Author: UllalaVani

Kannada News From Coastal Karnataka

ಉಳ್ಳಾಲ: ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವದ ಆದಿಸ್ಥಳ ಕುತ್ತಾರು ಆಶ್ರಯದಲ್ಲಿ ಶ್ರೀ ಜೈ ಹನುಮಾನ್ ಕ್ರೀಡಾಮಂಡಳಿ (ರಿ) ಬಟ್ಟೆದಡಿ ಕುತ್ತಾರ್ ಮತ್ತು ಜೈ ಹನುಮಾನ್ ಮಹಿಳಾ ಸಮಿತಿ ಬಟ್ಟೆದಡಿ ಕುತ್ತಾರು ಇವರ ಸಹಕಾರದೊಂದಿಗೆ ದೇರಳಕಟ್ಟೆ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ, ಉಚಿತ ದಂತ ಚಿಕಿತ್ಸಾ ಶಿಬಿರ ದೆಕ್ಕಾಡು ಶ್ರೀ ಕೊರಗತನಿಯ ದೈವದ ಆದಿಸ್ಥಳದಲ್ಲಿ ನಡೆಯಿತು.ಇದೇ ವೇಳೆ ಭಕ್ತಾಧಿಗಳಿಗೆ ಮತ್ತು ಸ್ಥಳೀಯರ ಆರೋಗ್ಯ ರಕ್ಷಣೆಗೆ ನೆರವಾಗುವ ಉಚಿತ ಆಂಬ್ಯುಲೆನ್ಸ್ ವಾಹನವನ್ನು ಲೋಕಾರ್ಪಣೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಕ್ಷೇಮ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಸುಮಲತಾ ಆರ್ ಶೆಟ್ಟಿ ಮಾತನಾಡಿ, ಸಕಾಲದಲ್ಲಿ ಆಂಬ್ಯುಲೆನ್ಸ್ ಸೇವೆ ದೊರೆತಲ್ಲಿ ರೋಗಿಯ ಪ್ರಾಣರಕ್ಷಣೆ ಸಾಧ್ಯ. ಗಾಯಗೊಂಡವರನ್ನು ಮತ್ತು ಅಸ್ವಸ್ಥರಾದವರನ್ನು ಯಾವ ವಾಹನದಲ್ಲಿ ಕೊಂಡೊಯ್ಯಲಾಗುತ್ತದೆ ಎಂಬುದು ಕೂಡಾ ಮುಖ್ಯವಾಗುತ್ತದೆ. ಅಪಘಾತದಲ್ಲಿ ಗಾಯಗೊಂಡವರನ್ನು ದ್ವಿಚಕ್ರ ವಾಹನ ಅಥವಾ ರಿಕ್ಷಾ, ಕಾರಿನಲ್ಲಿ ಕೊಂಡೊಯ್ದು ಸಂದರ್ಭ ಹಲವು ತೊಂದರೆಗೊಳಗಾಗುತ್ತದೆ. ಬಿ.ಪಿ ಹೆಚ್ಚಳ, ಸ್ಟ್ರೋಕ್ ಇಂತಹ ಸಂದರ್ಭಗಳಲ್ಲಿ ವಾಹನಗಳಲ್ಲಿ…

Read More

ಮಂಗಳೂರು: ಹೈದರಾಬಾದ್ ನಲ್ಲಿ ನಡೆದ ವಿದ್ಯಾ ಭಾರತಿ ಸಂಸ್ಕೃತಿ ಮಹೋತ್ಸವದಲ್ಲಿ ಕೊಡಿಯಾಲ್‌ ಬೈಲ್‌ ಶಾರದಾ ವಿದ್ಯಾಲಯ ತಂಡವು ಜಾನಪದ ನೃತ್ಯ ವಿಭಾಗದಲ್ಲಿ ರಾಜ್ಯಮಟ್ಟಲ್ಲಿ ಪ್ರಥಮ ಸ್ಥಾನ ಪಡೆದು ಬಿಹಾರದಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಶುಭ ಶೇಷಾದ್ರಿ ಪ್ರೀತೀಶ್ ಸಾಲಿಯಾನ್ ನಿತೇಶ್ ರಿಂದ ತರಬೇತಿ ಪಡೆದುಕೊಂಡಿದ್ದಾರೆ.ತಂಡದಲ್ಲಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಶಾಖಾ ವ್ಯವಸ್ಥಾಪಕರಾದ ನವೀನ್‌ ಎಲ್.ಸಾಲ್ಯಾನ್-‌ ಭವ್ಯಾ ಬಂಗೇರ ದಂಪತಿ ಪುತ್ರಿ ವಿದ್ಯಾರ್ಥಿನಿ ಹವೀಷಾ ಕೂಡಾ ಒಬ್ಬರಾಗಿದ್ದಾರೆ.

