ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್, ಸಂದೇಶ ರವಾನಿಸುತ್ತಿದ್ದ 30ಕ್ಕೂ ಅಧಿಕ ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ ಚಿತ್ರ ನಟಿ ರಮ್ಯಾ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಾಗಿದೆ. ನಟ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ಸಂದೇಶ ರವಾನೆ, ಕಾಮೆಂಟ್ ಮಾಡುತ್ತಿದ್ದವರ ವಿರುದ್ಧ ಜುಲೈ 28ರಂದು ಖುದ್ದು ರಮ್ಯಾ ಅವರೇ ತೆರಳಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 2023ರ 351(2) (ಕ್ರಿಮಿನಲ್ ಬೆದರಿಕೆಯ ಉದ್ದೇಶದ ಅಪರಾಧ), 351(3) (ಸಾವು, ತೀವ್ರ ನೋವುಂಟು ಮಾಡುವ ಉದ್ದೇಶದ ಕ್ರಿಮಿನಲ್ ಬೆದರಿಕೆ), 352 (ಉದ್ದೇಶಪೂರ್ವಕ ಅವಮಾನದ ಮೂಲಕ ಶಾಂತಿಭಂಗದ ಯತ್ನ), 75(1) (ಲೈಂಗಿಕ ಕಿರುಕುಳ) 75(1)(IV) (ಲೈಂಗಿಕ ಟೀಕೆ) ಹಾಗೂ 79 (ಮಹಿಳೆಯ ಗೌರವಕ್ಕೆ ಧಕ್ಕೆ) ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಕಮಿಷನರ್…
Author: UllalaVani
ಪುತ್ತೂರು : ವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿನ ಗಣೇಶ್ ಬಾಗ್ ಎಂಬಲ್ಲಿ ನಡೆದಿದೆ. ದಿ.ವಸಂತ ಎಂಬವರ ಪುತ್ರ ವಿಶ್ವಾಸ್(38) ಮೃತಪಟ್ಟ ಯುವಕ. ವಿಶ್ವಾಸ್ ಅವರ ಪತ್ನಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಅಂಗನವಾಡಿಯಿಂದ ತನ್ನ ಕೆಲಸ ಮುಗಿಸಿ ಮನೆಗೆ ಸಂಜೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿಶ್ವಾಸ್ ಅವರು ತನ್ನ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ 2ನೇ ತರಗತಿಯಲ್ಲಿ ಕಲಿಯುತ್ತಿರುವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಪತ್ನಿ ದಿವ್ಯಾ ಅವರು ನೀಡಿರುವ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಸೇಂಟ್ ಅಗ್ನೆಸ್ ಕಾಲೇಜಿನ ಸೆಂಟಿನರಿ ಬ್ಲಾಕ್’ನಲ್ಲಿ, ಇತ್ತೀಚೆಗೆ ಸಿಎಎಸ್‌ಕೆ ಸೆಂಟಿನರಿ ಟ್ರಸ್ಟ್ ವತಿಯಿಂದ 307 ಅರ್ಹ ವಿದ್ಯಾರ್ಥಿಗಳಿಗೆ ರೂ. 