ಮಂಗಳೂರು: ನಗರದಲ್ಲಿನ ಪ್ರಮುಖ ಸಾಹಿತ್ಯ–ಸಾಂಸ್ಕೃತಿಕ ವೇದಿಕೆಯಾದ ರಂಗಚಾವಡಿ ಮಂಗಳೂರು ತನ್ನ ರಜತ ಸಂಭ್ರಮದ 25ನೇ ವರ್ಷದ ವಿಶೇಷ ಕಾರ್ಯಕ್ರಮವನ್ನು ನವೆಂಬರ್ 9, 2025 (ಭಾನುವಾರ) ರಂದು ಆಯೋಜಿಸಿದೆ. ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ (ರಿ), ಸುರತ್ಕಲ್ ಸಹಯೋಗದೊಂದಿಗೆ ಕಾರ್ಯಕ್ರಮ ಅದ್ಧೂರಿಯಾಗಿ ಸುರತ್ಕಲ್ ಬಂಟರ ಭವನದಲ್ಲಿ ಜರಗಲಿದೆ.ಈ ಉತ್ಸವದ ಭಾಗವಾಗಿ ಸುರತ್ಕಲ್ ಬಂಟರ ಭವನದಲ್ಲಿ ಸಂಜೆ 4.30ರಿಂದ “ರಂಗು ರಂಗಿನ ರಂಗೋತ್ಸವ” ನಡೆಯಲಿದ್ದು, ಪ್ರೇಕ್ಷಕರಿಗೆ ನಗುವಿನ ಹಬ್ಬವನ್ನು ನೀಡುವ “Non Stop Comedy – ಗೀತಾ ಗಾಯನ, ಹಾಸ್ಯ ರಸಾಯಣ” ವಿಶೇಷ ಆಕರ್ಷಣೆಯಾಗಿದೆ.ಹಾಸ್ಯ ನಾಟಕ “ಬಂದರೋ ಬಂದರೋ ಬಾವಾ ಬಂದರು…”ನಲ್ಲಿ ಕಲಾವಿದರು ಪುಷ್ಪರಾಜ್ ಬೊಳ್ಳಾರ್, ರವಿ ರಾಮಕುಂಜ, ಮಂಗಳೂರು ಮೀನನಾಥ ಮತ್ತು ರಾಘವೇಂದ್ರ ರೈ ಸೇರಿದಂತೆ ಹಲವರು ಅಭಿನಯಿಸಲಿದ್ದಾರೆ. ನಗೆ–ರಸಿಕರ ಮನರಂಜನೆಗಾಗಿ “ಕಲಿ ವಲಿ ಕಾಮಿಡಿ” ಎಂಬ ತುಳು ಹಾಸ್ಯಪದರನ ಪ್ರದರ್ಶನವೂ ಇರಲಿದೆ.ಸಂಗೀತ ಪ್ರಿಯರಿಗಾಗಿ “ರಾಗ್ ರಂಗ್ ಸಂಗೀತ ರಸಮಂಜರಿ” ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ, ಕನ್ನಡ ಮತ್ತು ತುಳು…
Author: UllalaVani
ತೊಕ್ಕೊಟ್ಟು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉಳ್ಳಾಲ ತಾಲೂಕು ಘಟಕದ ವತಿಯಿಂದ ಸಂಘ ಶತಾಬ್ದಿ ಆಚರಣೆಯ ಅಂಗವಾಗಿ ಪಥಸಂಚಲನ ಕಾರ್ಯಕ್ರಮವು ನಡೆಯಿತು. ತೊಕ್ಕೊಟ್ಟು ಚೆಂಬುಗುಡ್ಡೆಯ ರಾಷ್ಟ್ರೋತ್ಥಾನ ಶಾಲೆಯಿಂದ ಪ್ರಾರಂಭಗೊಂಡ ಈ ಪಥಸಂಚಲನವು ಕಾಪಿಕಾಡು ಮಾರ್ಗವಾಗಿ ತೊಕ್ಕೊಟ್ಟು, ಕೆರೆಬೈಲು ಮಾರ್ಗದ ಮೂಲಕ ವಾಪಸ್ಸು ರಾಷ್ಟ್ರೋತ್ಥಾನದಲ್ಲಿ ಸಮಾಪ್ತಿಗೊಂಡಿತು.ಶಿಸ್ತು, ಸಮನ್ವಯ ಮತ್ತು ದೇಶಭಕ್ತಿಯ ಮೆರಗು ತೋರಿಸಿದ ಈ ಪಥಸಂಚಲನದಲ್ಲಿ ೧,೦೦೦ ಕ್ಕೂ ಹೆಚ್ಚು ಸ್ವಯಂಸೇವಕರು ಶಿಸ್ತುಬದ್ಧವಾಗಿ ಭಾಗವಹಿಸಿ ರಾಷ್ಟ್ರಪ್ರೇಮದ ಸಂದೇಶ ಹರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಘಟಕಗಳ ಕಾರ್ಯಕರ್ತರು, ಹಿರಿಯರು ಹಾಗೂ ಸ್ಥಳೀಯ ನಾಗರಿಕರು ಪಾಲ್ಗೊಂಡರು ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.
