ಉಳ್ಳಾಲ : ಶಿವರಾಮ ಕಾರಂತರು ನಿತ್ಯ ಸಂಚಾರಿಯಾಗಿದ್ದವರು. ಮಾತಿನಲ್ಲೂ ಧಾರಾಳಿಯಾಗಿದ್ದವರು. ಆದರೆ ಅವರ ಮಾತಿಗೆ ಮುಗ್ಧತೆಯಿತ್ತು. ನಿಷ್ಕಪಟತೆಯಿತ್ತು. ಸತ್ಯವನ್ನು ಮುಖಕ್ಕೆ ರಾಚುವಂತೆ ಹೇಳುವ ಧೈರ್ಯವಿತ್ತು. ಆದ್ದರಿಂದ ಕೆಲವರಿಗೆ ಅವರು ನಿಷ್ಠುರ ಅನಿಸಿರಬಹುದು ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹೇಳಿದರು. ಅವರು ಶುಕ್ರವಾರ ದ.ಕ ಜಿಲ್ಲಾ ಕಸಾಪ ಉಳ್ಳಾಲ ತಾಲೂಕು ಘಟಕದ ವತಿಯಿಂದ ದೇರಳಕಟ್ಟೆಯ ಕಂಫರ್ಟ್ಸ್ ಇನ್ ಸಭಾಂಗಣದಲ್ಲಿ ನಡೆದ ಶಿವರಾಮ ಕಾರಂತ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಕನ್ನಡ ಗದ್ಯ ಬರವಣಿಗೆಗೆ ತಮ್ಮ ಕಾದಂಬರಿಗಳ ಮೂಲಕ ಹೊಸ ತೇಜಸ್ಸನ್ನು ತಂದು ಕೊಟ್ಟ ಕಾರಂತರು ವಾಸ್ತವವಾದಿ ಅನುಭವನಿಷ್ಟ ಬರಹಗಾರರು. ದಲಿತಪರವಾದ ಮಾನವೀಯ ಅಂತ:ಕರಣ ಅವರದ್ದಾಗಿತ್ತು ಎಂದರು. ಉಳ್ಳಾಲ ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಮಾತನಾಡಿ ಬಹು ಆಸಕ್ತಿಗಳ ಕಾರಂತರು ಸಮಾಜದ ಏಳ್ಗೆಗಾಗಿ ಹಂಬಲಿಸಿದವರು ಎಂದರು. ಕಸಾಪ ಉಳ್ಳಾಲ ಹೋಬಳಿ ಅಧ್ಯಕ್ಷೆ ವಿಜಯಲಕ್ಷ್ಮಿ ಪ್ರಸಾದ್…
Author: UllalaVani
ಉಳ್ಳಾಲ :ಕಾಪಿಕಾಡ್ ಉಮಾಪುರಿಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ 2026ರ ಫೆಬ್ರವರಿಯಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಉಪಸಮಿತಿ ಗಳ ರಚನೆಯ ಬಗ್ಗೆ ವಿಶೇಷ ಸಭೆ ಅ. 12ರಂದು ರವಿವಾರ ಸಂಜೆ 4 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ನಡೆಯುವ ಸಭೆಗೆ ಧಾರ್ಮಿಕ, ಸಾಮಾಜಿಕ ನಾಯಕರು, ವಿವಿಧ ಸಮಾಜಗಳ ಮುಖ್ಯಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಶ್ರೀ ಉಮಾಮಹೇಶ್ವರಿ ದೇವಸ್ಥಾನ ದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಲು ಸಹಕರಿಸುವಂತೆ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ. ಶೇಖರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ತೊಕ್ಕೊಟ್ಟು: ಇಲ್ಲಿನ ಪೆರ್ಮನ್ನೂರು ಹೋಲಿ ಏಂಜಲ್ಸ್ ಹೈಯರ್ ಪ್ರೈಮರಿ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಫಿಲೋಮಿನಾ ಅವರ ಮೊಬೈಲ್ ನಂಬರನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ಹಣ ಕೇಳಿದಲ್ಲಿ ಯಾರೂ ಪಾವತಿಸದಂತೆ ಮನವಿ ಮಾಡಿಕೊಂಡಿದ್ದಾರೆ.ಈಗಾಗಲೇ ಕಾನೂನು ಪ್ರಕ್ರಿಯೆಗಳನ್ನು ನಡೆಸಿರುವ ಸಿಸ್ಟರ್ ಅವರು ತನ್ನ ಮೊಬೈಲ್ ಸಂಖ್ಯೆಯಲ್ಲಿ ಸಂದೇಶ ಬಂದಲ್ಲಿ ಯಾರು ಕೂಡ ಸ್ಪಂಧಿಸುವುದು ಬೇಡ ಎಂದು ಸಾರ್ವಜನಿಕವಾಗಿ ಮಾಹಿತಿ ನೀಡಿದ್ದಾರೆ.