30 ಲಕ್ಷ ಮೊತ್ತದ ಸ್ಕಾಲರ್ ಶಿಪ್ ವಿತರಿಸಲಾಯಿತು.ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹ ಅಧ್ಯಕ್ಷತೆ ವಹಿಸಿ ಸ್ಕಾಲರ್ ಶಿಪ್ ವಿತರಿಸಿದರು. ಎನ್‌ಆರ್‌ಐ ದಾನಿಯಾದ ಮೈಕಲ್ ಡಿಸೋಜಾ ಮತ್ತು ಸೇಂಟ್ ಅಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ವೆನಿಸ್ಸಾ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಸಿಎಎಸ್‌ಕೆ ಸೆಂಟಿನರಿ ಟ್ರಸ್ಟಿನ ದಾನಿಗಳು ಭಾಗವಹಿಸಿದ್ದರು. 2014ರಿಂದಲೂ, ಕಾಸ್ಕ್ ಸೆಂಟಿನರಿ ಟ್ರಸ್ಟ್ ಸಹಾನುಭೂತಿಯೊಂದಿಗೆ ಎಲ್ಲರಿಗೂ ಸಹಾಯ ಮಾಡುತ್ತಿದೆ. ವಿಶೇಷವಾಗಿ ಶಿಕ್ಷಣ, ಆರೋಗ್ಯ, ನೆಲೆ, ಸಲಹೆ ಮತ್ತು ಪರಿಸರ ಸಂರಕ್ಷಣೆಯ ಮೂಲಕ ಸಂಕಷ್ಟದಲ್ಲಿರುವ ಮತ್ತು ಸಮಾಜದ ಅಂಚಿನಲ್ಲಿರುವವರಿಗೆ, ಈ ಟ್ರಸ್ಟ್ ಭರವಸೆಯ ದೀಪ ಮತ್ತು ಸಕಾರಾತ್ಮಕ ಬದಲಾವಣೆಯ ಪ್ರೇರಕವಾಗಿ, ಸಮುದಾಯಗಳನ್ನು ಬಲಪಡಿಸಲು ಮತ್ತು ಜನರ ಜೀವನವನ್ನು ಉನ್ನತಗೊಳಿಸಲು ಬಯಸುತ್ತಾ ಕಾರ‍್ಯಾಚರಿಸುತ್ತಿದೆ.ಧರ್ಮ, ಭಾಷೆ, ಅಂಕಗಳು ಅಥವಾ ಯೋಗ್ಯತೆಯನ್ನು ಪರಿಗಣಿಸದೆ, ಅರ್ಜಿದಾರರ ಆರ್ಥಿಕ ಸ್ಥಿತಿಯನ್ನು…
ಹರೇಕಳ : ಔಷಧಿಯೆಂದು ತಪ್ಪಾಗಿ ಗ್ರಹಿಸಿ ಇಲಿಪಾಷಣ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೇದೆ ಬಾಕ್ರಬೈಲ್ ಮಂಜುನಾಥ್ ಹೆಗ್ಡೆ (44) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಕೆಲ ವರ್ಷಗಳ ಹಿಂದೆ ಕರ್ತವ್ಯನಿರತ ಮಂಜುನಾಥ್ ಹೆಗ್ಡೆ ಅಪಘಾತಕ್ಕೀಡಾಗಿದ್ದರು. ಬಳಿಕ ನಿರಂತರವಾಗಿ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಯುರ್ವೇದ ಔಷಧಿಯನ್ನು ಪಡೆಯುತ್ತಿದ್ದ ಅವರು ಸುರತ್ಕಲ್ ಚೇಳಾಯರು ಬಳಿ ಇದ್ದ ಮನೆಯಲ್ಲಿ ಔಷಧಿಯೆಂದು ತಪ್ಪಾಗಿ ಗ್ರಹಿಸಿ ಇಲಿ ಪಾಷಣ ಸೇವಿಸಿ ಅಸೌಖ್ಯಕ್ಕೀಡಾಗಿದ್ದರು. ತಕ್ಷಣವ ಅವರನ್ನು ಸುರತ್ಕಲ್ ಶ್ರೀನಿವಾಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಎ.27 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹರೇಕಳ ದೆಬ್ಬೇಲಿ ನಿವಾಸಿಯಾಗಿರುವ ಇವರು ಪೊಲೀಸ್ ಪೇದೆ ಸ್ಪೂರ್ತಿ ಹೆಗ್ಡೆ ಬಾಕ್ರಬೈಲ್ ಧರ್ಮಚಾವಡಿ ಮಂಜಲ್ ಗುತ್ತು ಇವರ ಸಹೋದರನಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮಂಗಳೂರು: ಎಂಸಿಸಿ ಬ್ಯಾಂಕ್ ಬ್ಯಾಂಕ್’ನ 113 ವರ್ಷದ ಪ್ರಯಾಣದೊಂದಿಗೆ 105 ವರ್ಷಗಳಲ್ಲಿ ಗಳಿಸಿದ ವ್ಯವಹಾರವನ್ನು ಕೇವಲ ಏಳು ವರ್ಷಗಳಲ್ಲಿ ದ್ವಿಗುಣಗೊಳಿಸಲು ಸಾಧ್ಯವಾದ ಪ್ರಸಕ್ತ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ. ಕಳೆದ ಏಳು ವರ್ಷಗಳಲ್ಲಿ ಹೊಂದಿರುವ ವೇಗ ಮುಂದುವರಿಯಬೇಕು. ಮುಂದಿನ ಹತ್ತು ವರ್ಷಗಳಲ್ಲಿ ಬ್ಯಾಂಕ್ 100% ಬೆಳವಣಿಗೆ ಸಾಧಿಸಲಿ ಎಂದು ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟರು.ಅವರು ಎಂಸಿಸಿ ಬ್ಯಾಂಕ್ ಆಯೋಜಿಸಿದ್ದ ಗ್ರಾಹಕರು ಹಾಗೂ ಬ್ಯಾಂಕ್ ಆಡಳಿತ ಅಭಿಪ್ರಾಯ, ಬೆಳವಣಿಗೆ ವಿಚಾರ ಕುರಿತು ಅತ್ತಾವರ ಹೊಟೇಲ್ ಅವತಾರ್ ನಲ್ಲಿ ಆಯೋಜಿಸಲಾಗಿದ್ದ `ಐಡಿಯಾ ಸಮಿಟ್-2025′ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕ್ ಕಳೆದ 105 ವರ್ಷಗಳಲ್ಲಿ ಕಷ್ಟ-ತೊಡಕುಗಳು, ತ್ಯಾಗಗಳು ಮತ್ತು ಸಾಧನೆಗಳನ್ನು ಸಾಧಿಸಿದೆ. ಏಳು ವರ್ಷಗಳ ಪ್ರಗತಿ ಮತ್ತು ಬದಲಾವಣೆಗಳ ಪರಿಶೀಲಿಸಬೇಕು. ಮುಂದಿನ ಹತ್ತು ವರ್ಷಗಳಲ್ಲಿ ಗುರಿ ಸಾಧಿಸಲು ಆಶಾವಾದ ಮತ್ತು ದೃಢನಿಶ್ಚಯವನ್ನು ಹೊಂದುವಂತಾಗಬೇಕು. ಈಗಾಗಲೇ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅಳವಡಿಸಿಕೊಂಡಿದೆ. ಸಮಾಜದತ್ತ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಅವಶ್ಯಕ. ಹೊಸ ತಂತ್ರಜ್ಞಾನ, ವಿಶೇಷವಾಗಿ ಕೃತಕ ಬುದ್ಧಿಮತ್ತೆ…
