Author: UllalaVani

Kannada News From Coastal Karnataka

ಆಸ್ಟ್ರೇಲಿಯಾ, ಜು. 09: ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಮೂರು ದಿನಗಳ ಅಧಿಕೃತ ಭೇಟಿಗಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ಗೆ ಆಗಮಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅಲ್ಲಿನ ಭಾರತೀಯ ಸಮುದಾಯವು ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭವ್ಯ ಸ್ವಾಗತದ ಮೂಲಕ ಆತ್ಮೀಯ ಬರಮಾಡಿಕೊಳ್ಳುವಿಕೆ ನೀಡಿತು. ಮೆಲ್ಬೋರ್ನ್‌ನಲ್ಲಿ ನೆರೆದಿದ್ದ ನೂರಾರು ಅನಿವಾಸಿ ಭಾರತೀಯರು ಭಾರತದ ತ್ರಿವರ್ಣ ಧ್ವಜಗಳನ್ನು ಹಾರಿಸಿ, ಸಂಭ್ರಮದಿಂದ ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ‘ಆಸ್ಟ್ರೇಲಿಯನ್ ಇಂಡಿಯನ್ ಆರ್ಕೆಸ್ಟ್ರಾ’ ತಂಡವು ದೇಶಭಕ್ತಿ ಗೀತೆ ‘ವಂದೇ ಮಾತರಂ’ಅನ್ನು ಮನಮೋಹಕವಾಗಿ ಪ್ರಸ್ತುತಪಡಿಸಿದ್ದು, ಅಲ್ಲಿದ್ದವರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ಮೂಲದ ಜನರು ‘ಭಾರತ್ ಮಾತಾ ಕೀ ಜೈ’, ‘ಮೋದಿ, ಮೋದಿ’ಎಂಬ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಉತ್ಸಾಹ ವ್ಯಕ್ತಪಡಿಸಿದರು. ಸಾಂಸ್ಕೃತಿಕ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಸ್ವಾಗತ ಸಮಾರಂಭಕ್ಕೆ ಮತ್ತಷ್ಟು ಮೆರುಗು ನೀಡಿದವು. ಪ್ರಧಾನಿ ಮೋದಿಯವರ ಈ ಮೂರು ದಿನಗಳ ಆಸ್ಟ್ರೇಲಿಯಾ ಭೇಟಿಯ ವೇಳೆ…

Read More

ಮುಂಬೈ: ಬಾಲಿವುಡ್‌ನ ಹಿರಿಯ ನಿರ್ದೇಶಕ, ಆಲಿಯಾ ಭಟ್ ತಂದೆ ಮಹೇಶ್ ಭಟ್ ಅವರು ಚಿತ್ರ ನಿರ್ದೇಶನಕ್ಕೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ತಾವು ಇನ್ನು ಮುಂದೆ ಎಂದಿಗೂ ನಿರ್ದೇಶಕನ ಕ್ಯಾಪ್ ತೊಡೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅರ್ಥ್’, ‘ಸಾರಂಶ್’, ‘ನಾಮ್’, ‘ದಿಲ್ ಹೈ ಕಿ ಮಾಂತಾ ನಹೀ’ ಮತ್ತು ‘ಸಡಕ್’ ನಂತಹ ಅದ್ಭುತ ಸಿನಿಮಾಗಳನ್ನು ನೀಡಿದ ಅವರು ಈಗ ಚಿತ್ರರಂಗದಿಂದ ದೂರ ಸರಿದಿದ್ದಾರೆ. ಪ್ರಸ್ತುತ ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದರಲ್ಲಿ ತಮಗೆ ಹೆಚ್ಚಿನ ಸಂತೋಷ ಸಿಗುತ್ತಿದೆ ಎಂದು ಅವರು ಹೇಳಿದ್ದಾರೆ.ಇಂದಿನ ಸಿನಿಮಾ ತಯಾರಿಕೆ ಈಗ ಸಂಪೂರ್ಣವಾಗಿ ಬದಲಾಗಿದೆ ಎಂದು ಮಹೇಶ್ ಭಟ್ ಅಭಿಪ್ರಾಯಪಟ್ಟಿದ್ದಾರೆ. ‘ಇಂದಿನ ಮಾರುಕಟ್ಟೆಯ ಬೇಡಿಕೆಗಳಿಗೆ ತಕ್ಕಂತೆ ಸಿನಿಮಾಗಳು ಸಿದ್ಧವಾಗುತ್ತಿವೆ. ಚಿತ್ರೀಕರಣ ಆರಂಭವಾಗುವ ಮೊದಲೇ ಕಥೆ ಮತ್ತು ಕಂಟೆಂಟ್ ಹೀಗೆಯೇ ಇರಬೇಕು ಎಂದು ಮೊದಲೇ ನಿರ್ಧರಿಸಲಾಗುತ್ತದೆ. ಬರವಣಿಗೆ ಶುರು ಮಾಡುವ ಮುನ್ನವೇ ಯಾವ ರೀತಿಯ ಸಿನಿಮಾ ಮಾಡಬೇಕು ಎಂಬುದು ಫಿಕ್ಸ್ ಆಗಿರುತ್ತದೆ. ಇದರಿಂದಾಗಿ ನಿರ್ದೇಶಕರಿಗೆ ತಮ್ಮ ಸ್ವಂತ ಕಲ್ಪನೆ ಅಥವಾ ಸ್ವಾತಂತ್ರ್ಯವನ್ನು ಬಳಸಲು…

