ಸುಳ್ಯ , ಜು. 07: 150 ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿದ ‘ ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಎಂದೇ ಜನಪ್ರಿಯರಾಗಿರುವ ಮತ್ತು ‘ತೂಗು ಸೇತುವೆಗಳ ಕಮಾಂಡರ್’ ಎಂದೇ ದೇಶಾದ್ಯಂತ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಹಿರಿಯ ಸೇತುವೆ ತಜ್ಞ ಡಾ. ಗಿರೀಶ್ ಭಾರದ್ವಾಜ್ ಅವರು ಮಂಗಳವಾರ ಬೆಳಿಗ್ಗೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಡಾ. ಭಾರದ್ವಾಜ್ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ದೇವಾಲಯಗಳಿಗೆ ಭೇಟಿ ನೀಡಿ ಹಿಂತಿರುಗಿದ್ದರು. ಕಳೆದ ಕೆಲವು ದಿನಗಳಿಂದ ಅವರಿಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಅವರು ನಿಧನರಾದರು.ಡಾ. ಭಾರದ್ವಾಜ್ ಅವರು ಕಡಿಮೆ ವೆಚ್ಚದ, ಪರಿಸರ ಸ್ನೇಹಿ ತೂಗು ಸೇತುವೆಗಳನ್ನು ನಿರ್ಮಿಸಿದ್ದಕ್ಕಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು. ದೂರದ ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವ ನೂರಾರು ಸೇತುವೆಗಳ ನಿರ್ಮಾಣದ ಮೂಲಕ, ಗ್ರಾಮೀಣ ಸಮುದಾಯಗಳಿಗೆ ಸಂಪರ್ಕವನ್ನು…
Author: UllalaVani
ಉಳ್ಳಾಲ: ಸೋಮೇಶ್ವರ ಪರಿಸರದಲ್ಲಿ ಶ್ರೀಕೃಷ್ಣ ಆರಾಧನೆ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಕುಂಪಳದಲ್ಲಿ ಈ ಉತ್ಸವದ ಆರಂಭದ ಸಂದರ್ಭದಲ್ಲಿಯೂ ಸೋಮೇಶ್ವರ ಕ್ಷೇತ್ರದ ತೀರ್ಥವನ್ನು ಪಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು. ಅವರು ಸೋಮೇಶ್ವರದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ ಆಶ್ರಯದಲ್ಲಿ ಸೆ. 4 ರಂದು ನಡೆಯಲಿರುವ ನಾಲ್ಕನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ ಮುದ್ದುಕೃಷ್ಣ ವೇಷ ಸ್ಪರ್ಧೆ ಹಾಗೂ ವಿವಿಧ ಮನೋರಂಜನಾ ಸ್ಪರ್ಧೆಗಳ ಆಮಂತ್ರಣ ಪತ್ರಿಕೆಯನ್ನು ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ವಠಾರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸುವುದು ಸುಲಭದ ಮಾತಲ್ಲ. ಎಲ್ಲರನ್ನು ಒಗ್ಗೂಡಿಸಿ, ಧಾರ್ಮಿಕ ಕ್ಷೇತ್ರವನ್ನು ಮುನ್ನಡೆಸುವುದು ದೊಡ್ಡ ಜವಾಬ್ದಾರಿಯ ಕೆಲಸವಾಗಿದೆ. ಸಂಘಟನೆಯ ಶಕ್ತಿ, ಶಿಸ್ತು ಮತ್ತು ಸಮರ್ಪಣೆಯಿಂದ ಮಾತ್ರ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ.ಸೋಮೇಶ್ವರದಲ್ಲಿ ನಡೆಯುತ್ತಿರುವ ಶ್ರೀಕೃಷ್ಣ ಆರಾಧನೆ ವಿಜೃಂಭಣೆಯಿಂದ, ಭಕ್ತಿಭಾವದಿಂದ ಹಾಗೂ ಶಿಸ್ತುಬದ್ಧವಾಗಿ ನೆರವೇರಬೇಕು. ಈ ಉತ್ಸವವು ಸಮಾಜದಲ್ಲಿ ಸೌಹಾರ್ದತೆ, ಧಾರ್ಮಿಕ ಮೌಲ್ಯಗಳು ಮತ್ತು…
ಬಂಟ್ವಾಳ: ಬಂಟ್ವಾಳ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ವೇಗವಾಗಿ ಸಂಚರಿಸುತ್ತಿದ್ದ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿಯ ತೀವ್ರತೆಗೆ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು. ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಬೈಕ್ ಸವಾರನ ಗುರುತು ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ.
