ಉಳ್ಳಾಲ : ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ, ತಾಲೂಕು ಪಂಚಾಯತ್ ಉಳ್ಳಾಲ, ಪಶು ಚಿಕಿತ್ಸಾಲಯ ಕುರ್ನಾಡು ಹಾಗೂ ಗ್ರಾಮ ಪಂಚಾಯತ್ ಬಾಳೆಪುಣಿ ಇದರ ಆಶ್ರಯದಲ್ಲಿ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ ಅ. 15ರಂದು ಬುಧವಾರ ಬಾಳೆಪುಣಿ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಲಿದೆ.
ಅ. 15ರಂದು ಬೆಳಗ್ಗೆ 9.30ರಿಂದ 10,00ರವರೆಗೆ ಜನಶಿಕ್ಷಣ ಟ್ರಸ್ಟ್ ಮುಡಿಪು ಮತ್ತು ಅಂಗನವಾಡಿ ಕೇಂದ್ರ ಮೂಳೂರು ಬಳಿ, 10.30ರವರೆಗೆ ಅಂಗನವಾಡಿ ಕೇಂದ್ರ ಬಂಗಾರುಗುಡ್ಡೆ , 10.30ರಿಂದ 11.00ರವರೆಗೆ ಗುರ್ಗಾಲಾಪು ಮನೆ ನಿವೇಶನ ಬಳಿ, 11.00ರಿಂದ 11.30ರವರೆಗೆ ಅಂಗನವಾಡಿ ಕೇಂದ್ರ ಆನಂಗ ಬಳಿ, 11.30ರಿಂದ 12.00ರವರೆಗೆ ಅಂಗನವಾಡಿ ಕೇಂದ್ರ ನವಗ್ರಾಮ, 12.00ರಿಂದ 12.30ರವರಗೆ ಬಾಳೆಪುಣಿ ಗ್ರಾಮ ಪಂಚಾಯತ್ ಕಚೇರಿ ಬಳಿ, 12.30ರಿಂದ 1.00ರವರೆಗೆ ಕೈರಂಗಳ ಧರ್ಮಕ್ಕಿ ಗ್ರಾಮ ಪಂಚಾಯತ್ ಆಡಳಿತ ಕಚೇರಿಯಲ್ಲಿ, 1.30ರಿಂದ 2.00ರವರೆಗೆ ಮೋಂಟುಗೋಳಿ ಅಂಗನವಾಡಿ ಬಳಿ, 2.00ರಿಂದ 2.30ರವರೆಗೆ ನಡುಪದವು ಅಂಗನವಾಡಿ ಬಳಿ ನಡೆಯಲಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಂಚಾಯತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