Read More

ಬೆಂಗಳೂರು, ಜು. 09 : ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ತಮ್ಮದೇ ಆದ ಛಾಪು ಮೂಡಿಸಿರುವ ರಿಷಬ್ ಶೆಟ್ಟಿ, ಇದೀಗ ಸಾಮಾಜಿಕ ಸೇವೆಯ ಮೂಲಕವೂ ಜನಮನ ಗೆಲ್ಲುತ್ತಿದ್ದಾರೆ. ‘ಕಾಂತಾರ’ ಸಿನಿಮಾದ ಮೂಲಕ ಕರಾವಳಿಯ ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದ ರಿಷಬ್, ತಮ್ಮ ‘ರಿಷಬ್ ಶೆಟ್ಟಿ ಫೌಂಡೇಷನ್’ ಮೂಲಕ ಶಿಕ್ಷಣ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೌಂಡೇಷನ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಆರ್ಥಿಕ ಸಂಕಷ್ಟದಲ್ಲಿದ್ದ ಹಲವು ವಿದ್ಯಾರ್ಥಿಗಳ ಬದುಕಿಗೆ ನೆರವಾದ ನೈಜ ಕಥೆಗಳು ಗಮನ ಸೆಳೆಯುತ್ತಿವೆ. ಕಷ್ಟದ ಜೀವನವನ್ನು ಅನುಭವಿಸಿ ಬೆಳೆದಿರುವ ರಿಷಬ್ ಶೆಟ್ಟಿ, ಅದೇ ಅನುಭವವನ್ನು ಸಮಾಜ ಸೇವೆಯಾಗಿ ರೂಪಿಸಿರುವುದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ಮೂಲಕ ಸರ್ಕಾರಿ ಶಾಲೆಗಳ ಮಹತ್ವ ಸಾರಿದ್ದ ರಿಷಬ್ ಶೆಟ್ಟಿ, ನೈಜ ಬದುಕಿನಲ್ಲೂ ಅದನ್ನೇ ಕಾರ್ಯರೂಪಕ್ಕೆ ತಂದಿದ್ದಾರೆ. ತಾವು ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಶಾಲೆಯನ್ನು ದತ್ತು ಪಡೆದು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ…

Read More

ಗದಗ : ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಬುದ್ಧಿಮಾಂದ್ಯ ಯುವತಿಯ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ಆರು ತಿಂಗಳ ಗರ್ಭಿಣಿಯಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಪ್ರಕರಣವು ರೋಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮಾಹಿತಿಯ ಪ್ರಕಾರ, ಚಾಕೊಲೇಟ್ ಹಾಗೂ ತಿಂಡಿ ಆಸೆ ತೋರಿಸಿ ಯುವತಿಯನ್ನು ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಲಾಗಿದೆ ಎನ್ನಲಾಗಿದೆ. ಯುವತಿಯ ದೇಹದಲ್ಲಿ ಬದಲಾವಣೆ ಕಂಡುಬಂದ ಬಳಿಕ ಗ್ರಾಮಸ್ಥರಿಗೆ ವಿಷಯ ತಿಳಿದು, ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗಿದೆ. ನಂತರ ವೈದ್ಯಕೀಯ ಪರೀಕ್ಷೆಯಲ್ಲಿ ಯುವತಿ ಆರು ತಿಂಗಳ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಅದೇ ಗ್ರಾಮದ ದುರ್ಗಪ್ಪ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಇನ್ನೂ ಹಲವರ ಪಾತ್ರವಿರಬಹುದೆಂಬ ಶಂಕೆಯನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದಲ್ಲದೆ, ಅತ್ಯಾಚಾರದ ವಿಡಿಯೋ ಗ್ರಾಮದಲ್ಲಿ ಕೆಲವರ ಮೊಬೈಲ್‌ಗಳಲ್ಲಿ ವೈರಲ್ ಆಗಿತ್ತು ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣ ಬಹಿರಂಗವಾದ ಬಳಿಕ…