Read More

ಉಳ್ಳಾಲದ ಶ್ರೀ ಸಾಯಿ ಪರಿವಾರ ಟ್ರಸ್ಟ್ (ರಿ.) — ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ — ದಸರಾ ಮಹೋತ್ಸವದ ಪ್ರಯುಕ್ತ “ಮುದ್ದು ಮಕ್ಕಳ ಅಂದದ ಶಾರದೆ ಫೋಟೋ ಸ್ಪರ್ಧೆ-2025” ಆಯೋಜಿಸಿದ್ದು, ಆ ಪ್ರಯುಕ್ತ ಪೋಸ್ಟರ್‌ ಬಿಡುಗಡೆ ಮಂಗಳೂರು ದಸರಾ ಜರಗುವ ಕುದ್ರೋಳಿ ಶ್ರೀ ಗೋಕರ್ಣಾಥ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.ಕ್ಷೇತ್ರದ ಖಜಾಂಚಿ, ಬೆಳದಿಂಗಳು ಸೇವಾ ಟ್ರಸ್ಟ್‌ ಸ್ಥಾಪಕ ಪದ್ಮರಾಜ್‌ ಆರ್‌ ಪೋಸ್ಟರ್‌ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ಶಿಸ್ತಿನಿಂದ ತೊಡಗಿಸಿಕೊಂಡಿರುವ ಯುವಕರ ತಂಡವಾಗಿ ಸಾಯಿ ಪರಿವಾರ್ ಟ್ರಸ್ಟ್ ಸದಾ ಜನಮನ್ನಣೆಗೆ ಪಾತ್ರವಾಗಿದೆ. ಕೊರೊನಾ ಮಹಾಮಾರಿ ಸೇರಿದಂತೆ ವಿವಿಧ ಸಂಕಷ್ಟಗಳ ಸಂದರ್ಭಗಳಲ್ಲಿ ಸಂಸ್ಥೆ ಶೈಕ್ಷಣಿಕ, ಕ್ರೀಡೆ ಹಾಗೂ ಆರೋಗ್ಯ ಸಂಬಂಧಿ ನೆರವಿನ ಮೂಲಕ ಅನೇಕ ಕುಟುಂಬಗಳಿಗೆ ಆಶಾಕಿರಣವಾಗಿದೆ. ಈ ಸೇವಾಭಾವನೆಗೆ ಸಮಾಜದ ಎಲ್ಲ ವರ್ಗಗಳಿಂದ ಪ್ರಶಂಸೆ ಲಭಿಸಿದೆ.ಮೈಸೂರು ದಸರೆಯೊಂದಿಗೆ ಮಂಗಳೂರು ದಸರೆಯೂ ಇಂದಿಗೆ ಸಾಂಸ್ಕೃತಿಕ ಹಾಗೂ ಭಕ್ತಿಭಾವದ ಹಬ್ಬವಾಗಿ ಪ್ರಾಮುಖ್ಯತೆ ಪಡೆದಿದೆ. ಇದರ ಅಂಗವಾಗಿ ಸಾಯಿ ಪರಿವಾರ್‌ ಟ್ರಸ್ಟ್‌ ಆಯೋಜಿಸಿರುವ…