ಕೊಣಾಜೆ: ಯಾವುದೇ ಸಂಘಟನೆಯ ಅಧ್ಯಕ್ಷ ಸ್ಥಾನವು ಮುಳ್ಳಿನ ಮೇಲಿನ ನಡಿಗೆಯಂತಿದ್ದು, ಎಲ್ಲರ ಸಹಕಾರದೊಂದಿಗೆ ಸಂಘಟನೆಯನ್ನು ಮುನ್ನಡೆಸಿದಾಗ ಮಾತ್ರ ಯಶಸ್ವಿ ನಾಯಕತ್ವ ಸಾಧ್ಯವಾಗುತ್ತದೆ. ಸಂಘಟನೆಗೆ ಸಲ್ಲಿಸಿದ ಸೇವೆಗೆ ಪ್ರತಿಫಲ ನಿರೀಕ್ಷಿಸದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಯುವವಾಹಿನಿ ಗ್ರಾಮಚಾವಡಿ-ಕೊಣಾಜೆ ಘಟಕದ ಅಧ್ಯಕ್ಷ ಬಾಬು ಬಂಗೇರ ಹೇಳಿದರು. ಅವರು ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಗ್ರಾಮಚಾವಡಿ-ಕೊಣಾಜೆ ಘಟಕದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವವಾಹಿನಿಯ 35ಕ್ಕೂ ಅಧಿಕ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಘಟನೆಗೆ ಸ್ವಂತ ಕಟ್ಟಡ ನಿರ್ಮಾಣವಾಗಬೇಕಿದೆ. ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಕಾರ್ಯಗಳಿಗೆ ಸಂಘಟನೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿಯೋಜಿತ ಅಧ್ಯಕ್ಷ ಮುರಳಿ ಕೊಣಾಜೆ…
ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ನಡೆಯುವ 29 ನೇ ವರ್ಷದ ಕುಂಪಲಾಷ್ಟಮಿ ಉತ್ಸವಕ್ಕೆ ವಾಸುಕಿ ಫ್ರೆಂಡ್ಸ್ (ರಿ) ಚಿತ್ರಾಂಜಲಿ ನಗರ ಇದರ ದೃಶ್ಯರೂಪಕದ ಆಮಂತ್ರಣ ಪತ್ರಿಕೆಯನ್ನು ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧಕ್ಷ್ಯರಾದ ಸತೀಶ್ ಕುಂಪಲ ಇವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ವಾಸುಕೀ ಫ್ರೆಂಡ್ಸ್ ಎಂಬ ಸಂಸ್ಥೆ ಯು ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ ವಾಸುಕೀ ನಿರೆಲ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ , ಬಡವರ ಪಾಲಿಗೆ, ಅಶಕ್ತ ಕುಟುಂಬಗಳಿಗೆ ಆಶಾಕಿರಣವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ.. ಕಾರ್ಯಕ್ರಮ ನಿರೂಪಣೆಯನ್ನು ಪ್ರವೀಣ್ ಎಸ್ ಕುಂಪಲ , ವಾಸುಕೀ ಫ್ರೆಂಡ್ಸ್ ತಂಡದ ಅಧ್ಯಕ್ಷರಾದ ಕಿರಣ್, ಉಪಾಧ್ಯಕ್ಷರಾದ ಅನಿಲ್ ಮತ್ತು ವಾಸುಕೀ ತಂಡದ ಸದ್ಯಸರು ಹಾಗೂ ಸ್ಥಳೀಯ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಈ ಒಂದು ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನೆರವೇರಿತು.
ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಮಂದಿ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದು, ಇವರ ಬಂಧನಕ್ಕೆ ಸಾರ್ವಜನಿಕರ ಸಹಕಾರ ಕೋರಲಾಗಿದೆ. ಪಣಂಬೂರು ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 84/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 310(2), 311, 324(2), 137(2), 126(2) ಹಾಗೂ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KPDLP Act) ಕಲಂ 2(b) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಲ್ಲಿ ಶಿಜಿನ್ ಗಂಗಾಧರನ್, ಶ್ರೀರಾಗ್ ಪಾಲೊಟ್ಟುಕಾವಿಲ್, ಉಬೈದ್ ಎಂ.ಎನ್., ಫಿರೋಜ್ ಮೊಯ್ದು ಅಬ್ಬಾಸ್, ಅತುಲ್, ಮಿಥುಲ್ ಲಾಲ್ ವಿ., ಝಿಯಾದ್, ಅಜೀರ್ ತರಾಯಿಲ್ ಪೀಡಿಕೆಯಿಲ್, ಜಮೀರ್ ಅಲೀರಾ ಅಬ್ದುಲ್ಲಾ, ವೈಶಾಕ್, ಅಸೀರ್, ಪ್ರಣವ್ ಹಾಗೂ ವಿಜಿಲ್ ಸೇರಿದ್ದಾರೆ. ಆರೋಪಿಗಳು ಕರ್ನಾಟಕ ಹಾಗೂ ಕೇರಳ ರಾಜ್ಯಗಳ ವಿವಿಧ ಪ್ರದೇಶಗಳ ನಿವಾಸಿಗಳಾಗಿದ್ದಾರೆ. ಈ ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಪಣಂಬೂರು…
ಬೆಂಗಳೂರುನಲ್ಲಿ ಬೆಳಕಿಗೆ ಬಂದಿರುವ ಒಂದು ಪ್ರಕರಣವು ಕೇವಲ ಒಂದು ಕುಟುಂಬದ ವಿವಾದವಲ್ಲ; ನಮ್ಮ ನ್ಯಾಯ ವ್ಯವಸ್ಥೆ ಮತ್ತು ಕಾನೂನುಗಳ ಬಳಕೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಗಂಡ ತನಗೆ ಫಿಂಗರ್ ಚಿಪ್ಸ್, ಮಾಂಸದೂಟ ಹಾಗೂ ಇಷ್ಟದ ಆಹಾರ ಸೇವಿಸಲು ಅವಕಾಶ ನೀಡಲಿಲ್ಲ ಎಂಬ ಆರೋಪದ ಆಧಾರದ ಮೇಲೆ ಪತ್ನಿಯೊಬ್ಬರು 498ಎ ಪ್ರಕರಣ ದಾಖಲಿಸಿದ್ದು, ಈ ವಿಚಾರವನ್ನು ಪರಿಶೀಲಿಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಕಾನೂನಿನ ದುರುಪಯೋಗದ ಬಗ್ಗೆ ಆತಂಕ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ. ಮಹಿಳೆಯರನ್ನು ವರದಕ್ಷಿಣೆ ಕಿರುಕುಳ, ದೈಹಿಕ ಮತ್ತು ಮಾನಸಿಕ ಹಿಂಸೆಗಳಿಂದ ರಕ್ಷಿಸಲು ರೂಪುಗೊಂಡಿರುವ 498ಎ ಕಾನೂನು ಅತ್ಯಂತ ಮಹತ್ವದ್ದಾಗಿದೆ. ಈ ಕಾನೂನಿನ ಅಗತ್ಯತೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ, ಯಾವುದೇ ಕಾನೂನಿನ ವಿಶ್ವಾಸಾರ್ಹತೆ ಅದರ ನ್ಯಾಯಸಮ್ಮತ ಬಳಕೆಯಲ್ಲಿದೆ. ಕಾನೂನನ್ನು ನಿಜವಾದ ಅಪರಾಧಿಗಳನ್ನು ಶಿಕ್ಷಿಸಲು ಬಳಸಬೇಕೇ ಹೊರತು, ವೈಯಕ್ತಿಕ ಅಸಮಾಧಾನ ಅಥವಾ ಪ್ರತೀಕಾರದ ಸಾಧನವನ್ನಾಗಿ ಬಳಸಬಾರದು. ಸುಳ್ಳು ಅಥವಾ ಅತಿರಂಜಿತ ಆರೋಪಗಳು ಕೇವಲ ಒಬ್ಬ ವ್ಯಕ್ತಿಯ…
ಉಳ್ಳಾಲ: ಅಸೈಗೋಳಿ ಮೈದಾನ ಶೀಘ್ರ ಮಿನಿ ಸ್ಟೇಡಿಯಂ ಆಗಿ ರೂಪಿಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಮೈಗೊಳ್ಳಲಾಗುವುದು, ದೇಶ ಕಟ್ಟಲು ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಕೊಣಾಜೆ ವಿವಿದೋದ್ಧೇಶ ಸಹಕಾರಿ ಸಂಘದಿಂದ ಗೌರವಾಭಿನಂದನೆ ಸ್ವೀಕರಿಸಿ ಮಾತನಾಡಿದರು.ಕೊಣಾಜೆ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪುಲ್ಲು ಅಧ್ಯಕ್ಷತೆ ವಹಿಸಿ, ‘ಮೂರ್ನಾಲ್ಕು ಗ್ರಾಮಗಳಿಗೆ ಆಟಕ್ಕಾಗಿ ಅಸೈಗೋಳಿ ಮೈದಾನ ಮಾತ್ರ ಇದ್ದು ಇದನ್ನು ಸುಸಜ್ಜಿತ ಕ್ರೀಡಾಂಗಣವನ್ನಾಗಿಸುವ ಅವಶ್ಯಕತೆ ಇದೆ. 50 ವರ್ಷಗಳ ಹಿಂದೆ ಸರ್ವಧರ್ಮೀಯರು ಸೇರಿ ಸ್ಥಾಪಿಸಿದ ಸಹಕಾರು ಸಂಘದ ಅಭಿವೃದ್ಧಿಗೂ ಸಚಿವರ ಸಹಕಾರ ಬೇಕಿದೆ ಎಂದರುಅಭಿನಂದನಾ ಮಾತುಗಳನ್ನಾಡಿದ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ಅನುದಾನ ಹಂಚಿಕೆ, ಇತರ ಕೆಲಸಗಳ ವಿಚಾರದಲ್ಲಿ ಪಕ್ಷ, ಧರ್ಮ. ಭೇದ ನೋಡದೆ ಕೆಲಸ ಮಾಡುವ ಮೂಲಕ ರಾಜ್ಯದ ಜನಮನ ಗೆದ್ದ ಅಪರೂಪದ ರಾಜಕಾರಣಿ ಯು.ಟಿ.ಖಾದರ್. ಯಾರ ಬಗ್ಗೆ ಅಭಿನಂದನಾ ಭಾಷಣ ಮಾಡುತ್ತಾರೋ ಅವರ ಗೌರವವೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.ಮುಡಿಪು…
ಉಳ್ಳಾಲ, ಐಕ್ಯತೆ ನಮ್ಮ ಸಮಾಜದಲ್ಲಿ ಇರಬೇಕು.ಐಕ್ಯತೆ ಇಲ್ಲದೇ ಅಭಿವೃದ್ಧಿ ಸಾಧ್ಯವಿಲ್ಲ. ಎಲ್ಲರೂ ನೋಡುವುದು ಐಕ್ಯತೆಯನ್ನು ಆಗಿದೆ ಎಂದು ಸಯ್ಯಿದ್ ಅತ್ತಾವುಲ್ಲ ತಂಙಳ್ ಹೇಳಿದರು. ಅವರು ಉಳ್ಳಾಲ ದರ್ಗಾ ಸಮಿತಿ ವತಿಯಿಂದ ಕೇಂದ್ರ ಜುಮಾ ಮಸೀದಿ ಸಭಾಂಗಣದಲ್ಲಿ ಭಾನುವಾರ ನಡೆದ ಖುರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಹಾಗೂ ಮರ್ಹೂಮ್ ಯು.