Read More

ಮಂಗಳೂರು, ಜು. 09 : ನಗರದ ಪಣಂಬೂರು ಅಂತಾರಾಷ್ಟ್ರೀಯ ಬೀಚ್‌ನಲ್ಲಿ ಕಳೆದ ಕೆಲವು ದಿನಗಳಿಂದ ಬೀಸುತ್ತಿರುವ ಭಾರೀ ಗಾಳಿ ಹಾಗೂ ಹೆಚ್ಚಿದ ಕಡಲಬ್ಬರದ ಪರಿಣಾಮ ಅಲ್ಪ ಪ್ರಮಾಣದ ಕಡಲು ಕೊರೆತ ಕಾಣಿಸಿಕೊಂಡಿದ್ದು, ಬೀಚ್‌ನ ಕೆಲವು ಭಾಗಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೀಚ್‌ನ ಪ್ರಮುಖ ತಡೆಗೋಡೆ, ಕಚೇರಿ ಹಾಗೂ ಟಿಕೆಟ್ ಕೌಂಟರ್ ಸಮೀಪದ ಪ್ರದೇಶದಲ್ಲಿ ಕಡಲು ಕೊರೆತ ಉಂಟಾಗಿದ್ದು, ಪರಿಣಾಮವಾಗಿ ಎರಡು ಮರಗಳು ಧರೆಗುರುಳಿವೆ. ಕೋಸ್ಟ್ ಗಾರ್ಡ್ ಕಚೇರಿ ಸಮೀಪ ಮತ್ತಷ್ಟು ಕೊರೆತವಾಗದಂತೆ ತಾತ್ಕಾಲಿಕ ಮುನ್ನೆಚ್ಚರಿಕೆ ಕ್ರಮವಾಗಿ ಬೃಹತ್ ಕಲ್ಲುಗಳನ್ನು ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತುಸು ಕಡಿಮೆಯಿದ್ದರೂ, ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ಕಡಲಬ್ಬರ ತೀವ್ರಗೊಂಡಿದೆ. ಇದೇ ಕಾರಣಕ್ಕೆ ಬೀಚ್‌ನ ಕೆಲವು ಭಾಗಗಳಲ್ಲಿ ಮರಳು ಸವೆತ ಹೆಚ್ಚಾಗಿ ಕಡಲು ಕೊರೆತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಣಂಬೂರು ಬೀಚ್‌ನ ಬಹುತೇಕ ಭಾಗದಲ್ಲಿ ಕಲ್ಲಿನ ತಡೆಗೋಡೆ ನಿರ್ಮಿಸಲಾಗಿದ್ದರೂ, ತಡೆಗೋಡೆ ಇಲ್ಲದ ಪ್ರದೇಶಗಳಲ್ಲಿ ಕಡಲಬ್ಬರದ ಹೊಡೆತಕ್ಕೆ ಮರಳು ಸವೆದು ಬೀಚ್‌ನ ಸ್ವರೂಪದಲ್ಲೇ ಬದಲಾವಣೆ ಕಾಣಿಸುತ್ತಿದೆ. ಮಳೆಗಾಲದ…

Read More

ಮಂಗಳೂರು ಮಂಗಳೂರು ಖಾಝಿಯಾಗಿ ಕೇರಳದ ಧಾರ್ಮಿಕ ವಿದ್ವಾಂಸ ಪಾಣಕ್ಕಾಡ್ ಸಯ್ಯದ್ ನಾಸ‌ರ್ ಅಲಿ ಶಿಹಾಬ್ ತಂಜಳ್‌ ಅವರ ಹೆಸರು ಕೇಳಿ ಬಂದಿದ್ದು, ಜು.11ರಂದು ಸಂಜೆ ಸಭೆಯ ಬಳಿಕ ಅಧಿ ಕೃತ ಘೋಷಣೆ ಹಾಗೂ ಪದಗ್ರಹಣದ ಸಿದ್ಧತೆ ನಡೆಯಲಿದೆ. ಇತ್ತೀಚೆಗೆ ನಿಧನರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಉತ್ತರಾಧಿಕಾರಿಯಾಗಿ ಪಾಣಕ್ಕಾಡ್ ಸಯ್ಯದ್ ನಾಸರ್ ಅಲಿ ಅವರ ಹೆಸರನ್ನು ಝೀನತ್ ಬಕ್ಷ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಅಂತಿಮಗೊಳಿಸಿದೆ. ಪಾಣಕ್ಕಾಡ್ ಸಯ್ಯದ್ ನಾಸಿರ್ ಅಲಿ ಶಿಹಾಬ್ ತಂಜಳ್ ಕೇರಳದ ಅತ್ಯಂತ ಪ್ರಭಾವಿ ಮತ್ತು ಗೌರವಾನ್ವಿತ ಇಸ್ಲಾಮಿ ವಿದ್ವಾಂಸರಾಗಿದ್ದು, ಧಾರ್ಮಿಕ ಮತ್ತು ರಾಜಕೀಯ ನಾಯಕರಿರುವ ಪಾಣಕ್ಕಾಡ್ ಕುಟುಂಬದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಕಲ್ಲಿಕೋಟೆ ಮುಖ್ಯ ಖಾಝಿಯಾಗಿ ಒಂದೂವರೆ ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಣಕ್ಕಾಡ್ ತಂಬಳ್ ಕುಟುಂಬವು ಕೇರಳದ ಮುಸ್ಲಿಂ ಸಮುದಾಯದಲ್ಲಿ ಅತ್ಯುನ್ನತ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕತ್ವ ಹೊಂದಿದೆ. ಈ ಕುಟುಂಬದವರು ಪ್ರವಾದಿ ಮುಹಮ್ಮದ್ ಅವರ ವಂಶಸ್ಥರು ಎನ್ನಲಾಗಿದ್ದು, 18ನೇ ಶತಮಾನದಲ್ಲಿ ಯೆಮನ್‌ನಿಂದ ಕೇರಳಕ್ಕೆ…

Read More

ಮುಂಬೈ, ಜು. 9: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ರಾಯಗಡ ಜಿಲ್ಲೆಯ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್ಪಿಜಿ ಬಾಟಲಿಂಗ್ ಘಟಕದಲ್ಲಿ ಅಪರೂಪದ ಘಟನೆ ಸಂಭವಿಸಿದೆ. ಪ್ರವಾಹದ ನೀರು ಘಟಕಕ್ಕೆ ನುಗ್ಗಿದ ಪರಿಣಾಮ ಸುಮಾರು 3,000 ಎಲ್ಪಿಜಿ ಸಿಲಿಂಡರ್‌ಗಳು ಪಾತಾಳಗಂಗಾ ನದಿಗೆ ಕೊಚ್ಚಿಹೋಗಿವೆ. ಪನ್ವೆಲ್ ತಾಲೂಕಿನ ಚವಾಣೆ ಗ್ರಾಮದ ಹೆಚ್ಚುವರಿ ಎಂಐಡಿಸಿ ಪ್ರದೇಶದಲ್ಲಿರುವ ಎಚ್‌ಪಿಸಿಎಲ್ ಪಾತಾಳಗಂಗಾ ಎಲ್ಪಿಜಿ ಬಾಟಲಿಂಗ್ ಘಟಕದ ರಕ್ಷಣಾ ಗೋಡೆ ಕುಸಿದ ಪರಿಣಾಮ ಪ್ರವಾಹದ ನೀರು ಒಳನುಗ್ಗಿ, ಭರ್ತಿ ಹಾಗೂ ಖಾಲಿ ಸಿಲಿಂಡರ್‌ಗಳನ್ನು ಹೊತ್ತೊಯ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನದಿಯಲ್ಲಿ ತೇಲುತ್ತಿರುವ ಸಿಲಿಂಡರ್‌ಗಳ ವಿಡಿಯೊಗಳು ವ್ಯಾಪಕವಾಗಿ ವೈರಲ್ ಆಗಿವೆ. ರಾಯಗಡ ಜಿಲ್ಲಾಧಿಕಾರಿ ಕಿಶನ್ ಜವಾಲೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ನದಿಯಲ್ಲಿ ತೇಲುತ್ತಿರುವ ಅಥವಾ ದಡಕ್ಕೆ ಬಂದಿರುವ ಯಾವುದೇ ಸಿಲಿಂಡರ್‌ಗಳನ್ನು ಮುಟ್ಟಬಾರದು, ಮನೆಗೆ ತೆಗೆದುಕೊಂಡು ಹೋಗಬಾರದು ಹಾಗೂ ಬಳಸಲು ಪ್ರಯತ್ನಿಸಬಾರದು ಎಂದು ಮನವಿ ಮಾಡಿದ್ದಾರೆ. ಕೆಲವು ಸಿಲಿಂಡರ್‌ಗಳಲ್ಲಿ ಅನಿಲ ಇರುವ ಸಾಧ್ಯತೆ ಇರುವುದರಿಂದ ಅವು ಅಪಾಯಕಾರಿಯಾಗಿರಬಹುದು ಎಂದು ಅವರು ತಿಳಿಸಿದ್ದಾರೆ. ಸಿಲಿಂಡರ್‌ಗಳು…