Read More

ಉಳ್ಳಾಲ: ಕಳೆದ ಮೂರು ತಲೆಮಾರುಗಳಿಂದ ಹಿಡಿದು 20,000 ಸದಸ್ಯರನ್ನು ಒಳಗೊಂಡ ಕೊಣಾಜೆ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯದ ಹಳೇ ವಿದ್ಯಾರ್ಥಿ ಸಂಘ ಮಂಗಳ ಅಲ್ಯುಮಿನಿ ಅಸೋಸಿಯೇಷನ್ ಮಾ’ ಇದರ ನೂತನ ಅಧ್ಯಕ್ಷರಾಗಿ 1986ರ ಬ್ಯಾಚ್ ನ ಸ್ಟಾಟಿಸ್ಟಿಕ್ಸ್ ಸ್ನಾತಕೋತ್ತರ ಪದವಿ ಪಡೆದ ಹಳೇ ವಿದ್ಯಾರ್ಥಿ ಮೂಲತ: ಉಳ್ಳಾಲ ಸದ್ಯ ಚಿಕ್ಕಮಗಳೂರು ಮೂಡಿಗೆರೆಯಲ್ಲಿ ನೆಲೆಸಿರುವ ರಾಮಕೃಷ್ಣ ರಾವ್ ಕೆ.ಎನ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಜಯಪ್ಪ ಕೆ.ಎಸ್, ದೇವಿಪ್ರಭಾ ಆಳ್ವ, ಸರೋಜಿನಿ ಬಿ.ಕೆ, ಪ್ರಧಾನ ಕರ‍್ಯದರ್ಶಿಗಳಾಗಿ ಗಣೇಶ್ ಸಂಜೀವ, ಜತೆ ಕರ‍್ಯದರ್ಶಿಗಳಾಗಿ ಹರ್ಷಿತಾ, ಉಮ್ಮಪ್ಪ ಪೂಜಾರಿ, ಕೋಶಾಧಿಕಾರಿ ಡಾ. ಚಂದು ಹೆಗ್ಡೆ, ಸಂಘಟನಾ ಕರ‍್ಯದರ್ಶಿಯಾಗಿ ಸುಬ್ರಹ್ಮಣ್ಯ ಟಿ., ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ವೇಣು ಶರ್ಮಾ, ರಾಜರಾಮ ರಾವ್.ಟಿ, ಎನ್.ಕೆ.ಹೀರೇಗೌಡ, ಡಾ. ಪ್ರಭಾಕರ ನೀರುಮಾರ್ಗ, ಸದಾನಂದ ಶೆಟ್ಟಿ, ಪ್ರೊ.ವಿ.ಜಿ ಭಟ್, ಪ್ರದೀಪ್ ಡಿಸೋಜ, ಸುಷ್ಮಾ, ಸುಧಾ ವಿ ವೈದ್ಯ, ಪ್ರೊ.ಇಕ್ಬಾಲ್ , ಪ್ರೊ.ಇಸ್ಮಾಯಿಲ್, ಶ್ರುತಿ ಶೆಟ್ಟಿ, ಡಾ.ವನಜ, ಪ್ರೊ.ಮಂಜುನಾಥ್ ಪಟ್ಟಾಭಿ, ಡಾ.ವಿಶ್ವನಾಥ ಆಯ್ಕೆಗೊಂಡಿದ್ದಾರೆ. ಮಂಗಳೂರು ವಿ.ವಿಯಲ್ಲಿರುವ…

Read More

ಉಳ್ಳಾಲ : ಶ್ರೀ ಉಮಾಮಹೇಶ್ವರಿ ದೇವಸ್ಥಾನ ಉಮಾಪುರಿ ಕಾಪಿಕಾಡ್ ಕ್ಷೇತ್ರದಲ್ಲಿ ಸೆ. 22 ಸೋಮವಾರದಿಂದ ಅ.1 ಬುಧವಾರದ ವರೆಗೆ ಕುಂಟಾರು ರವೀಶ್ ತಂತ್ರಿಗಳ ಮಾರ್ಗದರ್ಶನದಲ್ಲಿ ನವರಾತ್ರಿ ಉತ್ಸವವು ಅತ್ಯಂತ ಸಂಭ್ರಮದಿಂದ ನಡೆಯಲಿದೆ . ಸೆ 22 ಸೋಮವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ನವರಾತ್ರಿ ಉತ್ಸವದ ನಂದಾದೀಪ ಪ್ರಜ್ವಲನೆ , ಗಣಪತಿ ಹವನ, ನಾಗತಂಬಿಲ, ಪರಿವಾರ ದೈವಗಳಿಗೆ ತಂಬಿಲ, ಧಾನ್ಯಲಕ್ಷ್ಮೀ ಪೂಜೆ, ಭಕ್ತಾದಿಗಳಿಗೆ ತೆನೆ ವಿತರಣೆ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ 8 ಗಂಟೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸೆ. 26 ಶುಕ್ರವಾರ ಬೆಳಿಗ್ಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ಸಾಮೂಹಿಕ ಆಶ್ಲೇಷ ಬಲಿ ಪೂಜೆ, ಸಾಮೂಹಿಕ ಆಶ್ಲೇಷ ಪೂಜೆ ಸೆ .29 ರ ಸೋಮವಾದಂದು ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾಯಾಗ ಜರಗಲಿದೆ. ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ.ಅ.1 ಬುಧವಾರ ಆಯುಧ ಪೂಜಾ ದಿವಸದಂದು ಬೆಳಿಗ್ಗೆ ಶ್ರೀ ದೇವರಿಗೆ ರಂಗ ಪೂಜೆ 8.00ಕ್ಕೆ ಮಹಾಪೂಜೆ,…