ಮಂಗಳೂರು: ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಅಡ್ವಾನ್ಸ್ಡ್ ಕಂಪ್ಯೂಟಿ0ಗ್ ವಿಭಾಗದ ವಿದ್ಯಾರ್ಥಿ ಸಂಘಟನೆಗಳಾದ ಸಿಗ್ಮಾ ಸ್ಕ್ವೇರ್ಡ್ ಮತ್ತು ಅನಾಲಿಟಿಕಾ ಸಂಸ್ಥೆಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು. ಡೇಟಾ ವಿಶ್ಲೇಷಣೆಯು ನೈಜ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಬಹಳಷ್ಟು ಸಹಕಾರಿ. ಉತ್ಸಾಹದಿಂದ ಮತ್ತು ಹೊಣೆಗಾರಿಕೆಯೊಂದಿಗೆ ಈ ಕ್ಷೇತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಡಾ. ವಿಷ್ಣು ವಿನೇಕರ್ ಹೇಳಿದರು. ಎಸ್‌ಐಟಿ ನಿರ್ದೇಶಕರಾದ ಫಾ. ಡೆನ್ಸಿಲ್ ಅವರು ಅಧ್ಯಕ್ಷೀಯ ಭಾಷಣದಲ್ಲಿ, ಡೇಟಾ ಅನಾಲಿಟಿಕ್ಸ್ ನ ಯುಗ ಬಹಳಷ್ಟು ಮಹತ್ವವನ್ನು ಹೊಂದಿದೆ. ವಿದ್ಯಾರ್ಥಿ ನಾಯಕರಿಗೆ ಶಿಸ್ತಿನಿಂದ, ನೈತಿಕ ಉದ್ದೇಶದೊಂದಿಗೆ ಕಾರ್ಯನಿರ್ವಹಿಸಬೇಕಿದೆ ಎಂದರು.ಅಡ್ವಾನ್ಸ್ಡ್ ಕಂಪ್ಯೂಟಿ0ಗ್ ವಿಭಾಗದ ಮುಖ್ಯಸ್ಥೆ ಡಾ. ಜಯತಿ ಭದ್ರಾ ಸ್ವಾಗತಿಸಿದರು. ಐರೆನ್ ಲಾರೆನ್ಸ್ ಡಿ’ಲಿಮಾ ಅತಿಥಿಗಳ ಪರಿಚಯಿಸಿದರು. ಸಿಗ್ಮಾ ಸ್ಕ್ವೇರ್ಡ್ ಅಧ್ಯಕ್ಷ ಅಶ್ವಿನ್ ವಂದಿಸಿದರು.
ಮಂಗಳೂರು : “ಕೃತಜ್ಞತೆಗಿಂತ ಶ್ರೇಷ್ಠ ಗುಣಧರ್ಮವಿಲ್ಲ. ನಿಮ್ಮ ಪೋಷಕರ ತ್ಯಾಗ, ಶಿಕ್ಷಕರ ಬೆಂಬಲ ಮತ್ತು ಧರ್ಮಗುರುಗಳ ಮಾರ್ಗದರ್ಶನವನ್ನು ಎಂದಿಗೂ ಮರೆಯಬೇಡಿ. ಇಂದಿನ ವಿದ್ಯಾರ್ಥಿಗಳಾದ ನೀವು ಭವಿಷ್ಯದ ಸಮಾಜದ ಉಜ್ವಲ ಹೊಳೆಯುವ ನಕ್ಷತ್ರಗಳಾಗಿರುತ್ತೀರಿ.” ಎಂದು ಮಂಗಳೂರಿನ ಬಿಷಪ್ ವಂ| ಡಾ| ಪೀಟರ್ ಪೌಲ್ ಸಲ್ದಾನ್ಹಾ ಹೇಳಿದರು. ಥಾಮಸ್ ಆಲ್ವಾ ಎಡಿಸನ್‌ರ ಉದಾಹರಣೆಯನ್ನು ಉಲ್ಲೇಖಿಸಿ, ಶಿಕ್ಷಕರು “ಮಂದಬುದ್ಧಿ” ಎಂದು ಕರೆದರೂ ಅವರ ತಾಯಿಯ ಅಚಲ ಬೆಂಬಲವು ಅವರನ್ನು ಶ್ರೇಷ್ಠ ವಿಜ್ಞಾನಿಯನ್ನಾಗಿ ರೂಪಿಸಿತು ಎಂದು ಬಿಷಪ್ ಸಲ್ದಾನ್ಹಾ, ವಿದ್ಯಾರ್ಥಿಗಳಿಗೆ ಮೈಕಲ್ ಡಿ’ಸೋಜಾರವರ ನಿಃಸ್ವಾರ್ಥ ಬೆಂಬಲವನ್ನು ಮರೆಯದಿರಲು, ಅವರನ್ನು ಪೋಷಕರ ಸ್ಥಾನದಲ್ಲಿ ಗುರುತಿಸಲು ಒತ್ತಾಯಿಸಿದರು. ಅವರು ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಕ್ಯಾಥೊಲಿಕ್ ಆರ್ಗನೈಸೇಶನ್ ಫಾರ್ ಡೆವಲಪ್‌ಮೆಂಟ್ ಆಂಡ್ ಪೀಸ್ (CODP), ಮಂಗಳೂರು ಧರ್ಮಪ್ರಾಂತದಿಂದ ನಿರ್ವಹಿಸಲ್ಪಡುವ ಎಡ್ಯುಕೇರ್ ಬಡ್ಡಿರಹಿತ ಸಾಲರೂಪದ ವಿದ್ಯಾರ್ಥಿವೇತನದ ವಿತರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಎಡ್ಯುಕೇರ್ ವಿದ್ಯಾರ್ಥಿವೇತನವನ್ನು 2013 ರಲ್ಲಿ ಎನ್‌ಆರ್‌ಐ ಉದ್ಯಮಿ, ದಾನಿ ಮತ್ತು ವಿಷನ್ ಕೊಂಕಣಿ ಕಾರ್ಯಕ್ರಮದ ಸಂಸ್ಥಾಪಕ…
ಉಳ್ಳಾಲ: ಭಾರೀ ಮಳೆಗೆ ಮರವೊಂದು ಮೂರು ವಿದ್ಯುತ್ ತಂತಿಯ ಮೇಲೆ ಉರುಳಿ ಅದು ರಿಕ್ಷಾ ಮೇಲೆ ಉರುಳಿ ಹಾನಿಗೀಡಾಗಿರುವ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಜಾಯ್ಲಾಂಡ್ ಶಾಲಾ ಸಮೀಪದ ಕೊಲ್ಯ ಸಾರಸ್ವತ ಕಾಲನಿಯಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.ಮಾಧವ ಗಟ್ಟಿ ಎಂಬವರ ರಿಕ್ಷಾ ಮೇಲೆ ವಿದ್ಯುತ್ ಕಂಬಗಳು ಬಿದ್ದ ಪರಿಣಾಮ, ರಿಕ್ಷಾ ಕೂಡಾ ಪಲ್ಟಿಯಾಗಿ ಭಾಗಶ: ಹಾನಿಗೀಡಾಗಿದೆ. ಮೂರು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿದ ಪರಿಣಾಮ ಸೋಮೇಶ್ವರ – ತೊಕ್ಕೊಟ್ಟು ಒಳಪೇಟೆ ರಸ್ತೆ ಬಂದ್ ಆಗಿದೆ. ನಸುಕಿನ ಜಾವ ಆಗಿರುವುದರಿಂದ ಸ್ಥಳದಲ್ಲಿ ಯಾರೂ ಇರದ ಪರಿಣಾಮ ಸಂಭಾವ್ಯ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಕೊಲ್ಯ ಸಾರಸ್ವತ ಕಾಲನಿ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಕೃಷ್ಣಾಪುರ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರವನ್ನು ಯುವಕ ಮಂಡಲ (ರಿ.), ಯುವತಿ ಮಂಡಲ (ರಿ.) ವನಿತಾ ಸೇವಾ ಸಮಾಜ (ರಿ.), ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕೃಷ್ಣಾಪುರ-ಕಾಟಿಪಳ್ಳ ಇವರುಗಳ ಜಂಟಿ ಸಹಯೋಗದೊಂದಿಗೆ ದಿನಾಂಕ ೨೭.೦೭.೨೦೨೫ನೇ ಆದಿತ್ಯವಾರ ಪೂರ್ವಾಹ್ನ ಸಮಯ ೯.೩೦ ರಿಂದ ಅಪರಾಹ್ನ ೧೨.೩೦ರ ವರೆಗೆ ಯುವಕ ಮಂಡಲ (ರಿ.) ೫ನೇ ವಿಭಾಗ, ಕೃಷ್ಣಾಪುರ ಇಲ್ಲಿ ಆಯೋಜಿಸಲಾಗಿದೆ. ವೈದ್ಯಕೀಯ ಶಿಬಿರದಲ್ಲಿ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಪೌಂಡೇಷನ್, ಕದ್ರಿ, ಮಂಗಳೂರು, ಇವರ ನುರಿತ ವೈದ್ಯರ ತಂಡದಿAದ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತç ಚಿಕಿತ್ಸೆ, ಮಧುಮೇಹ ತಪಾಸಣೆ, ಬಿ.