Read More

ಚೆನ್ನೈ : ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ K. ಅಣ್ಣಾಮಲೈ ಘೋಷಿಸಿರುವ ಹೊಸ ಜನಚಳುವಳಿಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. “ಇದು ನಮ್ಮ ಇಯಕ್ಕಂ” (This is Our Movement) ಎಂಬ ಹೆಸರಿನ ಚಳುವಳಿಯನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ 14 ಲಕ್ಷಕ್ಕೂ ಹೆಚ್ಚು ಜನರು ಆನ್‌ಲೈನ್ ಮೂಲಕ ಸೈನ್‌ಅಪ್ ಮಾಡಿದ್ದಾರೆ ಎಂದು ವರದಿಯಾಗಿದೆ. ಹೊಸ ರಾಜಕೀಯ ಮತ್ತು ಸಾಮಾಜಿಕ ಪರ್ಯಾಯವನ್ನು ರೂಪಿಸುವ ಉದ್ದೇಶದಿಂದ ಚಳುವಳಿಯನ್ನು ಆರಂಭಿಸಿರುವ ಅಣ್ಣಾಮಲೈ, ಶಿಕ್ಷಣ, ಆರೋಗ್ಯ, ಸುಸ್ಥಿರ ಅಭಿವೃದ್ಧಿ ಹಾಗೂ ಯುವ ನಾಯಕತ್ವ ಎಂಬ ನಾಲ್ಕು ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ತಮ್ಮೊಂದಿಗೆ ವೃತ್ತಿಪರರು, ತಂತ್ರಜ್ಞಾನ ಕ್ಷೇತ್ರದ ತಜ್ಞರು ಹಾಗೂ ಸಾಮಾನ್ಯ ನಾಗರಿಕರು ಕೈಜೋಡಿಸಬೇಕು ಎಂದು ಕರೆ ನೀಡಿರುವ ಅವರು, ಆಡಳಿತ ಮತ್ತು ನೀತಿ ನಿರ್ಧಾರಗಳಲ್ಲಿ ಜನರ ನೇರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಚಳವಳಿಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಅಣ್ಣಾಮಲೈ ಅವರ ಹೊಸ ಚಳುವಳಿಗೆ ಭಾರೀ ಸ್ಪಂದನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ತಮಿಳುನಾಡು ಬಿಜೆಪಿಯಲ್ಲಿ…