ಉಳ್ಳಾಲ: ಸಮುದ್ರ ತೀರದ ಬಂಡೆಕಲ್ಲುಗಳ ನಡುವೆ ಪತ್ತೆಯಾದ ಕೊಳೆತ ಮೃತದೇಹ ಹಾಗೂ ಬಾವಿಯಲ್ಲಿ ಇರುವ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ ಕಿನ್ಯ ಹಾಗೂ ಉಳ್ಳಾಲ ನಿವಾಸಿಗಳನ್ನು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಹೆಚ್.ವಿರೂಪಾಕ್ಷ ಸ್ವಾಮಿ ನೇತೃತ್ವದಲ್ಲಿ ಅಭಿನಂದಿಸಲಾಯಿತು.ಉಳ್ಳಾಲದ ಕೋಟೆಪುರದಲ್ಲಿ ಪತ್ತೆಯಾದ ಕೊಪ್ಪ ಮೂಲದ ಮೀನುಗಾರನ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ಸಮುದ್ರ ತೀರದ ಬಂಡೆಕಲ್ಲು ಪ್ರದೇಶದೀಂದ ಆಂಬ್ಯುಲೆನ್ಸ್ ವಾಹನದವರೆಗೆ ಹೊತ್ತು ತಂದ ಶೀವಾಜಿ ಜೀವರಕ್ಷಕ ಈಜುಗಾರರ ಸಂಘ ಮೊಗವೀರಪಟ್ನದ ಸದಸ್ಯರುಗಳಾದ ಚಂದ್ರಹಾಸ್ ಸುವರ್ಣ, ಯೋಗೀಶ್ ಅಮೀನ್, ಗೃಹರಕ್ಷಕ ಸಿಬ್ಬಂದಿ ಪ್ರಸಾದ್ ಸುವರ್ಣ ಹಾಗೂ ಕಿನ್ಯಾ ಬಾವಿಯಲ್ಲಿ ಮಿಥುನ್ ಶೆಟ್ಟಿ ಎಂಬವರ ಮೃತದೇಹವನ್ನು ನಿರಂತರ ಎರಡೂವರೆ ತಾಸುಗಳ ಕಾಲ ಶೋಧ ಕಾರ್ಯದಲ್ಲಿ ಸಹಕರಿಸಿದ ಅಶ್ರಫ್ ಕೋಡಿ, ಫಾರುಕ್ ಕೋಟೆಪುರ, ಹಸೈನಾರ್ ಕಿನ್ಯ, ಹೈದರ್ ಕಿನ್ಯ, ಹ್ಯಾರೀಸ್ ಕಿನ್ಯ, ಅನ್ಸಾರ್ ಕಿನ್ಯ ಹಾಗೂ ಗೃಹರಕ್ಷಕ ಸಿಬ್ಬಂದಿ ಪ್ರಸಾದ್ ಸುವರ್ಣ ಇವರನ್ನು ಅಭಿನಂದಿಸಲಾಯಿತು.ಈ ಸಂದರ್ಭ ಉಳ್ಳಾಲ ಪೊಲೀಸ್ ಠಾಣಾ ಉಪನಿರೀಕ್ಷಕರುಗಳಾದ ಸಿದ್ದಪ್ಪ ನರನೂರ್, ಸಂತೋಷ್…
ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್ ಕಾಮ್ಸ್) ಮಂಗಳೂರು ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೆಶಕರ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಮಂಗಳೂರು ತಾಲೂಕಿನ ಪ್ರಶಾಂತ್ ಎ ಗಟ್ಟಿ ಮತ್ತು ಉಪಾಧ್ಯಕ್ಷರಾಗಿ ಪುತ್ತೂರು ತಾಲೂಕಿನ ಸಚಿನ್ ಕುಮಾರ್ ಬಿ ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಅಧ್ಯಕ್ಷರು/ಉಪಾಧ್ಯಕ್ಷರ ಆಯ್ಕೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಕೆ. ನೆರವೇರಿಸಿಕೊಟ್ಟರು. ಸಭೆಯಲ್ಲಿ ನಿರ್ದೆಶಕರುಗಳಾದ ಜಯಪ್ರಕಾಶ್ ಕೂಜುಗೋಡು, ಜಯಕುಮಾರ್ ಪರ್ಕಳ, ಹರೀಶ್, ಯಶೋಧರ ಶೆಟ್ಟಿ ಬಿ, ಕೆ. ಲಕ್ಷ್ಮೀನಾರಾಯಣ ಉಡುಪ, ಸೀತಾರಾಮ ಗಾಣಿಗ, ರತ್ನರಾಜ್ ಪಿ, ಅನಂತ ಪದ್ಮನಾಭ ಉಡುಪ ಕೆ, ವಿಜಯ ರೈ, ಚೀಂಪ, ಸುಂದರ ನಾಯ್ಕ, ನಿರ್ಮಲ, ಮಮತಾ ಎಂ ಶೆಟ್ಟಿ, ಸುಭದ್ರಾ ರಾವ್ ಉಪಸ್ಥಿತರಿದ್ದರು.