Read More

ಕೊಣಾಜೆ : ಯುವವಾಹಿನಿ ಗ್ರಾಮಚಾವಡಿ-ಕೊಣಾಜೆ ಘಟಕದ ಆಶ್ರಯದಲ್ಲಿ ಕೊಣಾಜೆ ಮಂಗಳೂರು ವಿಶ್ವವಿದ್ಯಾಲಯದ ಒಳಾಂಗಣ ಸಭಾಂಗಣದಲ್ಲಿ ಅಕ್ಟೋಬರ್ 19ರಂದು ನಡೆಯಲಿರುವ ಯುವವಾಹಿನಿ ಅಂತರ್ ಘಟಕದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಪ್ರಯುಕ್ತ ಗುರುವಾರ ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಶೀರ್ಷಿಕೆ ಗೀತೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ವಿಜೇತ್ ಪಜೀರ್ ಅವರು “ಗ್ರಾಮೀಣ ಭಾಗದ ಪ್ರತಿಭೆಗಳಿಂದಲೇ ಶೀರ್ಷಿಕೆ ಗೀತೆ ರಚನೆಗೊಂಡಿದೆ, ಯುವ ಪ್ರತಿಭೆಗಳು ಸಂಘದಲ್ಲೇ ಇರುವುದು ಇನ್ನಷ್ಟು ಹೆಮ್ಮೆಯ ವಿಚಾರ”, ಈ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳಗಲು ಸರ್ವರ ಪ್ರೋತ್ಸಾಹ ಅಗತ್ಯ ಎಂದರು. ಚಿತ್ರನಟ ದೀಕ್ಷಿತ್ ಕೆ.ಅಂಡಿಂಜೆ ಶೀರ್ಷಿಕೆ ಗೀತೆ ಬಿಡುಗಡೆಗೊಳಿಸಿ, ಶೀರ್ಷಿಕೆ ಗೀತೆ ಸುಂದರವಾಗಿ ಮೂಡಿಬಂದಿದೆ, ಅದೇ ರೀತಿ ಬ್ಯಾಡ್ಮಿಂಟನ್ ಪಂದ್ಯಾಟವೂ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.ಈ ಸಂದರ್ಭ ಶೀರ್ಷಿಕೆ ಗೀತೆ ಹಾಡಿದ ರಕ್ಷಿತ್ ಕೆ.ಅಸೈಗೋಳಿ, ಶ್ರೀರಕ್ಷಾ ಎಸ್.ಎಚ್. ಪೂಜಾರಿ ಕೊಣಾಜೆ ಮತ್ತು ಸಾಂಸ್ಕೃತಿಕ…