Read More

ಉಳ್ಳಾಲ: ಕೃಷ್ಣಾಪುರದ ತ್ವಯಿಬಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾದ ಅಧ್ಯಾಪಕರೊಬ್ಬರ ಮೇಲೆ ಅವರು ಊಟ ಮಾಡುತ್ತಿದ್ದ ವೇಳೆ ಮಸೀದಿಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ಖಂಡನೀಯವಾಗಿದ್ದು, ಇದು ಇಡೀ ಮುಸ್ಲಿಂ ಸಮುದಾಯದ ಮೇಲಿನ ದಾಳಿಯಂತೆಯೇ ಪರಿಗಣಿಸಬೇಕಾಗಿದೆ ಎಂದು ನುಸ್ರತುಲ್ ಅನಾಮ್ ಜಿಸಿಸಿ ಅಸೋಸಿಯೇಷನ್ ಬಾಳೆಪುಣಿ ಅಧ್ಯಕ್ಷ ಅಬ್ದುಲ್ ಅಝೀಝ್ ತೆಂಗಿನಡಿ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿಯೊಬ್ಬನಿಗೆ ಶಿಸ್ತು ಕ್ರಮವಾಗಿ ದಂಡ ವಿಧಿಸಿದ್ದನ್ನು ನೆಪವನ್ನಾಗಿ ಮಾಡಿಕೊಂಡು ಮಸೀದಿಗೆ ನುಗ್ಗಿ ಅಧ್ಯಾಪಕರ ಮೇಲೆ ಹಲ್ಲೆ ನಡೆಸಿರುವುದು ಅಕ್ಷಮ್ಯ ಹಾಗೂ ತೀವ್ರ ಖಂಡನೀಯ ಕೃತ್ಯವಾಗಿದೆ. ಧಾರ್ಮಿಕ ಶಿಕ್ಷಣ ನೀಡುವ ಅಧ್ಯಾಪಕರ ಮೇಲೆ ಈ ರೀತಿಯ ಹಲ್ಲೆ ನಡೆಸಿರುವುದು ಸಮಾಜದಲ್ಲಿ ಆತಂಕ ಮೂಡಿಸುವ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ. ಹಲ್ಲೆ ನಡೆಸಿದ ವ್ಯಕ್ತಿಯನ್ನು ಸಂಬಂಧಿಸಿದ ಜಮಾಅತ್ ಸಮಿತಿಯು ಕೂಡಲೇ ಜಮಾಅತ್‌ನಿಂದ ಬಹಿಷ್ಕರಿಸಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಪೊಲೀಸ್ ಇಲಾಖೆಯು ಯಾವುದೇ ಮುಲಾಜಿಲ್ಲದೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕಾನೂನು ಪ್ರಕಾರ…

Read More

ಕೃಷ್ಣಾಪುರದ ತ್ವಯಿಬಾ ಜುಮಾ ಮಸೀದಿಯಲ್ಲಿ ಅಧೀನದಲ್ಲಿ‌ ಕಾರ್ಯನಿರ್ವಹಿಸುತ್ತಿರುವ ಮದರಸದ ಅಧ್ಯಾಪಕರೋರ್ವರಿಗೆ ಅವರು ಊಟ ಮಾಡುತ್ತಿರುವ ಸಂದರ್ಭದಲ್ಲಿ ಮಸೀದಿಗೆ ನುಗ್ಗಿ ಹಲ್ಲೆಗೈದ ಘಟನೆಯು ಇಡೀ ಮುಸ್ಲಿಂ ಸಮುದಾಯದ ಮೇಲಿನ‌ ದಾಳಿಯಾಗಿದೆ. ವಿದ್ಯಾರ್ಥಿಯೊಬ್ಬನಿಗೆ ದಂಡಿಸಿದರೆಂಬ ಕಾರಣವನ್ನಿಟ್ಟು ನೇರವಾಗಿ ಅಧ್ಯಾಪಕರ ಮೇಲೆ ದಾಳಿ ನಡೆಸಿರುವುದು ಅಕ್ಷಮ್ಯ ಮತ್ತು ಖಂಡನೀಯ , ಜಮಾಅತ್ ಕಮಿಟಿ ಕೂಡಲೇ ಆ ವ್ಯಕ್ತಿಯನ್ನು ಜಮಾಅತ್ ನಿಂದ ಬಹಿಷ್ಕಸಬೇಕು ಮತ್ತು ಪೋಲೀಸ್ ಇಲಾಖೆ ಹಲ್ಲೆಗೈದಾತನನ ಮೇಲೆ ಯಾವುದೇ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಅಧ್ಯಕ್ಷರಾದ ಎಂ ಸಿರಾಜ್ ಅಡ್ಕರೆ ಆಗ್ರಹಿಸಿದರು.

Read More