ಮಂಗಳೂರು : ಕೇವಲ ₹2000 ಬಜೆಟ್‌ನಲ್ಲೇ ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿಯ ಹೊಸ ಅನುಭವ ಪಡೆಯಲು ಬಯಸುವಿರಾ? ಇಡುಕ್ಕಿಯ ಹಸಿರು ಪರ್ವತಗಳಲ್ಲಿ, ಸುಮಾರು 10 ಎಕರೆ ಮಸಾಲೆ ತೋಟದ ಮಧ್ಯದಲ್ಲಿ ಇರುವ ಈ ಸುಂದರ ಮೂರು ಬೆಡ್‌ರೂಮ್‌ಗಳ ಮನೆ ನಿಮ್ಮನ್ನು ಸ್ವಾಗತಿಸುತ್ತದೆ. ಏಲಕ್ಕಿ, ಜಾಯಿಕಾಯಿ ಮತ್ತು ಕೋಕೋ ಮರಗಳ ನಡುಗಟ್ಟಿನಲ್ಲಿ ಹರಡಿರುವ ಹಸಿರಿನ ವಾತಾವರಣ, ತಂಪಾದ ಗಾಳಿ ಮತ್ತು ಮಳೆಗಾಲದ ಸುಗಂಧ — ಎಲ್ಲವೂ ಸೇರಿ ಮನಸ್ಸಿಗೆ ಶಾಂತಿ ನೀಡುವ ಅದ್ಭುತ ಸ್ಥಳವನ್ನು ಸೃಷ್ಟಿಸುತ್ತವೆ. ಬೆಳಗಿನ ಪಕ್ಷಿಗಳ ಕಲರವದಲ್ಲಿ ಎಚ್ಚರಗೊಂಡು ತೋಟದ ಹಾದಿಗಳಲ್ಲಿ ಸಣ್ಣ ಟ್ರೆಕ್ ಮಾಡಿ, ಸಂಜೆ ಹೊತ್ತಿಗೆ ನಕ್ಷತ್ರಗಳ ಕೆಳಗೆ ಹೊತ್ತಿ ಉರಿಯುವ ಕ್ಯಾಂಪ್‌ಫೈರ್ ಬಳಿ ಕುಳಿತು ಪ್ರಕೃತಿಯ ಸೌಂದರ್ಯವನ್ನು ಸವಿಯಿರಿ. ತೋಟದೊಳಗಿನ ವಾಕ್ ಟ್ರೇಲ್‌ಗಳಲ್ಲಿ ನಡೆದು ಏಲಕ್ಕಿಯ ಪರಿಮಳದೊಂದಿಗೆ ಮನಸ್ಸನ್ನು ಮರುಳಾಗಲು ಬಿಡಿ. ನಿಶ್ಶಬ್ದ ಕ್ಷಣಗಳನ್ನು ಹುಡುಕುವವರಿಗೂ, ಫೋಟೋ ಕ್ಲಿಕ್ ಮಾಡುವ ಪ್ರಕೃತಿ ಪ್ರಿಯರಿಗೂ ಇದು ಪರಿಪೂರ್ಣ ತಾಣ.ನಿಮ್ಮ ವಾಸದ ಸ್ಮರಣೆಯಾಗಿ ನಮ್ಮ ತೋಟದಲ್ಲಿ ಬೆಳೆಯುವ ಏಲಕ್ಕಿಯ ಪುಟ್ಟ…
ಕಾರ್ಕಳ : ಪ್ರೀತಿಸುತ್ತಿದ್ದ ಯುವತಿಯೊಂದಿಗಿನ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಗೆಳೆಯರೇ ಬ್ಲಾಕ್ ಮೇಲ್ ಮಾಡಿದ ಹಿನ್ನೆಲೆಯಲ್ಲಿ ಮನನೊಂದ ಯುವಕ ಡೆತ್ ನೋಟ್ ಬರೆದಿಟ್ಟು ಲಾಡ್ಜಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.09ರಂದು ಗುರುವಾರ ಸಂಜೆ ಕಾರ್ಕಳ ತಾಲೂಕಿನ ಬೆಳ್ಮಣ್ ಸೂರಜ್ ಲಾಡ್ಜಿನಲ್ಲಿ ನಡೆದಿದೆ. ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ(23) ಆತ್ಮಹತ್ಯೆಗೆ ಶರಣಾದ ಯುವಕ. ಅಭಿಷೇಕ್ ಆಚಾರ್ಯ ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸ್ಥಳೀಯ ಯುವತಿಯನ್ನು ಪ್ರೀತಿಸುತ್ತಿದ್ದ. ಬಳಿಕ ಇವರ ಪ್ರೇಮವು ದೈಹಿಕ ಸಂಪರ್ಕದವರೆಗೆ ಮುಂದುವರಿದಿತ್ತು. ಇಬ್ಬರು ಜೊತೆಗಿದ್ದ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡಿದ್ದರು ಎನ್ನಲಾಗಿದೆ. ಇವರಿಬ್ಬರ ಪ್ರೀತಿ ಪ್ರೇಮದ ವಿಷಯ ತಿಳಿದ ಅಭಿಷೇಕ್ ಆಚಾರ್ಯನ ಗೆಳೆಯರು ಆತನ ಮೊಬೈಲ್ ನಲ್ಲಿದ್ದ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನುವ ಮಾಹಿತಿ ಲಭಿಸಿದೆ. ನಿರಂತರ ಮಾನಸಿಕ ಕಿರುಕುಳಕ್ಕೆ ಹಾಗೂ ಮರ್ಯಾದೆಗೆ ಅಂಜಿದ ಅಭಿಷೇಕ್ ಬ್ಲಾಕ್ ಮೇಲ್ ಮಾಡುತ್ತಿದ್ದ ನಾಲ್ವರು ಯುವಕರ ಹೆಸರು ಡೆತ್ ನೋಟ್…
ಬೆಂಗಳೂರು : 2026ರ ಮಾರ್ಚ್/ಎಪ್ರಿಲ್‌ನಲ್ಲಿ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆ-1ಕ್ಕೆ ವಿದ್ಯಾರ್ಥಿಗಳ ನೋಂದಣಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ವಿದ್ಯಾರ್ಥಿಗಳ ವಿವರ ನೋಂದಣಿ ಮಾಡಲು ಅರ್ಜಿ ಆಹ್ವಾನಿಸಿದೆ. ನೋಂದಣಿಗೆ ಅ.31 ಕೊನೆಯ ದಿನಾಂಕವೆಂದು ತಿಳಿಸಿದ್ದಾರೆ. 2011ಕ್ಕೂ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾಗಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಬಾಕಿ ಇರುವ ವಿಷಯಗಳಿಗೆ 2022ರ ಮುಖ್ಯ ಪರೀಕ್ಷೆಯಿಂದ 6 ಪ್ರಯತ್ನಗಳ ಅವಕಾಶ ನೀಡಿ ಪರೀಕ್ಷೆ-2ರಲ್ಲೂ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಇದಾದ ಬಳಿಕವೂ ಅನುತ್ತೀರ್ಣರಾದವರು, 6 ಪ್ರಯತ್ನ ಮೀರಿದವರು ನಿಯಮಾನುಸಾರ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡು ಎಲ್ಲ ವಿಷಯಗಳ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಚಿತ್ರದುರ್ಗ : ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರಿಗೆ ಹೈಕೋರ್ಟ್ ₹2 ಲಕ್ಷ ರೂ. ದಂಡ ವಿಧಿಸಿದೆ. ಕೋರ್ಟ್ ಬುಧವಾರ ನೀಡಿದ ಆದೇಶದ ಪ್ರಕಾರ, ದಂಡದ ಮೊತ್ತದಲ್ಲಿ ₹1 ಲಕ್ಷ ರಾಜ್ಯ ಲೀಗಲ್ ಸರ್ವೀಸ್ ಅಥಾರಿಟಿಗೆ ಮತ್ತು ₹1 ಲಕ್ಷ ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ ಪಾವತಿಸಬೇಕೆಂದು ನಿರ್ದೇಶಿಸಲಾಗಿದೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಶರಣ್ ಪಂಪ್‌ವೆಲ್ ಅವರ ಜಿಲ್ಲೆ ಪ್ರವೇಶದ ಮೇಲೆ ನಿರ್ಬಂಧ ಹೇರಿತ್ತು. ಈ ನಿರ್ಬಂಧವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ನಂತರ ಕೋರ್ಟ್ ಕೆಲವು ಷರತ್ತುಗಳೊಂದಿಗೆ ನಿರ್ಬಂಧ ತೆರವುಗೊಳಿಸಿ, ಸೆಪ್ಟೆಂಬರ್ 13ರಂದು ಬೆಳಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ದರ್ಶನಕ್ಕೆ ಮಾತ್ರ ಅವಕಾಶ ನೀಡಿತ್ತು. ಆದರೆ, ಪಂಪ್ ವೆಲ್ ಅವರು 12:45ರವರೆಗೆ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದು, ಅಲ್ಲದೆ ಭಾಷಣ ಮಾಡಿದ ವಿಚಾರವೂ ಪೊಲೀಸರ ವರದಿಯ ಮೂಲಕ ಹೈಕೋರ್ಟ್ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್…
ಮನಿಲಾ : ಫಿಲಿಪೈನ್ಸ್‌ನಲ್ಲಿ ಶುಕ್ರವಾರ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ದಾವೋ ಓರಿಯೆಂಟಲ್ ಪ್ರಾಂತ್ಯದ ಮನಾಯ್ ಪಟ್ಟಣದ ಆಗ್ನೇಯಕ್ಕೆ ಸುಮಾರು 62 ಕಿಲೋಮೀಟರ್ (38 ಮೈಲುಗಳು) ದೂರದಲ್ಲಿ 10 ಕಿಲೋ ಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ. ಭೂಕಂಪದಿಂದಾಗಿ ಫಿಲಿಪೈನ್ಸ್ ಕರಾವಳಿಗಳಲ್ಲಿ ಸಾಮಾನ್ಯ ಅಲೆಗಳಿಗಿಂತ 3 ಮೀಟರ್ ವರೆಗಿನ ಅಲೆಗಳು, ಇಂಡೋನೇಷ್ಯಾ ಮತ್ತು ಪಲಾವ್‌ನಲ್ಲಿ ಸಣ್ಣ ಅಲೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸುನಾಮಿ ಎಚ್ಚರಿಕೆ ಹಿನ್ನೆಲೆ ಕರಾವಳಿ ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಲಹೆ ನೀಡಲಾಗಿದೆ.