Read More

ಕೊಣಾಜೆ : ಉಳ್ಳಾಲ ರಾಣಿ ಅಬ್ಬಕ್ಕ ತುಳುನಾಡಿನ ಶೌರ್ಯ ಸ್ವಾಭಿಮಾನದ ವೀರ ಮಹಿಳೆ. ಪೋರ್ಚುಗೀಸರನ್ನು ಎದುರಿಸಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಭಾರತದ ಹೆಮ್ಮೆಯ ಪುತ್ರಿ. ರಾಣಿ ಅಬ್ಬಕ್ಕನ ಕುರಿತು‌ ಯಾರು ಕಾರ್ಯಕ್ರಮ ಮಾಡಿದರೂ ನಮ್ಮ ಬೆಂಬಲವಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಣಿ ಅಬ್ಬಕ್ಕ ಪೀಠದ ಸಂಯೋಜಕ ಡಾ.ಧನಂಜಯ‌ ಕುಂಬ್ಳೆ ಹೇಳಿದರು. ಅವರು ಮಂಗಳವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಅಭಯರಾಣಿ- ವೀರನಾರಿ ಅಬ್ಬಕ್ಕಳ 500 ನೇ ಜಯಂತಿಯ ಪ್ರಯುಕ್ತ ರಾಣಿ ಅಬ್ಬಕ್ಕ ರಥಯಾತ್ರೆಗೆ ಕೊಣಾಜೆ ಮಂಗಳೂರು ವಿವಿಯ ಸಿ.ವಿ.ರಾಮನ್ ವೃತ್ತದಲ್ಲಿ ಸ್ವಾಗತಿಸಿ, ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಗೋವಾದಲ್ಲಿ ಪೋರ್ಚುಗೀಸರ ಉಪಟಳಕ್ಕೆ ಅಲ್ಲಿನ ಭಾರತೀಯ ಬಂಧುಗಳು ಊರು ಬಿಟ್ಟು ಓಡಬೇಕಾಯಿತು. ಅದೇ ಸ್ಥಿತಿ ಕರಾವಳಿಯಲ್ಲಿ ನಡೆಯದ ಹಾಗೆ ರಕ್ಷಿಸಿದ್ದು ರಾಣಿ ಅಬ್ಬಕ್ಕ. ಆಕೆಯ ಸ್ವಾಭಿಮಾನ, ದೇಶಪ್ರೇಮ ಇಂದಿನ ಯುವ ತಲೆಮಾರಿಗೆ ಪ್ರೇರಣೆಯಾಗಲಿ ಎಂದು ಅವರು ಹೇಳಿದರು.ರಥಯಾತ್ರೆಯ ಪ್ರಾಂತ ಅಧ್ಯಕ್ಣರಾದ ರವಿ ಮಂಡ್ಯ, ಮಂಗಳೂರು ವಿವಿ…

Read More

ಉಳ್ಳಾಲ : ಡ್ರಗ್ಸ್ ಮುಕ್ತ ಸಮಾಜದ ವಿರುದ್ಧ ಅಚ್ಚರಿ ಸೇವೆ ನೀಡುತ್ತಿರುವ ದೇರಳಕಟ್ಟೆಯ ಅಲ್ ಸಲಾಮ ಸಭಾಂಗಣದಲ್ಲಿ ಸೆಪ್ಟೆಂಬರ್ 14ರಂದು ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ದೇರಳಕಟ್ಟೆಯ ಅಲ್ ಸಲಾಮ ಸಭಾಂಗಣದಲ್ಲಿ ನಡೆಯಿತು.ಸೌಹಾರ್ದತೆ ಮತ್ತು ಮಾದಕತೆಯ ವಿರುದ್ಧ ಕವಿಗಳು ಚುಟುಕು ಕವನ ವಾಚಿಸಿದರು. ರಾಜ್ಯದ ವಿವಿಧ ಕಡೆಗಳಿಂದ ಕವಿಗಳು ಭಾಗವಹಿಸಿದ್ದು ಕವಿಗಳಿಗೆ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಶ್ರೀ ವಸಂತ ಜೋಗಿ ಕುಂದಾಪುರ ಕಾರ್ಯಕ್ರಮ ಉದ್ಘಾಟಿಸಿ ಸಮಾಜದಲ್ಲಿ ಇಂತಹಾ ಕಾರ್ಯಕ್ರಮ ನಿರಂತರ ನಡೆಯುತ್ತಲೇ ಇರಬೇಕು ಇದು ಕರಾವಳಿಯ ಪಾಲಿಗೆ ಉತ್ತಮ ಬೆಳವಣಿಗೆ ಎಂದು ಹೇಳಿದರು.ಹಿರಿಯ ಮುಖಂಡ ಹೈದರ್ ಪೆರ್ತಿಪ್ಪಾಡಿ ಕಾರ್ಯಕ್ರಮದಲ್ಲಿ ಶುಭಹಾರೖಸಿ ಮಾತನಾಡಿದರು. ಅರೋಗ್ಯ ಮತ್ತು ಶೈಕ್ಷಣಿಕ ಸೇವೆಗಾಗಿ ಡಾ.ಯು.ಟಿ ಇಫ್ತಿಖಾರ್ ಅಲಿಯವರಿಗೆ ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕವಿಗೋಷ್ಠಿ ಅಧ್ಯಕ್ಷತೆಯನ್ನು ನಾರಾಯಣ ರೈ ಕುಕ್ಕುವಳ್ಳಿ ವಹಿಸಿದ್ದರು. ನಂತರ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಾಧಕರಿಗೆ ನೀಡುವ…