ಪಿ. ತಪಾಸಣೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಕಿವಿ, ಮೂಗು ಮತ್ತು ಗಂಟಲು ತಪಾಸಣೆ, ಹಾಗೂ ಇನ್ನಿತರ ವೈದ್ಯಕೀಯ ಸೇವೆಗಳು ಲಭ್ಯವಿದೆ. ಅಗತ್ಯವುಳ್ಳವರಿಗೆ ಸಂಘದ ವತಿಯಿಂದ ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಗುವುದು.…
ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಕಾಞಂಗಾಡ್ ಸೌತ್ ನಲ್ಲಿ ಗುರುವಾರ ಅಪಘಾತಕ್ಕೀಡಾದ ಟ್ಯಾಂಕರ್ ನಿಂದ ಅನಿಲ ಸೋರಿಕೆ ಕಂಡುಬಂದಿದೆ. ಈ ಹಿನ್ನೆಲೆ ಪರಿಸರದಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದ್ದು ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.ಸುಮಾರು ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ. ಮಂಗಳೂರಿನಿಂದ ಸ್ಥಳಕ್ಕೆ ಆಗಮಿಸಿದ ತಜ್ಞರ ತಂಡವು ಸೋರಿಕೆ ತಡೆಗಟ್ಟಲು ಕ್ರಮ ತೆಗೆದುಕೊಂಡಿದೆ. ಸಂಪೂರ್ಣವಾಗಿ ಸೋರಿಕೆ ತಡೆಗಟ್ಟಿದ ಬಳಿಕ ಇನ್ನೊಂದು ಟ್ಯಾಂಕರ್ ಗೆ ಅನಿಲ ವರ್ಗಾಯಿಸಲಾಗುವುದು.ಈ ಟ್ಯಾಂಕರ್ ಬೆಂಗಳೂರಿನಿಂದ ಕೊಯಮುತ್ತೂರಿಗೆ ಅನಿಲ ಸಾಗಾಟ ಮಾಡುತ್ತಿತ್ತು. ಬಸ್ಸಿಗೆ ಸೈಡ್ ನೀಡುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಮಗುಚಿ ಬಿದ್ದಿತ್ತು. ಅಪಘಾತದಲ್ಲಿ ಚಾಲಕ ತಮಿಳುನಾಡಿನ ಸುರೇಶ್ ಗಾಯಗೊಂಡಿದ್ದರು. ಶುಕ್ರವಾರ ಬೆಳಿಗ್ಗೆ ಟ್ಯಾಂಕರ್ ನ್ನು ಮೇಲಕ್ಕೆತ್ತಲು ಯತ್ನಿಸುತ್ತಿದ್ದಾಗ ಸೋರಿಕೆ ಕಂಡುಬಂದಿದೆ. ಸೋರಿಕೆ ಕಂಡು ಬಂದ ಹಿನ್ನಲೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ಕ್ರಮ ತೆಗೆದುಕೊಂಡರೂ ವಿಫಲ ಗೊಂಡಿತ್ತು. ನೀರು ಹಾಯಿಸಿ ಹೆಚ್ಚಿನ ಅನಾಹುತ ತಪ್ಪಿಸಲಾಯಿತು. ಕಾಞಂಗಾಡ್ – ನೀಲೇಶ್ವರ ದಾರಿಯಾಗಿ ವಾಹನ ಸಂಚಾರಕ್ಕೆ ಬದಲಿ…