ಉಳ್ಳಾಲ : ಆಭರಣ ಪಾಲಿಶಿಂಗ್ ಮಾಡಿಸುವ ಸೋಗಿನಲ್ಲಿ ಬಂದ ಅಪರಿಚಿತ ಮಧ್ಯ ವಯಸ್ಕನೋರ್ವ ವೃದ್ದೆಯನ್ನು ಯಾಮಾರಿಸಿ ಆಕೆಯ ಕತ್ತಿನ ಸರದಿಂದ 14 ಗ್ರಾಂ ಚಿನ್ನವನ್ನ ಕರಗಿಸಿ ಹೊತ್ತೊಯ್ದ ಘಟನೆ ಉಳ್ಳಾಲ ತಾಲೂಕಿನ ಅಂಬ್ಲಮೊಗರು ಎಂಬಲ್ಲಿ ಬುಧವಾರ ನಡೆದಿದೆ.ಉಳ್ಳಾಲ ತಾಲೂಕಿನ ಅಂಬ್ಲಮೊಗರು ನಿವಾಸಿ ಸುಂದರಿ (60) ಎಂಬ ವಿಧವೆ ವಂಚಕನಿಂದ ಮೋಸ ಹೋದವರು. ಸುಂದರಿಯವರು ದಿನನಿತ್ಯಲೂ ಸುದರ್ಶನ್ ಶೆಟ್ಟಿ ಎಂಬವರ ಮನೆಗೆ ಮನೆಕೆಲಸಕ್ಕೆ ತೆರಳಿ ಮಧ್ಯಾಹ್ನ 12 ಗಂಟೆಗೆ ಮರಳುತ್ತಿದ್ದರು. ನಿನ್ನೆಯೂ ಕೆಲಸಕ್ಕೆ ತೆರಳಿದ್ದ ಸುಂದರಿ ಅವರು ಬೆಳಗ್ಗೆ 11.30ಕ್ಕೆ ಬೇಗನೆ ಕೆಲಸ ಮುಗಿಸಿ ಹಿಂತಿರುಗಿದ್ದಾರೆ. ಅವರು ಮನೆಯ ಕಡೆ ತೆರಳುತ್ತಿದ್ದ ವೇಳೆ ಅಂಬ್ಲಮೊಗರುವಿನ ಕಂಬಳ ಗದ್ದೆಯ ನಿರ್ಜನ ಪ್ರದೇಶದಲ್ಲಿ ಓರ್ವ ಅಪರಿಚಿತ ಮಧ್ಯ ವಯಸ್ಕ ಎದುರಾಗಿದ್ದು ಈ ಭಾಗದಲ್ಲಿ ಎಷ್ಟು ಮನೆಗಳು ಇವೆಯೆಂದು ಸುಂದರಿಯವರಲ್ಲಿ ವಿಚಾರಿಸಿದ್ದಾನೆ. ಈ ವೇಳೆ ಆತ ತನ್ನಲ್ಲಿದ್ದ ಬ್ಯಾಗಿನಿಂದ ಚಿನ್ನವನ್ನು ಹೋಲುವ ಬಳೆಯೊಂದನ್ನು ಹೊರತೆಗೆದು ತೋರಿಸಿ ತಾನು ಈ ರೀತಿ ಹೊಳಪು ಬರುವಂತೆ ಚಿನ್ನಾಭರಣಗಳನ್ನು ಪಾಲಿಶ್ ಮಾಡುತ್ತೇನೆಂದು…
ಉಳ್ಳಾಲ : ಕೇರಳದಿಂದ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯ ಪೊಲೀಸರ ತಂಡ ಮೂರು ಲಾರಿಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ ಘಟನೆ ಗುರುವಾರ ನಡೆದಿದೆ. ಬಂಧಿತರನ್ನು ಲಾರಿ ಚಾಲಕ ಇಕ್ಬಾಲ್ ಮೋಂಟೆಪದವು ,ಮಾಲಕ ಶಫೀಕ್ , ಚಾಲಕರಾದ ಅಮ್ಮೆಂಬಳ ನಿವಾಸಿ ಝೈನುದ್ದೀನ್ , (42), ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸರು ಕೆಂಪು ಕಲ್ಲು ಸಾಗಾಟದ ಒಂದು ಲಾರಿಯನ್ನು ಉಳ್ಳಾಲ ಪೊಲೀಸರು ತಲಪಾಡಿ ಯಲ್ಲಿ ಹಾಗೂ ಎರಡು ಲಾರಿಗಳನ್ನು ತೌಡುಗೋಳಿ ಬಳಿ ಕೊಣಾಜೆ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ . ಮಂಜನಾಡಿ ಜಂಕ್ಷನ್ ನಲ್ಲಿ ಕರ್ತವ್ಯದಲ್ಲಿದ್ದ ಪಿಸಿ ಮೊಹಮ್ಮದ್ ಗೌಸ್ ರವರ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿದಾಗ ಒಂದು ಲಾರಿಯಲ್ಲಿ 250 ಕೆಂಪುಕಲ್ಲುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಕೇರಳ ಕಡೆಯಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಪೊಲೀಸರು ಲಾರಿ ಹಾಗೂ ಕೆಂಪುಕಲ್ಲುಗಳನ್ನು…