Read More

ಉಳ್ಳಾಲ : ಕರಾವಳಿಗರು ಏಕಮನಸ್ಸಿನಿಂದ ಆರಾಧಿಸುವ, ಆಸ್ವಾದಿಸುವ ಕಲೆ ಯಕ್ಷಗಾನ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಕಥಾನಕಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿದ್ದು, ಯುವಕರಿಗೆ ಉತ್ತಮ ಸಂದೇಶ ನೀಡುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಆಶ್ರಯದಲ್ಲಿ ಕೈರಂಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಭಾನುವಾರ ಆಯೋಜಿಸಲಾದ ‘ಯಕ್ಷಧಾರೆ’ ಯಕ್ಷಗಾನ ಕಾರ್ಯಕ್ರಮ ಸಮಾರೋಪದಲ್ಲಿ ಆಶೀರ್ವಚನ ನೀಡಿದರು. ಧ್ವನಿವರ್ಧಕ ಸಮಯಾವಕಾಶ ಕುರಿತು ವಿವಾದವೆದ್ದಿದ್ದು ಕಲಾಭಿಮಾನಿಗಳಲ್ಲಿ ಈ ಬಗ್ಗೆ ವಿಷಾದ ಇದೆ. ನವೆಂಬರ್ ನಲ್ಲಿ ಮೇಳಗಳು ತಿರುಗಾಟ ಆರಂಭಿಸುವುದರಿಂದ ಈ ಸಮಸ್ಯೆ ಬಗ್ಗೆ ಸರ್ಕಾರ ಈಗಲೇ ಗಮನಹರಿಸಬೇಕು. ಯಕ್ಷಗಾನ ಇಲ್ಲದೆ ಕರಾವಳಿಯಲ್ಲಿ ಕಾರ್ಯಕ್ರಮ ಕಳೆಗಟ್ಟಲು ಸಾಧ್ಯವಿಲ್ಲ ಎಂದರು.ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ.ಟಿ.ಶಾಮ ಭಟ್, ಶಾರದಾ ಗಣಪತಿ ವಿದ್ಯಾಕೇಂದ್ರದ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ…

Read More

ಉಳ್ಳಾಲ: ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ “ಶ್ರೀ ಕ್ಷೇತ್ರ ಕುತ್ತಾರು” ಯಲ್ಲಿ ಈ ವರ್ಷದ ನವರಾತ್ರಿ ಉತ್ಸವವು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ವೈಭವೋಪೇತವಾಗಿ ನಡೆಯಲಿದೆ.ದೇವಸ್ಥಾನದಲ್ಲಿ ನಡೆಯಲಿರುವ 11 ದಿನಗಳ ಧಾರ್ಮಿಕ ಕಾರ್ಯಕ್ರಮಗಳ ಸೆ.22 ಯೋಗಿನಿ ಪೂಜೆ – ನವರಾತ್ರಿ ಪ್ರಾರಂಭ, ಸೆ. 23 ಆರ್ಯ ಪೂಜೆ, ಸೆ.24 ಭಗವತೀ ಪೂಜೆ, ಸೆ.25 ಕುಮಾರಿ ಪೂಜೆ ,ಸೆ. 26 ಅಂಬಿಕಾ ಪೂಜೆ – ಲಲಿತಾ ಪಂಚಮಿ ಪ್ರಯುಕ್ತ ಸಂಜೆ, ಸೆ.27 ಮಹಿಷಮರ್ದಿನಿ ಪೂಜೆ, ಸೆ.28 ಚಂಡಿಕಾ ದೇವಿ ಪೂಜೆ, ಸೆ. 29 ಸರಸ್ವತೀ ಪೂಜೆ, ಸೆ.30 ವಾಗೀಶ್ವರೀ ಪೂಜೆ, ಅ.1 ರಂದು ಆಯುಧ ಪೂಜೆ, ಅ.2ರಂದು ವಿಜಯದಶಮಿ – ಬೆಳಿಗ್ಗೆ 7:30ರಿಂದ ಅಕ್ಷರಾಭ್ಯಾಸ ಆರಂಭ, ಸಾರ್ವಜನಿಕ ದುರ್ಗಾ ನಮಸ್ಕಾರ ಪೂಜೆ ಜರಗಲಿದೆ. ಪ್ರತಿದಿನ ಸಂಜೆ 7:30ಕ್ಕೆ ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವರಿಗೆ ರಂಗಪೂಜೆ ನಡೆಯಲಿದೆ. ಬಳಿಕ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯಿದೆ ಎಂದು ದೇವಸ್ಥಾನ ಟ್ರಸ್ಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

Read More