ಕೆ. ಅಬ್ಬಾಸ್ ಹಾಜಿ, ಉಳ್ಳಾಲ ರವರ ಎರಡನೇ ವಾರ್ಷಿಕ ಅನುಸ್ಮರಣೆ, ಪ್ರಾರ್ಥನಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಬೆಳವಣಿಗೆ ನಮ್ಮ ಗುರಿ ಆಗಿದ್ದು, ಅದನ್ನು ಅಭಿವೃದ್ಧಿ ಪಡಿಸಬೇಕುಎಂದು ಕರೆ ನೀಡಿದರುಕಾವಳಕಟ್ಟೆ ಹಝ್ರತ್ ಫಾಝಿಲ್ ರಝ್ವಿ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಫಝಲ್ ಕೋಯಮ್ಮ ತಂಙಳ್ ದೊಡ್ಡ ಕ್ರಾಂತಿ ಮಾಡಿದ್ದರು. ಅವರನ್ನು ಸ್ಮರಿಸುವುದು ನಮ್ಮ ಜವಾಬ್ದಾರಿ ಎಂದರು. ಅಶ್ರಫ್ ತಂಙಳ್ ಆದೂರು ದುಆ ನೆರವೇರಿಸಿದರು. ಡಾ.ಅಬ್ದುಲ್ ಹಕೀಮ್ ಅಝ್ ಹರಿ, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ,ಅರೆಬಿಕ್ ಕಾಲೇಜು ಪ್ರಾಂಶುಪಾಲ ಅಹ್ಮದ್ ಕುಟ್ಟಿ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಿದರು. ದರ್ಗಾ ಅಧ್ಯಕ್ಷ…
ಕುತ್ತಾರು : ವನಮಹೋತ್ಸವವು ಕೇವಲ ಗಿಡ ನೆಡುವ ಕಾರ್ಯಕ್ರಮವಲ್ಲ, ಅದು ಪ್ರಕೃತಿಯನ್ನು ಉಳಿಸುವ ಮತ್ತು ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ನೀಡುವ ಮಹತ್ವದ ಸಂಕಲ್ಪವಾಗಿದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದನ್ನು ಮರವಾಗಿ ಬೆಳೆಸಿದರೆ, ಪರಿಸರ ಸಂರಕ್ಷಣೆಗೆ ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ ಎಂದು ಎಸ್ ಇ ಝೆಡ್ ಇಂಜಿನಿಯರ್ ಜೈಶಂಕರ್ ಅಭಿಪ್ರಾಯಪಟ್ಟರು. ಅವರು ಕುತ್ತಾರಿನ ಶ್ರೀ ಪಂಜಂದಾಯ, ಬಂಟ, ವೈದ್ಯನಾಥ ದೈವಸ್ಥಾನ ಮತ್ತು ಕೊರಗತನಿಯ ದೈವದ ಆದಿಸ್ಥಳ ಮತ್ತು ಪಂಡಿತ್ ಹೌಸ್ ದಿವ್ಯಜ್ಯೋತಿ ಕ್ರಿಕೆಟರ್ಸ್ ಆಶ್ರಯದಲ್ಲಿ ಕುತ್ತಾರು ಮುನ್ನೂರಿನ ಭಂಡಾರಬೈಲಿನಲ್ಲಿ ಶ್ರೀ ಪಂಜಂದಾಯ ಬಂಟ ವೈದ್ಯನಾಥ ದೈವಸ್ಥಾನದ ವಠಾರದಲ್ಲಿ ವನಮಹೋತ್ಸವ ನೆರವೇರಿಸಿ ಮಾತನಾಡಿದರು. ವಿ.ಹಿಂ.ಪ ಮುಖಂಡ ಪ್ರವೀಣ್ ಕುತ್ತಾರ್ ಮಾತನಾಡಿ, ದಿವ್ಯಜ್ಯೋತಿ ಕ್ರಿಕೆಟರ್ಸ್ ಕೇವಲ ಕ್ರೀಡಾ ಚಟುವಟಿಕೆಗಳಿಗೆ ಸೀಮಿತವಾಗದೇ, ಸಮಾಜಮುಖಿ ಕಾರ್ಯಗಳ ಮೂಲಕ ಮಾನವೀಯ ಸೇವೆಯ ಮಾದರಿಯಾಗಿದೆ. ಸಂಘವು ಹಲವು ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸುವುದರೊಂದಿಗೆ, ಸಂಕಷ್ಟದಲ್ಲಿರುವ ಹಲವಾರು ರೋಗಿಗಳಿಗೆ ಆರೋಗ್ಯ ಸಹಾಯಧನ ನೀಡಿ…