ವ್ಯವಸ್ಥಾಪಕ ನಿರ್ದೇಶಕರು ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕರಾಗಿರುವ ಕೆ. ಪ್ರವೀಣ ಇವರು ನೂತನವಾಗಿ ಆಯ್ಕೆಯಾದ…
ತಿರುವನಂತಪುರಂ : ರಾಜ್ಯದಲ್ಲಿ ಇಂದು ಸಹ ಸಿಡಿಲು, ಮಿಂಚು ಸಹಿತ ಮಳೆ ಕಾಣಿಸಿಕೊಳ್ಳಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪತ್ತನಂತಿಟ್ಟ ಇಡುಕ್ಕಿ ಪಾಲಕ್ಕಾಡ್, ಮಲಪ್ಪುರಂ, ವಯನಾಡ್ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಜತೆ ಸಿಡಿಲು, ಮಿಂಚು, 30 ರಿಂದ 40 ಕಿ.ಮೀ.ವೇಗದ ಗಾಳಿಯೂ ಕಾಣಿಸಿಕೊಳ್ಳಲಿದೆ. ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಮಳೆ ಇರಲಿದೆ.
ಕುಂಬಳೆ : ಸೀತಾಂಗೋಳಿ ಪೇಟೆಯಲ್ಲಿ ಬದಿಯಡ್ಕ ನಿವಾಸಿ ಅನಿಲ್ ಕುಮಾರ್ ಯಾನೆ ಕುಟ್ಟನ ಮೇಲೆ ಮಾರಣಾಂತಿಕವಾಗಿ ಇರಿದ ಪ್ರಕರಣದಲ್ಲಿ 13 ಮಂದಿಯ ವಿರುದ್ದ ನರಹತ್ಯಾ ಪ್ರಕರಣ ದಾಖಲಿಸಿರುವ ಕುಂಬಳೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬೇಳ ಚೌಕಾರು ನಿವಾಸಿ ಅಕ್ಷಯ್ (34) ಬಂಧಿತ ಆರೋಪಿ. ಈತನನ್ನು ಚೌಕಾರು ಪರಿಸರದಿಂದ ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಆದಿತ್ಯವಾರ ರಾತ್ರಿ 12 ಗಂಟೆಯ ವೇಳೆ ಸೀತಾಂಗೋಳಿಯಲ್ಲಿ ಈ ಘಟನೆ ನಡೆದಿತ್ತು. ಹಣಕಾಸು ವಿಷಯದಲ್ಲಿ ತಂಡವೊಂದು ಸೀತಾಂಗೋಳಿಯ ಹೋಟೆಲ್ ಒಂದರಲ್ಲಿ ಬಂದು ನಿರಂತರ ಕಿರುಕುಳ ನೀಡುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಕುಟ್ಟ ಸೀತಾಂಗೋಳಿಗೆ ಹೋಗಿದ್ದರು. ಕುಟ್ಟ ಬರುವುದನ್ನು ಕಾದು ನಿಂತ ತಂಡ ಆತನ ಕುತ್ತಿಗೆಗೆ ಇರಿದಿತ್ತು. ಗಂಭೀರ ಗಾಯಗೊಂಡ ಕುಟ್ಟನಿಗೆ ನಿನ್ನೆ (ಸೋಮವಾರ) ತುರ್ತು ಶಸ್ತ್ರಕ್ರಿಯೆ ನಡೆಸಲಾಗಿತ್ತು.
ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ಅಂಬಾನಿ ಸಹಾಯಕ ಅಶೋಕ್ ಕುಮಾರ್ ಪಾಲ್ ಬಂಧನ ಮಾಡಲಾಗಿದೆ. ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಸಹಾಯಕ ಮತ್ತು ರಿಲಯನ್ಸ್ ಪವರ್ ಲಿಮಿಟೆಡ್‌ನ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಪಾಲ್ ಅವರನ್ನು 17,000 ಕೋಟಿ ರೂ. ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಮಂಗಳೂರು : ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಚೀಫ್ ಮಿನಿಸ್ಟರ್ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ ಮಿಂಟನ್ ಕ್ರೀಡಾಕೂಟ, 27 ಅಕ್ಟೋಬರ್ ನಿಂದ 2 ನವಂಬರ್ ವೆರೆಗೆ ನಡೆಯಲಿದೆ. ಈ ಕ್ರೀಡಾಕೂಟಕ್ಕೆ 1 ಕೋಟಿ ಅನುದಾನ ಸರಕಾರ ನೀಡಿದ್ದು, ಈ ಕಾರ್ಯಕ್ರಮದ ಉಧ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನೆರೆವೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ರವರು ತಿಳಿಸಿದ್ದಾರೆ. ಇದೊಂದು ಮಂಗಳೂರಿನ ಹೆಮ್ಮೆಯ ಕಾರ್ಯಕ್ರಮ ಇದಾಗಿದ್ದು ಇದು ಅಂತರಾಷ್ಟ್ರೀಯ ಮಾನ್ಯತೆ ಇರುವ ಟೂರ್ನಮೆಂಟ್ ಇದಾಗಿದೆ ಎಂದರು40 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣವಾಗಿದೆ, ಒಟ್ಟು 11 ಕೋರ್ಟ್ ಇದ್ದು 8 ಕೋರ್ಟನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ. ಈ ಕ್ರೀಡಾಕೂಟಕ್ಕೆ ನಮ್ಮ ದೇಶದಿಂದ 350 ಸ್ಪರ್ಧಿಗಳು ಹಾಗೂ ಹೋರದೇಶದಿಂದ 100 ಮಂದಿ ಅಂತರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಪುತ್ತೂರು ಶಾಸಕ ಅಶೋಕ್ ರೈ, ಎಂ.ಎಲ್.ಸಿ ಐವನ್ ಡಿಸೋಜ ,ಎಂಎಲ್.ಸಿ ಮಂಜುನಾಥ್ ಭಂಡಾರಿ, ದ.ಕ ಜಿಲ್ಲಾ…
ಮಂಗಳೂರು : ಓಲಾ ಮತ್ತು ರಾಪಿಡೋ ಆ್ಯಪ್ ನಲ್ಲಿ ಟ್ಯಾಕ್ಸಿ ಬುಕ್ ಮಾಡಿಸಿ, ಕರೆ ಮಾಡಿದ ಚಾಲಕನಿಗೆ ಮುಸ್ಲಿಂ ಟೆರರಿಸ್ಟ್ ಎಂದು ಹೇಳಿ ನಿಂದನೆ ಮಾಡಿರುವ ಘಟನೆ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.9ರಂದು ರಾತ್ರಿ 10 ರಿಂದ 12 ಗಂಟೆಯ ನಡುವೆ ಘಟನೆ ನಡೆದಿದ್ದು, ಮಲಯಾಳಂ ಸೀರಿಯಲ್ ಮತ್ತು ಸಿನಿಮಾ ನಟರು ಈ ರೀತಿ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಓಲಾ ಮತ್ತು ರಾಪಿಡೋದಲ್ಲಿ ಟ್ಯಾಕ್ಸಿ ಬುಕ್ ಮಾಡಿ, ಆ ಬಳಿಕ ಲೊಕೇಶನ್ ಹಾಕಿದ್ದರು. ಎಲ್ಲಿದ್ದೀರಿ ಎಂದು ಚಾಲಕ ಕರೆ ಮಾಡಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಕರೆ ಮಾಡಿದ ವ್ಯಕ್ತಿಯನ್ನು ಮುಸ್ಲಿಂ ಎಂದು ತಿಳಿದು ನೀನು ಟೆರರಿಸ್ಟ್ ಮುಸ್ಲಿಂ ತೀವ್ರವಾದಿ ಎಂದು ಹೇಳಿ ನಿಂದನೆ ಮಾಡಿದ್ದಾರೆ. ಇದರ ಆಡಿಯೋವನ್ನು ಚಾಲಕ ರೆಕಾರ್ಡ್ ಮಾಡಿದ್ದು, ಉರ್ವಾ ಠಾಣೆಗೆ ನೀಡಿ ದೂರು ದಾಖಲಿಸಿದ್ದಾರೆ. ದೂರಿನಂತೆ ವಿಮಲ್, ಸಂತೋಷ್ ಮತ್ತು ಇನ್ನೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಚಾಲಕನ ಮಾಹಿತಿ ಪ್ರಕಾರ, ಮಲಯಾಳಂ ಸಿನಿಮಾ…
ಉಳ್ಳಾಲ : ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ, ತಾಲೂಕು ಪಂಚಾಯತ್ ಉಳ್ಳಾಲ, ಪಶು ಚಿಕಿತ್ಸಾಲಯ ಕುರ್ನಾಡು ಹಾಗೂ ಗ್ರಾಮ ಪಂಚಾಯತ್ ಬಾಳೆಪುಣಿ ಇದರ ಆಶ್ರಯದಲ್ಲಿ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ ಅ. 15ರಂದು ಬುಧವಾರ ಬಾಳೆಪುಣಿ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಲಿದೆ. ಅ. 15ರಂದು ಬೆಳಗ್ಗೆ 9.30ರಿಂದ 10,00ರವರೆಗೆ ಜನಶಿಕ್ಷಣ ಟ್ರಸ್ಟ್ ಮುಡಿಪು ಮತ್ತು ಅಂಗನವಾಡಿ ಕೇಂದ್ರ ಮೂಳೂರು ಬಳಿ, 10.30ರವರೆಗೆ ಅಂಗನವಾಡಿ ಕೇಂದ್ರ ಬಂಗಾರುಗುಡ್ಡೆ , 10.30ರಿಂದ 11.00ರವರೆಗೆ ಗುರ್ಗಾಲಾಪು ಮನೆ ನಿವೇಶನ ಬಳಿ, 11.00ರಿಂದ 11.30ರವರೆಗೆ ಅಂಗನವಾಡಿ ಕೇಂದ್ರ ಆನಂಗ ಬಳಿ, 11.30ರಿಂದ 12.00ರವರೆಗೆ ಅಂಗನವಾಡಿ ಕೇಂದ್ರ ನವಗ್ರಾಮ, 12.00ರಿಂದ 12.30ರವರಗೆ ಬಾಳೆಪುಣಿ ಗ್ರಾಮ ಪಂಚಾಯತ್ ಕಚೇರಿ ಬಳಿ, 12.30ರಿಂದ 1.00ರವರೆಗೆ ಕೈರಂಗಳ ಧರ್ಮಕ್ಕಿ ಗ್ರಾಮ ಪಂಚಾಯತ್ ಆಡಳಿತ ಕಚೇರಿಯಲ್ಲಿ, 1.30ರಿಂದ 2.00ರವರೆಗೆ ಮೋಂಟುಗೋಳಿ ಅಂಗನವಾಡಿ ಬಳಿ, 2.00ರಿಂದ 2.30ರವರೆಗೆ ನಡುಪದವು ಅಂಗನವಾಡಿ ಬಳಿ ನಡೆಯಲಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಂಚಾಯತ್…

