತ್ತು ಬಳಗ ಪ್ರಥಮ ಮತ್ತು ಸಾನಿಧ್ಯ ಮತ್ತು ಬಳಗ ದ್ವಿತೀಯ ಸ್ಥಾನ ಪಡೆದರು.
ಕಾರ್ಯಕ್ರಮವನ್ನು ದಂತ ವೈದ್ಯಕೀಯ ಕಾಲೇಜಿನ ಹಿರಿಯ ಉಪನ್ಯಾಸ ಕ ಡಾ. ಅನಂತು ಉದ್ಘಾಟಿಸಿದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಶಿಕ್ಷಕರಾದ ಮೋಹಿನಿ , ರವಿಶಂಕರ್, ಕೃಷ್ಣ ಶಾಸ್ತ್ರಿ, ಮೋಹಿನಿ, ಸ್ಮಿತಾ, ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕರಾರ ಶಿವಣ್ಣ ವಂದಿಸಿದರು.

